ಶೌಚಾಲಯಕ್ಕೆ ಮೀಸಲಾದ ಬನ್ನಿಗಿಡದ ಪಾರ್ಕ್‌

ಗೇಟ್‌ ಅಳವಡಿಸದೇ ನಗರಸಭೆ ನಿರ್ಲಕ್ಷ್ಯ| ­ಲಕ್ಷಾಂತರ ರೂ.ಗಳ ಆಟಿಕೆ ಸಾಮಗ್ರಿ ಹಾಳಾಗುವ ಆತಂಕ

Team Udayavani, Jul 31, 2021, 6:14 PM IST

rr

ವರದಿ: ಕೆ.ನಿಂಗಜ್ಜ

ಗಂಗಾವತಿ: ನಗರಸಭೆಯ ಬನ್ನಿಗಿಡದ ಕ್ಯಾಂಪ್‌ ನಲ್ಲಿರುವ ಪಾರ್ಕ್‌ ಅನ್ನು ಸ್ಥಳೀಯರು ಬಯಲು ಶೌಚಾಲಯವಾಗಿ ಮಾಡಿಕೊಂಡಿದ್ದು, ವಾಕಿಂಗ್‌ ಟ್ರ್ಯಾಕ್‌ ಸೇರಿ ಆಟಿಕೆ ಸಾಮಾನುಗಳ ಮೇಲೆ ಅಸ್ವತ್ಛತೆ ಮಾಡುತ್ತಿದ್ದು, ಇದರಿಂದ ಸುತ್ತಲಿನ ನಿವಾಸಿಗಳಿಗೆ ತೊಂದರೆಯಾಗಿದೆ.

ನಗರಸಭೆಯ ಬನ್ನಿಗಿಡದ ಕ್ಯಾಂಪ್‌ನಲ್ಲಿ ಅಮೃತಸಿಟಿ ಯೋಜನೆಯಡಿ ಉದ್ಯಾನವನ ಸ್ಥಾಪಿಸಿ ಸುತ್ತಲು ಕಾಂಪೌಂಡ್‌ ನಿರ್ಮಿಸಿ ವಾಕಿಂಗ್‌ ಟ್ರ್ಯಾಕ್‌ ಸೇರಿ ಮಕ್ಕಳು ಆಟವಾಡಲು ಆಟಿಕೆ ಸಾಮಾನು ಅಳವಡಿಸಲಾಗಿದೆ. ಇಲ್ಲಿ ಶುದ್ಧ ಪರಿಸರ ನಿರ್ಮಾಣ ಆಗಬೇಕಿದ್ದ ಉದ್ಯಾನವನದಲ್ಲಿ ಅನೈರ್ಮಲ್ಯ ಸೃಷ್ಟಿಯಾಗಿ ಗಬ್ಬು ನಾರುವಂತಾಗಿದೆ.

ನಗರದ ಪ್ರತಿ ಉದ್ಯಾನವನಗಳ ಅಭಿವೃದ್ಧಿಪಡಿಸಲು ಅಮೃತಸಿಟಿ ಯೋಜನೆಯಡಿ ಹಣ ಮೀಸಲಿಡಲಾಗಿದೆ. ಸುತ್ತಲು ಗೋಡೆ ವಾಕಿಂಗ್‌ ಟ್ರ್ಯಾಕ್‌ ಮತ್ತು ಮಕ್ಕಳು ಆಟವಾಡಲು ಮತ್ತು ಬೆಳಗಿನ ಜಾವ ವಾಯು ವಿಹಾರಕ್ಕೆ ಆಗಮಿಸುವವರು ದೇಹ ದಂಡನೆ ಮಾಡಲು ವ್ಯಾಯಮ ಸಾಮಾಗ್ರಿಗಳನ್ನು ಲಕ್ಷಾಂತರ ರೂ. ಖರ್ಚು ಮಾಡಿ ಹಾಕಲಾಗಿದೆ. ಬನ್ನಿಗಿಡ ಕ್ಯಾಂಪ್‌ ಹೊರತುಪಡಿಸಿ ಉಳಿದ ಉದ್ಯಾನವನಗಳಲ್ಲಿ ಜನರು ವಿಶ್ರಾಂತಿ ಮತ್ತು ವಾಯುವಿಹಾರಕ್ಕಾಗಿ ಬಳಕೆ ಮಾಡುತ್ತಿದ್ದಾರೆ.

