ಈ ಆ್ಯಪ್ ನಲ್ಲಿ ಎಲ್ ಪಿ ಜಿ ಬುಕ್ ಮಾಡಿದರೇ ನಿಮಗೆ ಸಿಗುತ್ತದೆ ಕ್ಯಾಶ್ ಬ್ಯಾಕ್..!
ಐಸಿಐಸಿಐ ಬ್ಯಾಂಕ್ ನಡೆಸುತ್ತಿರುವ ಡಿಜಿಟಲ್ ಪೇಮೆಂಟ್ ಪ್ಯಾಕೇಟ್ಸ್ ಅಪ್ಲಿಕೇಶನ್
Team Udayavani, Jul 27, 2021, 12:20 PM IST
ಎಲ್ ಪಿ ಜಿ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿರವವ ನಡುವೆ ಗ್ರಾಹಕರ ಪಾಲಿಗೆ ಒಂದು ಸಿಹಿ ಸುದ್ದಿಯೊಂದು ಹೊರ ಬಿದ್ದಿದೆ.
ಹೌದು, ಪ್ಯಾಕೆಟ್ಸ್ ಆ್ಯಪ್ ಮೂಲಕ ಎಲ್ ಪಿ ಜಿ ಬುಕ್ ಮಾಡಿದರೇ, ಕ್ಯಾಶ್ ಬ್ಯಾಕ್ ನೀಡುತ್ತಿದೆ. 14.2 ಕೆಜಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದರೇ, ಗ್ರಾಹಕರಿಗೆ ಶೇಕಡಾ 10 ರಷ್ಟು ಕ್ಯಾಶ್ ಬ್ಯಾಕ್ ಲಭ್ಯವಾಗುತ್ತದೆ.
ಇದನ್ನೂ ಓದಿ : ಸಂಪುಟಕ್ಕೆ ಯಾರನ್ನು ಸೇರಿಸಬೇಕು ಎಂಬುದನ್ನು ವರಿಷ್ಠರು ತೀರ್ಮಾನಿಸುತ್ತಾರೆ : ಬಿ.ಸಿ.ಪಾಟೀಲ್
ಐಸಿಐಸಿಐ ಬ್ಯಾಂಕ್ ನಡೆಸುತ್ತಿರುವ ಡಿಜಿಟಲ್ ಪೇಮೆಂಟ್ ಸೌಲಭ್ಯವನ್ನು ಒದಗಿಸುವ ಪ್ಯಾಕೇಟ್ಸ್ ಅಪ್ಲಿಕೇಶನ್ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡಿದ್ದಲ್ಲಿ ಕ್ಯಶಶ್ ಬ್ಯಾಕ್ ಲಭ್ಯಿರುತ್ತದೆ.
3 ಬಿಲ್ ಗಳ ಮೇಲೆ ಕ್ಯಾಶ್ ಬ್ಯಾಕ್ :
ಪ್ಯಾಕೆಟ್ಸ್ ಆ್ಯಪ್ ಮೂಲಕ 200 ಅಥವಾ ಅದಕ್ಕಿಂತ ಹೆಚ್ಚಿನ ಬಿಲ್ ಪಾವತಿ ಮಾಡಿದರೆ, 10 ಪ್ರತಿಶತದಷ್ಟು ಕ್ಯಾಶ್ ಬ್ಯಾಕ್ ಲಭ್ಯವಾಗುತ್ತದೆ. ಈ ಆಫರ್ ಪಡೆಯಲು ಗ್ರಾಹಕರು, ಯಾವುದೇ ಪ್ರೋಮೋಕೋಡ್ ನನ್ನು ನಮೂದಿಸುವ ಅಗತ್ಯವಿಲ್ಲ. ಆದರೆ, ಈ ಕೊಡುಗೆ ಒಂದು ತಿಂಗಳಲ್ಲಿ 3 ಬಿಲ್ ಪೇಮೆಂಟ್ ಮೇಲೆ ಮಾತ್ರ ಮಾನ್ಯವಾಗಿರುತ್ತದೆ.
ಇನ್ನು, ಒಂದು ಗಂಟೆಯಲ್ಲಿ 50 ಬಳಕೆದಾರರು ಮಾತ್ರ ಈ ಕೊಡುಗೆಯ ಲಾಭವನ್ನು ಪಡೆಯಬಹುದು ಎಂದು ಕಂಪೆನಿ ತಿಳಿಸಿದೆ.
ಪ್ಯಾಕೇಟ್ಸ್ ನಲ್ಲಿ ಬುಕ್ಕಿಂಗ್ ಮಾಡುವುದು ಹೇಗೆ..? ಇಲ್ಲಿದೆ ಮಾಹಿತಿ
1. ಪಾಕೆಟ್ಸ್ ವಾಲೆಟ್ ಅಪ್ಲಿಕೇಶನ್ ಅನ್ನು ತೆರೆಯಿರಿ.
2. ರೀಚಾರ್ಜ್ ಆ್ಯಂಡ್ ಪೇ ಬಿಲ್ಸ್ ವಿಭಾಗದಲ್ಲಿ ಪೇ ಬಿಲ್ಸ್ ಕ್ಲಿಕ್ ಮಾಡಿ.
3. ಚೂಸ್ ಬಿಲ್ಲರ್ಸ್ (Choose Billers) ನಲ್ಲಿನ ಮೋರ್( More) ಆಯ್ಕೆಯನ್ನು ಕ್ಲಿಕ್ ಮಾಡಿ.
4. ಎಲ್ ಪಿಜಿಯ ಆಯ್ಕೆ ನಿಮ್ಮ ಮುಂದೆ ಕಾಣಿಸುತ್ತದೆ.
5. ನಂತರ ಸೇವಾ ಪೂರೈಕೆದಾರರನ್ನು ಆಯ್ಕೆ ಮಾಡಿ ನಂತರ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
6. ಬುಕಿಂಗ್ ಅಮೌಂಟ್ ನನ್ನು ಸಿಸ್ಟಂ ಮೂಲಕ ತಿಳಿಸಲಾಗುವುದು.
7. ಬುಕಿಂಗ್ ಮೊತ್ತವನ್ನು ಪಾವತಿ ಮಾಡಬೇಕು.
8. ವಹಿವಾಟಿನ ನಂತರ, 10% ದರದಲ್ಲಿ, ನೀವು ಗರಿಷ್ಠ 50 ರೂ ಕ್ಯಾಶ್ ಬ್ಯಾಕ್ ಲಭ್ಯವಾಗುತ್ತದೆ. ಈ ಕ್ಯಾಶ್ ಬ್ಯಾಕ್ ನಲ್ಲಿ ಓಪನ್ ಮಾಡಿದ ತಕ್ಷಣ ಪಾಕೆಟ್ಸ್ ವ್ಯಾಲೆಟ್ ಗೆ ಹಣ ಜಮಾ ಆಗುತ್ತದೆ.
ಇದನ್ನೂ ಓದಿ : ಭಾರಿ ಮಳೆ, ಗುಡ್ಡ ಕುಸಿತ : ಚಂಡೀಗಡ-ಮನಾಲಿ ರಾಷ್ಟ್ರೀಯ ಹೆದ್ದಾರಿ ಬಂದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.