ಕೋವಿಡ್ ನಡುವೆಯೂ ಗಣೇಶ ವಿಗ್ರಹಗಳಿಗೆ ಬೇಡಿಕೆ
Team Udayavani, Aug 5, 2021, 8:20 AM IST
ಸಾಂದರ್ಭಿಕ ಚಿತ್ರ
ಉಡುಪಿ: ಮಳೆಗಾಲದಲ್ಲಿ ಜನರ ಆರ್ಥಿಕ ವ್ಯವಹಾರಗಳನ್ನು ಬಡಿದೆಬ್ಬಿಸುವ ಗಣೇಶ ಚತುರ್ಥಿ ಹಬ್ಬಕ್ಕೆ (ಸೆ. 10) ಸಾಕಷ್ಟು ದಿನ ಮುಂಚಿತವಾಗಿಯೇ ಸಿದ್ಧತೆಗಳು ನಡೆಯುತ್ತವೆ. ಸಾಂಪ್ರದಾಯಿಕವಾಗಿ ನಾಗರಪಂಚಮಿ ಬಳಿಕ ಗಣೇಶ ವಿಗ್ರಹಗಳಿಗೆ ಮನವಿ ಬರುವುದಾದರೂ ವಿಗ್ರಹಗಳನ್ನು ತಯಾರಿಸಲು ಸಾಕಷ್ಟು ಸಮಯ ಬೇಕಾಗಿರುವುದರಿಂದ ಈಗಾಗಲೇ ವಿಗ್ರಹ ಕಲಾವಿದರು ಸಿದ್ಧತೆ ನಡೆಸಿದ್ದಾರೆ.
ಆ. 13ರಂದು ನಾಗರಪಂಚಮಿ ಬಳಿಕ ವಿಗ್ರಹ ರಚನೆಗೆ ವೇಗ ದೊರೆಯಲಿದೆ. ಹೋದ ಬಾರಿ ಗಣೇಶ ಚತುರ್ಥಿ ಹಬ್ಬವು ಕೊರೊನಾದಿಂದ ಸಪ್ಪೆಯಾಗಿತ್ತು. ಇದರ ಬಗೆಗೆ ಸರಕಾರದ ನಿರ್ದೇಶನ ಬಂದುದೂ ತಡವಾಗಿತ್ತು. ಈಗ ಕೊರೊನಾ ಅಬ್ಬರವಿದ್ದರೂ ಗಣಪತಿ ವಿಗ್ರಹಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ. ಹೋದ ವರ್ಷ ಸಾರ್ವಜನಿಕ ಗಣೇಶೋತ್ಸವದಲ್ಲಿ ವಿಗ್ರಹಗಳ ಆಕಾರವನ್ನು ಚಿಕ್ಕದು ಮಾಡಲಾಗಿತ್ತು. ಈ ಬಾರಿಯೂ ಕೆಲವೆಡೆ ಚಿಕ್ಕದು ಮಾಡುತ್ತಿದ್ದರೂ, ಕೆಲವೆಡೆ ಈ ಹಿಂದಿನ ಆಕಾರದಲ್ಲಿ ಮಾಡಲು ಕಲಾವಿದರಿಗೆ ಆರ್ಡರ್ ಬಂದಿದೆ.
ಹೋದ ವರ್ಷ ಸರಕಾರದಿಂದ ಮತ್ತು ಪರಿಸರ ಇಲಾಖೆಯಿಂದ ಸ್ಪಷ್ಟ ಮಾಹಿತಿಗಳಿಲ್ಲದೆ ಗೊಂದಲ ಉಂಟಾಗಿತ್ತು. ಹೋದ ವರ್ಷದ ಅನುಭವದ ಆಧಾರದಲ್ಲಿ ಜನರು ಹಿಂದಿನಂತೆ ವಿಗ್ರಹಗಳಿಗೆ ಆರ್ಡರ್ ಕೊಡುತ್ತಿದ್ದಾರೆ ಎನ್ನುತ್ತಾರೆ ಕಲಾವಿದ ರಮೇಶ ಕಿದಿಯೂರು.
