ಮೀನುಗಾರರ ಸಂಕಷಕ್ಕೆ ಸಕಾಲಿಕ ಸ್ಪಂದನೆ
Team Udayavani, Jul 26, 2021, 5:43 PM IST
ರಾಜ್ಯದಲ್ಲಿ ಮೀನುಗಾರಿಕೆ ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಮೀನುಗಾರರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸುವ ಜತೆಗೆ ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿರುವ ಮೀನುಗಾರರಿಗೆ ಪರಿಹಾರ ನೀಡುವ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿದೆ.
ಕೊರೊನಾದಿಂದ ಸಂಕಷ್ಟ ಎದುರಿಸುತ್ತಿರುವ ಕರಾವಳಿ ಜಿಲ್ಲೆಗಳ ಮೀನುಗಾರರಲ್ಲಿಉಳಿತಾಯ ಮತ್ತು ಪರಿಹಾರ ಯೋಜನೆಯಡಿ ನೋಂದಾಯಿತ 18,746ಮೀನುಗಾರರಿಗೆ ತಲಾ 3 ಸಾವಿರ ರೂ.ಗಳಂತೆ ಪರಿಹಾರ ನೀಡಲು 5.62 ಕೋಟಿ ರೂ.ಅನುದಾನವನ್ನು ಮತ್ತು 7,668 ನಾಡದೋಣಿ ಹೊಂದಿರುವ ಮೀನುಗಾರರಿಗೆ ತಲಾ 3ಸಾವಿರ ರೂ.ಗಳಂತೆ ಪರಿಹಾರ ನೀಡಲು 2.30 ಕೋಟಿ ಅನುದಾನ ಸೇರಿ ಒಟ್ಟು 7.92ಲಕ್ಷ ಅನುದಾನವನ್ನು ಮೀಸಲಿಟ್ಟಿದೆ.
ಈ ಅನುದಾನವು ಫಲಾನುಭವಿ ಮೀನುಗಾರರಿಗೆ ಮೀನುಗಾರಿಕಾ ಇಲಾಖೆಯಮೂಲಕ ನೇರ ಖಾತೆಗೆವರ್ಗಾವಣೆಯಾಗಲಿದೆ.ಯಾಂತ್ರೀಕೃತ ಮೀನುಗಾರಿಕೆದೋಣಿಗಳು ಬಳಸಿದ ಡೀಸೆಲ್‌ಮೇಲಿನ ಮಾರಾಟ ಕರಕ್ಕೆಸಮನಾದ ಮೊತ್ತವನ್ನುಸಹಾಯಧನವಾಗಿ ದೋಣಿಮಾಲೀಕರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತಿದೆ.
2019-20 ಸಾಲಿನಿಂದ ಇಲ್ಲಿಯವರೆಗೆ 264.55 ಕೋಟಿಗಳನ್ನು 2.34 ಲಕ್ಷ ಕಿಲೋ ಮೀಟರ್ ಡೀಸೆಲ್‌ಪೂರೈಸಲು ಸಹಾಯಧನವಾಗಿ 3,141 ದೋಣಿಗಳ ಮಾಲೀಕರ ಬ್ಯಾಂಕ್ ಖಾತೆಗೆನೇರವಾಗಿ ಪಾವತಿಸಲಾಗಿದೆ.
