ಹಿಂದಿನ ಜನ್ಮದಲ್ಲಿ ಕನ್ನಡಿಗನಾಗಿದ್ದೆ 


Team Udayavani, Jul 30, 2021, 7:40 AM IST

ಹಿಂದಿನ ಜನ್ಮದಲ್ಲಿ ಕನ್ನಡಿಗನಾಗಿದ್ದೆ 

ಖ್ಯಾತ ಹಿನ್ನೆಲೆ ಗಾಯಕ ಸೋನು ನಿಗಮ್‌ ಕನ್ನಡ, ಪಂಜಾಬಿ, ಹಿಂದಿ, ತೆಲುಗು, ಮಲಯಾಳ, ಮರಾಠಿ ಮತ್ತು ತಮಿಳು ಭಾಷೆಗಳಲ್ಲಿ ಹಾಡುವ ಮೂಲಕ ಜನಪ್ರಿಯರಾಗಿದ್ದಾರೆ. ಜು. 30 ಸೋನು ನಿಗಮ್‌ ಅವರ 48ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಉದಯವಾಣಿ ಡಾಟ್‌ ಕಾಮ್‌ ಸೋನು ನಿಗಮ್‌ ಜತೆ ನಡೆಸಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಸೋನು ನಿಗಮ್ ಸಂದರ್ಶನದ ವಿಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ:

ನಿಮ್ಮ ಕನ್ನಡಾಭಿಮಾನದ ಕುರಿತು ಜನರಿಗೆ ಗೊತ್ತಿದೆ. ನಿಮಗೆ ಕನ್ನಡ ಬರುತ್ತದೆಯೇ?

ಸೋನು: ನಾನು ಬೆಂಗಳೂರಿನಲ್ಲಿ ಇದ್ದಿದ್ದರೆ ಕನ್ನಡದಲ್ಲಿ ಮಾತನಾಡುತ್ತಿದ್ದೆ. ನಾನು ಕೆಲಸ ಮಾಡುವ ಕ್ಷೇತ್ರದಲ್ಲಿ ಜನರು ಹೆಚ್ಚಾಗಿ ಇಂಗ್ಲಿಷ್‌ನಲ್ಲಿ ಮಾತನಾಡುತ್ತಾರೆ.  ನಾನು ಕನ್ನಡ ಹಾಡನ್ನು ಹಾಗೇ ಸುಮ್ಮನೆ ಹಾಡುವುದಿಲ್ಲ. ಕನ್ನಡ ನನಗೆ ಬರದೇ ಇರುವುದರಿಂದ ಹಿಂದಿಯಷ್ಟೇ ಕನ್ನಡ ಹಾಡಿನ ಮೇಲೆ ಗಮನ ಕೊಡುತ್ತೇನೆ. ಹಿಂದಿ ಹಾಡು ಹಾಡುವಾಗ ಟೆಕ್ನಿಕ್‌ ಮತ್ತು ಭಾವನೆಗಳ ಮೇಲೆ ಗಮನ ಕೊಡುತ್ತೇನೆ. ಆದರೆ ಕನ್ನಡ ಹಾಡು ಹಾಡುವಾಗ ಪದಗಳ ಬಗ್ಗೆ ಹೆಚ್ಚು ಗಮನ ನೀಡುತ್ತೇನೆ. ಯಾಕೆಂದರೆ ಬೇಸರದ ಭಾವನೆಯನ್ನು ಖುಷಿ ಎಂದು ವ್ಯಕ್ತಪಡಿಸಬಾರದು; ಖುಷಿಯನ್ನು ಬೇಸರದ ಭಾವದಲ್ಲಿ ಪ್ರಸ್ತುತಪಡಿಸಬಾರದು.

