ಗಂಗೊಳ್ಳಿ : ಯಾಂತ್ರಿಕ ಮೀನುಗಾರಿಕೆ ವಿಳಂಬ ಸಾಧ್ಯತೆ
Team Udayavani, Aug 1, 2021, 3:10 AM IST
ಗಂಗೊಳ್ಳಿ: ಆಳ ಸಮುದ್ರ ಮೀನುಗಾರಿಕೆ ರಜೆ ಜು. 31ಕ್ಕೆ ಕೊನೆ ಗೊಂಡಿದ್ದು, ಆ. 1ರಿಂದ ಕಡಲಿಗಿಳಿ ಯಲು ಅವಕಾಶವಿದ್ದರೂ, ಸಮುದ್ರದಲ್ಲಿ ಪ್ರತಿ ಕೂಲ ಹವಾಮಾನ, ಡೀಸೆಲ್ ಬೆಲೆ ದುಬಾರಿಯಿಂದಾಗಿ ಗಂಗೊಳ್ಳಿಯಲ್ಲಿ ಆಳ ಸಮುದ್ರ ಮೀನುಗಾರಿಕೆ ಇನ್ನು ಕೆಲವು ದಿನ ವಿಳಂಬ ವಾಗಿ ಆರಂಭವಾಗುವ ಸಾಧ್ಯತೆಗಳಿವೆ.
ಗಂಗೊಳ್ಳಿಯಲ್ಲಿ ಆ.3ರ ಬಳಿಕವಷ್ಟೇ ಯಾಂತ್ರಿಕ ಮೀನುಗಾರಿಕೆ ಆರಂಭವಾಗುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಈ ಬಗ್ಗೆ ಇನ್ನೂ ಯಾವುದೇ ಅಂತಿಮ ನಿರ್ಧಾರ ಆಗಿಲ್ಲ ಎಂದು ಮೂಲಗಳು ತಿಳಿಸಿವೆ.
ಪ್ರತಿಕೂಲ ಹವಾಮಾನ:
ಭಾರೀ ಮಳೆಯಾಗುತ್ತಿರುವುದರಿಂದ ಸಮುದ್ರದಲ್ಲಿ ಗಾಳಿಯ ವೇಗ ಹಾಗೂ ಅಲೆಗಳ ಅಬ್ಬರ ಬಿರುಸಾಗಿದ್ದು, ಇದು ಮೀನುಗಾರಿಕೆ ಆರಂಭಕ್ಕೆ ತೊಡಕಾಗಿದೆ. ಆ. 3ರ ಬಳಿಕ ಸ್ವಲ್ಪ ಮಟ್ಟಿಗೆ ಕಡಲು ಶಾಂತವಾಗಬಹುದು ಎನ್ನುವ ನಿರೀಕ್ಷೆ ಮೀನುಗಾರರದ್ದಾಗಿದೆ. ಇನ್ನು ಈ ಬಾರಿ ಡೀಸೆಲ್ ದರ ಮತ್ತಷ್ಟು ದುಬಾರಿಯಾಗಿದ್ದು, ಇದು ಮೀನುಗಾರಿಕೆಗೆ ಹೊಡೆತ ಬಿದ್ದಿದೆ.
