ಧರ್ಮಾ ಜಲಾಶಯ ಭರ್ತಿ : ರೈತರ ಮೊಗದಲ್ಲಿ ಹೆಚ್ಚಿದ ಸಂತಸ
Team Udayavani, Aug 2, 2021, 12:27 PM IST
ಮುಂಡಗೋಡ : ತಾಲೂಕಿನ ಮಳಗಿ ಪಂಚಾಯಿತಿ ವ್ಯಾಪ್ತಿಯ ಧರ್ಮಾ ಜಲಾಶಯ ಭರ್ತಿಯಾಗಿ ಕೋಡಿ ಹರಿಯುತ್ತಿದ್ದು ರೈತರಲ್ಲಿ ಸಂತಸ ಮೂಡಿದರೇ, ಪ್ರವಾಸಿಗರು ತಂಡೋಪತಂಡವಾಗಿ ಬಂದು ಜಲಾಶಯದ ಸೊಬಗನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಧರ್ಮಾ ಜಲಾಶಯ ಭರ್ತಿಯಾಗಿದೆ ಎಂಬ ಸುದ್ದಿಯಿಂದ ತಾಲೂಕಿನವರಿಗಿಂತ ಹಾನಗಲ್ ತಾಲೂಕಿನವರೇ ಹೆಚ್ಚು ಖುಷಿಯಲ್ಲಿದ್ದಾರೆ. ಏಕೆಂದರೆ ಈ ಧರ್ಮಾ ಜಲಾಶಯದ ನೀರು ಮುಂಡಗೋಡ ತಾಲೂಕಿನ ರೈತರಿಗಿಂತ ಹಾನಗಲ್ ತಾಲೂಕಿನ ರೈತರಿಗೇ ಹೆಚ್ಚು ಉಪಯೋಗ. ಧರ್ಮಾ ಜಲಾಶಯ ಭರ್ತಿಯಾಗಿರುವುದರಿಂದ ನೋಡುಗರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದೆ. ಸತತ ಮೂರು ವರ್ಷದಿಂದ ಜಲಾಶಯ ಭರ್ತಿಯಾಗಿ ಕೋಡಿ ಬೀಳುತ್ತಿದ್ದು ಪ್ರತಿ ವರ್ಷದಂತೆ ಈ ವರ್ಷವು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬಂದು ಕೋಡಿ ಬೀಳುವ ಸ್ಥಳದಲ್ಲಿ ನಿಂತು ಪೋಟೊ ಕ್ಲಿಕಿಸಿಕೊಂಡು ಕೆಲ ಸಮಯ ಕಳೆದು ಜಲಾಶಯದ ಮನೋಹರ ದೃಶ್ಯವನ್ನು ಕಣ್ತುಂಬಿಸಿಕೊಂಡು ಹೋಗುತ್ತಿದ್ದಾರೆ.
ಇದನ್ನೂ ಓದಿ : ಪಕ್ಷ ಸಂಘಟನೆಗೆ ಅಧಿಕಾರವೇ ಬೇಕು ಎಂದೇನಿಲ್ಲ: ಸುಳಿವು ನೀಡಿದ ಈಶ್ವರಪ್ಪ
ತಾಲೂಕಿನಲ್ಲಿ ಯಮಗಳ್ಳಿ ಹಳ್ಳಿ ಬಳಿ ಧರ್ಮಾ ನದಿಗೆ 1964 ರಲ್ಲಿ ಆಣೆಕಟ್ಟು ಕಟ್ಟಲಾಯಿತು. ಈ ಜಲಾಶಯದಿಂದ ರೈತರ ಹೊಲಗದ್ದೆಗಳಿಗೆ ತುಂಬಾ ಉಪಯೋಗವಾಗಿದೆ. ಧರ್ಮಾ ಜಲಾಶಯ ಮುಂಡಗೋಡ ತಾಲೂಕಿನಲ್ಲಿದ್ದರು ಇದರ ಪ್ರಯೋಜನ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ರೈತರಿಗಾಗುತ್ತಿದೆ. ಅಂದರೆ ಮುಂಡಗೋಡ ತಾಲೂಕಿನ ನೂರಾರು ಎಕರೆ ಜಮೀನುಗಳಿಗಷ್ಟೇ ಈ ಜಲಾಶಯದ ನೀರು ಪೂರೈಕೆಯಾಗುತ್ತಿದ್ದರೆ, ಹಾನಗಲ್ ತಾಲೂಕಿನ ಸಾವಿರಾರು ಎಕರೆ ಪ್ರದೇಶದ ಜಮೀನುಗಳಿಗೆ ನೀರು ಉಪಯೋಗವಾಗುತ್ತಿದೆ. ಈ ಜಲಾಶಯವು ಸದ್ಯ ಹಾನಗಲ್ ಚಿಕ್ಕ ನೀರಾವರಿ ಇಲಾಖೆಯ ಅಧೀನದಲ್ಲಿದೆ. ಒಟ್ಟಿನಲ್ಲಿ ಈ ಜಲಾಶಯದಿಂದ ನೂರಾರು ರೈತರಿಗೆ ಅನುಕೂಲವಾಗುತ್ತಿದೆ.