ಕರರಹಿತ ದರದಲ್ಲಿ ವಿತರಣೆ: ಮೀನುಗಾರಿಗೆ ಇನ್ನಷ್ಟು ಅನುಕೂಲ ಮಾಡಿಕೊಡುವನಿಟ್ಟಿನಲ್ಲಿ ಕರ ರಹಿತ ದರದಲ್ಲಿ ಡೀಸೆಲ್ ವಿತರಣೆಗೆ ಸರ್ಕಾರ ಕ್ರಮ ತೆಗೆದುಕೊಂಡಿದೆ.ಯಾಂತ್ರೀಕೃತ ದೋಣಿಗಳಿಗೆ ಡಿಲವರಿ ಪಾಯಿಂಟ್( ಬಂದರು ಪ್ರದೇಶದಲ್ಲಿಯಾಂತ್ರಿಕೃತ ದೋಣಿಗಳಿಗೆ ಡೀಸೆಲ್ ತುಂಬಿಸಲು ನಿಗದಿಪಡಿಸಿರುವ ಜಾಗ) ನಲ್ಲಿಡೀಸೆಲ್ ಭರ್ತಿ ಮಾಡಲಾಗುತ್ತದೆ.
ಡಿಸೇಲ್ ಕರ ಪಾವತಿ ಮಾಡಬೇಕಿದ್ದರಿಂದ ದೋಣಿಮಾಲೀಕರಿಗೆ ಹೊರೆಯಾಗುತ್ತಿತ್ತು. ಈ ಪ್ರಕ್ರಿಯೆಯನ್ನು ಮತ್ತಷ್ಟು ಜನಸ್ನೇಹಿಯನ್ನಾಗಿಸಲು 2021-22ನೇ ಸಾಲಿನಿಂದ 1.5 ಲಕ್ಷ ಕಿಲೋ ಮೀಟರ್ ಡೀಸೆಲ್‌ಅನ್ನುಯಾಂತ್ರೀಕೃತ ದೋಣಿಗಳಿಗೆ ಡೆಲಿವರಿ ಪಾಯಿಂಟ್‌ನಲ್ಲಿಯೇ ಕರರಹಿತ ದರದಲ್ಲಿವಿತರಿಸಲಾಗುತ್ತದೆ.
ಬಂದರುಗಳ ಅಭಿವೃದ್ಧಿ: ಮಲ್ಪೆ, ಮಂಗಳೂರು, ಕಾರವಾರದ ಪ್ರಮುಖ ಬಂದರೂಸೇರಿದಂತೆ ಗಂಗೊಳ್ಳಿ, ಹೆಜಮಾಡಿ, ಭಟ್ಕಳ ಸಹಿತವಾಗಿ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿರುವ ಬಂದರು, ಕಿರು ಬಂದರು, ದೋಣಿ ಇಳಿದಾಣ ಕೇಂದ್ರ, ಹೊರಬಂದರು ಪ್ರದೇಶಗಳ ಅಭಿವೃದ್ಧಿಗೆ ಸರ್ಕಾರ ವಿಶೇಷ ಅನುದಾನ ಘೋಷಣೆಯ ಜತೆಗೆ ಕಾಮಗಾರಿಯನ್ನು ವೇಗವಾಗಿ ನಡೆಸುತ್ತಿದೆ.
ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿಯಲ್ಲಿ ಮೀನುಗಾರಿಕೆ ಬಂದರನ್ನು 180.84 ಕೋಟಿಅಂದಾಜು ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲು ಅನುದಾನ ಮಂಜೂರುಮಾಡಲಾಗಿದೆ. ಇದಕ್ಕಾಗಿ ಪ್ರಥಮ ಕಂತಿನ ಅನುದಾನ 13.86 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಲಾಗಿದೆ.