ಬನ್ನಿಗಿಡದ ಕ್ಯಾಂಪ್‌ ಉದ್ಯಾನವನದಲ್ಲಿ ಕೆಲವರು ನಿತ್ಯವೂ ಬೆಳಗ್ಗೆ ಶೌಚ ಮಾಡಲು ಬಳಕೆ ಮಾಡುತ್ತಿದ್ದಾರೆ. ಲಕ್ಷಾಂತರ ರೂ. ಖರ್ಚು ಮಾಡಿ ಸುಸಜ್ಜಿತ ಪಾರ್ಕ್‌ ನಿರ್ಮಿಸಿ ಆಟಿಕೆ ಸಾಮಾನು ಅಳವಡಿಸಿರುವ ನಗರಸಭೆಯವರು ಪಾರ್ಕ್‌ಗೆ ಗೇಟ್‌ ಅಳವಡಿಕೆ ಮಾಡದೇ ಇರುವುದು ಮತ್ತು ವಾಚ್‌ ಮ್ಯಾನ್‌ ಅವರನ್ನು ನಿಯೋಜನೆ ಮಾಡಲು ನಿರ್ಲಕ್ಷ್ಯ ತೋರಿರುವುದು ಇದ್ದಕ್ಕೆ ಕಾರಣವಾಗಿದೆ ಎಂದು ನಿವಾಸಿಗಳು ದೂರಿದ್ದಾರೆ.

ಪಾರ್ಕ್‌ನ ಒಂದು ಬದಿಯಲ್ಲಿ ಖಾಸಗಿ ನಿವೇಶನವಿದ್ದು, ಇಲ್ಲಿ ಜಾಲಿ ಗಿಡಗಳು ಬೆಳೆದು ಕಾಡಿನಂತೆ ಕಾಣುತ್ತಿದೆ. ಇದರಿಂದ ಹಾವು, ಹುಳು-ಹುಪ್ಪಡಿ ಸೇರಿ ತಾಣವಾಗಿ ಮಾರ್ಪಟ್ಟಿದೆ. ಬನ್ನಿಗಿಡದ ಕ್ಯಾಂಪಿನಲ್ಲಿ ಬಹುತೇಕ ಕೂಲಿ ಹಮಾಲಿ ಮಾಡುವವರು ಹೆಚ್ಚಾಗಿ ವಾಸ ಮಾಡುವುದರಿಂದ ಇವರ ಮಕ್ಕಳು ಇಲ್ಲಿ ಆಟವಾಡಲು ಆಗಮಿಸುತ್ತಾರೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ವಿಷಜಂತುಗಳು ಕಚ್ಚುವ ಭಯವಿರುವ ಕಾರಣ ಇಡೀ ಪ್ರದೇಶವನ್ನು ಜೆಸಿಬಿ ಮೂಲಕ ಸ್ವತ್ಛ ಮಾಡಿಸುವಂತೆ ನಗರಸಭೆ ಅವರಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.

ಟಾಪ್ ನ್ಯೂಸ್

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

No support for liquor bandh: Tourism Hotel Owners Association

Liquor: ಮದ್ಯ ಬಂದ್‌ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ

: ಸಿಎಂ ಸಿದ್ದರಾಮಯ್ಯ

Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು

Shimoga; Omini caught fire while filling with petrol

Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

Davanagere: ಯತ್ನಾಳ್‌ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-koppala

Koppala ಗವಿಮಠ ಜಾತ್ರೆಗೆ ನಟ ಅಮಿತಾಬ್‌ ಬಚ್ಚನ್‌?

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!

Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್

Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್

ಕೊಪ್ಪಳ:ಈ ರಸ್ತೆಗಳಲ್ಲಿ ನಿತ್ಯವೂ ನರಕ ದರ್ಶನ-ಜೀವಭಯದಲ್ಲೇ ಸಂಚಾರ

ಕೊಪ್ಪಳ:ಈ ರಸ್ತೆಗಳಲ್ಲಿ ನಿತ್ಯವೂ ನರಕ ದರ್ಶನ-ಜೀವಭಯದಲ್ಲೇ ಸಂಚಾರ

ಕುಷ್ಟಗಿ: ಬಿಳಿ ಜೋಳಕ್ಕೂ ಲಗ್ಗೆಯಿಟ್ಟ ಲದ್ದಿ ಹುಳು

ಕುಷ್ಟಗಿ: ಬಿಳಿ ಜೋಳಕ್ಕೂ ಲಗ್ಗೆಯಿಟ್ಟ ಲದ್ದಿ ಹುಳು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

Kailash Gahlot: ಚುನಾವಣೆಗೂ ಮೊದಲೇ ಆಪ್ ತೊರೆದ ಸಚಿವ ಕೈಲಾಶ್ ಗೆಹ್ಲೋಟ್…

101

Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ

No support for liquor bandh: Tourism Hotel Owners Association

Liquor: ಮದ್ಯ ಬಂದ್‌ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ

ರಿಲೀಸ್‌ ಅಖಾಡಕ್ಕೆ ಚಿಕ್ಕಣ್ಣನ ʼಫಾರೆಸ್ಟ್ʼ

Forest: ರಿಲೀಸ್‌ ಅಖಾಡಕ್ಕೆ ಚಿಕ್ಕಣ್ಣನ ʼಫಾರೆಸ್ಟ್ʼ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.