18 ವರ್ಷ ಮೇಲ್ಪಟ್ಟವರಿಗೆ ಕೋವಿಡ್‌ ನಿರೋಧಕ ಲಸಿಕೆ: ಮುಂಜಾನೆ 4ಕ್ಕೇ ಕೇಂದ್ರದ ಮುಂದೆ ಸಾಲು!

Team Udayavani, Aug 3, 2021, 9:30 AM IST

18 ವರ್ಷ ಮೇಲ್ಪಟ್ಟವರಿಗೆ ಕೋವಿಡ್‌ ನಿರೋಧಕ ಲಸಿಕೆ: ಮುಂಜಾನೆ 4ಕ್ಕೇ ಕೇಂದ್ರದ ಮುಂದೆ ಸಾಲು!

ಉಡುಪಿ/ಬ್ರಹ್ಮಾವರ: ಜಿಲ್ಲೆಯಲ್ಲಿ ಸೋಮವಾರದಿಂದ ಸರಕಾರಿ ಆಸ್ಪತ್ರೆಗಳಲ್ಲಿನ ಲಸಿಕಾ ಕೇಂದ್ರದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್‌ ಲಸಿಕೆ ವಿತರಣೆ ಪ್ರಾರಂಭವಾಗಿದ್ದು, ಯುವ ಜನರು ಉತ್ಸಹದಿಂದ ಲಸಿಕೆ ಹಾಕಿಸಿಕೊಂಡರು.

ಜಿಲ್ಲೆಗೆ ಸೋಮವಾರ 28,000 ಲಸಿಕೆ ವಿತರಣೆಯ ಗುರಿ ನೀಡಲಾಗಿತ್ತು. ಜನರು ಮುಂಜಾನೆ 4 ಗಂಟೆಗೆ ಬ್ರಹ್ಮಾವರ, ಉಡುಪಿ, ಕಾಪು, ಕಾರ್ಕಳ, ಹೆಬ್ರಿ, ಕುಂದಾಪುರ, ಬೈಂದೂರು ತಾಲೂಕಿನ ಲಸಿಕಾ ಕೇಂದ್ರದ ಮುಂದೆ ಸರದಿ ಸಾಲಿನಲ್ಲಿ ನಿಂತು ಟೋಕನ್‌ ಪಡೆದುಕೊಳ್ಳುತ್ತಿರುವ ದೃಶ್ಯ ಕಂಡು ಬಂತು.

ನಿರಾಸೆ-ಮಾತಿನ ಚಕಮಕಿ:

ಜಿಲ್ಲೆಯ ಎಲ್ಲ ಲಸಿಕೆ ಕೇಂದ್ರಗಳಲ್ಲಿ ಸೋಮವಾರ ಏಕಾಏಕಿ ನೂಕುನುಗ್ಗಲು ಉಂಟಾಗಿದೆ. ಕೆಲವಡೆ ಮುಂಜಾನೆ ಬಂದವರೂ ಟೋಕನ್‌ ಸಿಗದೆ ನಿರಾಸೆಗೊಂಡು ಸಿಬಂದಿ ಜತೆಗೆ ಮಾತಿನ ಚಕಮಕಿಗೆ ಇಳಿದರು.

ಒಂದೇ ವರ್ಗಕ್ಕೆ ಸೇರ್ಪಡೆ:

ರಾಜ್ಯದಲ್ಲಿ ಪ್ರಾರಂಭದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಲಸಿಕೆಯನ್ನು ವಿತರಿಸಲಾಗಿತ್ತು. ಅನಂತರ ಹಂತ ಹಂತವಾಗಿ 45 ವರ್ಷ ಮೇಲ್ಪಟ್ಟವರಿಗೆ ಹಾಗೂ ರಾಜ್ಯ, ಕೇಂದ್ರ ಗುರುತಿಸಿದ ಸುಮಾರು 56ಕ್ಕೂ ಅಧಿಕ ಆದ್ಯತಾ ಗುಂಪುಗಳಿಗೆ ವಿತರಣೆಯ ಜತೆಗೆ ಜುಲೈಯಲ್ಲಿ 18 ವರ್ಷ ಮೇಲ್ಪಟ್ಟ ಕಾಲೇಜು, ಡಿಪ್ಲೊಮಾ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ. ಇದೀಗ ಸರಕಾರ ಈ ಎಲ್ಲ ಆದ್ಯತಾ ಗುಂಪುಗಳನ್ನು ಒಂದೇ ವರ್ಗಕ್ಕೆ ಸೇರ್ಪಡೆ ಮಾಡಿದ್ದು, ಜಿಲ್ಲೆಯಲ್ಲಿ ಇದೀಗ ಪ್ರಥಮ ಹಾಗೂ ದ್ವಿತೀಯ ಡೋಸ್‌ ನೀಡಲಾಗುತ್ತಿದೆ.

