ಪುರಸಭೆ ಮುಖ್ಯ ಅಧಿಕಾರಿ ವಿರುದ್ಧ ಸೌಲಭ್ಯ ವಂಚಿತ ಅಂಗವಿಕಲನ ಉಗ್ರವಾದ


Team Udayavani, Jul 29, 2021, 7:19 PM IST

ಪುರಸಭೆ ಮುಖ್ಯ ಅಧಿಕಾರಿ ವಿರುದ್ಧ ಸೌಲಭ್ಯ ವಂಚಿತ ಅಂಗವಿಕಲನ ಉಗ್ರವಾದ

ವಾಡಿ (ಚಿತ್ತಾಪುರ): ಪದೇಪದೇ ಸರಕಾರಿ ಸೌಲಭ್ಯಗಳಿಂದ ವಂಚಿತವಾಗುತ್ತಿರುವ ಅಂಗವಿಕಲ ನೋರ್ವ ಕಣ್ಣೀರು ಹಾಕುತ್ತಲೆ ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಉಗ್ರವಾಗಿ ವರ್ತಿಸಿದ ಘಟನೆ  ಗುರುವಾರ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಸಂಭವಿಸಿದೆ.

ಪಟ್ಟಣದ ನಿವಾಸಿ ಧರ್ಮ ರಾಥೋಡ್, ಸರಕಾರಿ ಸೌಲಭ್ಯಗಳಿಂದ ವಂಚಿತವಾದ ಅಂಗವಿಕಲ. ಸ್ಥಳೀಯ ರೈಲು ನಿಲ್ದಾಣದಲ್ಲಿ ವಾಹನಗಳ ಪಾರ್ಕಿಂಗ್ ಸೇವೆ ನಿರ್ವಹಿಸುತ್ತಿದ್ದ ಈತ ಲಾಕ್ಡೌನ್ ಸಂಕಷ್ಟಕ್ಕೆ ಸಿಲುಕಿ ಇದ್ದ ತಾತ್ಕಾಲಿಕ ಉದ್ಯೋಗವೂ ಕೈತಪ್ಪಿತು. ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿ ಮನೆ ನಿರ್ಮಿಸಿಕೊಳ್ಳಲು ಸಹಾಯಧನ ಲಭಿಸಲಿದೆ ಎಂಬ ಆಶಾಭಾವನೆಯಿಂದ ಉಳಿಸಿ ಅನುದಾನ ಬೀದಿಗೆ ಬಿದ್ದಿರುವ ಈ ವಿಕಲಾಂಗ ವ್ಯಕ್ತಿ, ಸಾಕಲು ಸಾದ್ಯವಾಗದೆ ಹೆಂಡರು ಮಕ್ಕಳನ್ನು ತವರಿಗೆ ಕಳುಹಿಸಿ ಗೋಳಾಡುತ್ತಿದ್ದಾನೆ. ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದಾನೆ.

ಇತ್ತೀಚೆಗೆ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆಯವರು ಪುರಸಭೆ ಅನುದಾನದಲ್ಲಿ ಖರೀದಿಸಲಾಗಿದ್ದ ತ್ರೀಚಕ್ರ ವಾಹನಗಳನ್ನು ಇತರ ಅಂಗವಿಕಲರಿಗೆ ನೀಡಿರುವ ಸುದ್ದಿ ತಿಳಿದು ಕೆಂಡಾಮಂಡಲವಾದ ವಿಕಲಾಂಗ ಧರ್ಮಸಿಂಗ್ ರಾಠೋಡ, ನೇರವಾಗಿ ಪುರಸಭೆ ಕಚೇರಿಗೆ ಆಗಮಿಸುವ ಮೂಲಕ ಮುಖ್ಯಾಧಿಕಾರಿ ಚಿದಾನಂದ ಸ್ವಾಮಿ ಅವರೊಂದಿಗೆ ವಾಗ್ವಾದ ನಡೆಸಿದ್ದಾನೆ.

