“ಶಹಬ್ಟಾಸ್‌ ಯಡಿಯೂರಪ್ಪ’


Team Udayavani, Jul 27, 2021, 6:00 AM IST

Untitled-1

ಪತ್ರಿಯೊಬ್ಬ ವ್ಯಕ್ತಿಗೂ ಅವರದೇ ಆದ ಕೆಲವೊಂದು ವ್ಯಕ್ತಿ ವೈಶಿಷ್ಟéತೆಗಳಿರುತ್ತವೆ. ಹಾಗೆಯೇ ಯಡಿಯೂರಪ್ಪರಿಗೂ ಇದ್ದಾವೆ. ಬಿ.ಎಸ್‌. ಯಡಿಯೂರಪ್ಪ ಅಂದರೆ, ಒಬ್ಬ ಛಲಗಾರ, ಹಠಗಾರ, ಯಾರಿಗೂ- ಯಾವುದಕ್ಕೂ ಹೆದರಲ್ಲ, ಜಗ್ಗಲ್ಲ-ಬಗ್ಗಲ್ಲ. ಅವರ ಕೋಪ, ಮುಂಗೋಪ ಅನ್ಯಾಯ ಕಂಡರೆ ಸಿಡಿದೇಳುವ ಗುಣ. ಆರಂಭದಿಂದ ಹೀಗೆಯೇ ಬೆಳೆದು ಬಂದ ಅವರು, ವಿದಾಯವನ್ನೂ ಅದೇ ರೀತಿ ಹೇಳಿದರು……

“ಬಿ.ಎಸ್‌. ಯಡಿಯೂರಪ್ಪ ಮತ್ತು ನನ್ನ ಸಂಬಂಧ ಬಹಳ ಹಳೆಯದು. ಅವರು ಶಿಕಾರಿಪುರಕ್ಕೆ ಬಂದು ನೆಲೆಸಿದ ನಂತರದಿಂದ ಅವರ ಮತ್ತು ನನ್ನ ಒಡನಾಟ ಆರಂಭವಾ ಯಿತು. ನಾವಿಬ್ಬರು ಸಂಘಪರಿವಾರದ ಸಿದ್ಧಾಂತಕ್ಕೆ ಆಕ ರ್ಷಿತರಾಗಿ ಸ್ವಯಂಸೇವಕರಾಗಿ ದುಡಿದವರು. ಜನಸಂಘ ಪಾರ್ಟಿ ಸ್ಥಾಪನೆಯಾದ ನಂತರ ಅದರ ಧ್ವಜವನ್ನು ಹಿಡಿದು, ರೈತರು, ಕೂಲಿಕಾರ್ಮಿಕರು, ಜೀತದಾಳುಗಳು, ಬಡವರು. ದಲಿತರು ಸಮಸ್ಯೆಗಳಿಗೆ ಹೋರಾಟ ಮಾಡಿ ಅದಕ್ಕೆ ಪರಿಹಾರ ದೊರಕಿಸಿಕೊಡುವ ಪ್ರಯತ್ನ ಮಾಡುತ್ತಿದ್ದೆವು.

ಹೋರಾಟಕ್ಕೆ ಹಲವು ವಿಧಾನಗಳನ್ನು ಅನುಸರಿಸು ತ್ತಿದ್ದೆವು. ಶಿಕಾರಿಪುರ ತಾಲೂಕಿನ ಎಲ್ಲಾ ಹಳ್ಳಿಗಳಿಗೂ ಯಡಿಯೂರಪ್ಪನವರು ಸೈಕಲ್‌ನಲ್ಲಿ ಸುತ್ತಿದರು. ಜೀತ ದಾಳುಗಳ ಸಮಸ್ಯೆ ಬಗ್ಗೆ ಶಿಕಾರಿಪುರದಿಂದ ಶಿವಮೊಗ್ಗದ ವರೆಗೆ ಜೀತದಾಳು ಗಳನ್ನು ಪಾದಯಾತ್ರೆ ಮೂಲಕ ಕರೆದುಕೊಂಡು ಬಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರು. ಆ ಕಾಲಕ್ಕೆ ಅದೊಂದು ದೊಡ್ಡ ಸಾಧನೆ ಯಾ ಗಿತ್ತು. ಇಡೀ ಜಿಲ್ಲೆಯ ಜೀತದಾಳುಗಳ ಸಮಸ್ಯೆ ಗಳಿಗೆ ಪರಿಹಾರ ಸಿಕ್ಕಿತ್ತು.

