ಬಿರುಸಿನ ಚಿತ್ರೀಕರಣದಲ್ಲಿ ಉಗ್ರಾವತಾರ
Team Udayavani, Aug 2, 2021, 3:54 PM IST
ಪ್ರಿಯಾಂಕಾ ಉಪೇಂದ್ರ ನಟನೆಯ “ಉಗ್ರಾವತಾರ’ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ. ಇತ್ತೀಚೆಗೆ ಆಸ್ಪತ್ರೆ ದೃಶ್ಯಗಳನ್ನು ಚಿತ್ರತಂಡ ಲಕ್ಷ್ಮೀ ಪುರದಲ್ಲಿರುವ ರಾಜಲಕ್ಷ್ಮೀ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್ನಲ್ಲಿ ಚಿತ್ರೀಕರಿಸಿಕೊಂಡಿದೆ.
ಚಿತ್ರೀಕರಣದಲ್ಲಿ ಖಡಕ್ ಇನ್ಸ್ಪೆಕ್ಟರ್ ಆಗಿ ಪ್ರಿಯಾಂಕಾ ಉಪೇಂದ್ರ, ವೈದ್ಯರಾಗಿ ಪವಿತ್ರಾ ಲೋಕೇಶ್, ವಿದ್ಯಾರ್ಥಿ ಪಾತ್ರದಲ್ಲಿ ಶೋಭ ಹಾಗೂ ನಾಯಕ ನಟರಾಜ್ ಪಾಲ್ಗೊಂಡಿದ್ದರು.
ಇದನ್ನೂ ಓದಿ:ಮಾನ್ವಿತಾ ಕಣ್ಣಲ್ಲಿ ಹೊಸ ಕನಸು: ಹಳ್ಳಿ ಹುಡುಗಿ ಆದ ಟಗರು ಪುಟ್ಟಿ!
ನಿರ್ದೇಶಕ ಗುರುಮೂರ್ತಿ ಹೇಳುವಂತೆ ಒಂದುಕ್ಲೈಮ್ಯಾಕ್ಸ್ ಫೈಟ್ ಮಾಡಿದರೆ ಕುಂಬಳಕಾಯಿ ಒಡೆಯಲಾಗುತ್ತದೆ. ಇದಕ್ಕಾಗಿ ನೆಲಮಂಗಲ ಬಳಿ ಇರುವ ರೆಸಾರ್ಟ್ನಲ್ಲಿ ಸೆಟ್ ಹಾಕಲಾಗುತ್ತಿದೆ. ಪ್ರಸಕ್ತ ಸಾಮಾಜಿಕ ವಿಷಯಗಳು, ಸಮಾಜದಲ್ಲಿ ಮಹಿಯರ ಮೇಲೆ ನಡೆಯುತ್ತಿರುವ ಶೋಷಣೆ, ಅಪರಾಧ ಜೊತೆಗೆ ಗಂಭೀರ ವಿಷಯಗಳನ್ನು ಸನ್ನಿವೇಶಗಳ ಮೂಲಕ ಹೇಳಲಾ ಗುತ್ತಿದೆ ಎಂದರು.
ಚಿತ್ರದ ಬಗ್ಗೆ ಮಾತನಾಡಿದ ಪ್ರಿಯಾಂಕಾ ಉಪೇಂದ್ರ, “ಮೊದಲ ಬಾರಿ ಇನ್ಸ್ಪೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಡ್ನೂಪ್ ಬಳಸದೆ ಫೈಟ್ ಮಾಡಿದ್ದೇನೆ. ಇದಕ್ಕಾಗಿ ತರಬೇತಿ ಪಡೆಯಬೇಕಾಯಿತು. ಮಹಿಳೆಯರ ಮೇಲಿನ ಸಮಸ್ಯೆಗಳನ್ನು ತೋರಿಸಲಾಗುತ್ತಿದೆ. “1980′, “ಲೈಫ್ ಈಸ್ ಬ್ಯೂಟಿಫುಲ್’ ಚಿತ್ರಗಳು ರೆಡಿಯಾಗಿವೆ’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.