ದ.ಕ.: ನೀರು ಪರೀಕ್ಷಾಲಯಕ್ಕೆ ಎನ್‌ಎಬಿಎಲ್ ಮಾನ್ಯತೆ
Team Udayavani, Aug 1, 2021, 6:08 AM IST
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿ ರುವ ಜಿಲ್ಲಾ ನೀರು ಪರೀಕ್ಷಾ ಪ್ರಯೋಗಾಲಯವು ನ್ಯಾಶನಲ್ ಅಕ್ರಿಡಿಟೇಶನ್ ಬೋರ್ಡ್ ಫಾರ್ ಟೆಸ್ಟಿಂಗ್ ಆ್ಯಂಡ್ ಕ್ಯಾಲಿಬ್ರೇಶನ್ ಲ್ಯಾಬೊರೇಟರೀಸ್ (ಎನ್‌ಎಬಿಎಲ್)ನ ಮಾನ್ಯತೆ ಪಡೆದಿದೆ.
ಇದು ಈ ಮಾನ್ಯತೆ ಪಡೆದಿರುವ ರಾಜ್ಯದ ಮೊದಲ ಪ್ರಯೋಗಾಲಯ. ಇಲ್ಲಿ ಗ್ರಾಮೀಣ ಪ್ರದೇಶದಲ್ಲಿರುವ ನೀರಿನ ಜಲಮೂಲಗಳ ಮಾದರಿಗ ಳನ್ನು ಸಂಗ್ರಹಿಸಿ ಒಟ್ಟು 16 ನಿಯ ತಾಂಕಗಳ (ಬಣ್ಣ, ವಾಸನೆ, ರುಚಿ, ಹೈಡ್ರೋಜನ್ (ಪಿಎಚ್) ಪ್ರಮಾಣ, ಪ್ರಕ್ಷುಬ್ಧತೆ, ವಿದ್ಯುತ್ ವಾಹಕತೆ, ಟಿಡಿಎಸ್, ಕ್ಲೋರೈಡ್, ಗಡುಸುತನ, ಕ್ಯಾಲಿÏಯಂ ಪ್ರಮಾಣ, ಮ್ಯಾಗ್ನೇಶಿಯಂ, ಕ್ಷಾರತೆ, ನೈಟ್ರೇಟ್, ಫ್ಲೋರೈಡ್, ಕಬ್ಬಿಣ ಮತ್ತು ಸಲ್ಫೆàಟ್) ಪರೀಕ್ಷೆಗಳನ್ನು ನಡೆಸಲಾಗುವುದು.
1998ರಲ್ಲಿ ಸ್ಥಾಪನೆ:
ರಾಜ್ಯದ ಗ್ರಾಮೀಣ ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರನ್ನು ಸರಬರಾಜು ಮಾಡುವ ಮುನ್ನ ಗುಣಮಟ್ಟ ಖಚಿತ ಪಡಿಸಿಕೊಳ್ಳ ಬೇಕಾಗುತ್ತದೆ. ಗುಣಮಟ್ಟದ ಪರೀಕ್ಷೆ ಕೈಗೊಳ್ಳಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿಯಲ್ಲಿ 1998ರಲ್ಲಿ ದ.ಕ. ಜಿಲ್ಲಾ ಪ್ರಯೋಗಾಲಯವನ್ನು ಸ್ಥಾಪಿಸಲಾಗಿತ್ತು.
ಅಲ್ಲಿ ನಡೆಸುವ ಪರೀಕ್ಷಾ ವರದಿಗಳ ನಿಖರತೆಗೆ ಸಂಬಂ ಧಿಸಿ ಭಾರತದಲ್ಲಿ ಮಾನ್ಯತೆ ಪಡೆದ ಪ್ರಾ ಧಿಕಾರದಿಂದ ಪ್ರಮಾಣೀಕರಣದ ಅಗತ್ಯವಿದೆ. ದೇಶದಲ್ಲಿ ಮಾನ್ಯತೆಗೆ ಕೇಂದ್ರ ಪ್ರಾಧಿಕಾರವೆಂದರೆ ಎನ್‌ಎಬಿಎಲ್.
ನೀರು ಪರೀಕ್ಷಾ ಪ್ರಯೋಗಾಲ ಯಗಳಿಗೆ ಕೇಂದ್ರ ಸರಕಾರದ ಜಲಜೀವನ್ ಮಿಷನ್‌ನ ಮಾರ್ಗ ಸೂಚಿ ಪ್ರಕಾರ ಎನ್‌ಎಬಿಎಲ್ ಮಾನ್ಯತೆ ಪಡೆಯುವುದು ಕಡ್ಡಾಯ. ಅದನ್ನು ಪಡೆಯುವುದು ಕಷ್ಟದ ಪ್ರಕ್ರಿಯೆಯಾಗಿದ್ದು, ಪ್ರಯೋಗಾಲ ಯದಲ್ಲಿ ಸೂಕ್ತ ಅರ್ಹತೆ ಹೊಂದಿರುವ, ನುರಿತ ಸಿಬಂದಿ, ಉಪಕರಣಗಳು, ಸೂಕ್ತ ಕಟ್ಟಡ ಕೂಡ ಅವಶ್ಯ.
ಪ್ರಯೋಗಾಲಯಕ್ಕೆ ಮಾನ್ಯತೆ:
ನೀಡುವ ಅಂತಿಮ ಪರಿಶೋಧನೆಯನ್ನು ಆರ್.ಕೆ. ಸೋಲಂಕಿ ನೇತೃತ್ವ ದಲ್ಲಿ, ತಾಂತ್ರಿಕ ಮೌಲ್ಯಮಾಪಕರಾದ ಸ್ಯಾಮ್ಯುಯಲ್ ಪ್ರಸನ್ನ ಅವರು ಜೂ. 2ರಂದು ಕೈಗೊಂಡಿದ್ದರು ಎಂದು ದ.ಕ. ಜಿ.ಪಂ. ಸಿಇಒ ಡಾ| ಕುಮಾರ್ ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
RBI: ಯುಪಿಐ ಮೂಲಕ ಡಿಜಿಟಲ್ ವ್ಯಾಲೆಟ್ ಹಣ ಬಳಕೆಗೆ ಅಸ್ತು
Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ
Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ
THAAD System: ಹೌತಿ ದಾಳಿ ತಡೆಗೆ ಇಸ್ರೇಲ್‌ನಿಂದ “ಥಾಡ್’ ವ್ಯವಸ್ಥೆ ಬಳಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.