ತಾಲೂಕಿನಲ್ಲಿ ನಿರ್ಮಾಣಗೊಂಡ ಪ್ರಥಮ ಆಣೆಕಟ್ಟು ಎಂಬ ಹೆಗ್ಗಳಿಕೆಗೆ ಪಾತ್ರವಾದ ಈ ಧರ್ಮಾ ಜಲಾಶಯ ಇಂದು ತುಂಬಿ ಹರಿಯುತ್ತಿರುವ ಕಾರಣ ಈ ಜಲಾಶಯ ಪ್ರದೇಶದ ರೈತರಲ್ಲಿ ಸಂತೋಷವನ್ನುಂಟು ಮಾಡಿದೆ. ಜಲಾಶಯದ ಅಕ್ಕ-ಪಕ್ಕದ ರೈತರು, ಹಾಗೂ ಹಾನಗಲ್‌ದ ರೈತರು ಬಂದು ತುಂಬಿರುವ ಜಲಾಶಯಕ್ಕೆ ಪೂಜೆ ಸಲ್ಲಿಸಿ ಹೋಗುತ್ತಿದ್ದಾರೆ.
ವಡಕಪ್ಪ ನಿಗೂಣಿ, ಮಳಗಿ ಗ್ರಾಮದ ನಿವಾಸಿ: ಪ್ರಕೃತಿಯ ವಿಶಿಷ್ಟ ಕೊಡುಗೆಯಿಂದಾಗಿ ಕಂಗೊಳಿಸುತ್ತಿರುವ ಜಲಾಶಯಕ್ಕೆ ಪ್ರತಿ ವರ್ಷವು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಈ ಸ್ಥಳದಲ್ಲಿ ಉತ್ತಮ ಉದ್ಯಾನವನ, ವಿದ್ಯುತ್ ಅಲಂಕಾರಗಳೊAದಿಗೆ ಈ ಜಲಾಶಯದ ಸೊಬಗನ್ನು ಹೆಚ್ಚಿಸಬಹುದಾಗಿದೆ. ಈ ಜಲಾಶಯದತ್ತ ಪ್ರವಾಸಿಗರನ್ನು ಆಕರ್ಷಿಸಲು ಹಲವಾರು ಯೋಜನೆಗಳನ್ನು ಇಲಾಖೆ ಹಮ್ಮಿಕೊಂಡು ಇದನ್ನು ಪ್ರವಾಸಿ ತಾಣವಾಗಿ ರೂಪಿಸಿದರೇ ಇದೊಂದು ಪ್ರವಾಸ ಸ್ಥಳವಾಗಿ ಪ್ರಸಿದ್ಧಗೊಳ್ಳುತ್ತದೆ.
ಧರ್ಮಾ ಜಲಾಶಯದ ನಿರಾಶ್ರಿತರಿಗೆ ಹಂಚಿಕೆ ಮಾಡಿದ ಜಮೀನುಗಳ ಹಾಗೂ ಮನೆಯ ಜಾಗದ ಆರ್.ಟಿ.ಸಿ. ಮಾತ್ರ ತಯಾರಿಸಿ ಕೆ.ಜೆ.ಪಿ. ಮಾಡದೇ ಹಾಗೆಯೇ ಬಿಟ್ಟಿದ್ದ ಪರಿಣಾಮ ಸರಕಾರದ ಯೋಜನೆಗಳ ಸೌಲಭ್ಯ ಪಡೆಯುವಲ್ಲಿ ಫಲಾನುಭವಿಗಳಿಗೆ ಹಿನ್ನಡೆಯಾಗುತ್ತಿದೆ.
ಇದನ್ನೂ ಓದಿ : ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 333 ಅಂಕ ಜಿಗಿತ, 15,850ರ ಗಡಿ ತಲುಪಿದ ನಿಫ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Dandeli: ಸಾರಿಗೆ ಬಸ್ಸಿನಲ್ಲೇ ಪ್ರಯಾಣಿಕನಿಗೆ ಹೃದಯಾಘಾತ… ಆಸ್ಪತ್ರೆ ಮಾರ್ಗದಲ್ಲಿ ಮೃತ್ಯು
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Dandeli: ವಕ್ಫ್ ಮಂಡಳಿ ಮತ್ತು ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ
Dandeli: ನಗರಸಭೆಯ ಜವಾನನನ್ನು ನಿಂದಿಸಿರುವುದರ ವಿರುದ್ಧ ನಗರ ಸಭೆಯ ಪೌರಾಯುಕ್ತರಿಗೆ ದೂರು
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.