ಹಾಸಿಗೆ ಹಿಡಿದ ರೋಗಿಗಳಿಗೆ ಸೋಲಾರ್ ಬೆಡ್ ವರದಾನ
Team Udayavani, Jul 30, 2021, 9:00 AM IST
ಬೆಳ್ತಂಗಡಿ: ಜೀವನೋ ಪಾಯಕ್ಕೆ ನಾನಾ ವೃತ್ತಿ ಆಯ್ಕೆ ಮಾಡುವ ಮಂದಿ ಬೆನ್ನುಹುರಿ ಆಘಾತಕ್ಕೊಳಗಾಗಿ ಹಾಸಿಗೆ ಹಿಡಿದಲ್ಲಿ ಅದು ನರಕಯಾತನೆಯೇ ಸರಿ. ಇದೀಗ ಅಂತಹ ಮಂದಿಗೆ ಸೋಲಾರ್ ಬೆಡ್ ಎಂಬ ಆವಿಷ್ಕಾರ ವರದಾನವಾಗಿದೆ.
ಬೆನ್ನುಮೂಳೆ ಮುರಿತಕ್ಕೊಳಗಾದವರು ಹಾಸಿಗೆಗೆ ಸೀಮಿತವಾದಾಗ ಮಾನಸಿಕವಾಗಿ ಕುಗ್ಗಿ ಹೋಗುವುದು ಸಹಜ. ಆರೈಕೆಯಲ್ಲಿ ಉಂಟಾಗುವ ಲೋಪ, ಉಪಚಾರದಲ್ಲಿನ ನಿರ್ಲಕ್ಷéದಿಂದ ಬೆನ್ನಿನ ಹಿಂಭಾಗಕ್ಕೆ ಒತ್ತಡ ಬಿದ್ದು ಚರ್ಮದಲ್ಲಿ ಹುಣ್ಣು ಉಂಟಾಗುತ್ತದೆ. ಹೀಗಿರುವಾಗ ಸೋಲಾರ್ ಬೆಡ್‌ನಲ್ಲಿರುವ ಉಬ್ಬು ತಗ್ಗುಗಳು ಗಾಳಿ ಸಂಚರಿಸುವಂತೆ ಮಾಡುತ್ತವೆ. ವಿದ್ಯುತ್ ಅವಲಂಬನೆಯಿಲ್ಲದೆ, ಸೂರ್ಯನ ಶಕ್ತಿಯಿಂದಲೇ ಇದು ಕಾರ್ಯಾ ಚರಿಸುತ್ತದೆ.
ಏನಿದು ಸೋಲಾರ್ ಬೆಡ್?:
ಅಂಗವೈಕಲ್ಯತೆ ಹೊಂದಿರುವವರ ನೆರವಿಗೆ ಧಾವಿಸುವ ಬೆಂಗಳೂರಿನ ಎಪಿಡಿ (The Association Of People With Disability)ಸಂಸ್ಥೆ ನೆರವಿನಿಂದ ಬೆಳ್ತಂಗಡಿ ಸೇವಾಭಾರತಿ ಸಂಸ್ಥೆಯ ಮಾರ್ಗದರ್ಶನದಲ್ಲಿ ಸೆಲ್ಕೊ ಸೋಲಾರ್ ಸಂಸ್ಥೆಯು ಸೋಲಾರ್ ಬೆಡ್ ಅವಿಷ್ಕರಿಸಿದೆ.
ಇದನ್ನು ಜಿಲ್ಲೆಯ ಇಬ್ಬರಿಗೆ ಉಚಿತವಾಗಿ ನೀಡಲಾಗಿದ್ದು, ಹೆಚ್ಚುವರಿ 8 ಮಂದಿಗೆ ಉಚಿತವಾಗಿ ನೀಡಲು ಮುಂದಾಗಿದೆ.ವಾಟರ್ ಬೆಡ್ ಮಾದರಿಯಲ್ಲಿರುವ ಸೋಲಾರ್ ಬೆಡ್ ಸೌರಶಕ್ತಿಯಿಂದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ.
ಬೆಡ್‌ನಲ್ಲಿ ಬಬಲ್‌ಗಳಂತ ರಚನೆಯಿದ್ದು, ಗಾಳಿ ಸಂಯೋಜಿಸುತ್ತದೆ. ಬಬಲ್‌ಗಳು ವಾಯು ಆವರ್ತನಗೊಳ್ಳುವುದರಿಂದ ಚರ್ಮದ ಹುಣ್ಣು, ಗಾಯವಾದಲ್ಲಿ ಅದು ಉಲ್ಬಣಗೊಳ್ಳದಂತೆ ತಡೆಯಲು ಈ ಬೆಡ್ ಸಹಕಾರಿ.
ಸೇವಾಭಾರತಿ ಸರ್ವೇ ನಡೆಸಿದಂತೆ ದ.ಕ., ಉಡುಪಿ, ಕೊಡಗು ಜಿಲ್ಲೆ ಸೇರಿ ಸುಮಾರು 310 ಮಂದಿ ಬೆನ್ನು ಹುರಿ ಘಾಸಿಗೊಳಗಾಗಿ ಹಾಸಿಗೆ ಹಿಡಿದವರಿದ್ದಾರೆ. ಈ ಪೈಕಿ ಮೂಡಿಗೆರೆ ತಾಲೂಕಿನ ಬನಕಲ್ ಸೋಮೇಶ್ ಬನಕಲ್ ಮತ್ತು ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಶೀನ ನಾಯ್ಕ ಅವರಿಗೆ ಏರ್‌ಬೆಡ್ ನೀಡಲಾಗಿದೆ. ಉಳಿದಂತೆ 8 ಮಂದಿಗೆ ನೀಡುವ ಸಲುವಾಗಿ ಎಪಿಡಿ ಸಂಸ್ಥೆಯ ಸೂಚನೆಯಂತೆ ಸೆಲ್ಕೋ ಸೋಲಾರ್ ಸಂಸ್ಥೆಯು ಬೆಡ್ ಸಿದ್ಧಪಡಿಸುತ್ತಿದೆ. ಸೋಲಾರ್ ಪ್ಯಾನಲ್ ಬ್ಯಾಟರಿ ಸೇರಿ 45,000 ರೂ. ವೆಚ್ಚ ತಗಲಲಿದ್ದು, 5 ವರ್ಷ ವಾರೆಂಟಿಯೂ ನೀಡಲಾಗುತ್ತದೆ.
