ಕಿರುತೆರೆ ನಟನಿಂದ ಯುವತಿಗೆ ಮೋಸ: ಕೈಗೆ ಮಗು ಕೊಟ್ಟು ಪರಾರಿಯಾದ ‘ವಿಲನ್’
Team Udayavani, Jul 30, 2021, 6:09 PM IST
ಬೆಂಗಳೂರು: ಕನ್ನಡದ ಕಿರುತೆರೆ ನಟ (ವಿಲನ್ ಪಾತ್ರಧಾರಿ) ಚಿಕ್ಕಮಗಳೂರು ಜಿಲ್ಲೆ ತಾಲೂಕಿನ ಕಳಸಾಪುರ ನಿವಾಸಿ ಉಮೇಶ್, ಯುವತಿಯೊಂದಿಗೆ ಪ್ರೀತಿಯ ನಾಟಕವಾಡಿ ಮೋಸ ಮಾಡಿದ್ದಾನೆ. ಉಮೇಶನ ಬಣ್ಣದ ಮಾತುಗಳಿಗೆ ಮರುಳಾದ ಯುವತಿ ಒಂದು ಮಗುವಿಗೆ ಜನ್ಮ ನೀಡಿದ್ದಾಳೆ.
ಹಾಸನ ಜಿಲ್ಲೆ ಚನ್ನರಾಯಪಟ್ಟಣ ಯುವತಿ ಉಮೇಶ್ ನಿಂದ ಮೋಸಕ್ಕೊಳಗಾಗಿದ್ದಾಳೆ. ಈಕೆಯನ್ನು ಮದುವೆಯಾಗುವುದಾಗಿ ನಂಬಿಸಿ ಒಂದು ಮಗುವಿಗೆ ಕಾರಣನಾಗಿದ್ದಾನೆ.
ಉಮೇಶನ ಮನೆ ಎದುರು ಯುವತಿ ಪ್ರತಿಭಟನೆ :
ಇನ್ನು ವಂಚಕನಿಂದ ಮೋಸಹೋಗಿರುವ ಯುವತಿ ಆತನ ಮನೆ ಎದುರು ತನ್ನ 5 ತಿಂಗಳ ಮಗುವಿನ ಜೊತೆ ಧರಣಿ ಕುಳಿತಿದ್ದಾಳೆ. ಆತನೊಂದಿಗೆ ಮದುವೆ ಮಾಡಿಸಿ ಎಂದು ಒತ್ತಾಯಿಸಿದ್ದಾಳೆ. “ಮಗು ಹುಟ್ಟುವ ಮುಂಚೆ ತೆಗೆಸು ಎಂದು ಕೇಳಿಕೊಂಡರು ಏನೂ ಮಾಡಲಿಲ್ಲ. ಇಂದು ಮಗು ಇಟ್ಟುಕೊಂಡು ನಾನು ಎಲ್ಲಿಗೆ ಹೋಗಲಿ. ಮಗು ಆದಮೇಲೆ ಸಹ ನನ್ನ ಮಗುವನ್ನು ಮಹಿಳೆಯೊಬ್ಬಳ ಜೊತೆ ಸೇರಿ ಬೇರೆಯವರಿಗೆ ಮಾರಾಟ ಮಾಡಲು ಯತ್ನಿಸಿದ್ದ” ಎಂದು ಮಾಧ್ಯಮಗಳ ಮುಂದೆ ಕಣ್ಣೀರಿಟ್ಟಿದ್ದಾಳೆ ಯುವತಿ.
ಪ್ರತಿಭಟನಾ ನಿರತ ಮಹಿಳೆಯೊಂದಿಗೆ ವಾಗ್ವಾದ ನಡೆಸಿದ ಉಮೇಶನ ಮೊದಲ ಹೆಂಡತಿ. ”ಅವನಿಗೂ ನಮಗೂ ಸಂಬಂಧವೇ ಇಲ್ಲ. ಅವನು ನಿನಗೆ ಮೋಸ ಮಾಡಿದ್ದರೆ ಹೋಗಿ ಅವನನ್ನೇ ಕೇಳು” ಎಂದು ದಬಾಯಿಸಿದ್ದಾರೆ. ಯುವತಿಗೆ ಪೊಲೀಸರು ಸಮಾಧಾನಪಡಿಸಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್
Ujire: ಕಥನ ಸೃಜನಶೀಲತೆಯಿಂದ ಪ್ರಾದೇಶಿಕ ಸಂವೇದನೆಯ ಅಭಿವ್ಯಕ್ತಿ; ಅನುಪಮಾ ಪ್ರಸಾದ್
Sandalwood: ಕಣ್ಣಾ ಮುಚ್ಚೆ ಕಾಡೇ ಗೂಡೇ ತೆರೆಗೆ ಸಿದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.