ಭತ್ತ ನಾಟಿಗೆ ಅಣಿಯಾದ ಅನ್ನದಾತ
ಸ್ವಾಮಿನಾಥನ್ ಆಯೋಗದ ಪ್ರಕಾರ ಭತ್ತ ಪ್ರತಿ ಕ್ವಿಂಟಲ್‌ಗೆ ಬೆಂಬಲ ಬೆಲೆ ಸೇರಿ 5 ಸಾವಿರ ರೂ. ದರ ನಿಗಯಾಗಬೇಕಿದೆ
Team Udayavani, Aug 3, 2021, 6:05 PM IST
ಹುಣಸಗಿ: ಕಳೆದ ಹಿಂಗಾರು ಹಂಗಾಮಿನಲ್ಲಿ ಭತ್ತಕ್ಕೆ ಉತ್ತಮ ಬೆಲೆ ಸಿಗದೇ ಕೊರೊನಾ ತಂದೊಡ್ಡಿದ ಆಘಾತದಿಂದ ಕೈ ಸುಟ್ಟುಕೊಂಡ ಅನ್ನದಾತರು ಇದೀಗ ಮುಂಗಾರು ಭತ್ತ ನಾಟಿ ಮಾಡುತ್ತಿದ್ದಾರೆ. ಕೊರೊನಾ ಎರಡನೇ ಅಲೆಗೆ ಕೂಲಿ ಸಿಗದೇ ಪರದಾಡಿದ ಕೂಲಿ ಕಾರ್ಮಿಕರಿಗೆ ಸದ್ಯ ಕೃಷ್ಣಾ ಅಚ್ಚುಕಟ್ಟು ಪ್ರದೇಶದೆಲ್ಲೆಡೆ ಕೆಲಸ ಸಿಕ್ಕಿದ್ದು ಕೃಷಿ ಚಟುವಟಿಕೆ ಸದ್ದು ಮಾಡಿದೆ.
ಜೂನ್‌ನಲ್ಲಿ ನಾಟಿಗಾಗಿ ಸಸಿ ಹಾಕಿದ್ದರು. ಜುಲೈನಲ್ಲಿ ಸಸಿಗಳು ಸಂಪೂರ್ಣ ನಾಟಿ ಹಂತಕ್ಕೆ ಬಂದಿದ್ದು, ಕಾರ್ಮಿಕರಿಂದ ಕೀಳಿಸಲಾಗುತ್ತಿದೆ. ಈಗಾಗಲೇ ಶೇ.50 ಭತ್ತ ನಾಟಿ ಮಾಡಲಾಗಿದೆ. ಇನ್ನು ಶೇ.50 ಭತ್ತ ನಾಟಿಯಲ್ಲಿ ರೈತರು ನಿರತರಾಗಿದ್ದಾರೆ.
ಸುರಪುರ-ಹುಣಸಗಿ ಪ್ರದೇಶದಲ್ಲಿ ಕೃಷಿ ಇಲಾಖೆ ಮಾಹಿತಿ ಪ್ರಕಾರ 54,758 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುತ್ತಾರೆ. ಆದರೆ ಕಳೆದ ಬಾರಿ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿ ನಷ್ಟ ಅನುಭವಿಸಿದ ರೈತರು ಈಗ ಭತ್ತದ ಗದ್ದೆಯಲ್ಲಿ ಪರ್ಯಾಯ ಬೆಳೆ ಕೂಡ ಹಾಕಿದ್ದಾರೆ. ಹೀಗಾಗಿ ಈ ಬಾರಿ ಭತ್ತ ನಾಟಿ ಸ್ವಲ್ಪ ಕ್ಷೀಣಿಸಿದೆ ಎನ್ನಲಾಗುತ್ತಿದೆ.
ಬಸವಸಾಗರ ಜಲಾಶಯ ಬಹುತೇಕ ಭರ್ತಿಯಾಗಿದ್ದರಿಂದ ರೈತರಿಗೆ ಮುಂಗಾರು ಹಂಗಾಮಿನಲ್ಲಿ ನೀರಿನ ಸಮಸ್ಯೆ ಇಲ್ಲ. ಹಾಗಾಗಿ ಖುಷಿಯಿಂದಲೇ ರೈತರು ನಾಟಿ ಕಾರ್ಯ ಕೈಗೊಂಡಿದ್ದು ಇಲ್ಲಿನ ರೈತರು ಪ್ರತಿ ವರ್ಷ ಬೇಸಿಗೆ ಹಂಗಾಮಿನಲ್ಲಿ ಮಾತ್ರ ನೀರಿನ ಚಿಂತೆ ಎದುರಿಸಬೇಕಿತ್ತು. ಕೆಲ ವರ್ಷ ಹಿಂಗಾರು ಹಂಗಾಮಿಗೂ ನೀರು ಸಿಗದೇ ಬರ ಎದುರಿಸಿದ್ದು ಮಾತ್ರ ಹೊಸದೇನಲ್ಲ.
