ಕುಂದಾಪುರ ಪುರಸಭೆ : ಅರ್ಧದಷ್ಟು ಹುದ್ದೆಗಳು ಖಾಲಿ
Team Udayavani, Aug 3, 2021, 3:50 AM IST
ಕುಂದಾಪುರ: ಇಲ್ಲಿನ ಪುರಸಭೆಯಲ್ಲಿ ಅರ್ಧದಷ್ಟು ಹುದ್ದೆಗಳು ಖಾಲಿಯಿವೆ. ಸಿಬಂದಿ ಕೊರತೆಯಿಂದ ನಲುಗುತ್ತಿರುವ ಆಡಳಿತದ ಮೇಲೆ ಗದಾಪ್ರಹಾರವಾದಂತೆ ಒಂದೇ ವಾರದಲ್ಲಿ 6 ಮಂದಿಯನ್ನು ಮತ್ತೆ ಬೀಳ್ಕೊಡಬೇಕಾದ ಅನಿವಾರ್ಯ ಬಂದಿದೆ.
ಮಂಜೂರಾದ ಹುದ್ದೆ 108:
ಪುರಸಭೆಗೆ ಒಟ್ಟು ಸರಕಾರದಿಂದ 108 ಹುದ್ದೆಗಳು ಮಂಜೂರಾಗಿವೆ. 46 ಪೌರಕಾರ್ಮಿಕರು, ತಲಾ 8 ಮಂದಿ ನೀರು ಸರಬರಾಜು ಸಹಾಯಕ ಅಥವಾ ವಾಲ್ವ್ ಮೆನ್ ಮತ್ತು ಲೋಡರ್‌ಗಳು ಸೇರಿದಂತೆ ಒಟ್ಟು 29 ವಿಧದ ಹುದ್ದೆಗಳಿಗೆ ಸಿಬಂದಿ ಮಂಜೂರಾಗಿದೆ. ಈ ಪೈಕಿ 6 ಚಾಲಕ ಹುದ್ದೆ, 8 ಲೋಡರ್ ಹುದ್ದೆಗಳು ಸೇರಿ ಒಟ್ಟು 14 ಹುದ್ದೆಗಳು ಹೆಚ್ಚುವರಿ ಎಂದು ತೀರ್ಮಾನಿಸಲಾಗಿದೆ.
ಇರುವುದು 50 ಮಾತ್ರ:
108 ಹುದ್ದೆಗಳು ಮಂಜೂರಾದರೂ ಇರುವುದು 50 ಮಂದಿ ಮಾತ್ರ. 58 ಹುದ್ದೆಗಳು ಖಾಲಿ ಇವೆ. ಕಿರಿಯ ಎಂಜಿನಿಯರ್ 2, ಸಮುದಾಯ ಸಂವಹನ ಅಧಿಕಾರಿ 1, ಸ್ಟೆನೊಗ್ರಾಫರ್ 1, ಜೂನಿಯರ್ ಪ್ರೋಗ್ರಾಮರ್ 1, ನೀರು ಸರಬರಾಜು ನಿರ್ವಾಹಕ 4, ಕಂಪ್ಯೂಟರ್ ಆಪರೇಟರ್ 2, ಕಿರಿಯ ಆರೋಗ್ಯ ನಿರೀಕ್ಷಕ 1, ಸಮೂಹ ಸಂಘಟಕ 1, ದ್ವಿತೀಯ ದರ್ಜೆ ಸಹಾಯಕ 2, ಬಿಲ್ ಕಲೆಕ್ಟರ್ 2, ಚಾಲಕ 3, ಸಹಾಯಕ ನೀರು ಸರಬರಾಜು ನಿರ್ವಾಹಕ 4, ಪ್ಲಂಬರ್ 1, ಪೌರಕಾರ್ಮಿಕ 15, ಗುಮಾಸ್ತ 1, ಲೋಡರ್ 7, ಕ್ಲೀನರ್ 1, ತೋಟಮಾಲಿ 1, ನೀರು ಸರಬರಾಜು ವಾಲ್ವ್ ಮೆನ್ 8 ಹುದ್ದೆಗಳು ಖಾಲಿ ಇವೆ. ವಾಲ್Ìಮೆನ್‌ನ ಮಂಜೂರಾದ ಅಷ್ಟೂ ಹುದ್ದೆಗಳು ಖಾಲಿಯೇ ಇವೆ. ಲೋಡರ್ 8ರ ಪೈಕಿ 7 ಹುದ್ದೆ ಖಾಲಿಯಿದ್ದು ಅಷ್ಟನ್ನೂ ಹೆಚ್ಚುವರಿ ಎಂದು ನಿರ್ಧರಿಸಲಾಗಿದೆ. 46 ಸ್ವತ್ಛತ ಕಾರ್ಮಿಕರಲ್ಲಿ 15 ಹುದ್ದೆ ಖಾಲಿ ಇವೆ. ನೀರು ಸರಬರಾಜು ನಿರ್ವಾಹಕರ ಹುದ್ದೆ ಕೂಡ 4ಕ್ಕೆ 4 ಖಾಲಿ ಇವೆ.
