6 ವರ್ಷಗಳ ಬಳಿಕವೂ ಅನೇಕ ಹುದ್ದೆಗಳು ಭರ್ತಿಯಾಗಿಲ್ಲ
Team Udayavani, Aug 1, 2021, 3:00 AM IST
ವಿಟ್ಲ: ವಿಟ್ಲ ಗ್ರಾ.ಪಂ. ಮೇಲ್ದರ್ಜೆಗೇರಿ ಪ. ಪಂ.ಆದ ಬಳಿಕ ಪ್ರಥಮ ಆಡಳಿತಾವಧಿ ಜು. 15ಕ್ಕೆ ಪೂರ್ಣ ಗೊಂಡಿದೆ. ಆಡಳಿತಾಧಿಕಾರಿಯನ್ನು ನೇಮಕ ಮಾಡ ಲಾಗಿದೆ. 18 ವಾರ್ಡ್‌ಗಳಿಗೆ ಮೀಸಲಾತಿ ಘೋಷಿಸಲಾಗಿದೆ. ಕೆಲವು ಕಡೆ ಘೋಷಿಸಿದ ಮೀಸಲಾತಿ ವಿರುದ್ಧ ಅಸಮಾ ಧಾನದ ಹೊಗೆಯಾಡುತ್ತಿದೆ. ಇದೆಲ್ಲ ದರ ನಡುವೆ ಎರಡನೇ ಅವಧಿಯ ಆಡಳಿತ ವ್ಯವಸ್ಥೆಗೆ ಚುನಾವಣೆ ಘೋಷಣೆ ಯಾಗಲಿದೆ.
24-6-2015ರಂದು ಪಟ್ಟಣ ಪಂಚಾಯತ್ ಆಡಳಿತ ಅಸ್ತಿತ್ವಕ್ಕೆ ಬಂದಿದ್ದು, 6 ವರ್ಷಗಳ ಬಳಿಕವೂ ಇನ್ನೂ ಅನೇಕ ಹುದ್ದೆಗಳೇ ಭರ್ತಿಯಾಗಿಲ್ಲ! ಮುಖ್ಯಾಧಿಕಾರಿ ಹುದ್ದೆ ಮಾತ್ರ ಭರ್ತಿಯಾಗಿದ್ದು, ಕಂದಾಯ ಅಧಿಕಾರಿ, ಎಂಜಿನಿಯರ್, ಆರೋಗ್ಯಾಧಿಕಾರಿ ಇತ್ಯಾದಿ ಹುದ್ದೆಗಳಿಗೆ ಪೂರ್ಣ ಪ್ರಮಾಣದಲ್ಲಿ ಅಧಿಕಾರಿಗಳನ್ನು ನಿಯುಕ್ತಿಗೊಳಿಸಲಾಗಿಲ್ಲ. ಕಂದಾಯ ಅಧಿಕಾರಿ, ಎಂಜಿನಿಯರ್ ಹುದ್ದೆಗೆ ನೇಮಕವಾಗಿದ್ದರೂ ಅವರಿಬ್ಬರಿಗೂ ಬೇರೆ ಕಡೆ ಡೆಪ್ಯುಟೇಶನ್ ಮಾಡಲಾಗಿದೆ. ಪರಿಣಾ ಮವಾಗಿ ಸ್ಥಳೀಯರು ತೊಂದರೆಗೊಳಗಾಗಿದ್ದಾರೆ.
ಪ್ರಥಮ ಅವಧಿ ಬಿಜೆಪಿಗೆ :
ಚುನಾವಣೆ ನಡೆದ ಬಳಿಕದ ಪ್ರಥಮ ಅವಧಿಯ ಐದು ವರ್ಷಗಳಲ್ಲಿ ಬಿಜೆಪಿ ಬಹುಮತವನ್ನು ಪಡೆದಿತ್ತು. ಪ್ರಥಮ ಅವಧಿಯಲ್ಲಿ 30 ತಿಂಗಳ ಕಾಲ ಬಿಜೆಪಿಯ ಅರುಣ್ ಎಂ.ವಿಟ್ಲ ಅಧ್ಯಕ್ಷರಾಗಿದ್ದರು. ಆದರೆ ಬಹುಮತವಿಲ್ಲದೇ ಇದ್ದರೂ ಮೀಸಲಾತಿಯ ಅವಕಾಶದಿಂದ ಕಾಂಗ್ರೆಸ್‌ನಿಂದ ಆಯ್ಕೆಯಾಗಿದ್ದ ದಮಯಂತಿ 27.50 ತಿಂಗಳ ಕಾಲ ಅಧ್ಯಕ್ಷರಾಗಿದ್ದರು. ಇದೀಗ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಬಳಿಕ ಎರಡೂವರೆ ತಿಂಗಳ ಅವಧಿಕೆ ಕೆ.ಚಂದ್ರಕಾಂತಿ ಶೆಟ್ಟಿ ಅಧ್ಯಕ್ಷರಾಗಿದ್ದರು.
