![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Aug 4, 2021, 1:49 PM IST
ನವದೆಹಲಿ: ರೆಡ್‌ಮಿ ಇಂಡಿಯಾ ದೇಶದಲ್ಲಿ ಮೊದಲ ಬಾರಿಗೆ ಲ್ಯಾಪ್‌ಟಾಪ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅದಕ್ಕೆ ರೆಡ್‌ಮಿ ಬುಕ್ ಎಂದು ಹೆಸರಿಸಲಾಗಿದ್ದು, ರೆಡ್‌ಮಿ ಬುಕ್ ಪ್ರೊ ಮತ್ತು ರೆಡ್‌ಮಿ ಬುಕ್ ಇ ಲರ್ನಿಂಗ್ ಎಡಿಷನ್ ಎಂಬ 2 ಮಾದರಿಗಳಲ್ಲಿ ಲಭ್ಯವಾಗಲಿದೆ.
ಇದನ್ನೂ ಓದಿ:ಉಡುಪಿ : ಫೇಸ್ ಬುಕ್ ನಲ್ಲಿ ಪರಿಚಯವಾದ ವ್ಯಕ್ತಿಯಿಂದ ಮಹಿಳೆಗೆ 19 ಲ.ರೂ ವಂಚನೆ
ಚೀನಾದಲ್ಲಿ 2ವರ್ಷಗಳ ಹಿಂದೆಯೇ ಅದು ಬಿಡುಗಡೆಯಾಗಿತ್ತು. ರೆಡ್‌ಮಿಪ್ರೊಗೆ 49,999 ರೂ. ಮತ್ತು ಇ ಲರ್ನಿಂಗ್ ಎಡಿಷನ್‌ನ 256ಜಿಬಿ ರಾಮ್‌ಗೆ 41,999 ರೂ. ಮತ್ತು 512ಜಿಬಿ ರಾಮ್‌ನ ಲ್ಯಾಪ್‌ಟಾಪ್‌ಗೆ 44,999 ರೂ. ದರ ನಿಗದಿಪಡಿಸಲಾಗಿದೆ.
ಕಂಪನಿಯ ಪ್ರಕಾರ 10 ಗಂಟೆಗಳ ಕಾಲ ಬ್ಯಾಟರಿ ಕೆಲಸ ಮಾಡಲಿದೆ.ಎಚ್‌ಡಿಎಫ್ ಸಿ ಬ್ಯಾಂಕ್ ಡೆಬಿಟ್ ಕಾರ್ಡ್ ಇರುವವರಿಗೆ 3,500 ರೂ. ಡಿಸ್ಕೌಂಟ್ ಸಿಗಲಿದೆ. ಮಿಹೋಮ್, ಫ್ಲಿಪ್‌ಕಾರ್ಟ್‌ನಲ್ಲಿ ಆ. 6ರಿಂದ ಮಾರಾಟ ಶುರುವಾಗಲಿದೆ.
ಪಾವತಿ ಕಂಪನಿಗಳ ಚೀನಿ ಪ್ರೇಮ?!
ಹಣಕಾಸು ನಿಯಮಗಳನ್ನು ಉಲ್ಲಂಘನೆ ಮಾಡಿವೆ ಎಂಬ ಆರೋಪಕ್ಕೆ ಸಂಬಂಧಿಸಿ ಪಾವತಿ ಗೇಟ್‌ವೇಗಳಲಾಗಿರುವ ರೇಝರ್ ಪೇ, ಪೇಟಿಎಂ, ಬಿಲ್‌ಡೆಸ್ಕ್ ಕಂಪನಿಗಳ ವಿರುದ್ಧ ಜಾರಿ ನಿರ್ದೇಶನಾಲಯದ ಕಣ್ಣು ಬಿದ್ದಿದೆ. ಭಾರತೀಯ ಗ್ರಾಹಕರಿಗೆ ಚೀನಾ ಆ್ಯಪ್‌ಗಳ ಮೂಲಕ ಬೆಟ್ಟಿಂಗ್‌ಗೆ ಹಣ ವರ್ಗಾವಣೆ ಮಾಡಲು ಅವಕಾಶ ಕೊಡಲಾಗಿದೆ ಎಂಬ ಅಂಶ ಬಹಿರಂಗವಾಗಿದೆ.