3ನೇ ಅಲೆ ಭೀತಿ : ಲಸಿಕೆಗೆ ಮನವಿ :
ಆಳ ಸಮುದ್ರ ಮೀನುಗಾರಿಕೆ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಆದರೆ ಮೀನುಗಾರರಿಗೆ ಇನ್ನೂ ಸಹ ಲಸಿಕೆ ನೀಡಿಲ್ಲ. ಮಾಟು ಬಲೆ ದೋಣಿಯೊಂದರಲ್ಲೇ 30 ರಿಂದ 35 ಮೀನುಗಾರರು ಕೆಲಸ ಮಾಡುತ್ತಾರೆ. ಯಾಂತ್ರೀಕೃತ ದೋಣಿ, ಬೋಟು ಸೇರಿದಂತೆ ಸಾವಿರಾರು ಮೀನುಗಾರರು ಬಂದರಿನಲ್ಲಿ ಸೇರುತ್ತಾರೆ. ಕೊರೊನಾ 3ನೇ ಅಲೆಯ ಭೀತಿ ಈಗಲೇ ಆವರಿಸಿದ್ದು, ಈ ಹಿನ್ನೆಲೆಯಲ್ಲಿ ಇನ್ನೇನು ಯಾಂತ್ರಿಕ ಮೀನುಗಾರಿಕಾ ಋತು ಆರಂಭಗೊಳ್ಳಲಿದ್ದು, ಮೀನುಗಾರರಿಗೂ ಆದ್ಯತೆ ನೆಲೆಯಲ್ಲಿ ಲಸಿಕೆಗೆ ಅವಕಾಶ ಕಲ್ಪಿಸಿಕೊಡಬೇಕು. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಮೀನುಗಾರಿಕಾ ಇಲಾಖೆ ಗಮನಹರಿಸಬೇಕು ಎನ್ನುವುದಾಗಿ ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ ಆಗ್ರ ಹಿಸಿದ್ದಾರೆ.
ಗಂಗೊಳ್ಳಿಯಲ್ಲಿ ಬೋಟ್‌ಗಳು ಕಡಲಿಗಿಳಿಯುವ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಆ.2 ರಂದು ಈ ಬಗ್ಗೆ ಸಭೆ ನಿಗದಿಯಾಗಿದ್ದು, ಅಲ್ಲಿ ಚರ್ಚಿಸಿ ತೀರ್ಮಾನಿಸಲಿದ್ದೇವೆ. ಸಮುದ್ರ ತುಸು ಬಿರು ಸಾಗಿದ್ದು, ಡೀಸೆಲ್ ದರವೂ ದುಬಾರಿಯಾಗಿದೆ. ಹಾಗಾಗಿ ಎಲ್ಲ ಬೋಟ್‌ಗಳು ಈ ಬಾರಿ ಕಡಲಿಗಿಳಿಯುವುದು ಅನುಮಾನ. – ನಾರಾಯಣ ಖಾರ್ವಿ, ಅಧ್ಯಕ್ಷರು, ಗಂಗೊಳ್ಳಿ ಪರ್ಸಿನ್ ಮೀನುಗಾರರ ಸಹಕಾರಿ ಸಂಘ
ಮೀನುಗಾರರಿಗೂ ಆದ್ಯತೆ ನೆಲೆಯಲ್ಲಿ ಲಸಿಕೆ ನೀಡುವುದು ಅತ್ಯವಶ್ಯಕವಾಗಿದ್ದು, ಈ ಬಗ್ಗೆ ನಾನು ನಮ್ಮ ಇಲಾಖಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಅವರು ಆರೊಗ್ಯ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಮಾತನಾಡಿದ್ದಾರೆ. ಆದಷ್ಟು ಬೇಗ ಲಸಿಕೆ ನೀಡುವ ಬಗ್ಗೆ ಕ್ರಮಕೈಗೊಳ್ಳಲಾಗುವುದು. ಆ.2ರಂದು ಮಲ್ಪೆಯಲ್ಲಿ ಆರೋಗ್ಯ ತಪಾಸಣೆ ಶಿಬಿರ ಆಯೋಜಿಸಲಾಗಿದೆ. – ಸುಮಲತಾ, ಸಹಾಯಕ ನಿರ್ದೇಶಕರು, ಮೀನುಗಾರಿಕಾ ಇಲಾಖೆ ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
Today World Fisheries Day: ಸಮಸ್ಯೆ ಗೂಡಾಗಿರುವ ಕರಾವಳಿಯ ಪ್ರಮುಖ ಆರ್ಥಿಕತೆ
Road Mishap: ಇನ್ನೋವಾ ಕಾರಿಗೆ ಇನ್ಸುಲೇಟರ್ ಲಾರಿ ಢಿಕ್ಕಿ; ನಾಲ್ವರು ಗಂಭೀರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.