ಪ್ರಮುಖ ಸಾಧನೆಗಳು :
ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಗುರುತಿಸಬಹುದಾದ ಪ್ರಮುಖ ಸಾಧನೆಗಳು: ಕಾಸರಗೋಡು, ಕನ್ಯಾನ, ಪುಣಚದಿಂದ ಆಗಮಿಸುವವರಿಗೆ ಅರಮನೆ ರಸ್ತೆಯಿಂದ ಪುತ್ತೂರು ರಸ್ತೆಗೆ ತೆರಳಲು ಬೈಪಾಸ್ ರಸ್ತೆ ನಿರ್ಮಾಣ, ಚಂದಳಿಕೆ ಮಾಡತ್ತಡ್ಕ ರಸ್ತೆ ಅಭಿವೃದ್ಧಿ, ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸ್ವತ್ಛ ಭಾರತ, ಬೀದಿದೀಪ, ನಗರೋತ್ಥಾನ ಯೋಜನೆ ಅನುಷ್ಠಾನ, ಕುಡಿಯುವ ನೀರಿಗಾಗಿ 38 ಕೊಳವೆ ಬಾವಿ ನಿರ್ಮಾಣ ಮತ್ತಿತರ ಯೋಜನೆಗಳು ಪೂರ್ಣಗೊಂಡಿವೆ. ಕಸ ಸಾಗಾಟಕ್ಕೆ ವಾಹನಗಳನ್ನು ಖರೀದಿಸಲಾಗಿದೆ. ಅಂತರ್ಜಲ ಸಮೃದ್ಧಿಗೆ ಪ್ರತೀ ವರ್ಷವೂ ಮಳೆ ನಿಂತ ಬಳಿಕ 7 ಅಣೆಕಟ್ಟೆ ನಿರ್ಮಾಣ ಮಾಡುತ್ತಿರುವುದರಿಂದ ವಿಟ್ಲಕ್ಕೆ ನೀರಿನ ಟ್ಯಾಂಕರ್ ಬಂದಿಲ್ಲ. 1.20 ಕೋಟಿ ರೂ. ಅನುದಾನ ಸಮಗ್ರ ಕುಡಿಯುವ ನೀರು ಯೋಜನೆಗೆ ಡಿಪಿಆರ್ ಆಗಿದೆ. ಮೇಗಿನಪೇಟೆ ಪಣೆಮಜಲು ಸಂಪರ್ಕ ರಸ್ತೆ ಮತ್ತು ಪಳಿಕೆ 2 ಕೋಟಿ ರೂ. ವೆಚ್ಚದ ಘನತ್ಯಾಜ್ಯ ವಿಲೇವಾರಿ ಘಟಕದ ಕಾಮಗಾರಿ ನಡೆಯುತ್ತಿದೆ.
ಮುತುವರ್ಜಿ :
2015ರಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಗ್ರಾ.ಪಂ. ಮಾಜಿ ಅಧ್ಯಕ್ಷ ರಮಾನಾಥ ವಿಟ್ಲ ಅವರ ವಿಶೇಷ ಮುತುವರ್ಜಿಯಿಂದ ವಿಟ್ಲ ಗ್ರಾ.ಪಂ. ಮೇಲ್ದರ್ಜೆಗೇರಿತು. ಆದರೆ ಆರಂಭಿಕ ವ್ಯವಸ್ಥೆಯಲ್ಲಿ ಎಡರು ತೊಡರುಗಳಿದ್ದವು. ಒಂದು ವರ್ಷದ ಬಳಿಕ ಚುನಾವಣೆ ನಡೆಯಿತು. ಈ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯಿತು. ಒಟ್ಟು 18 ಸ್ಥಾನಗಳ ಪೈಕಿ 12 ಬಿಜೆಪಿ ಮತ್ತು 6 ಕಾಂಗ್ರೆಸ್ ಅಭ್ಯರ್ಥಿಗಳು ಜಯಗಳಿಸಿದ್ದರು.
ಆಗಬೇಕಾಗಿರುವ ಕಾಮಗಾರಿಗಳು:
ಸುಸಜ್ಜಿತ ಸ್ವಂತ ಕಟ್ಟಡ ನಿರ್ಮಾಣ ವಾಗಬೇಕಾಗಿದೆ. ಪ್ರಮುಖ ನೀರಾವರಿ ವ್ಯವಸ್ಥೆಯಾಗಬೇಕಾಗಿದೆ. ತೆರಿಗೆ, ನೀರಿನ ತೆರಿಗೆ, ಕಟ್ಟಡ ತೆರಿಗೆ, ವ್ಯಾಪಾರ ತೆರಿಗೆ ಪಾವತಿಸುವವರ ಸಂಖ್ಯೆ ಹೆಚ್ಚಬೇಕಾಗಿದೆ. ಕಟ್ಟಡ ಬಾಡಿಗೆ, ಸಂತೆ ಏಲಂ ಇತ್ಯಾದಿಗಳ ಮೂಲಕ ಸ್ವಂತ ಆದಾಯ ಹೆಚ್ಚಿಸಬೇಕಾಗಿದೆ. ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಪೇಟೆ ರಸ್ತೆ ಮತ್ತು ಅನೇಕ ಹಳ್ಳಿ ರಸ್ತೆಗಳ ಅಭಿವೃದ್ಧಿಯಾಗಬೇಕಾಗಿದೆ. ವಿಟ್ಲದ ಮಂಗಳವಾರ ಸಂತೆಗೆ ಸೂಕ್ತ ವ್ಯವಸ್ಥೆಯಾಗಬೇಕಿದೆ. ಪಾರ್ಕಿಂಗ್, ನೋ ಪಾರ್ಕಿಂಗ್ ವ್ಯವಸ್ಥೆಯನ್ನು ಗುರುತಿಸಬೇಕಾಗಿದೆ.
-ಉದಯಶಂಕರ್ ನೀರ್ಪಾಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.