ಇದನ್ನೂ ಓದಿ: ನಟಿ ಶಿಲ್ಪಾ ಶೆಟ್ಟಿ ತಾಯಿಗೆ 1.6 ಕೋಟಿ ರೂ. ವಂಚನೆ

ಎಲ್ಲರಿಗೂ ಪದೇಪದೇ ವಿವಿಧ ಸೌಲತ್ತುಗಳನ್ನು ಓದಗಿಸುತ್ತೀರಿ. ಕಾಲುಗಳಿಲ್ಲದ ನನಗೇಕೆ ಅನ್ಯಾಯ ಮಾಡಿದಿರಿ ಎಂದು ಪ್ರಶ್ನಿಸುವ ಮೂಲಕ ಕಚೇರಿಯಲ್ಲೇ ಕೂಗಾಡಿದ್ದಾನೆ. ಕೋಪ ನೆತ್ತಿಗೇರಿಸಿಕೊಂಡು ಕಣ್ಣೀರು ಸುರಿಸಿದ್ದಾನೆ. ನಾನೇ ತಪ್ಪು ಮಾಡಿದ್ದೇನೆ? ಮನೆ ಕಟ್ಟಲು ಮಂಜೂರಾದ ಸರಕಾರದ ಸಹಾಯಧನ ಕೈ ಸೇರಲಿಲ್ಲ. ಉರುಳಿಸಿದ ಗುಡಿಸಲು ಮನೆ ಪುನಃಹ  ಕಟ್ಟಿಕೊಳ್ಳಲು ಸಾಧ್ಯವಾಗದೆ ಬೀದಿಗೆ ಬಿದ್ದಿದ್ದೇನೆ. ಕೊರೊನಾ ಲಾಕ್ಡೌನ್ ದಿಂದಾಗಿ  ರೈಲು ನಿಲ್ದಾಣದಲ್ಲಿ ವಾಹನ ಪಾರ್ಕಿಂಗ್ ಕೆಲಸವೂ ಹೋಗಿದೆ. ಯಾವೂದೇ ಪರಿಹಾರ ಸಿಕ್ಕಿಲ್ಲ.

ಈಗ ತ್ರೀಚಕ್ರ ವಾಹನದಿಂದಲೂ ವಂಚಿಸಿದ್ದೀರಿ. ನಾನು ಎಲ್ಲಿ ಹೋಗಿ ಸಾಯಲಿ? ನನಗೇಕೆ ಈ ಕಷ್ಟ? ನಾನು ಭೂಮಿ ಮೇಲೆ ಬದುಕಬಾರದೇ? ನಾನು ಮಾಡಿದ ಪಾಪವಾದರೂ ಏನು? ನಾನು ಅಂಕವಿಕಲನಲ್ಲವೇ? ಹೆಂಡರು ಮಕ್ಕಳಿಂದ ದೂರ ಇದ್ದು ದಿನವೂ ಸಾಯುತ್ತಿದ್ದೇನೆ. ಸೌಲಭ್ಯ ಕೊಡಿ ಅಥವ ಪುರಸಭೆ ಕಚೇರಿ ಮುಂದೇ ನನಗೆ ವಿಷ ಕೊಟ್ಟು ಸಾಯಿಸಿಬಿಡಿ. ಸಾಕಾಗಿದೆ ಈ ಜೀವನ ಎಂದು ಅವಲತ್ತುಕೊಂಡ ಪ್ರಸಂಗ ನಡೆದಿದೆ.