ಒಂದೇ ದಿನ 28,625 ಲಸಿಕೆ ವಿತರಣೆ:

ಸೋಮವಾರ ಜಿಲ್ಲೆಯ ಸರಕಾರಿ ಲಸಿಕಾ ಕೇಂದ್ರದಲ್ಲಿ ಒಟ್ಟು 28,625 ಮಂದಿ ಲಸಿಕೆ ವಿತರಿಸಲಾಗಿದೆ. 18-44ವರ್ಷದೊಳಗಿನವರಲ್ಲಿ 18,504 ಮಂದಿ ಮೊದಲ, 1927 ಎರಡನೇ ಡೋಸ್‌, 45 ವರ್ಷ ಮೇಲ್ಪಟ್ಟವರು 5,075 ಮಂದಿ ಮೊದಲ, 3,103 ಎರಡನೇ ಡೋಸ್‌, ಮುಂಚೂಣಿ/ ಆರೋಗ್ಯ ಕಾರ್ಯಕರ್ತರು 16 ಮಂದಿ ಎರಡನೇ ಡೋಸ್‌ ಸೇರಿದಂತೆ ಒಟ್ಟು 23,579 ಮಂದಿ ಮೊದಲ ಹಾಗೂ 5,046 ಎರಡನೇ ಡೋಸ್‌ ಪಡೆದುಕೊಂಡರು. ಒಟ್ಟು ಜಿಲ್ಲೆಯಾದ್ಯಂತ 28,625 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ.

1.82 ಲಕ್ಷ ಜನರಿಗೆ ಲಸಿಕೆ ಪೂರ್ಣ:

ಜಿಲ್ಲೆಯಲ್ಲಿ 45 ವರ್ಷ ಮೇಲ್ಪಟ್ಟವರಲ್ಲಿ 3,16,996 ಮಂದಿ ಪ್ರಥಮ, 1,55,421 ಮಂದಿ ಎರಡನೇ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ. ಆರೋಗ್ಯ ಹಾಗೂ ಮುಂಚೂಣಿ ಕಾರ್ಯಕರ್ತರಲ್ಲಿ 31,642 ಮಂದಿ ಪ್ರಥಮ 23,660 ಮಂದಿ ಎರಡನೇ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ. 18ರಿಂದ 44 ವರ್ಷದೊಳಗಿನ 1,82,658 ಪ್ರಥಮ ಹಾಗೂ6297 ಮಂದಿ ಎರಡನೇ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ. ಜಿಲ್ಲೆಯಾದ್ಯಂತ ಒಟ್ಟು 5,31,296ಮಂದಿ ಪ್ರಥಮ ಹಾಗೂ 1,85,378 ಎರಡನೇ ಡೋಸ್‌ ಲಸಿಕೆ ಪಡೆದುಕೊಂಡಿದ್ದಾರೆ.

ದ್ವಿತೀಯ ಸ್ಥಾನ :

ಬೆಂಗಳೂರಿನ ಕರ್ನಾಟಕ ರಾಜ್ಯ ಕೋವಿಡ್‌ ವಾರ್‌ ರೂಮ್‌ ಜು. 30ರ ವರದಿಯಲ್ಲಿ ಕೋವಿಡ್‌ ಲಸಿಕೀಕರಣದಲ್ಲಿ ಬೆಂಗಳೂರು ನಗರ ಶೇ. 86.76 ಹಾಗೂ ಉಡುಪಿ ಜಿಲ್ಲೆಯಲ್ಲಿ ಶೇ. 62.55 ಸಾಧನೆ ಯೊಂದಿಗೆ ರಾಜ್ಯದಲ್ಲಿ ಕ್ರಮವಾಗಿ ಪ್ರಥಮ

ಹಾಗೂ ದ್ವಿತೀಯ ಸ್ಥಾನ ಪಡೆದುಕೊಂಡಿವೆ. ದ.ಕ. ಶೇ. 55.91, ಮೈಸೂರು ಶೇ. 55.80,  ರಾಮನಗರ ಜಿಲ್ಲೆ ಶೇ. 53.80, ಕೊಡಗು ಶೇ. 50.49 ಸಾಧನೆಗಳೊಂದಿಗೆ ಮೂರ ರಿಂದ ಏಳನೇ ಸ್ಥಾನ ಗಳಿಸಿವೆ. ಹಾವೇರಿ ಜಿಲ್ಲೆ ಶೇ. 28.87 ಮಂದಿಗೆ ಲಸಿಕೆಯನ್ನು ನೀಡಿ ಕೊನೆಯ ಸ್ಥಾನದಲ್ಲಿದೆ.

