ವಾಪಸ್ ಹೋದ ಅನುದಾನ ತರಲು ಬಿಜೆಪಿಗಿಲ್ಲ ಯೋಗ್ಯತೆ:ಶರಣಗೌಡ
ಮುಂದಿನ 2 ವರ್ಷ ಮಾಡಬೇಕಾದ ಕೆಲಸಗಳ ಬಗ್ಗೆ ಗ್ರಾಮಸ್ಥರಿಂದಲೇ ಸಲಹೆ ಪಡೆಯುವ ಕೆಲಸ ಮಾಡಿದ್ದೇನೆ ಎಂದರು.
Team Udayavani, Aug 3, 2021, 6:32 PM IST
ಯಾದಗಿರಿ: ಮಾಜಿ ಸಿಎಂ ಯಡಿಯೂರಪ್ಪ ಅವಧಿಯಲ್ಲಿ ವಾಪಸ್ ಹೋಗಿರುವ ಅನುದಾನ ತರಲು ಯೋಗ್ಯತೆಯಿಲ್ಲ ಎಂದು ಜೆಡಿಎಸ್ ಯುವ ನಾಯಕ ಶರಣಗೌಡ ಕಂದಕೂರ ಬಿಜೆಪಿ ನಾಯಕರ ವಿರುದ್ಧ ವಾಗ್ಧಾಳಿ ನಡೆಸಿದರು. ಗುರುಮಠಕಲ್ ತಾಲೂಕಿನ ಮಾಧ್ವಾರ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರು ಮತ್ತು ಕಾರ್ಯಕರ್ತರನ್ನು ಜೆಡಿಎಸ್‌ಗೆ ಸೇರ್ಪಡೆ ಮಾಡಿಕೊಂಡು ಅವರು ಮಾತನಾಡಿದರು.
ಕೆಲವರು ಯಾದಗಿರಿಯಲ್ಲಿನ ಗುರುಮಠಕಲ್ ಶಾಸಕರ ಜನಸಂಪರ್ಕ ಕಚೇರಿ ಮುಚ್ಚಿ ಎಂದು ಜಿಪಂ ಸಿಇಒಗೆ ದೂರು ನೀಡಿದ್ದಾರೆ. ನಾವು ಶಾಸಕರ ಕಚೇರಿಯಲ್ಲಿ ಕಾಲಹರಣ ಮಾಡುತ್ತಿಲ್ಲ. ಬೆಳಗ್ಗೆಯಿಂದ ರಾತ್ರಿವರೆಗೆ ನಿರಂತರ ಜನರ ಸಮಸ್ಯೆ ಪರಿಹರಿಸಲು ಕೆಲಸ ಮಾಡುತ್ತಿ¨ªೇವೆ. ಕಚೇರಿ ಮುಚ್ಚಿ ಎಂದು ಹೇಳಲು ನೀವು ಯಾರು? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುರುಮಠಕಲ್ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದು, ನನ್ನ ಬಗ್ಗೆ ಮಾತನಾಡುವ ವಿರೋಧಿಗಳು ತಾಕತ್ತಿದ್ದರೆ ಮುಂದಿನ ವಿಧಾನಸಭೆ ಚುನಾವಣೆಗೆ ಸಿದ್ಧರಾಗಿ ಎಂದು ಸವಾಲು ಹಾಕಿದರು. ಕೊರೊನಾ ಎರಡನೇ ಅಲೆ ಕಡಿಮೆಯಾದ ನಂತರ ನಾನು “ಜೆಡಿಎಸ್ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಹಮ್ಮಿಕೊಂಡು 3 ವರ್ಷಗಳ ಕಾಲ ನಾವು ಮಾಡಿದ ಅಭಿವೃದ್ಧಿ ಹಾಗೂ ಮುಂದಿನ 2 ವರ್ಷ ಮಾಡಬೇಕಾದ ಕೆಲಸಗಳ ಬಗ್ಗೆ ಗ್ರಾಮಸ್ಥರಿಂದಲೇ ಸಲಹೆ ಪಡೆಯುವ ಕೆಲಸ ಮಾಡಿದ್ದೇನೆ ಎಂದರು.