ಜೀವನಾಧಾರಿತ ಯಂತ್ರಗಳ ಕೊಡುಗೆ :
ಎಪಿಡಿ ವತಿಯಿಂದ ಬಾರ್ಕೂರು ದಿನೇಶ್ ಶೆಟ್ಟಿ, ಜಗದೀಶ್ ಕನ್ಯಾಡಿ ಅವರಿಗೆ ಭತ್ತಿ ತಯಾರಿಸುವ ಯಂತ್ರ, ಸೇವಾಭಾರತಿ ಅಧ್ಯಕ್ಷ ಕನ್ಯಾಡಿ ವಿನಾಯಕ್ ರಾವ್ ಅವರಿಗೆ ಅಡಿಕೆ ಸುಲಿವ ಯಂತ್ರ ನೀಡಲಾಗಿದೆ. ಭತ್ತಿ ತಯಾರಿಸುವ ಯಂತ್ರ, 1 ಕಿ.ವ್ಯಾಟ್ ಸಾಮರ್ಥ್ಯದ ಇನ್ವರ್ಟರ್ ಒದಗಿಸಲಾಗಿದ್ದು, ಸೊÌàದ್ಯೋಗಕ್ಕೊಂದು ಶಕ್ತಿ ನೀಡಲಾಗಿದೆ.
ಬೆನ್ನುಹುರಿ ಮುರಿತಕ್ಕೊಳಗಾದ ಹೆಚ್ಚಿನ ಮಂದಿ ಮೊಣಕಾಲಿಂದ ಸ್ವಾಧೀನ ಕಳೆದುಕೊಂಡವರಿದ್ದಾರೆ. ಇಂತಹವರಿಗೆ ಸೆಲ್ಕೊ ಸಂಸ್ಥೆ ನೆರವಿನಿಂದ ದೀಪದ ಭತ್ತಿ ತಯಾರಿಸುವ ಸೋಲಾರ್ ಯಂತ್ರ, ಅಡಿಕೆ ಸುಲಿಯುವ ಯಂತ್ರ ಸಿದ್ಧಪಡಿಸಲಾಗುತ್ತಿದೆ. ಮುಂದೆ ದಾನಿಗಳ ಸಹಕಾರವಿದ್ದಲ್ಲಿ ಮತ್ತಷ್ಟು ಜೀವನಾಧಾರಿತ ಸೋಲಾರ್ ಉಪಕರಣ ಆವಿಷ್ಕರಿಸಲು ಸಂಸ್ಥೆ ನೆರವಾಗಲಿದೆ ಎಂದು ಬೆಂಗಳೂರು ಸೆಲ್ಕೊ ಸಂಸ್ಥೆ ಸೀನಿಯರ್ ಮ್ಯಾನೇಜರ್ ಸಂಜಿತ್ ರೈ ತಿಳಿಸಿದ್ದಾರೆ.
ನನಗೆ 48 ವರ್ಷ ವಯಸ್ಸು. 10 ವರ್ಷದ ಹಿಂದೆ ತೆಂಗಿನ ಮರದಿಂದ ಬಿದ್ದು ಬೆನ್ನುಹುರಿಗೆ ಗಾಯವಾಗಿದೆ. ಮೊಣಕಾಲು ಕೆಳಗೆ ಬಲವಿಲ್ಲದಂತಾಗಿದ್ದು ದಾನಿಗಳ ನೆರವಿಂದ ಸಿಕ್ಕಿದ ಸೋಲಾರ್ ಬೆಡ್‌ನಿಂದಾಗಿ ಗಾಯ ವಾಸಿಯಾಗುತ್ತಿದೆ. -ಶೀನಾ ನಾಯ್ಕ, ಹೊಸಕಾಪು ದರ್ಖಾಸು ಮನೆ, ಮುಂಡಾಜೆ
ಬೆನ್ನುಹುರಿ ಗಾಯ ಆದವರಿಗೆ ಚಿಕಿತ್ಸೆಗಿಂತ ಹೆಚ್ಚು ಸಮರ್ಪಕ ಆರೈಕೆ ಅತ್ಯವಶ್ಯ. ಇದಕ್ಕೆ ಸೋಲಾರ್ ಬೆಡ್ ಪರಿಣಾಮಕಾರಿಯಾಗಲಿದೆ. ಸೆ. 5 ಅಂತಾರಾಷ್ಟ್ರೀಯ ಬೆನ್ನುಹುರಿ ಅಪಘಾತ ದಿನಾಚರಣೆ ನಡೆಯಲಿದ್ದು, ದಾನಿಗಳು ಇಂತಹ ಅನೇಕ ಮಂದಿಗೆ ನೆರವಾಗಲಿ. -ವಿನಾಯಕ್ ರಾವ್ ಕನ್ಯಾಡಿ, ಅಧ್ಯಕ್ಷರು, ಸೇವಾಭಾರತಿ, ಕನ್ಯಾಡಿ
-ಚೈತ್ರೇಶ್ ಇಳಂತಿಲ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.