ಒಂದೇ ಮನೆಯಲ್ಲಿದ್ದ ಪತಿ-ಪತ್ನಿ-ಅವನು!
ನೆರವು ನೀಡಿದ ಸ್ನೇಹಿತ ಪತ್ನಿ ಜತೆ ಅಕ್ರಮ ಸಂಬಂಧ ; ಪತಿಯ ಕೊಲೆಗೆ ಪ್ರಿಯಕರನ ಜತೆ ಸೇರಿ ಸಂಚು
Team Udayavani, Aug 5, 2021, 2:57 PM IST
ಬೆಂಗಳೂರು: ಕಷ್ಟದ ಸಂದರ್ಭದಲ್ಲಿ ಮನೆಗೆ ಕರೆ ತಂದು ನೆರವು ನೀಡಿದ ಸ್ನೇಹಿತನನ್ನು ಆತನ ಪತ್ನಿ ಜತೆ ಸೇರಿ ಭೀಕರವಾಗಿ ಹತ್ಯೆಗೈದ ಆರೋಪಿಗಳು ಕೆಂಪೇಗೌಡ ನಗರ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಬೃಂದಾವನನಗರ ನಿವಾಸಿ ರಂಜಿತಾ(24), ಆಕೆಯ ಪ್ರಿಯಕರ ಕೆ.ಆರ್.ಪೇಟೆಯ ಭೂಕನಕೆ ರೆಯ ಸಂಜೀವ್ ಅಲಿಯಾಸ್ ಸಂಜು(28) ಮತ್ತು ಈತನ ಸಹೋದರ ಹಾಸ ನದ ಅರಕಲಗೂಡಿನ ಆರ್.ಆರ್.ಸುಬ್ರಹ್ಮಣ್ಯ (20) ಬಂಧಿತರು.
ಆರೋಪಿಗಳು ಜು.29 ರಂದು ಮಂಡ್ಯ ಕೀಲಾರ ಮೂಲದ ಕಾರ್ತಿಕ್(28) ಎಂಬಾತನನ್ನು ಚನ್ನಪಟ್ಟಣ ದಲ್ಲಿ ಹತ್ಯೆಗೈದು, ಶವವನ್ನು ಮೂಟೆಕಟ್ಟಿ ಬೆಂಗಳೂ ರಿನ ರಾಜರಾಜೇಶ್ವರಿ ಮೆಡಿಕಲ್ ಕಾಲೇಜು ಸಮೀ ಪದ ನಿರ್ಜನ ಪ್ರದೇಶದಲ್ಲಿ ಎಸೆದು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ ರು. ಕಾರ್ತಿಕ್ ಮತ್ತು ಸಂಜು ಆಪ್ತ ಸ್ನೇಹಿತರಾ ಗಿದ್ದರು. ಕೀಲಾರ ಮೂಲದ ಕಾರ್ತಿಕ್ ಮಳ್ಳವಳ್ಳಿ ಮೂಲದ ರಂಜಿತಾಳನ್ನು ಬಹಳ ವರ್ಷಗಳಿಂದ ಪ್ರೀತಿಸುತ್ತಿದ್ದು, ನಾಲ್ಕು ವರ್ಷಗಳ ಹಿಂದೆ ಮದುವೆ ಯಾಗಿದ್ದ. ಬೆಂಗಳೂರಿನ ಬಂಡಿಮಾಕಳಮ್ಮ ದೇವಾಲಯ ಸಮೀಪದ ಬೃಂದಾವನ ನಗರದ ಬಾಡಿಗೆ ಮನೆಯಲ್ಲಿ ದಂಪತಿ ವಾಸವಾಗಿದ್ದರು. ದಂಪತಿಗೆ ಮೂರು ವರ್ಷದ ಒಂದು ಹೆಣ್ಣು ಮಗು ಇದೆ. ಈ ಮಧ್ಯೆ ಒಂದೂವರೆ ವರ್ಷಗಳ ಹಿಂದೆ ಸ್ನೇಹಿತ ಸಂಜು, ಸ್ನೇಹಿತ ಕಾರ್ತಿಕ್ ಬಳಿ ತನ್ನ ಕಷ್ಟಗ ಳನ್ನು ಹೇಳಿಕೊಂಡಿದ್ದ. ಹೀಗಾಗಿ ತನ್ನ ಮನೆಯಲ್ಲೇ ಉಳಿದುಕೊಳ್ಳಲು ಜಾಗ ಕೊಟ್ಟಿದ್ದ. ತನ್ನ ಬಳಿಯಿದ್ದ ಆಟೋವನ್ನು ಹಗಲು ವೇಳೆ ಬಾಡಿಗೆಗೆ ಹೋಗಲು ನೀಡಿದ್ದ. ರಾತ್ರಿ ವೇಳೆ ಕಾರ್ತಿಕ್ ಆಟೋ ಓಡಿಸುತ್ತಿದ್ದ ಎಂದು ಪೊಲೀಸರು ಹೇಳಿದರು.
