ಸಕಾಲಕ್ಕೆ ಲಸಿಕೆ ಸಿಗದೆ ಜನರಿಗೆ ಅತಂಕ
Team Udayavani, Aug 3, 2021, 4:07 PM IST
ಕುದೂರು: ಪ್ರಸ್ತುತ ಕೋವಿಡ್ ಬಾರದಂತೆ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಕೋವಿಡ್ ಲಸಿಕೆ ಸಕಾಲಕ್ಕೆ ಸಿಗದೆ ಜನರು ಅತಂಕದಲ್ಲಿದ್ದಾರೆ. ಮೊದಲನೇ ಬಾರಿಯ ಲಸಿಕೆ ಸಂದರ್ಭದಲ್ಲಿ ಜನರು ನಿರಾಶಕ್ತಿ ತೋರುತ್ತಿದ್ದರು. ಆದರೆ, ಎರಡನೇ ಅಲೆಯಿಂದ ಸಾವು
ನೋವು ಹೆಚ್ಚಾದ ನಂತರ ಜನರು ಲಸಿಕಾ ಕೇಂದ್ರಕ್ಕೆ ಧಾವಿಸುತ್ತಿದ್ದಾರೆ. ಆದರೆ, ಲಸಿಕೆ ಲಭ್ಯವಾಗುತ್ತಿಲ್ಲ.
ಆದ್ಯತೆ ಮೇಲೆ ಲಸಿಕೆ: ಈಗಾಗಲೇ 45 ವರ್ಷ ಮೇಲ್ಪಟ್ಟವರು 1 ಬಾರಿ ಲಸಿಕೆ ಹಾಕಿಸಿಕೊಂಡು 2ನೇ ಡೋಸ್ ಲಸಿಕೆಗಾಗಿ ಕಾಯುತ್ತಿದ್ದಾರೆ. ಮೊದಲನೇ ಲಸಿಕೆ ಪಡೆದು 84 ದಿನ ಕಳೆದ ನಂತರವೇ 2ನೇ ಲಸಿಕೆ ನೀಡಲಾಗುವುದು ಎಂಬ ಆರೋಗ್ಯ ಇಲಾಖೆ ಸೂಚನೆಯಂತೆ 84 ದಿನ ಕಳೆದ ಸಾವಿರಾರು ಜನರು ಈಗ ಲಸಿಕೆಗಾಗಿ ಕಾಯುತ್ತಿದ್ದಾರೆ. ಆದರೆ, ಒಮ್ಮೆ ಹೋಬಳಿ ಕೇಂದ್ರಕ್ಕೆ 200 ಲಸಿಕೆ ಮಾತ್ರ ಬರುತ್ತದೆ.
ಆದ್ಯತೆ ಮೇಲೆ ಆರೋಗ್ಯ ಇಲಾಖೆಯು ಹೋಬಳಿಯ ಪಿಎಚ್‌ಸಿಗಳಿಗೆ ನೀಡುತ್ತಿದೆ.
ಸಿಬ್ಬಂದಿ ವಿರುದ್ಧ ಸಿಡಿಮಿಡಿ: ಈ ಹಿಂದೆ ಬಾರಿ ಲಸಿಕೆ ಪಡೆದವರು ದಿನ ಎಣಿಸುತ್ತಾ ಬರುತ್ತಿದ್ದು, ಈಗ ಕೆಲವರಿಗೆ 100 ದಿನಗಳ ಗಡಿ ದಾಟಿವೆ.
ತಾಲೂಕಿನಲ್ಲಿ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರ ಲಸಿಕೆ ನೀಡಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾದರೆ, ಜನರು ಬೆಳಗಿನ ಜಾವ ಹೊಗಿ
ಸಾಲಿನಲ್ಲಿ ನಿಲ್ಲುತ್ತಾರೆ. ಜನರ ಸಂಖ್ಯೆ ಜಾಸ್ತಿಯಾಗಿ ಎಲ್ಲರಿಗೂ ಲಸಿಕೆ ಸಿಗದೆ ಇರುವುದರಿಂದ ಆರೋಗ್ಯ ಇಲಾಖೆ ಸಿಬ್ಬಂದಿ ವಿರುದ್ಧ ಸಿಡಿಮಿಡಿಗೊಂಡು ಜಗಳ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಹೆಚ್ಚು ಲಸಿಕೆ ಅಗತ್ಯ: ಕುದೂರು ಹೋಬಳಿಯಲ್ಲಿ 18 ವರ್ಷ ಮೇಲ್ಪಟ್ಟವರೇ ಜಾಸ್ತಿ ಇರುವುದರಿಂದ ಹೋಬಳಿಗೆ ಹೆಚ್ಚು ಲಸಿಕೆ ನೀಡಬೇಕಾಗಿದೆ. ಕುದೂರು ಹೋಬಳಿಗೆ ಹೆಚ್ಚು ಲಸಿಕೆ ನೀಡಬೇಕು ಎಂಬುದು ಸಾರ್ವಜನಿಕರ ಅಗ್ರಹವಾಗಿದೆ.
