‘ಫ್ರೆಂಡ್ಶಿಪ್ ಡೇ’ಯಂದು ಪತಿ ನೆನೆದು ಭಾವುಕರಾದ ನಟಿ ಮೇಘನಾ ರಾಜ್
Team Udayavani, Aug 1, 2021, 2:02 PM IST
ಬೆಂಗಳೂರು: ವಿಶ್ವ ಗೆಳೆಯರ ದಿನವಾದ ಇಂದು ಸ್ಯಾಂಡಲ್ವುಡ್ ನಟಿ ಮೇಘನಾ ರಾಜ್ ಅವರು ಅಗಲಿದ ತಮ್ಮ ಪತಿ ಚಿರಂಜೀವಿಯನ್ನು ನೆನಪಿಸಿಕೊಂಡಿದ್ದಾರೆ.
ಚಿರು ಜೊತೆಗಿರುವ ಫೋಟೋವನ್ನು ಪೋಸ್ಟ್ ಮಾಡಿರುವ ಅವರು, ‘ನೀನು ಯಾವಾಗಲೂ ನನ್ನ ಉತ್ತಮ ಗೆಳೆಯ. ಹ್ಯಾಪಿ ಫ್ರೆಂಡ್ಶಿಪ್ ಡೇ ಎಂದು’ ಬರೆದುಕೊಂಡಿದ್ದಾರೆ.
ಚಿರು ಹಾಗೂ ಮೇಘನಾ ಪ್ರೀತಿಸಿ ಮದುವೆಯಾಗಿದ್ದರು. ಪ್ರೀತಿಗೂ ಮುಂಚೆ ಉತ್ತಮ ಸ್ನೇಹಿತರಾಗಿದ್ದರು. ಇವರ ಗೆಳೆತನ ಪ್ರೀತಿಗೆ ಪ್ರಮೋಟ ಆಗಿ ಮದುವೆಯಾದರು. ಆದರೆ, ವಿಧಿಗೆ ಈ ಜೋಡಿ ನೋಡಿ ಹೊಟ್ಟೆಕಿಚ್ಚಾಯಿತೆನೋ, ಮಗುವಿನ ಮುಖವನ್ನೂ ನೋಡದೆ ಚಿರು ಬಾರದ ಲೋಕಕ್ಕೆ ಹೊರಟು ಹೋದರು.
‘ಚಿರು ನನಗೆ ಪತಿ ಎನ್ನುವುದಕ್ಕಿಂತ ಅತ್ಯುತ್ತಮ ಗೆಳೆಯ’ ಎಂದು ಮೇಘನಾ ರಾಜ್ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಹೀಗಾಗಿ, ಪತಿ-ಪತ್ನಿ ಸಂಬಂಧದ ಜತೆಗೆ ಇವರ ನಡುವೆ ಒಳ್ಳೆಯ ಗೆಳೆತನವಿತ್ತು. ಚಿರು ಅವರಲ್ಲಿ ಓರ್ವ ಗೆಳೆಯನನ್ನು ಮೇಘನಾ ಕಂಡಿದ್ದರು. ಈ ಕಾರಣಕ್ಕೆ ಮೇಘನಾ ರಾಜ್ ಇಂದು ಪತಿಗೆ ಫ್ರೆಂಡ್ಶಿಪ್ ಡೇ ಶುಭಾಶಯ ಕೋರಿದ್ದಾರೆ. ಈ ಫೋಟೋ ನೋಡಿದ ಅನೇಕ ಅಭಿಮಾನಿಗಳು ಭಾವುಕರಾಗಿ ಕಮೆಂಟ್ ಮಾಡಿದ್ದಾರೆ.
View this post on Instagram
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.