ಡ್ರೋನ್ ತಡೆ ತಂತ್ರಜ್ಞಾನ ಅನ್ವೇಷಣೆಗೆ ಕರಾವಳಿಗನ ಸಾರಥ್ಯ
Team Udayavani, Jul 29, 2021, 9:00 AM IST
ಮಂಗಳೂರು: ಡ್ರೋನ್ ಪ್ರತಿ ರೋಧ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸಲು ರಾಷ್ಟ್ರೀಯ ಭದ್ರತ ಸಂಸ್ಥೆ (ಎನ್‌ಎಸ್‌ಜಿ)ಗೆ ನೆರವಾ ಗುವುದಕ್ಕಾಗಿ ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿ ಸೆಕ್ಯುರಿಟಿ ಆ್ಯಂಡ್ ಸೈಂಟಿಫಿಕ್ ಟೆಕ್ನಿಕಲ್ ರಿಸರ್ಚ್ ಅಸೋಸಿಯೇಶನ್ (ಶಸ್ತ್ರ) ಸಂಸ್ಥೆಯನ್ನು ಇತ್ತೀಚೆಗೆ ರೂಪಿಸ ಲಾಗಿದೆ. ಪುತ್ತೂರು ಮೂಲದ ಕೊನಾರ್ಕ್ ರೈ ಇದರ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕವಾಗಿರುವುದು ಕರಾವಳಿಗೆ ಹೆಮ್ಮೆ.
ಮೋದಿ ಅವರು ಗುಜರಾತ್ ಮುಖ್ಯಮಂತ್ರಿ ಯಾಗಿದ್ದಾಗ ರಾಷ್ಟ್ರೀಯ ರಕ್ಷಾ ಯುನಿವರ್ಸಿಟಿ (ಆರ್‌ಆರ್‌ಯು) ಆರಂಭಿಸಿದ್ದರು. ಭದ್ರತ ಸಿಬಂದಿಗೆ ವಿಶೇಷ ತರಬೇತಿ ನೀಡುವುದು ಇದರ ಉದ್ದೇಶ. ಅವರು ಪ್ರಧಾನಿಯಾದ ಬಳಿಕ ಆರ್‌ಆರ್‌ಯು ಮಸೂದೆ ಜಾರಿಗೊಳಿಸಿ ವಿ.ವಿ.ಯನ್ನು ಕೇಂದ್ರ ಸರಕಾರದಡಿ ತಂದರು. ಈ ವಿ.ವಿ.ಯ ಅಂಗಸಂಸ್ಥೆಯಾಗಿ “ಶಸ್ತ್ರ’ ಸ್ಥಾಪಿಸಲಾಗಿದೆ.
ಕೊನಾರ್ಕ್ ರೈ ಅವರು ಕ್ಯಾಂಪ್ಕೋದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಕೆದಂಬಾಡಿ ಪ್ರಮೋದ್ ಕುಮಾರ್ ರೈ -ಶೋಭಾ ದಂಪತಿಯ ಪುತ್ರ.
“ಶಸ್ತ್ರ’ದ ಉದ್ದೇಶವೇನು? :
ಎಲ್ಲ ಸ್ತರದ ಭದ್ರತ ಪಡೆಗಳ ಅಗತ್ಯ ಸಾಧನಗಳು, ತಂತ್ರಜ್ಞಾನಗಳ ಬಗ್ಗೆ ಅಧ್ಯಯನ ನಡೆಸುವುದು ಮತ್ತು ಅನ್ವೇಷಣೆ ಮಾಡುವವರಿಗೆ ನೆರವಾಗುವುದು “ಶಸ್ತ್ರ’ದ ಮುಖ್ಯ ಉದ್ದೇಶ.
ಭದ್ರತ ಪಡೆಗಳ ಅಗತ್ಯಗಳನ್ನು ಅರಿತುಕೊಂಡು “ನ್ಯಾಶನಲ್ ಇನೋವೇಶನ್ ಚಾಲೆಂಜ್’ ಆರಂಭಿಸಲಾಗುತ್ತದೆ. ಆತ್ಮನಿರ್ಭರ ಭಾರತದಡಿ ಭಾರತೀಯ ಕಂಪೆನಿ, ಸ್ಟಾರ್ಟ್ ಅಪ್‌ಗ್ಳು ಸಿದ್ಧಪಡಿಸುವ ಸುಧಾರಿತ ತಂತ್ರಜ್ಞಾನ ಗಳನ್ನು ಭದ್ರತ ಪಡೆ ಮತ್ತು “ಶಸ್ತ್ರ’ ತಂಡ ಪರಿಶೀಲಿಸುತ್ತದೆ. ಒಪ್ಪಿಗೆಯಾದರೆ ಉತ್ಪಾದನೆಗೆ ಆರ್ಥಿಕ ಬೆಂಬಲವನ್ನು “ಶಸ್ತ್ರ’ ನೀಡುತ್ತದೆ.
ಕೊನಾರ್ಕ್ ರೈ :
ಕೊನಾರ್ಕ್ ರೈ ಅವರು ಬೆಂಗಳೂರು ಮತ್ತು ಅಳಿಕೆಯಲ್ಲಿ ಶಿಕ್ಷಣ ಪಡೆದು ಗುಜರಾತ್‌ನ ನ್ಯಾಶನಲ್ ಲಾ ಸ್ಕೂಲ್‌ನಲ್ಲಿ ಉನ್ನತ ವ್ಯಾಸಂಗ ಮಾಡಿದ್ದರು. ಜಿನೇವಾದಲ್ಲಿ ದೇಶ-ವಿದೇಶಗಳ ಸಂಬಂಧ ಸುಧಾರಣೆ ನೆಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಗುಜರಾತ್‌ಗೆ ಮರಳಿ ರಾಷ್ಟ್ರೀಯ ರಕ್ಷಾ ವಿ.ವಿ.ಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದರು. ಕಳೆದ ಸೆಪ್ಟಂಬರ್‌ನಿಂದ “ಶಸ್ತ್ರ’ದ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
ಭದ್ರತ ಪಡೆಗಳಿಗೆ ಅಗತ್ಯವಿರುವ ಹೊಸ ತಾಂತ್ರಿಕ ಸಾಧನಗಳನ್ನು “ಶಸ್ತ್ರ’ದ ಸಹಕಾರದೊಂದಿಗೆ ಸಿದ್ಧಪಡಿಸ ಲಾಗುತ್ತದೆ. ಯೋಧರು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳಗಳಿಗೆ ಖುದ್ದಾಗಿ ತೆರಳಿ, ಅಧ್ಯಯನ ಮಾಡಿ ಹೊಸ ಅನ್ವೇಷಕರಿಗೆ ಅವಕಾಶ ನೀಡಲಾಗುತ್ತದೆ. ಸದ್ಯ ಆ್ಯಂಟಿ ಡ್ರೋನ್ ಟೆಕ್ನಾಲಜಿ ಯನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.– ಕೊನಾರ್ಕ್ ರೈ, ಎಂ.ಡಿ., “ಶಸ್ತ್ರ’
– ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
MUST WATCH
ಹೊಸ ಸೇರ್ಪಡೆ
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Road Mishap: ಬೈಕ್ ಗೆ ಕಾರು ಡಿಕ್ಕಿ: ಓರ್ವ ಸಾವು, ಇಬ್ಬರಿಗೆ ಗಾಯ
IFFI 2024: ಇದು ಕನ್ನಡದಲ್ಲೇ ಸಿನಿಮಾಗಳನ್ನು ಮಾಡುವ ಕಾಲ: ಚಿದಾನಂದ ಎಸ್. ನಾಯಕ್
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.