ವರ್ಗ: ಜುಲೈ ಕೊನೆ ವಾರದಲ್ಲಿ 6 ಹುದ್ದೆಗಳು ತೆರವಾಗಿವೆ. ಆರೋಗ್ಯ ನಿರೀಕ್ಷಕ ಶರತ್ ಅವರಿಗೆ ಬಂಟ್ವಾಳ ಪುರಸಭೆಗೆ ವರ್ಗವಾಗಿದೆ. ಕಿರಿಯ ಎಂಜಿನಿಯರ್ ಸತ್ಯ, ಬಿಲ್ ಕಲೆಕ್ಟರ್ ದೀಪಕ್ ಅವರಿಗೆ ಕಂದಾಯ ನಿರೀಕ್ಷಕರಾಗಿ ಭಡ್ತಿ ಹೊಂದಿ ಬೈಂದೂರು ಪ. ಪಂ.ಗೆ ವರ್ಗವಾಗಿದೆ. ಎಸ್‌ಡಿಸಿ ಶಿವಕುಮಾರ್ ಅವರಿಗೆ ಎಫ್ಡಿಸಿಯಾಗಿ ಭಡ್ತಿ ಹೊಂದಿ ಕಾಪು ಪುರಸಭೆಗೆ, ಚಂದನ್ ಅವರಿಗೆ ಸೀನಿಯರ್ ವಾಲ್Ìಮೆನ್ ಆಗಿ ಭಡ್ತಿ ಹೊಂದಿ ಸಾಲಿಗ್ರಾಮ ಪ.ಪಂ.ಗೆ ವರ್ಗವಾಗಿದೆ. ಮ್ಯಾನೇಜರ್ ಜು.31ರಂದು ವಯೋನಿವೃತ್ತಿ ಹೊಂದಿದ್ದಾರೆ.
ತಾತ್ಕಾಲಿಕ ನೇಮಕ :
ಆಡಳಿತಾತ್ಮಕ ದೃಷ್ಟಿಯಿಂದ ಸಾರ್ವ ಜನಿಕ ಕೆಲಸ ಕಾರ್ಯಗಳು ಸ್ಥಗಿತವಾಗ ಬಾರದು ಎಂಬ ಕಾರಣದಿಂದ 1 ಚಾಲಕ ಹುದ್ದೆಯನ್ನು ದಿನಗೂಲಿ ಆಧಾರದಲ್ಲಿ ನೇಮಿಸಲಾಗಿದೆ. 34 ಹುದ್ದೆಗಳನ್ನು ಹೊರಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳಲಾಗಿದೆ. ನೀರು ಸರಬರಾಜು, ಚಾಲಕ, ಪೌರ ಕಾರ್ಮಿಕ ಮೊದಲಾದ ಅನಿವಾರ್ಯ ಕೆಲಸಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ತೆಗೆದುಕೊಳ್ಳಲಾಗಿದೆ. ಆದರೆ ಎಂಜಿನಿ ಯರ್ ಮೊದಲಾದ ಹುದ್ದೆಗಳಿಗೆ ಸರಕಾರವೇ ನಿಯೋಜಿಸಬೇಕಿದೆ.
ವಿಸ್ತಾರ : 23 ವಾರ್ಡ್‌ಗಳನ್ನು 30 ಸಾವಿರದಷ್ಟು ಜನಸಂಖ್ಯೆ ಹೊಂದಿದ ಪುರಸಭೆಗೆ ಕನಿಷ್ಠ ಸಿಬಂದಿಯಲ್ಲಿ ಕೆಲಸ ಮಾಡುವುದು ಕಷ್ಟವಾಗಿದೆ. 3.6 ಕೋ.ರೂ. ತೆರಿಗೆ ಸಂಗ್ರಹದ ಗುರಿಯೂ ಇದೆ. ಕೊರೊನಾ ಸಂದರ್ಭವೂ ಸೇರಿದಂತೆ ವಿವಿಧ ಕಚೇರಿ ಕೆಲಸಗಳಿಗೆ, ಕಡತ ವಿಲೇ, ಸ್ಥಳ ಭೇಟಿ ಇತ್ಯಾದಿಗಳನ್ನು ಜನರಿಗೆ ವಿಳಂಬವಾಗದಂತೆ, ಸರಕಾರದ ಸಕಾಲದ ನಿಯಮಗಳಿಗೂ ತೊಂದರೆಯಾಗದಂತೆ ನಡೆಸಿಕೊಂಡು ಹೋಗಬೇಕಿದೆ.
ಸಿಬಂದಿ ಕೊರತೆಯಿದ್ದರೂ ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ವಿಳಂಬ ಮಾಡಲಾಗುತ್ತಿಲ್ಲ. ಸಿಬಂದಿ ಕೊರತೆಯನ್ನು ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯವರು ಶಾಸಕರು ಹಾಗೂ ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದಿದ್ದಾರೆ. -ಗೋಪಾಲಕೃಷ್ಣ ಶೆಟ್ಟಿ ,ಮುಖ್ಯಾಧಿಕಾರಿ, ಪುರಸಭೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.