ಜನಪರ ಹೋರಾಟಗಳ ಜೊತೆಗೆ ಸಂಘಟನಾ ವಿಷಯಗಳಲ್ಲೂ ನಾವಿಬ್ಬರು ಒಂದಾಗಿ ಹೋಗುತ್ತಿದ್ದೇವು. ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಮೊದಲ ಬಾರಿಗೆ ನಡೆದ ಕರಸೇವೆಯಲ್ಲಿ ನಾವಿಬ್ಬರೂ ಜೊತೆಗೆ ಹೋಗಿದ್ದೆವು. ಆಗಿನ ಮುಲಾಯಂ ಸಿಂಗ್‌ ಸರ್ಕಾರ ನಮ್ಮ ಮೇಲೆ ಗೋಲಿಬಾರ್‌ ನಡೆಸಿತು. ಪಕ್ಕದಲ್ಲಿದ್ದ ಕೋಲ್ಕತ್ತಾದಿಂದ ಬಂದಿದ್ದ ಇಬ್ಬರು ಕರಸೇವಕರು ಹುತಾತ್ಮರಾದರು. ಬಳಿಕ ನಮ್ಮನ್ನು ಒಂದು ಕಾಡಿಗೆ ಬಿಡಲಾಯಿತು. ಹೇಗೋ ಅಲ್ಲಿಂದ ಬಂದೆವು.

“ತಾಯಿ ಎದೆ ಹಾಲು ಕುಡಿದವರು ಧೈರ್ಯವಿದ್ದರೆ ಇಲ್ಲಿಗೆ ಬಂದು ತ್ರಿವರ್ಣ ಧ್ವಜ ಹಾರಿಸಿ’ ಎಂದು ಶ್ರೀನಗರದಲ್ಲಿ ಒಂದು ಬ್ಯಾನರ್‌ ಹಾಕಲಾಗಿತ್ತು. ಅದನ್ನು ನಮ್ಮ ಪಕ್ಷ ಸವಾಲಾಗಿ ಸ್ವೀಕರಿಸಿ ಮುರಳಿ ಮನೋಹರ್‌ ಜೋಷಿ ನೇತೃತ್ವದಲ್ಲಿ ಯಾತ್ರೆ ನಡೆಸಲಾಯಿತು. ಅದರಲ್ಲಿ ನಾನು ಮತ್ತು ಯಡಿಯೂರಪ್ಪ ಹೋಗಿದ್ದೇವು. ಧ್ವಜದ ಹಾರಿಸುವ ಜಾಗಕ್ಕೆ ಹೋಗಲು ಒಂದು ರಾಜ್ಯದಿಂದ ಒಬ್ಬರಿಗೇ ಮಾತ್ರ ಅವಕಾಶ ಇತ್ತು. ಆಗ ಯಡಿಯೂರಪ್ಪ ನವರೇ ಹೋದರು. ಹೋಗುವಾಗ, ಧ್ವಜ ಹಾರಿಸಲು ಹೋದಾಗ ಏನಾಗುತ್ತದೋ, ಎಲ್ಲಿ ಬಾಂಬ್‌ ಬೀಳುತ್ತದೋ, ಯಾರು ಗುಂಡು ಹಾರಿಸುತ್ತಾರೆ ಗೊತ್ತಿಲ್ಲ, ನಾನೇನಾಗುತ್ತೇನೆ ಗೊತ್ತಿಲ್ಲ. ನನ್ನ ಮಕ್ಕಳು ಚಿಕ್ಕವರು, ನನಗೆ ಏನಾದರೂ ಆದರೆ, ಮಕ್ಕಳನ್ನು ನೀವೇ ನೋಡಿಕೊಳ್ಳಿ’ ಎಂದು ಯಡಿಯೂರಪ್ಪ ಹೇಳಿದ್ದು ಈಗಲೂ ನನಗೆ ನೆನಪಿದೆ.

