ಸುಖ ದು:ಖಗಳ ಸಮ್ಮಿಲನ ಆಟಿ ತಿಂಗಳು

Team Udayavani, Jul 30, 2021, 12:08 PM IST

Coastal Belt Tredition Aati

ಕರಾವಳಿ ಪ್ರದೇಶದಲ್ಲಿ ಆಟಿ ತಿಂಗಳು (ಆಷಾಡ ತಿಂಗಳು) ಜನಜೀವನ ಮತ್ತು ಪ್ರಕೃತಿಯ ಸಮೃದ್ಧತೆಯ ದೃಷ್ಟಿಯಿಂದ ಬಹು ವಿಶೇಷವಾದದ್ದು. ಈ ತಿಂಗಳು ಇಲ್ಲಿನ ಜನರ ಭವಿಷ್ಯವನ್ನು ನಿರ್ಧರಿಸುವ ಮತ್ತು ಆಯುಷ್ಯವನ್ನು ಹೆಚ್ಚಿಸುವ ಕಾಲವೆನ್ನುತ್ತಾರೆ. ಯಾಕೆಂದರೆ ಕೃಷಿಯನ್ನೇ ನಂಬಿರುವ ಜನರು ಆಟಿ ತಿಂಗಳು ಆರಂಭವಾಗುವ ಮೊದಲು ಕೃಷಿ ಕೆಲಸವನ್ನು ಮುಗಿಸಿ ಮನೆ ಒಳಗೆ ಸೇರಿರುತ್ತಾರೆ ಅವರಿಗೆ ಕೃಷಿಗೆ ಪರ್ಯಾಯವಾಗಿ ಬೇರೆ ಕೆಲಸವಿಲ್ಲ. ಅಲ್ಲದೆ ಈ ಸಮಯದಲ್ಲಿ ಬಿಡದೆ ಸುರಿಯುವ ಮಳೆ, ಅಬ್ಬರಿಸುವ ಗುಡುಗು ಜನರನ್ನು ಮನೆಯಿಂದ ಹೊರಗಡೆ ಬರಲು ಬಿಡುವುದಿಲ್ಲ. ಒಂದೆಡೆ ಕೆಲಸವಿಲ್ಲ ಮತ್ತೊಂದೆಡೆ ಹೊರಗಡೆ ಹೋಗುವಂತಿಲ್ಲ ಒಟ್ಟಾರೆ ಈ ತಿಂಗಳಲ್ಲಿ ಜನರಿಗೆ ಜೀವನ ಸಾಗಿಸುವುದು ಬಹಳ ಕಷ್ಟ.

ಇದನ್ನೂ ಓದಿ :  ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮಧು ಬಂಗಾರಪ್ಪ: ಬೆಂಗಲಿಗರ ಸಂಭ್ರಮಾಚರಣೆ

ಪ್ರಕೃತಿಯು ಹಚ್ಚ ಹಸಿರಿನಿಂದ ಕಂಗೊಳಿಸುವ ಕಾಲವಿದು. ಮಣ್ಣು ತಂಪಾಗಿ ಫಲವತ್ತತೆಯಿಂದ ಕೂಡಿರುತ್ತದೆ. ಜನರಿಗೆ ಈ ಸಂದರ್ಭದಲ್ಲಿ ಅವರ ಹಸಿವನ್ನು ನೀಗಿಸುವುದು ಭೂ ಮಾತೆಯ ಮಡಿಲಲ್ಲಿ ದೊರೆಯುವ ಕೆಸುವಿನ ಎಲೆ, ಹಲಸಿನ ಹಣ್ಣಿನ ಬೀಜಗಳು, ನೀರಲ್ಲಿ ಹಾಕಿಟ್ಟ ಹಲಸಿನ ಸೊಳೆ(ಪಚ್ವಿರ್), ಗೂಂಜಿ ಹೀಗೆ ಸುತ್ತಮುತ್ತಲಿನಲ್ಲಿ ದೊರೆಯುವ ಗೆಡ್ಡೆ ಗೆಣಸುಗಳು, ಸೊಪ್ಪುಗಳು. ಈ ತಿನಸುಗಳು ಜನರ ಆರೋಗ್ಯವನ್ನೂ ವೃದ್ಧಿಸುತ್ತದೆ.  ಆಟಿ ಅಮವಾಸ್ಯೆ ಒಂದು ರೀತಿಯಲ್ಲಿ ಇಲ್ಲಿಯ ಜನರಿಗೆ ಆರೋಗ್ಯ ದಿನವಿದ್ದಂತೆ ಈ ದಿನ ಭೂಮಂಡಲದಲ್ಲಿರುವ ಎಲ್ಲಾ ಔಷಧೀಯ ಗುಣಗಳು ಹಾಳೆಯ (ಪಾಲೆದ ಮರ) ಮರದಲ್ಲಿ ಸಂಗ್ರಹವಾಗುತ್ತದೆ. ಆದ್ದರಿಂದ ಈ ದಿನ ಸೂರ್ಯೋದಯ ಆಗುವ ಮೊದಲು ಕಲ್ಲಿನಿಂದ ಹಾಳೆಯ ಕೆತ್ತೆಯನ್ನು ಕೆತ್ತಿ ತಂದು ಅದನ್ನು ಕಷಾಯ ಮಾಡಿ ಕುಡಿಯುತ್ತಾರೆ. ಇದು ವರ್ಷವಿಡೀ ದೇಹಕ್ಕೆ ಬೇಕಾಗಿರುವ ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ ಎನ್ನುತ್ತಾರೆ.

