![Arebashe-Academy](https://www.udayavani.com/wp-content/uploads/2025/02/Arebashe-Academy-415x249.jpg)
![Arebashe-Academy](https://www.udayavani.com/wp-content/uploads/2025/02/Arebashe-Academy-415x249.jpg)
Team Udayavani, Nov 2, 2021, 3:45 PM IST
ಆರೋಗ್ಯಕರ ಬದುಕಿಗೆ ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಅತ್ಯಗತ್ಯ. ವ್ಯಾಯಾಮ ಮಾಡಿದ ಬಳಿಕ ಅಥವಾ ಕೆಲವೊಮ್ಮೆ ಕೆಲಸದ ಒತ್ತಡದ ಕಾರಣದಿಂದಲೋ ಆಹಾರವನ್ನು ಸಮಯಕ್ಕೆ ಸರಿಯಾಗಿ ಸೇವಿಸಲು ಆಗುವುದಿಲ್ಲ. ಇದರಿಂದ ಹಸಿವಿನ ಬಯಕೆ ಹೆಚ್ಚಾಗಿರುತ್ತದೆ. ಈ ಸಂದರ್ಭದಲ್ಲಿ ಎದುರು ಏನೇ ಸಿಕ್ಕಿದರೂ ತಿಂದು ಬಿಡುವ ಎಂದೆನಿಸುತ್ತದೆ. ಆದರೆ ಕೆಲವೊಂದು ಆಹಾರ ಪದಾರ್ಥಗಳು ಈ ಸಂದರ್ಭದಲ್ಲಿ ಸೇವಿಸಬಾರದು. ಯಾಕೆಂದರೆ ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡುತ್ತದೆ.
ಖಾಲೆ ಹೊಟ್ಟೆಗೆ ಚಹಾ, ಕಾಫಿ ಸೇವನೆಯೂ ಉತ್ತಮವಲ್ಲ. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಹೆಚ್ಚಾಗುತ್ತದೆ.
ಜೋರು ಹಸಿವಿನಲ್ಲಿದ್ದಾಗ ಪೇರಳೆಯನ್ನು ತಿನ್ನದಿರುವುದು ಉತ್ತಮ. ಯಾಕೆಂದರೆ ಇದು ಹೊಟ್ಟೆ ನೋವಿಗೆ ಕಾರಣವಾಗುವುದು.
ದಿನಕ್ಕೊಂದು ಸೇಬು ತಿನ್ನಿ ಆರೋಗ್ಯವಾಗಿ ಎನ್ನುತ್ತಾರೆ ವೈದ್ಯರು. ಆದರೆ ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬಾರದು. ಯಾಕೆಂದರೆ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ.
ಬೆಳಗ್ಗೆ ಖಾಲಿ ಹೊಟ್ಟೆಗೆ ಮೊಸರು ಸೇವಿಸುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವುದು.
ಖಾಲಿ ಹೊಟ್ಟೆಯಲ್ಲಿ ವಿಟಮಿನ್ ಸಿ ಅಧಿಕವಾಗಿರುವ ಹುಳಿ ಪದಾರ್ಥಗಳನ್ನು ಮುಖ್ಯವಾಗಿ ಟೊಮೆಟೊ, ಕಿತ್ತಳೆ, ಮೊಸಂಬಿಯಂತಹ ಹಣ್ಣು ತರಕಾರಿಗಳನ್ನು ಸೇವಿಸುವುದು ಗ್ಯಾಸ್ಟ್ರಿಕ್ ಅಥವಾ ಆ್ಯಸಿಡಿಟಿ ಸಮಸ್ಯೆ ಉಂಟಾಗುವುದು. ಇದರಿಂದ ಎದೆ ಉರಿಯ ಅನುಭವವೂ ಹೆಚ್ಚಾಗುವುದು.
ಹೀಗಾಗಿ ಖಾಲಿ ಹೊಟ್ಟೆಯಲ್ಲಿ ಇಂಥ ಆಹಾರಗಳನ್ನು ಸೇವಿಸಲೇಬಾರದು. ಒಂದು ವೇಳೆ ಸೇವಿಸಲೇಬೇಕಾದ ಅನಿವಾರ್ಯತೆ ಇದ್ದರೆ ಇನ್ನೊಂದು ಆಹಾರ ಪದಾರ್ಥಗಳೊಂದಿಗೆ ಸೇರಿಸಿ ತಿನ್ನುವುದು ಒಳ್ಳೆಯದು. ಉದಾ ಹಣ್ಣುಗಳನು ಒಟ್ಸ್ ಜತೆಗೆ, ಚಹಾ, ಕಾಫಿಯೊಂದಿಗೆ ಬಿಸ್ಕೆಟ್ ಅಥವಾ ಬೇರೇನಾದರೂ ತಿನಿಸು, ರೋಟಿಯೊಂದಿಗೆ ಮೊಸರನ್ನು ಅಲ್ಪ ಪ್ರಮಾಣದಲ್ಲಿ ತಿನ್ನಬಹುದು.
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ
You seem to have an Ad Blocker on.
To continue reading, please turn it off or whitelist Udayavani.