ಯೋಜನೆಗೆ ಅವಶ್ಯವಿರುವ ಖಾಸಗಿ ಭೂಮಿಯನ್ನು ಖರೀದಿಸುವ ಪ್ರಕ್ರಿಯೆಜಾರಿಯಲ್ಲಿದೆ. ಹಾಗೆಯೇ ಉತ್ತರ ಕನ್ನಡ ಜಿಲ್ಲೆಯ ಅಳ್ವೆಕೋಡಿ-ತೆಂಗಿನಗುಂಡಿಮೀನುಗಾರಿಕೆ ಇಳಿದಾಣ ಕೇಂದ್ರದ ಅಲೆ ತಡೆಗೋಡೆ ನಿರ್ಮಾಣವನ್ನು 86.08ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ನಡೆಸಲು ರಾಜ್ಯ ಸರ್ಕಾರ ಆಡಳಿತಾತ್ಮಕಮಂಜೂರಾತಿ ನೀಡಿದೆ. ಹಾಗೆಯೇ ಈ ಯೋಜನೆಗೆ ಕೇಂದ್ರ ಸರ್ಕಾರವುಶೇ.50ರಷ್ಟು (43.04 ಕೋಟಿ) ನೆರವು ನೀಡುತ್ತಿದ್ದು, ಪ್ರಸ್ತುತ 1.47 ಕೋಟಿಅನುದಾನ ಬಿಡುಗಡೆಯಾಗಿರುತ್ತದೆ.
ಇಳಿದಾಣ ಕೇಂದ್ರದ ಅಲೆ ತಡೆಗೋಡೆ ನಿರ್ಮಾಣ ಕಾಮಗಾರಿಯೂ ಈಗಾಗಲೇ ಆರಂಭವಾಗಿದೆ. 22 ಕೋಟಿ ರೂ.ವೆಚ್ಚದಲ್ಲಿ ಮಂಗ ಳೂರು ಮೀನುಗಾರಿಕೆ ಬಂದರಿನ 3ನೇ ಹಂತದ ಕಾಮಗಾರಿಗಳನ್ನುಕೈಗೊಳ್ಳಲು ಮಂಜೂರಾತಿ ನೀಡಲಾಗಿದೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನಮರವಂತೆಯಲ್ಲಿ ಹೊರಬಂದರಿನ 2ನೇ ಹಂತದ ಕಾಮಗಾರಿಗಳನ್ನು 85. ಕೋಟಿ ರೂ.ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ.
ಇದರಿಂದ ತಾಲೂಕು ವ್ಯಾಪ್ತಿಯ ನಾಡದೋಣಿ ಮೀನುಗಾರರಿಗೆ ಮತ್ತು ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವ ಸಾವಿರಾರುಮೀನುಗಾರರಿಗೆ ಅನುಕೂಲವಾಗಿದೆ. 2ನೇ ಹಂತದ ಕಾಮಗಾರಿಗೆ ಸಂಬಂಧಿಸಿದಂತೆ ಸರ್ಕಾರವು ಆಡಳಿತಾತ್ಮಕ ಮಂಜೂರಾತಿ ನೀಡಿದೆ. ಹಾಗೆಯೇ ತಾಲೂಕಿನ ಕೊಡೇರಿಕಿರು ಬಂದರು ಪ್ರದೇಶದ ಅಭಿವೃದ್ಧಿ ಕಾಮಗಾರಿಗಾಗಿ 2 ಕೋಟಿ ರೂ.ಗಳನ್ನು ಒದಗಿಸಿ,ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. ಇದರಿಂದ ಕೊಡೇರಿ ಕಿರು ಬಂದರುವ್ಯಾಪ್ತಿಯಲ್ಲಿ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ವೇಗವಾಗಿ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ
Security ನೀಡುವಂತೆ ಕೇಂದ್ರ ಸಚಿವರಿಗೆ ಸ್ನೇಹಮಯಿ ಪತ್ರ
Puttur: ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಕಾರು; ಮೂವರ ದುರ್ಮರಣ
INDvsAUS: ವಿಚಿತ್ರ ರೀತಿಯಲ್ಲಿ ಔಟಾದ ರಿಷಭ್ ಪಂತ್ ವಿರುದ್ದ ಕಿಡಿಕಾರಿದ ಗಾವಸ್ಕರ್
Hathras: ಶಾಲೆಗೆ ರಜೆ ಸಿಗಬೇಕೆಂದು 2ನೇ ತರಗತಿ ಮಗುವನ್ನು ಕೊಂದ ವಿದ್ಯಾರ್ಥಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.