ದುಬಾರಿ ಕೂಲಿ: ಭತ್ತ ನಾಟಿ ಮಾಡಲು ಪ್ರತಿ ಎಕರೆಗೆ 2,500 ರಿಂದ 3,000 ರೂ.ದಂತೆ ಕಾರ್ಮಿಕರು ನಾಟಿ ಮಾಡುತ್ತಾರೆ. ಹೆಚ್ಚಿನ ಕೂಲಿ ಪಡೆಯಲು ಸಂಜೆಯಾದರೂ ಕೃಷಿ ಚಟುವಟಿಕೆಯಲ್ಲಿ ಇರುತ್ತಾರೆ. ಪ್ರತಿಯೊಬ್ಬರು 15 ರಿಂದ 20 ಸಾವಿರ ರೂ. ದುಡಿಮೆ ಮಾಡಿಕೊಳ್ಳುತ್ತಾರೆ. ಭತ್ತ ಕಟಾವಿಗೆ ಬರುವವರೆಗೂ ನಿರಂತರ ಕೂಲಿ ಸಿಗುತ್ತದೆ ಎನ್ನುತ್ತಾರೆ ಕಾರ್ಮಿಕರು.
ಕೇಂದ್ರ ಸರ್ಕಾರ ಪ್ರತಿ ಕ್ವಿಂಟಲ್ ಭತ್ತಕ್ಕೆ (ಎಂಎಸ್‌ಪಿ) ಪ್ರಕಾರ 72 ರೂ. ಬೆಂಬಲ ಬೆಲೆ ನೀಡಿ ಕ್ವಿಂಟಲ್ ಭತ್ತಕ್ಕೆ 1,940 ರೂ. ಏರಿಕೆ ಮಾಡಿದೆ. ಆದರೆ ಇದರಿಂದ ರೈತರಿಗೆ ಯಾವುದೇ ಲಾಭವಿಲ್ಲ. ಸ್ವಾಮಿನಾಥನ್ ಆಯೋಗದ ಪ್ರಕಾರ ಭತ್ತ ಪ್ರತಿ ಕ್ವಿಂಟಲ್‌ಗೆ ಬೆಂಬಲ ಬೆಲೆ ಸೇರಿ 5 ಸಾವಿರ ರೂ. ದರ ನಿಗಯಾಗಬೇಕಿದೆ ಎನ್ನುವುದು ರೈತ ಸಂಘಟನೆ ಮುಖಂಡರ ಆಗ್ರಹ. ಹಲವು ಬಾರಿ ಹೋರಾಟ ಮಾಡಿದರೂ ಭತ್ತಕ್ಕೆ ಈವರೆಗೂ ಉತ್ತಮ ಬೆಲೆ ದೊರಕದೇ ಅನ್ನದಾತರು ಸಂಕಷ್ಟ ಎದುರಿಸುವುದು ತಪ್ಪಿಲ್ಲ. ರಾಸಾಯನಿಕ ಗೊಬ್ಬರ ದರ ಏರಿಕೆಯಾಗಿದೆ. ರೈತರ ಭತ್ತಕ್ಕೆ ಬೆಲೆ ಮಾತ್ರ ಏರಿಕೆ ಕಂಡಿಲ್ಲ ಎನ್ನುವುದು ರೈತರ ಅಸಮಾಧಾನ.
ಕಳೆದ ಮುಂಗಾರು-ಹಿಂಗಾರು ಭತ್ತದ ಬೆಲೆ ಕುಸಿತದಿಂದ ರೈತರು ನಷ್ಟಕ್ಕೀಡಾಗಿದ್ದಾರೆ. ಉತ್ತಮ ಬೆಲೆ ಇದ್ದರೆ ರೈತರಿಗೆ ಸಾವಿಲ್ಲ. ಭತ್ತವೇ ರೈತರಿಗೆ ಉಸಿರಾಗಿದೆ. ದೀರ್ಘಕಾಲ ಕೆಲಸ ಸಿಗುವುದರಿಂದ ಕಾರ್ಮಿಕರಿಗೂ ವರದಾನವಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಬೆಂಬಲ ಬೆಲೆ ಸೇರಿ ಕ್ವಿಂಟಲ್‌ಗೆ 5000 ರೂ. ಬೆಲೆ ನಿಗ ಪಡಿಸಬೇಕು.
ಬಸನಗೌಡ ಹುಡೇದ, ರೈತ
*ಬಾಲಪ್ಪ.ಎಂ. ಕುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
MUST WATCH
ಹೊಸ ಸೇರ್ಪಡೆ
BGT 2024-25: ಆಸೀಸ್ ನಲ್ಲಿ ಲಯಕ್ಕೆ ಮರಳಿದ ವಿರಾಟ್ ಕೊಹ್ಲಿ
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.