ರಾಜ್ಯ ಸರ್ಕಾರ 29 ಸಾವಿರ ಕೋಟಿ ಅನುದಾನ ಬಾಕಿ ಉಳಿಸಿಕೊಂಡಿದೆ. ಈ ಸರ್ಕಾರದಿಂದ ಇನ್ನೂ ಗ್ರಾಮೀಣ ಭಾಗದಲ್ಲಿ ಮನೆ ಮಂಜೂರು ಮಾಡಲು ಸಾಧ್ಯವಾಗಿಲ್ಲ. ಸರ್ಕಾರದಿಂದ ಮನೆ ಬಂದಲ್ಲಿ ನಾನೇ ಹಳ್ಳಿ ಹಳ್ಳಿಗೆ ಬಂದು ನಿರ್ಗತಿಕರಿಗೆ ಸೂರು ಒದಗಿಸುವುದಾಗಿ ಭರವಸೆ ನೀಡಿದರು. ಇದೇ ವೇಳೆ ಮುಖಂಡ ನಿತ್ಯಾನಂದ ಪೂಜಾರಿ ನೇತೃತ್ವದಲ್ಲಿ ಗ್ರಾಪಂ ಸದಸ್ಯರಾದ ಸಾಯಣ್ಣ ಮಡಿವಾಳ, ಸಾಬಣ್ಣ ದಾಯಲ್, ಮಹಾದೇವಪ್ಪ ಹಂಕೌರ್, ಶಿವರಾಜಪ್ಪ ರೆಡ್ಡೆಮನೊರು, ಗೋಪಾಲ ನಿಂಗಪನೊರು, ಬನ್ನಪ್ಪ ದುಕಖಾನ್, ಕತಲಾಪ್ಪ ಅದ್ಲಗತ, ಶ್ರೀಶೈಲಪ್ಪ ವಿಶ್ವಕರ್ಮ, ಕಸ್ತೂರಪ್ಪ ವಿಶ್ವಕರ್ಮ, ಚನ್ನಪ್ಪ ಎಂ, ಹಣಮಂತ ಗುಡಿಗಂಟ್ಲಿ, ಶಾಣಪ್ಪ ದೊರೆ, ಮಲ್ಲಪ್ಪ ದೊರೆ, ಸಾಬಪ್ಪ ಗುಡಿಗಂದ ಇತರರು ಪಕ್ಷಕ್ಕೆ ಸೇರ್ಪಡೆಯಾದರು. ಈ ವೇಳೆ ಗ್ರಾಪಂ ಅಧ್ಯಕ್ಷ ಶ್ರೀನಿವಾಸ ನಾಯಕ, ನರಸಪ್ಪ ಕವಡೆ, ಅನೀಲ ಹೆಡಗಿಮದ್ರಾ, ಸುಭಾಶ್ಚಂದ್ರ ಕಟಕಟಿ, ರಮೇಶ ಪವಾರ ಬ¨ªೆಪಲ್ಲಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bajpe: ಹೆಜ್ಜೇನು ಕಡಿತದಿಂದ ದಿನಪತ್ರಿಕೆ ವಿತರಕ ಸಾವು
BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು
Adani ವಿದ್ಯುತ್ ಖರೀದಿ ಅಕ್ರಮ: ಆರೋಪ ತಳ್ಳಿ ಹಾಕಿದ ಜಗನ್ ರೆಡ್ಡಿ
Mangaluru: ಗಾಂಜಾ ಸೇವನೆ; ಪ್ರತ್ಯೇಕ ಪ್ರಕರಣ; ಇಬ್ಬರು ವಶಕ್ಕೆ
IFFI 2024; ಟಾಕ್ಸಿಕ್ ಗೆ ಅತ್ಯುತ್ತಮ ಪ್ರಶಸ್ತಿ, ವಿಕ್ರಾಂತ್ ಮಸ್ಸೆಗೆ ವಾರ್ಷಿಕ ಪುರಸ್ಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.