ಭಾರತದ ಮುಂದಿದೆ ಬೆಲ್ಜಿಯಂ ಗೋಡೆ
Team Udayavani, Aug 3, 2021, 5:00 AM IST
ಟೋಕಿಯೊ: ಒಲಿಂಪಿಕ್ಸ್ ಹಾಕಿ ಪದಕದ ಬರವನ್ನು ನೀಗಿಸಿಕೊಳ್ಳುವ ತವಕದಲ್ಲಿರುವ ಭಾರತದ ಪುರುಷರ ತಂಡ ಇನ್ನೊಂದೇ ಹರ್ಡಲ್ಸ್ ದಾಟಬೇಕಿದೆ. ಮಂಗಳವಾರದ ಸೆಮಿಫೈನಲ್‌ನಲ್ಲಿ ವಿಶ್ವ ಚಾಂಪಿಯನ್ ಬೆಲ್ಜಿಯಂ ಸವಾಲನ್ನು ಮೆಟ್ಟಿನಿಂತರೆ ಪದಕವೊಂದು ಖಾತ್ರಿಯಾಗಲಿದೆ.
8 ಚಿನ್ನ ಸಹಿತ 11 ಹಾಕಿ ಪದಕಗಳಿಂದ ಅಲಂಕೃತ ಗೊಂಡಿರುವ ಭಾರತ 1980ರ ಬಳಿಕ ಇದೇ ಮೊದಲ ಸಲ ದೊಡ್ಡ ಭರವಸೆಯೊಂದನ್ನು ಮೂಡಿಸಿದೆ. ಲೀಗ್ ಹಂತದಲ್ಲಿ ಆಸ್ಟ್ರೇಲಿಯ ಕೈಯಲ್ಲಿ 1-7 ಅಂತರದ ಹೊಡೆತಕ್ಕೆ ಸಿಲುಕಿದ ಬಳಿಕ ಭಾರತ ತಿರುಗಿ ಬಿದ್ದು, ಸತತ 4 ಪಂದ್ಯಗಳನ್ನು ಗೆದ್ದ ರೀತಿ ಎನ್ನುವುದು ಅದೆಷ್ಟೋ ನಿರೀಕ್ಷೆ, ಕನಸು, ಭರವಸೆಯನ್ನು ಬಿತ್ತುವಂತೆ ಮಾಡಿದೆ.
ನಂ.1 ತಂಡವೂ ಆಗಿರುವ “ರೆಡ್ ಲಯನ್’ ಬೆಲ್ಜಿಯಂ, ಹಾಲಿ ಯುರೋಪಿಯನ್ ಚಾಂಪಿಯನ್ ಎಂಬುದನ್ನು ಮರೆಯುವಂತಿಲ್ಲ. ಹಂತ ಹಂತವಾಗಿ ತನ್ನ ದೌರ್ಬಲ್ಯಗಳನ್ನೆಲ್ಲ ನೀಗಿಸಿಕೊಳ್ಳುತ್ತಲೇ ಬಂದಿದೆ.
ಭಾರತದ್ದೇ ಮೇಲುಗೈ:
ಭಾರತ “ಎ’ ವಿಭಾಗದ ದ್ವಿತೀಯ ಸ್ಥಾನಿಯಾದರೆ, ಬೆಲ್ಜಿಯಂ “ಬಿ’ ವಿಭಾಗದ ಟಾಪರ್ ಆಗಿದೆ. 4 ಜಯ, ಒಂದು ಡ್ರಾ ಸಾಧಿಸಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬೆಲ್ಜಿಯಂ ವಿರುದ್ಧ ಭಾರತ ಮೇಲುಗೈ ಸಾಧಿಸುತ್ತಲೇ ಬಂದಿರುವುದೊಂದು ಹೆಚ್ಚುಗಾರಿಕೆ. 2019ರ ಯುರೋಪ್ ಪ್ರವಾಸದ ವೇಳೆ ಬೆಲ್ಜಿಯಂ ವಿರುದ್ಧ ಆಡಿದ ಮೂರೂ ಪಂದ್ಯಗಳಲ್ಲಿ ಭಾರತ ಜಯ ಸಾಧಿಸಿತ್ತು (2-0, 3-1, 5-1). ಕಳೆದ ಮಾರ್ಚ್‌ನಲ್ಲಿ ಮತ್ತೂಮ್ಮೆ ಯುರೋಪ್ ಪ್ರವಾಸಗೈದಾಗಲೂ ಬೆಲ್ಜಿಯಂಗೆ ಆಘಾತವಿಕ್ಕಿತ್ತು (3-2).
ಭಾರತ-ಬೆಲ್ಜಿಯಂ ಕಳೆದ ರಿಯೋ ಒಲಿಂಪಿಕ್ಸ್‌ನಲ್ಲೂ ಪರಸ್ಪರ ಎದುರಾಗಿದ್ದವು. ಅಂದು ಭಾರತ 2-3ರಿಂದ ಎಡವಿತ್ತು. ಈ ಸೋಲಿಗೆ ಟೋಕಿಯೋದಲ್ಲಿ ಸೇಡು ತೀರಿಸಿಕೊಳ್ಳಬೇಕಿದೆ. ಭಾರತೀಯರ ಈಗಿನ ಜೋಶ್ ಕಾಣುವಾಗ ಫೈನಲ್ ಪ್ರವೇಶ ಅಸಾಧ್ಯವೇನೂ ಅಲ್ಲ ಎನಿಸುತ್ತದೆ.
“ಸುದೀರ್ಘ ಕಾಲದ ಬಳಿಕ ಒಲಿಂಪಿಕ್ಸ್ ಸೆಮಿಫೈನಲ್ ಪ್ರವೇಶಿಸಿದ ಖುಷಿ ನಮ್ಮದು. ಆದರೆ ಇದರಿಂದ ಮೈಮರೆಯುವಂತಿಲ್ಲ, ಆಟ ಇನ್ನೂ ಮುಗಿದಿಲ್ಲ’ ಎಂದು ನಾಯಕ ಮನ್‌ಪ್ರೀತ್ ಸಿಂಗ್ ಎಚ್ಚರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranji Trophy: ಇನ್ನಿಂಗ್ಸ್ ನ ಎಲ್ಲಾ 10 ವಿಕೆಟ್ ಕಿತ್ತು ಅನ್ಶುಲ್ ಕಾಂಬೋಜ್ ದಾಖಲೆ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
K.L. Rahul; ಕುಡ್ಲದ ಜನರ ಬೆಂಬಲವೇ ಸಾಧನೆಗೆ ಕಾರಣ
CM Siddaramaiah: “ಕ್ರೀಡಾಪಟುಗಳಿಗೆ ಕೃಪಾಂಕ ನೀಡಲು ಚಿಂತನೆ’
MUST WATCH
ಹೊಸ ಸೇರ್ಪಡೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.