ಜನರು ಕೋವಿಡ್ ನಿಯಮಪಾಲಿಸಬೇಕು. ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರದೊಂದಿಗೆ ವ್ಯಾಪಾರ ಮಾಡಬೇಕು. ಪಟ್ಟಣ ಪ್ರದೇಶದ ನಗರಸಭೆ ಮತ್ತು ಪುರಸಭೆ ಅಧಿಕಾರಿಗಳು ಮಾಸ್ಕ್ಇಲ್ಲದವರಿಗೆಕೂಡಲೇ ದಂಡ ವಿಧಿಸಲು ಸೂಚಿಸಲಾಗುವುದು. ವರ್ತಕರು ಗ್ರಾಹಕರಿಗೆ ಮಾಸ್ಕ್ ಹಾ ಕಿಕೊಳ್ಳುವಂತೆ ತಿಳಿಸಬೇಕು.
-ಕೆ.ಶ್ರೀನಿವಾಸ್, ಜಿಲ್ಲಾಧಿಕಾರಿ
ಮಾಸ್ಕ್ ಧರಿಸದವರಿಗೆ ಅಧಿಕಾರಿಗಳು ಎಚ್ಚರಿಕೆ ನೀಡಬೇಕು. ಇಲ್ಲದಿದ್ದರೆ ಕೋವಿಡ್ 3ನೇಅಲೆಯ ಗಂಭೀರತೆ ನೋಡಬೇಕಾಗುತ್ತದೆ ಎಂದು
ಜನರಿಗೆ ಅರಿವು ಮೂಡಿಸಬೇಕು. ಸಾರ್ವಜನಿಕರು ಮಾಸ್ಕ್ ಧರಿಸಿ, ಸಾಮಾಜಿಕಅಂತರಕಾಯ್ದುಕೊಳ್ಳಬೇಕು.
-ರಾಜಣ್ಣ, ರೈತ
ಬೆಂ.ಗ್ರಾ. ಜಿಲ್ಲೆಯಲ್ಲಿ ಸದ್ಯಕ್ಕೆ 3ನೇ ಅಲೆ ಲಕ್ಷಣಗಳಿಲ್ಲ. ಆದರೂ, ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಸೋಂಕಿತರ ಪ್ರಕರಣ ಏರಿಕೆಯಾಗುತ್ತಿದ್ದು, ಅಗತ್ಯ ಕ್ರಮಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರತಿಯೊಬ್ಬರು ಕೋವಿಡ್ ನಿಯಮವನ್ನು ಪಾಲಿಸಬೇಕು.
– ಡಾ. ತಿಪ್ಪೇಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ
ಮಳೆಗಾಲ ಪ್ರಾರಂಭವಾಗಿ ರೈತರು, ಕೂಲಿ ಕಾರ್ಮಿಕರು ಜಮೀನು ಕೆಲಸ ಬಿಟ್ಟು ಲಸಿಕಾ ಕೇಂದ್ರಕ್ಕೆ ಅಲೆಯುತ್ತಿದ್ದಾರೆ. ಕಳೆದ ಒಂದು ವಾರದಿಂದ ಲಸಿಕೆಗಾಗಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
– ಗಂಗರಾಜು, ರೈತ
ಪ್ರತಿದಿನ ಲಭ್ಯವಾಗುವ ಲಸಿಕೆಯಲ್ಲಿ ತಾಲೂಕಿನ ಪ್ರತಿ ಪಿಎಚ್‌ಸಿಗಳಿಗೆ ಹಂಚಲಾಗುತ್ತಿದೆ. ಇನ್ನೂ ಹೆಚ್ಚು ಲಸಿಕೆ ಬೇಕು ಎಂದು ತಾಲೂಕು ವೈದ್ಯಾಧಿಕಾರಿಗೆ ತಿಳಿಸಲಾಗಿದೆ.
– ಲೋಕೇಶ್ ಮೂರ್ತಿ, ಹಿರಿಯ
ಆರೋಗ್ಯಾಧಿಕಾರಿ, ಕುದೂರು
-ಕೆ.ಎಸ್.ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Fraud: “ವಿಡಿಯೋಗೆ ಲೈಕ್ ನೀಡಿ’ 13.97 ಲಕ್ಷ ಕಳೆದುಕೊಂಡರು!
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.