ಪಂಚಾಯ್ತಿಗಳಿಗೂ ಆನ್‌ಲೈನ್‌ ಬಜಾರ್‌ ಮುಕ್ತ

ಟೆಂಡರ್‌ ಬೇಕಿಲ್ಲ, ಕೊಟೇಶನ್‌ ಅಗತ್ಯವಿಲ್ಲ; ಜೆಮ್‌ ಪೋರ್ಟಲ್‌ನಲ್ಲಿ ಆನ್‌ಲೈನ್‌ ವ್ಯಾಪಾರಕ್ಕೆ ಅವಕಾಶ

Team Udayavani, Aug 4, 2021, 7:11 PM IST

gem-logo

ಸಿಂಧನೂರು: ಯಾವುದೇ ವಸ್ತುಗಳನ್ನು ಖರೀದಿಸಬೇಕಾದರೆ ಪಾರದರ್ಶಕತೆ ಕಾಯ್ದುಕೊಳ್ಳಬೇಕೆಂಬ ಹಿನ್ನೆಲೆಯಲ್ಲಿ ಜಾರಿಗೊಳಿಸಿದ್ದ ಕೆಟಿಪಿಪಿ ಕಾಯ್ದೆಯಿಂದ ವಿನಾಯಿತಿ ಕಲ್ಪಿಸಲಾಗಿದ್ದು, ಇನ್ಮುಂದೆ ಗ್ರಾಮ ಪಂಚಾಯಿತಿಗಳು ತಮಗೆ ಅಗತ್ಯ ಬೀಳುವ ವಸ್ತುಗಳನ್ನು ಆನ್‌ಲೈನ್‌ನಲ್ಲೇ ಖರೀದಿಸಬಹುದು. ಸಾರ್ವಜನಿಕ ಪ್ರಕಟಣೆ ಹೊರಡಿಸಿ ಮುಕ್ತ-ನ್ಯಾಯಸಮ್ಮತ ಖರೀದಿ ನಡೆಯಬೇಕೆಂಬ ಹಿನ್ನೆಲೆಯಲ್ಲಿ ರೂಪಿಸಿದ್ದ ಟೆಂಡರ್‌ ಪಾಲಿಸಿಯಿಂದ ಗ್ರಾಪಂಗಳನ್ನು ಮುಕ್ತಗೊಳಿಸಲಾಗಿದೆ.

ಅಭಿವೃದ್ಧಿ ಕೆಲಸ ಹೊರತುಪಡಿಸಿ ಸೌಲಭ್ಯ ಕಲ್ಪಿಸುವುದಕ್ಕೆ ಅಗತ್ಯವಾಗುವ ಸಾಮಗ್ರಿ ಖರೀದಿಸಲು ಮಾತ್ರ ಅವಕಾಶ ನೀಡಲಾಗಿದೆ. ಸರ್ಕಾರದ ನಿರ್ಧಾರದನ್ವಯ ಜೆಮ್‌ ಪೋರ್ಟಲ್‌ ನಲ್ಲಿ ನೇರವಾಗಿ ಅಧಿಕಾರಿಗಳು ಬೇಕಾದ ವಸ್ತು ಖರೀದಿಸಬಹುದು.

ಏನಿದು ಹೊಸ ಅವಕಾಶ?: ಬೀದಿ ದೀಪಗಳಿಗೆ ಅಗತ್ಯ ಬೀಳುವ ಬಲ್ಬ್ ಖರೀದಿ, ಶಾಲಾ-ಕಾಲೇಜುಗಳಿಗೆ ಡೆಸ್ಕ್ ವಿತರಣೆ, ಕುಡಿವ ನೀರಿನ ಶುದ್ಧೀಕರಣ ಘಟಕ, ಕಂಪ್ಯೂಟರ್‌ ಗಳು, ಸೊಳ್ಳೆಗಳ ನಿವಾರಣೆಗೆ ಅಗತ್ಯ ಬೀಳುವ ಫಾಗಿಂಗ್‌ ಯಂತ್ರ, ಘನತ್ಯಾಜ್ಯ ಘಟಕ ನಿರ್ವಹಣೆ ಸಿಬ್ಬಂದಿಗೆ ಅಗತ್ಯ ಬೀಳುವ ಸುರಕ್ಷತಾ ಸಾಮಗ್ರಿ ಖರೀದಿ, ಆರೋಗ್ಯ ಇಲಾಖೆಗೆ ಸಾಮಗ್ರಿ ಕೊಡಿಸುವುದಕ್ಕೆ ಅನುದಾನ ಮೀಸಲಿಟ್ಟಾಗ ಇದಕ್ಕಾಗಿ ಗ್ರಾಪಂಗಳು ಟೆಂಡರ್‌ ಕರೆಯಬೇಕಾಗುವುದಿಲ್ಲ. ಇತರ ಯಾವುದೇ ಜನೋಪಯೋಗಿ ವಸ್ತುಗಳನ್ನು ನೀಡಬೇಕಾದರೂ ಟೆಂಡರ್‌, ಕೊಟೇಶನ್‌ ಪದ್ಧತಿ ಅನುಸರಿಸಬೇಕಾಗಿಲ್ಲ.