ಯಡಿಯೂರಪ್ಪನವರು ಮುಖ್ಯಮಂತ್ರಿಯಾದರು. ನಾನು ಅವರ ಮಂತ್ರಿಮಂಡಳದಲ್ಲಿ ಸಚಿವನಾಗಿ ಕೆಲಸ ಮಾಡಿದೆ. ಮೊದಲ ಬಾರಿಗೆ ಮುಖ್ಯಮಂತ್ರಿ ಆದಾಗ ಅನೇಕ ಉತ್ತಮ ಕೆಲಸಗಳನ್ನು ಮಾಡಿದರು. ಗೋಹತ್ಯೆ ನಿಷೇಧ ಕಾಯ್ದೆ, ಪ್ರೌಢಶಾಲಾ ಮಕ್ಕಳಿಗೆ ಬೈಸಿಕಲ್‌, ಭಾಗ್ಯಲಕ್ಷ್ಮೀ ಯೋಜನೆ ಇತ್ಯಾದಿ ಜಾರಿಗೆ ತಂದರು. ದೇಶದಲ್ಲೇ ಮೊದಲ ಬಾರಿಗೆ ಕೃಷಿ ಬಜೆಟ್‌ ಮಂಡನೆ ಮಾಡಿದರು.

ಎರಡನೇ ಬಾರಿಗೆ ಮುಖ್ಯಮಂತ್ರಿ ಆದಾಗ ಆರಂಭದಲ್ಲೇ ಪ್ರವಾಹ ಬಂತು, ನಂತರ ಕೊರೊನಾ ಮೊದಲ ಮತ್ತು 2ನೇ ಅಲೆ, ಈಗ ಮತ್ತೆ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಈ ಸವಾಲುಗಳನ್ನು ಸಮರ್ಥವಾಗಿ ಅವರು ಎದುರಿಸಿದ್ದಾರೆ. ಆರಂಭದಲ್ಲಿ ಪ್ರವಾಹ ಬಂದಾಗ ಒಬ್ಬರೇ ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡಿದರು. ರಾಷ್ಟ್ರೀಯ ಶಿಕ್ಷಣ ನೀತಿ ರಾಜ್ಯದಲ್ಲಿ ಜಾರಿಗೆ ಕ್ರಮ ಕೈಗೊಂಡರು. 3.5 ಕೋಟಿ ಜನರಿಗೆ ವ್ಯಾಕ್ಸಿನ್‌ ಹಾಕಿರುವುದು ಬಹುದೊಡ್ಡ ಸಾಧನೆ.

ಅವರ ವಿದಾಯ ಭಾಷಣದಲ್ಲಿ ಕಣ್ಣೀರು ಹಾಕಿದ್ದು ಅದು ದುಖ:ದಿಂದ ಅಲ್ಲ. ಸಮಾಧಾನದಿಂದ ಬಂದ ಕಣ್ಣೀರು. ಪಕ್ಷದ ನೀತಿಯಂತೆ ಎಲ್‌.ಕೆ. ಅಡ್ವಾಣಿ, ಮುರಳಿ ಮನೋಹರ್‌ ಜೋಷಿ, ಕಲ್ಯಾಣ್‌ಸಿಂಗ್‌ ಮತ್ತಿತರರು ಅಧಿಕಾರ ಬಿಟ್ಟುಕೊಟ್ಟಿದ್ದಾರೆ. ನನಗೂ 78 ವರ್ಷ ವಯಸ್ಸಾಗಿದೆ, ಪಕ್ಷ ಹೇಳುವುದಕ್ಕಿಂತ ಮೊದಲೇ ಚುನಾವಣೆಗೆ ಸ್ಪರ್ಧಿಸಲ್ಲ ಎಂದು ನಾನೇ ಹೇಳಿಬಿಟ್ಟೆ. ಅದೇ ರೀತಿ ಯಡಿಯೂರಪ್ಪನವರು ಅಧಿಕಾರ ಬಿಟ್ಟುಕೊಟ್ಟಿದ್ದಾರೆ. ಭಾವೋದ್ವೇಗ ಸಹಜ. ಆದರೆ, ಧನ್ಯತೆಯಿಂದ ಬಂದ ಕಣ್ಣೀರು. ಅದು ಸಿಟ್ಟೂ ಅಲ್ಲ, ನೋವು ಅಲ್ಲ. ಸಮಾಧಾನ ಮತ್ತು ಸಾಮಾನಚಿತ್ತದಿಂದ ವಿದಾಯ ಹೇಳಿ, ಮುಂದಿನ 10-15 ವರ್ಷ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ…..”ಶಹಬ್ಟಾಸ್‌ ಯಡಿಯೂರಪ್ಪ’