ಮೊದಲ ಕನ್ನಡ ಹಾಡು ಹಾಡಿದ ದಿನವನ್ನು ನೆನಪಿಸಿಕೊಳ್ಳಿ…

ಸೋನು: ನಾನು ಮೊದಲ ಕನ್ನಡ ಹಾಡು ಹಾಡಲು ಕಾರಣ ಡಾ| ವಿಷ್ಣುವರ್ಧನ್‌. ಅದು 1996ರಲ್ಲಿ ಇರಬೇಕು. ಆ ಹಾಡನ್ನು ಕಂಪೋಸ್‌ ಮಾಡಿದ್ದು ಹಂಸಲೇಖ. ವಿಷ್ಣುವರ್ಧನ್‌ ಆ ಹಾಡನ್ನು ನನ್ನ ಮುಂದೆ ತುಂಬಾ ಚೆನ್ನಾಗಿ ಹಾಡಿದ್ದರು. ಅವರು ನನ್ನನ್ನು ತುಂಬಾ ಇಷ್ಟಪಟ್ಟು “ಈ ಹಾಡು ನೀನು ಹಾಡು’ ಎಂದಿದ್ದರು. ನಾನು ಬೇಗ ಹಾಡನ್ನು ಕಲಿತೆ, ಚೆನ್ನಾಗಿ ಹಾಡಿದೆ. ಹಂಸಲೇಖ ಬಹಳ ಸರಳ ವ್ಯಕ್ತಿ. ನಾನು ಇಂದಿಗೂ ಅವರನ್ನು ಅದೇ ಪ್ರೀತಿ ಮತ್ತು ಗೌರವದಿಂದ ಕಾಣುತ್ತೇನೆ. ಯಾಕೆಂದರೆ ಕನ್ನಡದಲ್ಲಿ ನನ್ನ ಮೊದಲ ಗುರು ಅವರೇ! ಕನ್ನಡದ ದಿಗ್ಗಜರ ಜತೆ ಕಳೆದ ಅಮೂಲ್ಯ ನೆನಪು ನನ್ನಲ್ಲಿದೆ ಮತ್ತು ಅಂಥವರ ಸಾನ್ನಿಧ್ಯ ಪಡೆದ ನಾನು ಧನ್ಯ.

2009- 10ರಲ್ಲಿ “ನೀನೇ ಬರೀ ನೀನೇ’ ಆಲ್ಬಮ್‌ ಬಿಡುಗಡೆಯಾಗಿತ್ತು. ಕನ್ನಡಿಗರಿಗೆ ಧನ್ಯವಾದ ಹೇಳುವ ಸಲುವಾಗಿ ಇದನ್ನು ತಯಾರಿಸುವ ಆಸಕ್ತಿ ತೋರಿದ್ದು ನೀವೇ ಅಂತ ಕೇಳಿದ್ದೇವೆ. ಈ ಆಲ್ಬಮ್‌ ಹಿಂದಿನ ನಿಮ್ಮ ಚಿಂತನೆ ಏನಾಗಿತ್ತು?

ಸೋನು: ಪ್ರಮುಖವಾಗಿ ಸ್ವತಂತ್ರ ಸಂಗೀತ ಕರ್ನಾಟಕದಲ್ಲಿ ಹೆಚ್ಚಬೇಕು ಎನ್ನುವ ಉದ್ದೇಶ ಇತ್ತು. ಸೋಲೋ ಆಲ್ಬಮ್‌, ಪ್ರಮೋಷನ್‌, ಮಾರ್ಕೆಟಿಂಗ್‌ ಜತೆಗೆ ಸಿನೆಮಾದಲ್ಲಿ ಬಳಸುವ ಯಂತ್ರೋಪಕರಣಗಳನ್ನು ಅದರಲ್ಲಿ ಬಳಸಿದ್ದೆವು. ಆ ಅನುಭವ ತುಂಬಾ ಚೆನ್ನಾಗಿತ್ತು. ಮನೋಮೂರ್ತಿ, ಜಯಂತ್‌ ಕಾಯ್ಕಿಣಿ ಅವರಿಗೆ ನನ್ನ ಜತೆ ಕೆಲಸ ಮಾಡಿದ್ದಕ್ಕೆ ಧನ್ಯವಾದ ಹೇಳುತ್ತೇನೆ. ಅದರ ಹಾಡುಗಳು ಈಗಲೂ ಜನರ ಮನಸ್ಸು ಮತ್ತು ಹೃದಯದಲ್ಲಿ ಉಳಿದಿವೆ.

ನೀವು ವಿಶ್ವದ ಯಾವುದೇ ಮೂಲೆಯಲ್ಲಿ ಕಾರ್ಯಕ್ರಮ ನೀಡುತ್ತಿದ್ದರೂ ನೆರೆದ ಪ್ರೇಕ್ಷಕರಲ್ಲಿ ಒಬ್ಬ “ಕನ್ನಡ’ ಹಾಡು ಹಾಡಿ ಎಂದು ಕೂಗಿದ್ದು ಕೇಳಿದರೆ ಅವರಿಗಾಗಿ ಒಂದು ಹಾಡು ಹಾಡುತ್ತೀರಂತೆ…

ಸೋನು: ಹೌದು, ನಾನು ಎಲ್ಲಿದ್ದೇನೆ ಅಂತ ನೋಡುವುದಿಲ್ಲ. ಪಂಜಾಬ್‌ನವರು, ಮಹಾರಾಷ್ಟ್ರದವರು, ಗುಜರಾತಿಗಳು ಇದ್ದರೂ ನನಗೆ “ಕನ್ನಡ’ ಕೇಳಿಸಿದರೆ “ಅನಿಸುತಿದೆ ಯಾಕೋ ಇಂದು’ ಹಾಡನ್ನು ಹಾಡುತ್ತೇನೆ.

