ಸಂಭಾವನೆ ನೀಡದ ಅಧಿಕಾರಿಗಳು: ಪ್ರತಿಭಟನೆ ಎಚ್ಚರಿಕೆ ನೀಡಿದ ಶಿಕ್ಷಕರು
Team Udayavani, Jul 27, 2021, 3:17 PM IST
ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ಆದರ್ಶ ವಿದ್ಯಾಲಯ ಆರ್ ಎಂ ಎಸ್ ಎ ಶಾಲೆಯ 6 ನೇ ತರಗತಿ ಪ್ರವೇಶ ಪರೀಕ್ಷೆಗೆ ಹಾಜರಾಗಿ ಕರ್ತವ್ಯ ನಿರ್ವಹಿಸಿದ ಶಿಕ್ಷಕರು ಸಿಬ್ಬಂದಿಗೆ ಸಂಭಾವನೆ ನೀಡಲು ಶಿಕ್ಷಣ ಇಲಾಖೆ ಅಧಿಕಾರಿಗಳು ಸತಾಯಿಸಿದ ಘಟನೆ ಇಲ್ಲಿ ನಡೆದಿದೆ.
ಮುದ್ದೇಬಿಹಾಳ ಪಟ್ಟಣದಲ್ಲಿ 12 ಪರೀಕ್ಷಾ ಕೇಂದ್ರಗಳಿದ್ದು, ಪರೀಕ್ಷಾ ಕರ್ತವ್ಯ ನಿರ್ವಹಣೆ ಜಾವಾಬ್ದಾರಿಗೆ ಅನುಗುಣವಾಗಿ 100 ರೂದಿಂದ 500 ರೂವರೆಗೆ ಸಂಭಾವನೆ ನಿಗದಿ ಆಗಿತ್ತು. ಪರೀಕ್ಷೆ ಮುಗಿದ ಕೂಡಲೇ ಸಂಭಾವನೆ ಕೊಡದೇ ಆಮೇಲೆ ಕೊಡುವುದಾಗಿ ಆಯಾ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು ಶಿಕ್ಷಕರು, ಸಿಬ್ಬಂದಿಯನ್ನು ಸಾಗಹಾಕಲು ಪ್ರಯತ್ನ ನಡೆಸಿದ್ದರು.
ಇದಕ್ಕೆ ಆಕ್ಷೇಪಿಸಿದ ಶಿಕ್ಷಕರು ಕೂಡಲೇ ಸಂಭಾವನೆ ನೀಡದಿದ್ದರೆ ಬಿಇಓ ಕಚೇರಿ ಎದುರು ಪ್ರತಿಭಟಿಸುವ ಎಚ್ಚರಿಕೆ ನೀಡಿದರು.
ಇದರಿಂದ ಜಾಗೃತರಾದ ಬಿಇಓ ವಿ.ವೈ.ಜೇವರಗಿ ಅವರು ಸಮಬಂಧಿಸಿದ ಕೇಂದ್ರಗಳ ಮುಖ್ಯ ಅಧೀಕ್ಷಕರಿಗೆ ತಮ್ಮಲ್ಲಿ ಹಣ ಇದ್ರೆ ಶಿಕ್ಚಕರಿಗೆ ಕೊಟ್ಟು ಕಳಿಸಬೇಕು. ನಿಮಗೆ ಆಮೇಲೆ ಅಗತ್ಯದಷ್ಟು ಸಂಭಾವನಾ ಹಣ ಕೊಡುವುದಾಗಿ ಹೇಳಿ ಪರಿಸ್ಥಿತಿ ನಿಭಾಯಿಸಿದರು.
ಇದನ್ನೂ ಓದಿ :ಅಧಿಕಾರಕ್ಕಾಗಿ ಈ ಹಿಂದೆಯೂ ಲಾಬಿ ಮಾಡಿಲ್ಲ, ಮುಂದೆಯೂ ಮಾಡಲ್ಲ : ನಿರಾಣಿ
ಎಷ್ಟಿದೆ ಗೌರವ ಧನ?: ಕೊಠಡಿ ಮೇಲ್ವಿಚಾರಕರು, ರಿಲೀವರ್ ಗಳು, ದೈಹಿಕ ಶಿಕ್ಷಕರುಗಳಿಗೆ ತಲಾ 150, ಪರೀಕ್ಷಾ ಸಹಾಯಕ, ಕಸ್ಟೋಡಿಯನ್, ಆಶಾ ಕಾರ್ಯಕರ್ತೆಯರಿಗೆ ತಲಾ 200, ಚೀಫ, ಬಿಇಓ, ನೋಡಲ್ ಆಫಿಸರ್ ಇವರಿಗೆ ತಲಾ 500, ಡಿ ಗ್ರುಪ್, ಪೊಲೀಸ್, ವಾಟರ್ ಮ್ಯಾನ ಇವರಿಗೆ ತಲಾ 100 ಗೌರವ ಧನ ಇದೆ.
ಇದನ್ನು ಹೊರತುಪಡಿಸಿ ಪ್ರತಿ ಕೇಂದ್ರಕ್ಕೆ ಕಾಂಟಿಂಜೆನ್ಸಿ, ಸ್ಯಾನಿಟೈಜರ್, ಪೋಸ್ಟಲ್ ಚಾರ್ಜ್ ಹೀಗೆ ಪ್ರತ್ಯೇಕ ಅನುದಾನ ಕೊಡಲಾಗುತ್ತದೆ. ಮುದ್ದೇಬಿಹಾಳ ತಾಲೂಕಿಗೆ 47,600 ಅನುದಾನ ಬಿಡುಗಡೆ ಆಗಿದ್ದು, ಬಿಇಓ ಬ್ಯಾಂಕ್ ಖಾತೆಯಲ್ಲಿ ಜಮಾ ಆಗಿದೆ. ಅವರು ಹಣ ತೆಗೆದುಕೊಡಲು ವಿಳಂಬ ಮಾಡಿದ್ದು ಸಮಸ್ಯೆಗೆ ಕಾರಣವಾಗಿತ್ತು ಎಂದು ಶಿಕ್ಷಕರು ತಿಳಿಸಿದ್ದಾರೆ.
ಪರೀಕ್ಷೆ ಮುಗಿದ ಒಂದು ಗಂಟೆ ನಂತರ ಬಿಇಓ ಅನುದಾನದ ಹಣಕ್ಕೆ ಚಕ್ ಬರೆದುಕೊಟ್ಟ ಬಳಿಕ ಸಂಭಾವನೆ ವಿತರಣೆ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.