ಈ ಮಧ್ಯೆ ಕೆಲ ತಿಂಗಳಿಂದ ಕಾರ್ತಿಕ್ ಜಾಂಡೀ ಸ್‌ನಿಂದ ಬಳಲುತ್ತಿದ್ದ. ಆದರೂ ಕಾರ್ತಿಕ್ ಆಟೋ ಚಾಲನೆಗೆ ಹೋಗುತ್ತಿದ್ದ. ಮನೆಯಲ್ಲೇ ಇರುತ್ತಿದ್ದ ಸಂದರ್ಭದಲ್ಲಿ ಸಂಜು, ರಂಜಿತಾಳ ಜತೆಆತ್ಮೀಯತೆ ಬೆಳೆಸಿಕೊಂಡಿದ್ದ. ಅಲ್ಲದೆ, ಇಬ್ಬರು ಅಕ್ರಮ ಸಂಬಂಧ ಹೊಂದಿದ್ದರು. ದಿನ ಕಳೆದಂತೆ ರಂಜಿತಾ, ಪತಿ ಕಾರ್ತಿಕ್‌ನನ್ನು ನಿರ್ಲಕ್ಷಿಸುತ್ತಿದ್ದಳು. ಜತೆಗೆ ಸ್ಥಳೀಯರು ಪತ್ನಿ-ಸ್ನೇಹಿತನ ನಡುವಿನ ಸಂಬಂಧದ ಬಗ್ಗೆ ಹೇಳಿದರೂ, ಕಾರ್ತಿಕ್ ನಂಬುತ್ತಿರಲಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದರು.
ಇದನ್ನೂ ಓದಿ:‘ಧಮ್’ ಎಳೆದ ಚುಟು ಚುಟು ಹುಡುಗಿ ಆಶಿಕಾ ರಂಗನಾಥ್
ನಾಪತ್ತೆ ದೂರು ಕೊಟ್ಟು ಸಿಕ್ಕಿಬಿದ್ದರು!:ಆ.1ರಂದು ರಂಜಿತಾ ಮತ್ತು ಆಕೆಯ ಪ್ರಿಯಕರ ಸಂಜುಕೆಂಪೇ ಗೌಡನಗರ ಠಾಣೆಗೆ ಕಾರ್ತಿಕ್ ನಾಪತ್ತೆ ದೂರು ನೀಡಿದರು. ಬಳಿಕ ಕಾರ್ತಿಕ್ ಮತ್ತು ಸಂಜುನ ಮೊಬೈಲ್ ಟವರ್ ಲೋಕೇಷನ್ ಪರಿಶೀಲಿಸಿದಾಗ ಚನ್ನಪಟ್ಟಣದಲ್ಲಿ ಪತ್ತೆಯಾಗಿತ್ತು. ಅದರಿಂದ ಅನು ಮಾನಗೊಂಡ ಕೆಂಪೇಗೌಡನಗರ ಠಾಣೆಯ ಇನ್ ಸ್ಪೆಕ್ಟರ್ ಎಂ.ಎಸ್.ಚೇತನ್ ಕುಮಾರ್ ನೇತೃತ್ವದ ತಂಡ ಸಂಜು ಮತ್ತು ರಂಜಿತಾಳನ್ನು ಠಾಣೆಗೆ ಕರೆಸಿ ತೀವ್ರ ರೀತಿಯಲ್ಲಿ ವಿಚಾರಣೆ ನಡೆಸಿದಾಗ ಸತ್ಯಾಂಶ ಬಾಯಿಬಿಟ್ಟಿದ್ದಾರೆ. ಇಬ್ಬರು ಅಕ್ರಮ ಸಂಬಂಧಹೊಂದಿದ್ದು, ತಮಗೆ ಅಡ್ಡಿಯಾಗುತ್ತಾನೆ ಎಂದು ಹತ್ಯೆಗೈದಿರುವುದಾಗಿ ಬಾಯಿಬಿಟ್ಟಿದ್ದಾರೆ. ಈ ಸಂಬಂಧ ಕಾರ್ತಿಕ್‌ನ ಸಹೋದರಿ ಕೀರ್ತನ ಅವರು ನೀಡಿದ ದೂರಿನ ಮೇರೆಗೆ ಕೊಲೆ ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಲಾಗಿದೆ. ಕೊಳೆತ ಸ್ಥಿತಿಯಲ್ಲಿ ಕಾರ್ತಿಕ್ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿ ದೆ ಎಂದುಪೊಲೀಸರುಮಾಹಿತಿ ನೀಡಿದರು. ಆರೋಪಿ ಸಂಜುಗೂ ಮದುವೆಯಾಗಿದ್ದು, ಇಬ್ಬರು ಮಕ್ಕಳು ಇದ್ದಾರೆ. ಕೌಟುಂಬಿಕ ಕಲಹಕ್ಕೆ ಪತ್ನಿ ಯಿಂದ ದೂರವಾಗಿ ಸ್ನೇಹಿತ ಕಾರ್ತಿಕ್ ಸಹಾಯ ಪಡೆದು ಆತನ ಮನೆಯಲ್ಲಿದ್ದ ಎಂದು ಹೇಳಲಾಗಿದೆ.