ಜಯಂತ್‌ ಕಾಯ್ಕಿಣಿ ಅವರ ಸಾಹಿತ್ಯದ ಕುರಿತು ನಿಮ್ಮ ಅಭಿಪ್ರಾಯ ಏನು?

ಸೋನು: ನನಗೆ ಅವರ ಭಾವನೆಗಳನ್ನು ಹಿಂದಿಗೆ ತರ್ಜುಮೆ ಮಾಡಿ ಅವುಗಳನ್ನು ಅವರಿಂದ ಕದಿಯಬೇಕು ಅನಿಸುತ್ತದೆ. ಅವರೊಬ್ಬ ವಿಶೇಷ ವ್ಯಕ್ತಿ. ಆ ರೀತಿ ಆಲೋಚಿಸಲು ಒಂದು ವಿಶೇಷ ಆತ್ಮವಿರಬೇಕು. ಅವರು ಬಹಳ ಆಳವಾಗಿ ಆಲೋಚಿಸುತ್ತಾರೆ. ಅವರ ಚಿಂತನೆಗಳನ್ನು ಹಿಂದಿ ಮಾತ್ರ ಅಲ್ಲ, ಬೇರೆ ಯಾವುದೇ ಭಾಷೆಗೆ ಅನುವಾದಿಸಿದರೂ ಹಲವು ಕಾರಣಗಳಿಗೆ ಭಿನ್ನವಾಗಿ ಕಾಣುತ್ತದೆ. ಅವರೊಬ್ಬ ಅದ್ಭುತ ಬರಹಗಾರ.

ಇತ್ತೀಚೆಗೆ ಬೆಂಗಳೂರಿನ ಕಾರ್ಯಕ್ರಮವೊಂದ ರಲ್ಲಿ “ಹಿಂದಿನ ಜನ್ಮದಲ್ಲಿ ನಾನು ಕನ್ನಡಿಗನಾಗಿದ್ದೆ’ ಅಂದಿದ್ದಿರಲ್ಲ…

ಸೋನು: ಹೌದು, ನಾನು ಇದನ್ನು ನಂಬುತ್ತೇನೆ. ಅಸ್ತಿತ್ವದ ಬಗ್ಗೆ ಹಲವು ಗ್ರಹಿಕೆಗಳಿರಬಹುದು. ಆದರೆ ಹಿಂದಿನ ಜನ್ಮದಲ್ಲಿ ನಾನು ಕನ್ನಡಿಗನಾಗಿದ್ದೆ. ನಾನು 33 ಭಾಷೆಗಳಲ್ಲಿ ಹಾಡಿದ್ದೇನೆ. ಕರ್ನಾಟಕದಲ್ಲಿ ಸಿಕ್ಕ ಪ್ರೀತಿ ಬೇರೆಲ್ಲಿಗಿಂತಲೂ ಹೆಚ್ಚು ಅನ್ನಿಸುತ್ತದೆ. ಕನ್ನಡದಲ್ಲಿ ಅದ್ಭುತ ಹಾಡುಗಳನ್ನು ಹಾಡಿದ್ದೇನೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10

Year Ender: Horror movies-2024 ರ ಟಾಪ್‌ 5 ಹಾರರ್ ಚಲನಚಿತ್ರಗಳು

Atlee to collaborate with Salman Khan

Atlee Kumar; ಸಲ್ಮಾನ್‌ ಖಾನ್‌ ಜತೆಗೆ ಅಟ್ಲಿ ಸಿನಿಮಾ

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

‌Actress: 31 ವರ್ಷದ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

‌Actress: 31ರ ನಟಿಗೆ 71 ವರ್ಷದ ಹಿರಿಯ ನಟನ ಜತೆ ಪ್ರೀತಿ..? ಫೋಟೋ ವೈರಲ್

Rashmika-Mandanna-2

Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-jyo

Asian Weightlifting: ಜೋಶ್ನಾ ನೂತನ ದಾಖಲೆ

1-bcc

U-19 ವನಿತಾ ಏಷ್ಯಾ ಕಪ್‌: ಫೈನಲ್‌ಗೆ ಭಾರತ

1-J-PP

Pro Kabaddi: ಜೈಪುರ್‌ 12ನೇ ವಿಜಯ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

1-pak

ODI; ತವರಲ್ಲೇ ಎಡವಿದ ದಕ್ಷಿಣ ಆಫ್ರಿಕಾ: ಸರಣಿ ಗೆದ್ದ ಪಾಕಿಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.