ಕಿರಿಕಿರಿಗಳಿಂದ ಮುಕ್ತ: 10 ಸಾವಿರ ರೂ. ನಿಂದ 5 ಲಕ್ಷ ರೂ.ವರೆಗೂ ಅಗತ್ಯ ಪೀಠೊಪಕರಣ ಖರೀದಿ ಸಂದರ್ಭ ಕೆಟಿಪಿಪಿ ನಿಯಮ ಅನುಸರಿಸಿ, ಪ್ರಕ್ರಿಯೆ ನಡೆಸಬೇಕಿತ್ತು. ಈ ಸಂದರ್ಭದಲ್ಲಿ ನಿಯಮಗಳು ಉಲ್ಲಂಘನೆಯಾದಾಗ ಮಾಹಿತಿ ಹಕ್ಕು ಕಾಯ್ದೆಯಡಿ ವಿವರ ಪಡೆದು ದೂರು ಸಲ್ಲಿಸಲಾಗುತ್ತಿತ್ತು. ಟೆಂಡರ್‌ನಲ್ಲಿ ಸ್ಪರ್ಧೆ ಏರ್ಪಟ್ಟು ರಾಜಕೀಯ ಒತ್ತಡಗಳಿಗೂ ಬಲಿಯಾಗುತ್ತಿದ್ದರು. ಸದ್ಯದ ಜೆಮ್‌ ಪೋರ್ಟಲ್‌ನಲ್ಲಿ ರಾಜ್ಯ ಸರ್ಕಾರ ನೇರವಾಗಿ ಖರೀದಿಗೆ ಸಮ್ಮತಿ ನೀಡಿದ್ದರಿಂದ ಇಲ್ಲಿ ಕೆಟಿಪಿಪಿ ನಿಯಮವೇ ಅನ್ವಯಾಗುವುದಿಲ್ಲ. ಗ್ರಾಪಂಗಳು ಆನ್‌ ಲೈನ್‌ನಲ್ಲಿ ಮಾರಾಟಗಾರರು ನಮೂದಿಸಿದ ದರ ಪರಿಶೀಲಿಸಿ, ಅತಿ ಕಡಿಮೆ ದರ ಇರುವುದನ್ನು ಗಮನಿಸಿ ಖರೀದಿ ನಡೆಸಬಹುದು. ಗಮನಾರ್ಹ ಎಂದರೆ ಇಲ್ಲಿ ಯಾವುದಕ್ಕೂ ಕಾಯಬೇಕಿಲ್ಲ. ವಿಳಂಬಕ್ಕೂ ಅವಕಾಶವಿರುವುದಿಲ್ಲ. ಅಂಗನವಾಡಿಗಳಿಗೆ ಟಿವಿ, ಶಾಲೆಗಳಿಗೆ ಕಂಪ್ಯೂಟರ್‌ ಸೇರಿದಂತೆ ಇತರ ಸಾಮಗ್ರಿ ಕೊಡಲು ಬಯಸಿದ್ದರೆ ತ್ವರಿತವಾಗಿಯೇ ಬೇಡಿಕೆ ಈಡೇರಿಸಬಹುದು ಸಿಬ್ಬಂದಿಗೆ ತರಬೇತಿ ಜೆಮ್‌ ಪೋರ್ಟಲ್‌ ಬಳಕೆಗೆ ಯೂಸರ್‌ ನೇಮ್‌, ಪಾಸ್‌ವರ್ಡ್‌ ಹಂಚಿಕೆ ಮಾಡಲಾಗಿದೆ.

