ಅನುದಾನ ಕೊರತೆ, ಬೀದಿಗೆ ಬಿದ್ದ ವೃದ್ಧರಿಗಿಲ್ಲ ಆಶ್ರಯ
Team Udayavani, Jul 30, 2021, 3:00 AM IST
ಕಾರ್ಕಳ: ಇಂದು ಅದೆಷ್ಟೋ ಯುವ ಮನಸ್ಸುಗಳಿಗೆ ಹೆತ್ತವರೇ ಭಾರವಾಗಿದ್ದಾರೆ. ವೃದ್ಧರ ಜೀವನ ಬೀದಿಗಳಲ್ಲಿ ಅನಾಥ ಪ್ರಜ್ಞೆಯಲ್ಲೇ ಕಳೆದು ಹೋಗುವಂತಾಗಿದೆ.
ಸೂಕ್ತ ನೆಲೆ ಸಿಕ್ಕದೆ ನಗರಗಳ ಬೀದಿಗಳ ಫುಟ್‌ಪಾತ್, ಬಸ್‌ಸ್ಟಾಂಡ್‌ಗಳಲ್ಲಿ ಭಿಕ್ಷೆ ಬೇಡಿ ಬದುಕುವ ವೃದ್ಧರ ಸಂಖ್ಯೆ ಲೆಕ್ಕಕ್ಕೆ ಸಿಗದು. ಮಾನಸಿಕ ಅಸ್ವಸ್ಥರು, ಕಾಯಿಲೆ ಗೊಳಗಾದವರು, ಮನೆಯಿಂದ ಹೊರ ಹಾಕಲ್ಪಟ್ಟವರು ಇದರಲ್ಲಿ ಸೇರಿದ್ದಾರೆ. ಇಂತವವರನ್ನು ಸಮಾಜ ಸೇವಕರು, ಪೊಲೀಸರು ರಕ್ಷಿಸಿ, ವೃದ್ಧಾಶ್ರಮಕ್ಕೋ, ಚಿಕಿತ್ಸೆಗಾಗಿ ಆಸ್ಪತ್ರೆಗೋ ದಾಖಲಿಸಿ ಮಾನವೀಯತೆ ತೋರುವ ಪ್ರಯತ್ನ ನಡೆಸುತ್ತಾರೆ. ಆದರೆ ಉಚಿತ ವೃದ್ಧಾಶ್ರಮಗಳು ಇಲ್ಲದ ಕಾರಣ ಸಂದಿಗ್ಧತೆಗೆ ಸಿಲುಕುವಂತಾಗಿದೆ.
ಜಿಲ್ಲೆಯಲ್ಲಿ ನೋಂದಣಿಯಾದ 23 ಖಾಸಗಿ ಅನಾಥಾಶ್ರಮಗಳಿವೆ. ಇಲ್ಲಿ ಶುಲ್ಕ ದೊಂದಿಗೆ ವೃದ್ಧರನ್ನು ದಾಖಲಿಸಿ ಕೊಳ್ಳಲಾಗು ತ್ತಿದೆ. ಜಿಲ್ಲೆಯಲ್ಲೊಂದು ವೃದ್ಧರಿಗಾಗಿ ಸರಕಾರಿ ಅನುದಾನಿತ ವೃದ್ಧಾಶ್ರಮವಿಲ್ಲ.
ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆ ಯಲ್ಲಿ ವೃದ್ಧಾಶ್ರಮ ಅರಸುವವರ ಸಂಖ್ಯೆ ಶೇ. 40ರಷ್ಟು ಏರಿಕೆಯಾಗಿದೆ. ಹೆತ್ತವರ ಪಾಲನೆ, ಪೋಷಣೆಯ ಜವಾಬ್ದಾರಿಯಿಂದ ಮಕ್ಕಳು ವಿಮುಖರಾದ ಪರಿಣಾಮ ಬೀದಿಗೆ ಬೀಳುವ ವೃದ್ಧರ ಸಂಖ್ಯೆ ಹೆಚ್ಚಳವಾಗುತ್ತಿದೆ.
ವೃದ್ಧಾಶ್ರಮಗಳಿಗೆ ಸರಕಾರದ ಅನು ದಾನಗಳು ದೊರಕುತ್ತಿಲ್ಲ. ಈ ಹಿಂದೆ ಎಚ್‌ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಯಾಗಿದ್ದ ಅವಧಿಯಲ್ಲಿ ಉಪವಿಭಾಗಕ್ಕೊಂದು ಅನಾಥಾಶ್ರಮ, ತಾತ್ಕಾಲಿಕ ಪುನರ್‌ವಸತಿ ಕೇಂದ್ರ ತೆರೆಯುವ ಬಗ್ಗೆ ಹೇಳಿದ್ದರು. ಜಿಲ್ಲೆಯಲ್ಲಿ ಉಚಿತ ಸೇವೆ ನೀಡುವ ವೃದ್ಧಾಶ್ರಮಗಳಿದ್ದರೂ ಕೊರೊನಾ ಇತ್ಯಾದಿ ಆರ್ಥಿಕ ಅಡಚಣೆಯಿಂದ ದಾನಿ ಗಳನ್ನು ಅವಲಂಬಿಸಿಕೊಂಡು ಕಷ್ಟದಲ್ಲಿ ನಡೆಯುತ್ತಿವೆ.