ಈಗಾಗಲೇ ಕೆಲವು ವಿಗ್ರಹಗಳನ್ನು ರಚಿಸಲು ತಿಳಿಸಿದ್ದಾರೆ. ನಾಗರಪಂಚಮಿ ಬಳಿಕ ಸ್ಪಷ್ಟ ಸ್ವರೂಪ ಸಿಗಲಿದೆ ಎಂದು ವಿನಯ ಕಾಮತ್ ಹೇಳುತ್ತಾರೆ.
ಜನರು ಕೊಡುವ ಆರ್ಡರ್‌ಗಳಲ್ಲಿ ಬಹುತೇಕ ವಿಗ್ರಹಗಳು ಚಿಕ್ಕ ಆಕಾರದವು. ಸಾರ್ವಜನಿಕ ಗಣೇಶೋತ್ಸವದಲ್ಲಿ ಒಬ್ಬರು ಹೊರುವಂತಹ ಒಂದು, ಒಂದೂವರೆ ಅಡಿ ವಿಗ್ರಹಗಳಿಗೆ ಬೇಡಿಕೆ ಹೆಚ್ಚಿಗೆ ಇದೆ ಎಂದು ತೈಲವರ್ಣವನ್ನು ಬಳಸದೆ ಜಲವರ್ಣದಿಂದ ವಿಗ್ರಹ ತಯಾರಿಸುವ ಪರ್ಕಳದ ದೇವರಾಜ ನಾಯಕ್ ಅಭಿಪ್ರಾಯಪಟ್ಟಿದ್ದಾರೆ.
ನಮಗೆ ಪ್ರತೀ ವರ್ಷದಂತೆ ಬಣ್ಣ ಹಾಕದ ಐದಾರು ವಿಗ್ರಹಗಳ ಆರ್ಡರ್ ಬಂದಿವೆ. ಬಣ್ಣದ ವಿಗ್ರಹಗಳೂ ಇವೆ. ಬಹುತೇಕ ಚಿಕ್ಕ ಆಕಾರದವು ಎನ್ನುತ್ತಾರೆ ಕಿನ್ನಿಮೂಲ್ಕಿ ಕೌಶಿಕ್‌ಕುಮಾರ್.
ಗಣಪತಿ ವಿಗ್ರಹಗಳಲ್ಲಿ ಬಹುತೇಕ ಆರ್ಡರ್‌ಗಳಿರುವುದು ಮನೆಗಳಲ್ಲಿ ಪೂಜಿಸುವ ಆಚರಣೆಗೆ. ಇತ್ತೀಚಿನ ವರ್ಷ ಗಳಲ್ಲಿ ಬಣ್ಣಗಳನ್ನು ಹಾಕದ ವಿಗ್ರಹಗಳಿಗೆ ಬೇಡಿಕೆ ಹೆಚ್ಚಿಗೆ ಬರುತ್ತಿದೆ. ಇದು ಪರಿಸರ ಕಾಳಜಿ ಯಿಂದ ಉಂಟಾದ ಬೆಳವಣಿಗೆ. ಈಗ ದೊಡ್ಡ ವಿಗ್ರಹಗಳಿಗೆ ಆರ್ಡರ್ ಸಿಕ್ಕಿದರೆ ಮಾತ್ರ ಕಲಾವಿದರು ಅವುಗಳನ್ನು ನಿರ್ಮಿಸಲು ಅವಕಾಶಗಳಿವೆ. ಇನ್ನೊಂದು ವಾರದ ಬಳಿಕ ಆರ್ಡರ್ ಮಾಡಿದರೆ ಸಮಯಾವಕಾಶದ ಕೊರತೆ ಎದುರಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.