ಪಿಡಿಒಗಳು ಖರೀದಿದಾರರಾದರೆ, ಪಾವತಿ ಪ್ರಾಧಿ ಕಾರವನ್ನಾಗಿ ತಾಪಂ ಸಹಾಯಕ ಲೆಕ್ಕಾಧಿಕಾರಿ, ಸಹಾಯಕ ನಿರ್ದೇಶಕರನ್ನು ನೇಮಿಸಲಾಗಿದೆ. ಮೇಲ್‌ ಐಡಿಗಳನ್ನು ಎನ್‌ಐಸಿ ರಚಿಸಲಿದ್ದು, ಇದರಲ್ಲಿ ಜಿಪಂ ಸಿಇಒಗಳಿಗೂ ಲಾಗಿನ್‌ಗೆ ಅವಕಾಶ ನೀಡಲಾಗಿದೆ. ಪ್ರಾಥಮಿಕ ಹಂತದಲ್ಲಿ ಗ್ರಾಪಂ ಪಿಡಿಒಗಳಿಗೆ ತರಬೇತಿ ನೀಡಲಾಗಿದ್ದು, ಜೆಮ್‌ ಪೋರ್ಟಲ್‌ ಬಳಕೆ ಕಡ್ಡಾಯಗೊಳಿಸಿ ಆರ್‌ ಡಿಪಿಆರ್‌ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಪಂಚಾಯ್ತಿಗೆ ಬೇಕಾಗುವ ವಸ್ತುಗಳನ್ನು ಜೆಮ್‌ ಪೋರ್ಟಲ್‌ನಲ್ಲಿ ಖರೀದಿಸಲು ಆದೇಶವಾಗಿದೆ. ಈ ಬಗ್ಗೆ ತರಬೇತಿ ನೀಡಿದ್ದು, ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ಬರಲಿದೆ
-ಶಿವಪ್ಪ, ಪಿಡಿಒ, ಆರ್‌ಎಚ್‌1 ಗ್ರಾಪಂ, ಸಿಂಧನೂರು

-ಯಮನಪ್ಪ ಪವಾರ

ಟಾಪ್ ನ್ಯೂಸ್

1-pope

Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Mandya_SAHITYA

Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ

Chalavadi2

Ambedkar Row: ಕಾಂಗ್ರೆಸ್‌ ಎಂದರೆ ಫೇಕ್‌ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ

police crime

Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

ಇಂದು ರಾಷ್ಟ್ರೀಯ ರೈತ ದಿನ: ರೈತರ ಬದುಕು ಹಸನಾದರಷ್ಟೇ ಉಳಿದೀತು ಕೃಷಿ ಸಂಸ್ಕೃತಿ

Shabarimala

Sabarimala Railway: ಶಬರಿಮಲೆ ತೀರ್ಥಾಟನೆ: ಕೇರಳಕ್ಕೆ 10 ವಿಶೇಷ ರೈಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Demand to lift restrictions on rice transport from the Karnataka to Telangana

Raichur: ರಾಜ್ಯದಿಂದ ತೆಲಂಗಾಣಕ್ಕೆ ಭತ್ತ ಸಾಗಣೆ ನಿರ್ಬಂಧ ತೆರವಿಗೆ ಆಗ್ರಹ

Sindhanur: ಲಾರಿ ಪಲ್ಟಿ… ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್​ ಸೇರಿ ಮೂವರ ದುರ್ಮರಣ

ಸಿಂಧನೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿ ನಿಂತಿದ್ದ ಇಬ್ಬರು ಇಂಜಿನಿಯರ್​ ಸೇರಿ ಮೂವರ ದುರ್ಮರಣ

Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್

Raichur: ಪಿಡಿಒ ಪ್ರಶ್ನೆಪತ್ರಿಕೆ ವಿಳಂಬ ಗಲಾಟೆ; ಈಗ ವಿಡಿಯೋ ವೈರಲ್

ಬೇಡಿಕೆ ಕುಸಿತ: ಆರ್‌ಟಿಪಿಎಸ್‌ 5 ವಿದ್ಯುತ್‌ ಘಟಕ ಸ್ಥಗಿತ

Raichur; ಬೇಡಿಕೆ ಕುಸಿತ: ಆರ್‌ಟಿಪಿಎಸ್‌ 5 ವಿದ್ಯುತ್‌ ಘಟಕ ಸ್ಥಗಿತ

8-sirwar

Sirwar: ಹಳೆ ದ್ವೇಷ-ಯುವಕನ ಕೊಲೆ; ಮೂವರ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-pope

Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Horoscope: ಈ ರಾಶಿಯವರಿಗೆ ಧೈರ್ಯ ಮತ್ತು  ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ

Mandya_SAHITYA

Priority: ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಅವಕಾಶ ವಂಚಿತ ಯಕ್ಷಗಾನ

Chalavadi2

Ambedkar Row: ಕಾಂಗ್ರೆಸ್‌ ಎಂದರೆ ಫೇಕ್‌ ಗಾಂಧಿಗಳ ಪಕ್ಷ: ಛಲವಾದಿ ನಾರಾಯಣಸ್ವಾಮಿ

police crime

Delhi bom*b ಬೆದರಿಕೆ; ಮಕ್ಕಳಿಗೆ ರಜೆ ಬೇಕಾಗಿತ್ತು: ಕಾರಣ ಬಿಚ್ಚಿಟ್ಟ ಪೊಲೀಸರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.