ಈ ಹಣವನ್ನು ತೆರಿಗೆಯ ಆತಂಕ ಇಲ್ಲದ ಪಶ್ಚಿಮ ಕೆರೆಬಿಯನ್ ಸಮುದ್ರ ಪ್ರದೇಶ ವ್ಯಾಪ್ತಿಯಲ್ಲಿ ರುವ ಕೇಮನ್ ದ್ವೀಪಕ್ಕೆ ವರ್ಗಾಯಿಸಲಾಗಿದೆ ಎಂದು ಮೂಲಗಳನ್ನು ಉಲ್ಲೇಖೀಸಿ “ದ ಇಕನಾಮಿಕ್ ಟೈಮ್ಸ್’ ವರದಿ ಮಾಡಿದೆ. 2002ರಲ್ಲಿ ಸಂಸತ್‌ನ ಅಂಗೀಕಾರ ಪಡೆದ ಅಕ್ರಮ ಹಣ ವರ್ಗಾವಣೆ ಕಾಯ್ದೆಯ ಅನ್ವಯ ಜಾರಿ ನಿರ್ದೇಶನಾಲಯ ಪಾವತಿ ಗೇಟ್‌ವೇಗಳ ವಿರುದ್ಧ ಪ್ರಕರಣ ಕೈಗೆತ್ತಿಕೊಳ್ಳುತ್ತಿದೆ.
ಹೊಸ ನಿಯಮಪ್ರಕಾರಭಾರತೀಯರುಮಾಡಿದಪಾವತಿ, ನಿಗದಿತ ಗೇಟ್‌ವೇ ಮೂಲಕವೇ ವರ್ಗಾವಣೆಯಾಗಬೇಕು. ಆದರೆ, ತನಿಖೆಯಲ್ಲಿ ಕಂಡು ಬಂದಿರುವ ಅಂಶಗಳ ಪ್ರಕಾರ ಪಾವತಿ ಗೇಟ್‌ವೇಕಂಪನಿಗಳು ಚೀನಾ ಮೂಲದ ಆ್ಯಪ್‌ಗಳ ಮೂಲಕ ಹಣಪಾವತಿಗೆ ಅವಕಾಶ ಮಾಡಿಕೊಟ್ಟಿವೆ.
ಇ.ಡಿ. ಅಧಿಕಾರಿಗಳು ಕೆಲ ಕಂಪನಿಗಳ ಅಧಿಕಾರಿಗಳ ವಿಚಾರಣೆಯನ್ನೂ ನಡೆಸಿದ್ದಾರೆ. ಕ್ಯಾಶ್‌ಫ್ರೀ, ಇನ್ಫಿಬೀಮ್ ಅವೆನ್ಯೂ ಕಂಪನಿಗಳ ವಿರುದ್ಧವೂ ಇದೇ ಮಾದರಿಯ ಆರೋಪಗಳು ವ್ಯಕ್ತವಾಗಿವೆ. ಅವುಗಳ ಅಧಿಕಾರಿ ಗಳಿಂದಲೂ ವಹಿವಾಟು ಬಗ್ಗೆ ಇ.ಡಿ. ಮಾಹಿತಿ ಪಡೆದುಕೊಂಡಿದೆ.
JioHotstar: ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್ ಇದೀಗ ಜಿಯೋ ಹಾಟ್‌ಸ್ಟಾರ್
DRDO: ಗಗನಯಾನ ನೌಕೆಯನ್ನು ಇಳಿಸುವ ಪ್ಯಾರಾಚೂಟ್ ಪರೀಕ್ಷೆ ಯಶಸ್ವಿ
AI Summit: ಎಐ ಶೃಂಗಕ್ಕಾಗಿ ಫ್ರಾನ್ಸ್ ರಾಜಧಾನಿ ಪ್ಯಾರಿಸ್‌ಗೆ ಬಂದಿಳಿದ ಪ್ರಧಾನಿ ಮೋದಿ
India’s Fastest Train: ತೇಜಸ್, ರಾಜಧಾನಿ ಶತಾಬ್ದಿ ದೇಶದ ಅತೀ ವೇಗದ ರೈಲು ಅಲ್ಲ…!
GSMA ಮಂಡಳಿಯ ಪ್ರಭಾರ ಚೇರ್ಮನ್ ಆಗಿ ನೇಮಕಗೊಂಡ ಗೋಪಾಲ್ ವಿಟ್ಟಲ್
You seem to have an Ad Blocker on.
To continue reading, please turn it off or whitelist Udayavani.