ಚನ್ನಪಟ್ಟಣದಲ್ಲಿ ಕೊಂದು ಮೂಟೆಕಟ್ಟಿದ ಹಂತಕರು! ರಂಜಿತಾ ಮತ್ತು ಸಂಜು ಜತೆಗೂಡಿ ಕಾರ್ತಿಕ್ ಹತ್ಯೆಗೆ ಸಂಚು ರೂಪಿಸಿದ್ದರು. ಅದಕ್ಕಾಗಿ ಹಾಸನದಲ್ಲಿರುವ ತನ್ನ ಸಹೋದರ ಸಂಬಂಧಿ ಸುಬ್ರಹ್ಮಣ್ಯನನ್ನು ಕರೆಸಿಕೊಂಡಿದ್ದ. ಸಂಜು, ಆತನಿಗೆ ಮದ್ಯಕುಡಿಸಿ ಕೃತ್ಯಕ್ಕೆ ಸಹಕಾರ ನೀಡುವಂತೆ ಒಪ್ಪಿಸಿದ್ದಾನೆ. ಬಳಿಕ ಜು.29 ರಂದು ಕಾರ್ತಿಕ್‌ಗೆ ಪಾರ್ಟಿ ಮಾಡುವ ನೆಪದಲ್ಲಿ ಜಿಂಕೆ ಪಾರ್ಕ್ ಬಳಿಯ ಬಾರ್‌ವೊಂದರಲ್ಲಿ ಕಂಠಪೂರ್ತಿ ಮದ್ಯ ಕುಡಿದ್ದಾರೆ. ಬಳಿಕ ಚನ್ನಪಟ್ಟಣದ ನಿರ್ಜನ ಪ್ರದೇಶಕ್ಕೆ ಆಟೋದಲ್ಲಿ ಕರೆದೊಯ್ದು ಆತನ ತಲೆಗೆ ಕಬ್ಬಿಣದ ರಾಡ್, ಚಾಕುವಿನಿಂದ ಇರಿದು, ತಲೆ ಮೇಲೆಕಲ್ಲು ಎತ್ತಿಹಾಕಿ ಹತ್ಯೆಗೈದಿದ್ದಾರೆ. ಬಳಿಕ ಮೃತದೇಹವನ್ನು ಗೋಣಿಚೀಲ ದಲ್ಲಿ ಹಾಕಿಕೊಂಡು ರಾಜರಾಜೇಶ್ವರಿ ಮೆಡಿಕಲ್‌ಕಾಲೇಜು ಮತ್ತು ದೊಡ್ಡಬೆಲೆ ಮುಖ್ಯರಸ್ತೆಯ ನಡುವಿನ ನಿರ್ಜನ ಪ್ರದೇಶದ ಮೊರಿಯ ಪಕ್ಕದ ಪೊದೆಯಲ್ಲಿ ಎಸೆದು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Dinner Meeting: ಸಭೆ ಮಾಡಬೇಡಿ ಎನ್ನಲು ಇವರೇನು ಪರಿಶಿಷ್ಟ ಸಮುದಾಯದ ವಿರೋಧಿಗಳಾ?: ಸಚಿವ
Naxals Surrender: ಮುಖ್ಯಮಂತ್ರಿ ಸಮ್ಮುಖ ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ನಕ್ಸಲರು
Raichur: ಮೂರೂ ದಶಕಗಳ ಬಳಿಕ ನಕ್ಸಲ್ ಮಾರೆಪ್ಪ ಅರೋಳಿ ಶರಣಾಗತಿ… ಕುಟುಂಬದಲ್ಲಿ ಖುಷಿ
MUST WATCH
ಹೊಸ ಸೇರ್ಪಡೆ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.