150 ಡೋಸ್‌ ಲಭ್ಯ; 300ಕ್ಕೂ ಹೆಚ್ಚು ಜನ!

ಬ್ರಹ್ಮಾವರ: ಬೆಳಗ್ಗೆ 7ರಿಂದ ಟೋಕನ್‌ ವಿತರಣೆ ಎಂದು ಮಾಹಿತಿ ನೀಡಿದ್ದರೂ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಎದುರು ಮುಂಜಾನೆ 4 ಗಂಟೆಗೇ ಜನರು ಸೇರಲಾರಂಭಿಸಿದ್ದರು. 150 ಡೋಸ್‌ ಲಭ್ಯವಿದ್ದರೆ, 300ಕ್ಕೂ ಹೆಚ್ಚು ಮಂದಿ ಕಾದಿದ್ದರು. ಹೆಚ್ಚು ಜನಸಾಂದ್ರತೆಯ ಪ್ರದೇಶಗಳಿಗೆ ಲಸಿಕೆ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಜಿಲ್ಲೆಯಲ್ಲಿ ಸೋಮವಾರ 28,000 ಕೊವಿಶೀಲ್ಡ್‌ ಲಸಿಕೆ ವಿತರಣೆ ಗುರಿ ನೀಡಲಾಗಿದೆ. 7 ತಾಲೂಕಿನ ಎಲ್ಲ ಕೇಂದ್ರಗಳಿಗೆ ಹಂಚಲಾಗಿದೆ. 18 ವರ್ಷ ಮೇಲ್ಪಟ್ಟ ಎಲ್ಲ ವರ್ಗದವರಿಗೆ ಒಂದನೇ ಹಾಗೂ ಎರಡನೇ ಡೋಸ್‌ ಲಸಿಕೆ ವಿತರಣೆಯಾಗಿದೆ. 28,625 ಲಸಿಕೆ ವಿತರಿಸಲಾಗಿದೆ. – ಡಾ| ನಾಗಭೂಷಣ,  ಡಾ| ಎಂ.ಜಿ. ರಾಮ,  ಉಡುಪಿ ಡಿಎಚ್‌ಒ ಮತ್ತು ಕೋವಿಡ್‌ ಲಸಿಕಾಧಿಕಾರಿ

ಟಾಪ್ ನ್ಯೂಸ್

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ

Allegation against Amit Shah: Canadian diplomats summoned

Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್

1-a-ccc

INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

25-kota

Kota: ಮರೆಯಾಗುತ್ತಿವೆ ಮೇಟಿ ಪೂಜೆ, ರಾಶಿ ಪೂಜೆ

17-katapady

Katapady: ಹಟ್ಟಿಗೊಬ್ಬರ ಖರೀದಿ ಹೆಸರಲ್ಲಿ ಮೋಸ!

14-malpe

Malpe: ನಿರಂತರ ರಜೆ: ಬೀಚ್‌ಗಳಲ್ಲಿ ಪ್ರವಾಸಿಗರ ದಟ್ಟಣೆ

Manipal: ಐಟಿ ಅಧಿಕಾರಿ ದಾಳಿ ಬೆದರಿಕೆ… ಕೆಲಸದಾಕೆಯಿಂದ ಮನೆಯ ಯಜಮಾನಿಗೆ ಮೋಸ

Manipal: ಐಟಿ ಅಧಿಕಾರಿ ದಾಳಿ ಬೆದರಿಕೆ… ಕೆಲಸದಾಕೆಯಿಂದ ಮನೆಯ ಯಜಮಾನಿಗೆ ಮೋಸ

Online Trading: ಉಡುಪಿ ಮೂಲದ ವ್ಯಕ್ತಿಗೆ 27 ಲಕ್ಷ ರೂ. ವಂಚನೆ

Online Trading: ಆನ್‌ಲೈನ್‌ ಲಿಂಕ್‌ ಅಪ್ಲಿಕೇಶನ್‌ ಬಳಸಿ 27 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

Pushpa2: ಅಲ್ಲು ಅರ್ಜುನ್‌ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?

owaisi (2)

Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು

farukh abdulla

Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

Shivaji Satam: ಕ್ಯಾಷಿಯರ್‌ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?

1-jmm

INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.