‘ಆಟಿಯು ಆನೆಯ ನಡಿಗೆಯಂತೆ’ ಎನ್ನುವ ಮಾತಿದೆ. ಅಂದರೆ ಜನರು ಕೆಲಸವಿಲ್ಲದೆ ಇರುವುದರಿಂದ ಸಮಯವೇ ಕಳೆಯುವುದಿಲ್ಲ ಎನ್ನುವ ಅರ್ಥ. ಈ ಸಂದರ್ಭದಲ್ಲಿ ಮನೆಯೊಳಗೆ ಇರುವ ಮನೆ ಮಂದಿಯ ನಡುವೆ ಇನ್ನಷ್ಟು ಬಾಂಧವ್ಯದ ಬೆಸುಗೆ ಬೆಳೆಸುವುದೇ ಚೆನ್ನಮಣೆಯಂತಹ ಜನಪದ ಆಟಗಳು. ಈ ರೀತಿಯ ಬೇರೆ ಬೇರೆ ಆಟಗಳನ್ನು (ಒಳಾಂಗಣ ಆಟ) ಆಡುತ್ತಾ ದಿನ ಕಳೆಯುತ್ತಾರೆ.  ಆಟಿ ತಿಂಗಳ ಮೊದಲು ಮತ್ತು ನಂತರದ ದಿನಗಳಲ್ಲಿ ಜನರು ಬೇಸಾಯದ ಕೆಲಸದಲ್ಲೇ ತೊಡಗಿರುವುದರಿಂದ ಮನೆಯೊಳಗಿನ ಹೆಚ್ಚಿನ ಕೆಲಸಕ್ಕೆ ಸಮಯ ದೊರಕುವುದಿಲ್ಲ. ಆದ್ದರಿಂದ ಆಟಿ ಹೊರಗಡೆ ಹಾಕುವ ಪದ್ಧತಿ ಇದೆ. ಅಂದರೆ ಈ ತಿಂಗಳಲ್ಲಿ ಒಂದು ದಿನ ಮನೆಯ ಅಟ್ಟದಿಂದ ಹಿಡಿದು ಕೊಟ್ಟಿಗೆಯವರೆಗೆ ಸ್ವಚ್ಛತಾ ಕೆಲಸವನ್ನು ಮಾಡುತ್ತಾರೆ.

ಇನ್ನು ಈ ತಿಂಗಳಲ್ಲಿ ನಂಬಿಕೆ, ಆರಾಧನೆಯ ವಿಚಾರಕ್ಕೆ ಬಂದರೆ ದೈವ-ದೇವರ ಆರಾಧನೆ ಇರುವುದಿಲ್ಲ. ದೇವರು ಮಾಂತ್ರಿಕ ಶಕ್ತಿಯ ಪ್ರತೀಕವಾಗಿ ಆಟಿ ಕಳಂಜನನ್ನು ಭೂಮಿಗೆ ಕಳುಹಿಸುತ್ತಾರೆ ಎನ್ನುವರು. ಆಟಿ ಕಳಂಜ ಮನೆಮನೆಗೆ ಬರುತ್ತಾ, ಊರಿನ ರೋಗ ರುಜಿನಗಳನ್ನು, ಅನಿಷ್ಟಗಳನ್ನು ಓಡಿಸುತ್ತಾನೆ ಎಂಬ ನಂಬಿಕೆಯಿದೆ.

ಹೀಗೆ ಆಟಿ ತಿಂಗಳು ಕರಾವಳಿಯ (ತುಳುನಾಡು) ಜನರಿಗೆ ಕಷ್ಟದ ಕಾಲವಾದರೂ ಪ್ರಕೃತಿಗೆ ಸಮೃದ್ಧತೆಯ ಸಮಯವಿದು. ಒಂದು ರೀತಿ ಸುಖ ದುಃಖಗಳ ಸಮ್ಮಿಲನವೇ ಈ ಆಟಿ ತಿಂಗಳು.

ನಳಿನಿ ಎಸ್ ಸುವರ್ಣ

ಆಳ್ವಾಸ್ ಕಾಲೇಜ್ ಮೂಡುಬಿದಿರೆ.

ಇದನ್ನೂ ಓದಿ : ಆರ್ಥಿಕ ಬಿಕ್ಕಟ್ಟನ್ನು ನಿವಾರಿಸಲು ಬ್ಯಾಂಕ್ ಗಳು ಸಹಕರಿಸಬೇಕು : ಪಿಣರಾಯಿ ವಿಜಯನ್

ಟಾಪ್ ನ್ಯೂಸ್

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.