ಅಂಗವಿಕಲನ ಗೋಳಾಟ ತಿಳಿದು ಮೂಖವಿಸ್ಮಿತರಾದ ಪುರಸಭೆ ಅಧಿಕಾರಿಗಳು ಹಾಗೂ ಪುರಸಭೆ ಸದಸ್ಯರು, ಧರ್ಮಸಿಂಗ್ ನನ್ನು ಸಮಾಧಾನಪಡಿಸಲು ಮುಂದಾದರು. ಯಾವುದಕ್ಕೂ ಜಗ್ಗದ ನೋಂದ ಅಂಗವಿಕಲ ಧರ್ಮಸಿಂಗ್, ನನಗೆ ನ್ಯಾಯ ಕೊಡಿ ಎಂದು ಪಟ್ಟು ಹಿಡಿದು ಏಕಾಂಗಿಯಾಗಿಯೇ ಪ್ರತಿಭಟಿಸಿ ಪುರಸಭೆ ಆಡಳಿತವನ್ನೇ ನಡುಗಿಸಿದ್ದಾನೆ.

ಟಾಪ್ ನ್ಯೂಸ್

Parliament winter session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Parliament Winter Session: ಇಂದಿನಿಂದ ಸಂಸತ್‌ ಅಧಿವೇಶನ.. ವಕ್ಫ್ ಸೇರಿ 16 ಮಸೂದೆ ಮಂಡನೆ?

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

Puttur: ಮೃ*ತದೇಹವನ್ನು ರಸ್ತೆ ಬದಿ ಇರಿಸಿ ಹೋದ ಪ್ರಕರಣ; ಪ್ರಮುಖ ಆರೋಪಿ ಸಹಿತ ಮೂವರ ಬಂಧನ

ಗೂಗಲ್ ಮ್ಯಾಪ್ ನಂಬಿ ನಿರ್ಮಾಣ ಹಂತದ ಸೇತುವೆಯಲ್ಲಿ ಚಲಿಸಿ ನದಿಗೆ ಬಿದ್ದ ಕಾರು, ಮೂವರು ಮೃತ್ಯು

ಗೂಗಲ್ ಮ್ಯಾಪ್ ನಂಬಿ ಸೇತುವೆಯಿಂದ ನದಿಗೆ ಬಿದ್ದ ಕಾರು, ಮದುವೆಗೆ ಹೊರಟಿದ್ದ ಮೂವರು ಮೃತ್ಯು

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

moon

Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್‌’ಗೆ ಗುಡ್‌ ಬೈ

G.parameshwar

Result: ಮಹಾರಾಷ್ಟ್ರ ಚುನಾವಣೆ ಗೆಲ್ಲಲು ಇವಿಎಂ ಹ್ಯಾಕ್‌ ಕಾರಣ: ಗೃಹ ಸಚಿವ ಡಾ.ಪರಮೇಶ್ವರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ

1-motte

School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್‌: ಛಲವಾದಿ

Contracters-Assoi

Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಮನೆಯ ಮುಂದೆ ಕುಳಿತು ಮೊಬೈಲ್‌ ನೋಡುತ್ತಿದ್ದ ವ್ಯಕ್ತಿಗೆ ಕಾರು ಡಿಕ್ಕಿ!

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Bengaluru: ಪಾರ್ಕ್‌ನಲ್ಲಿ ಮಲಗಿದ್ದಾಗ ಮರ ಬಿದ್ದು ಬಿಬಿಎಂಪಿ ಕಸದ ಲಾರಿ ಚಾಲಕ ಸಾವು

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

Fraud: ಸೈಟ್‌ ಮಾರುವುದಾಗಿ ನಂಬಿಸಿ 56 ಲಕ್ಷ ರೂ. ವಂಚನೆ

4

Bengaluru: ಹೋಟೆಲ್‌ನ ಬಾತ್‌ರೂಮ್‌ನಲ್ಲಿ ಕಾರ್ಪೆಂಟರ್ ನೇಣಿಗೆ ಶರಣು

3

Arrested: ಉಸಿರುಗಟ್ಟಿಸಿ ಪತ್ನಿಯ ಕೊಂದು ಮಗುವಿನ ಜೊತೆಗೆ ಪತಿ ಪರಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.