 

ಡಿ.ಎಚ್‌. ಶಂಕರಮೂರ್ತಿ,

ವಿಧಾನಪರಿಷತ್‌ ಮಾಜಿ ಸಭಾಪತಿ

 

ಟಾಪ್ ನ್ಯೂಸ್

Cabinet approves PAN 2.0: What is PAN 2.0? What are its features?

PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್‌ 2.0? ಇದರ ವೈಶಿಷ್ಟ್ಯವೇನು?

Bangladesh:ಬಂಧನಕ್ಕೊಳಗಾದ ಇಸ್ಕಾನ್‌ ನ ಕೃಷ್ಣದಾಸ್‌ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್

Bangla:ಬಂಧನಕ್ಕೊಳಗಾದ ಇಸ್ಕಾನ್‌ ನ ಕೃಷ್ಣದಾಸ್‌ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್

Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂ*ಬ್‌ ಸ್ಪೋ*ಟ

Rapper Badshah: ಗಾಯಕ ಬಾದ್‌ಶಾ ಒಡೆತನದ ಬಾರ್‌ & ಕ್ಲಬ್ ಹೊರಗೆ ಬಾಂ*ಬ್‌ ಸ್ಪೋ*ಟ

2-thirthahalli

Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?

IPL: RCB buys young Sehwag amid confusion; Who is this Swastik Chikara

IPL: ಗೊಂದಲದಲ್ಲಿ ಮರಿ ಸೆಹ್ವಾಗ್‌ ನನ್ನು ಖರೀದಿಸಿದ ಆರ್‌ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ

Essar Group: ಎಸ್ಸಾರ್ ಗ್ರೂಪ್ ನಿ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ

9

Renukaswamy Case: ದರ್ಶನ್‌ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

Constitution Day: ಅಮೃತ ಸಂಭ್ರಮದಲ್ಲಿ ಭಾರತ ಸಂವಿಧಾನ

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

ಜಾನಪದದಲ್ಲಿ ಕನ್ನಡ ಕಟ್ಟುವ ಕೆಲಸ ಹೆಚ್ಚಾಗಲಿ…

Vijay Raghavendra, Rudrabhishekam Movie, Sandalwood, Vasanth Kumar, Veeragase

Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್

1-bank

Karnataka; ಕೇಂದ್ರ ಸ್ವಾಮ್ಯದ ಸಂಸ್ಥೆಗಳಲ್ಲಿ ಕನ್ನಡಿಗರೇಕೆ ವಿರಳ? ಆಗಬೇಕಿರುವುದೇನು?

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ

Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ

4-sagara

Sagara: ಕಾಶಿಯಾತ್ರೆಯ ಪ್ಯಾಕೇಜ್ ರೂವಾರಿ ಇನ್ನಿಲ್ಲ; ಮನೆ ಮಾಡಿನಿಂದ ಬಿದ್ದು ಸಾವು

Cabinet approves PAN 2.0: What is PAN 2.0? What are its features?

PAN 2.0 ಗೆ ಸಂಪುಟ ಅನುಮೋದನೆ: ಏನಿದು ಪ್ಯಾನ್‌ 2.0? ಇದರ ವೈಶಿಷ್ಟ್ಯವೇನು?

Bangladesh:ಬಂಧನಕ್ಕೊಳಗಾದ ಇಸ್ಕಾನ್‌ ನ ಕೃಷ್ಣದಾಸ್‌ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್

Bangla:ಬಂಧನಕ್ಕೊಳಗಾದ ಇಸ್ಕಾನ್‌ ನ ಕೃಷ್ಣದಾಸ್‌ ಗೆ ಜಾಮೀನು ನಿರಾಕರಿಸಿದ ಬಾಂಗ್ಲಾ ಕೋರ್ಟ್

10

Udupi: ಭಿಕ್ಷಾಟನೆ, ಅಪೌಷ್ಟಿಕತೆ ವಿರುದ್ಧ ಯುವಕನ ಬರಿಗಾಲ ಜಾಗೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.