ಒಬ್ಬೊಬ್ಬರದು ಒಂದೊಂದು ಕಥೆ :
ಪೋಷಕರನ್ನು ಸಾಕಲಾಗದೆ ಆಸ್ಪತ್ರೆಗೂ ಅಥವಾ ಇನ್ನೆಲ್ಲಿಗೋ ಕರೆದುಕೊಂಡು ಹೋಗುತ್ತೇವೆ ಎಂದು ಹೇಳಿ ಅನಂತರ ಅವರನ್ನು ದಿಕ್ಕು ತಪ್ಪಿಸಿ ನಗರದ ಯಾವುದಾದರೊಂದು ಪ್ರದೇಶದಲ್ಲಿ ಬಿಟ್ಟು ಹೋಗಿ ರುವ ಅನೇಕ ಉದಾಹರಣೆ ಗಳಿವೆ. ಮೃತಪಟ್ಟಂತ ಸಂದರ್ಭ ಬಂದು ನೋಡದವರೂ ಇ¨ªಾರೆ. ಒಬ್ಬೊಬ್ಬರದು ಮನಕಲಕುವ ಕಥೆಗಳಾಗಿರುತ್ತವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ.
2014ರಲ್ಲಿ ಜಿಲ್ಲೆಯಲ್ಲಿ ತೆರೆದ ಹಿರಿಯ ನಾಗರಿಕರ ಸಹಾಯವಾಣಿಗೆ ಇದುವರೆಗೆ 12,093 ಕರೆಗಳು ಬಂದಿವೆ. ತಿಂಗಳಿಗೆ 150ರಿಂದ 200 ಕರೆಗಳು ಬರುತ್ತವೆ ಎನ್ನುತ್ತಾರೆ ಹಿರಿಯ ನಾಗರಿಕ ಸಹಾಯವಾಣಿ ಕೇಂದ್ರದ ಅಧಿಕಾರಿಗಳು.
ಆಸ್ಪತ್ರೆಯಲ್ಲೇ ಬಾಕಿ :
ಅಸ್ವಸ್ಥರನ್ನು ಸರಕಾರಿ ಆಸ್ಪತ್ರೆಗಳಿಗೆ ಸೇರಿಸಿ, ಅನಂತರದಲ್ಲಿ ಅವರು ಬಿಡುಗಡೆಗೊಂಡರೂ ಎಲ್ಲಿಗೂ ಹೋಗಲಾಗದೆ ಆಸ್ಪತ್ರೆಗಳ ಬೆಡ್‌ಗಳಲ್ಲೇ ಉಳಿಯುತ್ತಿದ್ದಾರೆ. ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ 12 ಮಂದಿ ವಾರಸುದಾರರಿಲ್ಲದ ವೃದ್ಧರು ಬೆಡ್‌ಗಳಲ್ಲೆ ಬಾಕಿ ಉಳಿದಿದ್ದಾರೆ.
ಇನ್ನೊಂದು ವೃದ್ಧಾಶ್ರಮ ತೆರೆಯುವ ಅಗತ್ಯವಿಲ್ಲ. ವೃದ್ಧರನ್ನು ಬೀದಿಗೆ ತಳ್ಳುವವರನ್ನು ಅಪರಾಧಿಗಳನ್ನಾಗಿಸುವ ಕಾನೂನುಗಳು ಜಾರಿಗೆ ಬರಬೇಕು ಎಂದು ಸಮಾಜ ಸೇವಕಿ ರಮಿತಾ ಶೈಲೇಂದ್ರ ಅಭಿಪ್ರಾಯಪಡುತ್ತಾರೆ.
3-4 ವರ್ಷಗಳ ಹಿಂದೆ ಸರಕಾರದ ಅನುದಾನ ಬರುತ್ತಿತ್ತು. ಅನಂತರದಲ್ಲಿ ಬರುತ್ತಿಲ್ಲ. ಬೀದಿಯಲ್ಲಿ ಅನಾಥರಾಗಿ ವೃದ್ಧರು ಕಂಡುಬಂದಾಗ ನಮ್ಮ ಸಹಾಯವಾಣಿಗೆ ಕರೆಗಳು ಬರುತ್ತವೆ.-ಗಣೇಶ್, ಯೋಜನಾ ಸಂಯೋಜಕ, ಹಿರಿಯ ನಾಗರಿಕ ಸಹಾಯವಾಣಿ ಕೇಂದ್ರ ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಪಿಎಂ ಸ್ವನಿಧಿ ಯೋಜನೆ; ನಗರದಲ್ಲಿ 17.87 ಕೋ.ರೂ. ಸಾಲ ವಿತರಣೆ
Shimoga; ಕಾಂಗ್ರೆಸ್ ಸರಕಾರ ಹಿಂದೂ ಸಮಾಜದ ತಾಳ್ಮೆ ಪರೀಕ್ಷೆ ಮಾಡುತ್ತಿದೆ: ಈಶ್ವರಪ್ಪ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.