ರೈತ ಹೋರಾಟ ಬೆಂಬಲಿಸಿ ದೆಹಲಿ ಪಾದಯಾತ್ರೆ
Team Udayavani, Aug 3, 2021, 6:08 PM IST
ಹುಬ್ಬಳ್ಳಿ: ಕೇಂದ್ರ ಸರಕಾರದ ಕೃಷಿ ಕಾಯ್ದೆ ರದ್ಧತಿ ಹಾಗೂ ಕೃಷಿ ಉತ್ಪನ್ನಗಳಿಗೆ ಲಾಭದಾಯಕ ಬೆಲೆ ಖಾತ್ರಿ ಕಾನೂನು ರೂಪಣೆಗೆ ಒತ್ತಾಯಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟ ಬೆಂಬಲಿಸಿ ಚಾಮರಾಜನಗರ ಜಿಲ್ಲೆಯಿಂದ ದೆಹಲಿಗೆ ಪಾದಯಾತ್ರೆ ಕೈಗೊಂಡಿರುವ ನಾಗರಾಜ ಕುಲ್ಕುಟಕರ್ ಅವರನ್ನು ನಗರದಲ್ಲಿ ವಿವಿಧ ಹೋರಾಟಗಾರರು ಸ್ವಾಗತಿಸಿದರು.
ನಾಗರಾಜ ಕುಲ್ಕುಟಕರ ಬಾಗಲಕೊಟೆ ಜಿಲ್ಲೆ ಚಿತ್ತರಗಿಯವರಾಗಿದ್ದು, ಎಂಎಸ್ಸಿ, ಎಂಟೆಕ್ ಪದವೀಧರಾಗಿದ್ದಾರೆ. ರೈತ ವಿರೋಧಿ ಕಾಯ್ದೆಗಳನ್ನು ವಿರೋಧಿಸಿ ಹಾಗೂ ರೈತರ ಹೋರಾಟ ಬೆಂಬಲಿಸಿ ಚಾಮರಾಜನಗರ ಜಿಲ್ಲೆ ಮಲೆಮಾದೇಶ್ವರ ಬೆಟ್ಟದಿಂದ ಏಕಾಂಗಿಯಾಗಿ ದೆಹಲಿ ಚಲೋ ಪಾದಯಾತ್ರೆ ಕೈಗೊಂಡಿದ್ದಾರೆ.
ಇಲ್ಲಿನ ಚನ್ನಮ್ಮ ವೃತ್ತದಲ್ಲಿ ಅವರನ್ನು ಸ್ವಾಗತಿಸಿ ಮಾತನಾಡಿದ ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ, ಮಹದಾಯಿ ವಿಚಾರದಲ್ಲಿ ರಾಜ್ಯ ಸರಕಾರ ಯಾವುದೇ ಪ್ರಸ್ತಾವನೆ ಕಳುಹಿಸದೆ ಸುಳ್ಳು ಹೇಳಿದೆ. ಕೋರ್ಟ್ ಆದೇಶದಂತೆ ಸರಕಾರ ಕೂಡಲೇ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕ ಮುಖಂಡ ಮಹೇಶ ಪತ್ತಾರ ಮಾತನಾಡಿ, ಸುಮಾರು 7 ಸಾವಿರ ಕಿಮೀ ದೂರ ಪಾದಯಾತ್ರೆ ನಡೆಸುವ ಮೂಲಕ ನಾಗರಾಜ ಅವರು ರೈತರಲ್ಲಿ ಜಾಗೃತಿ ಮೂಡಿಸುವ ಹಾಗೂ ರೈತ ಹೋರಾಟಕ್ಕೆ ಮಹತ್ವದ ಬೆಂಬಲಕ್ಕೆ ಮುಂದಾಗಿದ್ದಾರೆ ಎಂದರು. ಮುಖಂಡರಾದ ಶಿವಣ್ಣ ಹುಬ್ಬಳ್ಳಿ, ಪುಂಡಲೀಕ ಬಡಿಗೇರ, ಪ್ರಕಾಶ ಉಳ್ಳಾಗಡ್ಡಿ , ಕಿರ್ಶೋ ಶೆಟಿ, ಶಿವಣ್ಣ ಅಸೂಟಿ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
Thirthahalli: ನದಿಗೆ ಹಾರಿ ಕಾಲೇಜು ವಿದ್ಯಾರ್ಥಿ ಮೃತ್ಯು
Aranthodu: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಪ್ರಯಾಣಿಕರಿಗೆ ಗಾಯ
MUST WATCH
ಹೊಸ ಸೇರ್ಪಡೆ
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.