ಅನುದಾನಿತ, ಅನುದಾನ ರಹಿತ ಶಾಲೆ ಹಿಂದಿಕ್ಕಿದ ಸರಕಾರಿ ಶಾಲೆಗಳತ್ತ ಮಕ್ಕಳ ಹೆಜ್ಜೆ 

ಸರಕಾರಿ ಶಾಲೆಗಳಲ್ಲಿ ಹೆಚ್ಚಿದ ಪ್ರವೇಶಾತಿ

Team Udayavani, Aug 5, 2021, 3:38 PM IST

drgry

ವರದಿ: ಹೇಮರಡ್ಡಿ ಸೈದಾಪುರ  

ಹುಬ್ಬಳ್ಳಿ: ಕೋವಿಡ್‌-19 ಪರಿಣಾಮ ತರಗತಿಗಳು ನಡೆಯದ ಕಾರಣ ಉಚಿತ ಶಿಕ್ಷಣ ನೀಡುವ ಸರಕಾರಿ ಶಾಲೆಗಳ ಮೌಲ್ಯ ಹೆಚ್ಚಾಗಿದ್ದು, 2021-22ನೇ ಶೈಕ್ಷಣಿಕ ವರ್ಷದಲ್ಲೂ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಏರಿಕೆಯಾಗಿದೆ.

1-10 ನೇ ತರಗತಿಯವರೆಗೂ ಮಕ್ಕಳ ಪ್ರವೇಶಾತಿಯಲ್ಲಿ ಅನುದಾನಿತ, ಅನುದಾನ ರಹಿತ ಶಾಲೆಗಳನ್ನು ಈ ಬಾರಿ ಸರಕಾರಿ ಶಾಲೆಗಳು ಹಿಂದಿಕ್ಕಿವೆ. ಅಕ್ಷರ ದಾಸೋಹ ಇಲ್ಲದ ಮೇಲೆ ದುಬಾರಿ ಶುಲ್ಕ, ಇನ್ನಿತರೆ ವೆಚ್ಚಗಳನ್ನು ಯಾಕೆ ಮಾಡಬೇಕು ಎನ್ನುವ ಮನಸ್ಥಿತಿಗೆ ಪಾಲಕರು ಬಂದಂತಿದ್ದು, ಖಾಸಗಿ ಶಿಕ್ಷಣ ಶಾಲೆಗಳತ್ತ ಮುಖ ಮಾಡುವ ಬದಲು ಉಚಿತ ಶಿಕ್ಷಣ ನೀಡುವ ಸರಕಾರಿ ಶಾಲೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.

ಕೋವಿಡ್‌ ಮೊದಲ ಹಾಗೂ ಎರಡನೇ ಅಲೆಯಿಂದ ಶಾಲೆಗಳು ಸದ್ಯಕ್ಕೆ ಆರಂಭವಾಗಲ್ಲ ಎನ್ನುವ ನಿರ್ಧಾರಕ್ಕೆ ಜನರು ಬಂದಂತಿದೆ. ಅದರಲ್ಲಿ ಮೂರನೇ ಅಲೆ ಸಾಧ್ಯತೆ ಇರುವುದರಿಂದ ಪಾಲಕರು ಸರಕಾರಿ ಶಾಲೆಗಳಲ್ಲಿ ಪ್ರವೇಶಾತಿ ಪಡೆಯಲು ಹೆಚ್ಚು ಉತ್ಸುಕರಾದಂತೆ ಕಾಣುತ್ತಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಜಿಲ್ಲೆಯ ಏಳು ಬ್ಲಾಕ್‌ಗಳಲ್ಲಿ ಸರಕಾರಿ, ಅನುದಾನಿತ, ಅನುದಾನ ರಹಿತ ಹಾಗೂ ಇತರೆ ಶಾಲೆಗಳಿಂದ 3,39,416 ವಿದ್ಯಾರ್ಥಿಗಳು ಪ್ರವೇಶಾತಿಯ ಗುರಿಯಲ್ಲಿ ಇಲ್ಲಿಯವರೆಗೆ 3,19,647 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, 19,769 ವಿದ್ಯಾರ್ಥಿಗಳ ಕೊರತೆಯಾಗಿದ್ದು, ಇನ್ನೂ ದಾಖಲಾತಿ ಪ್ರಗತಿಯಲ್ಲಿದೆ.

ಸರಕಾರಿ ಶಾಲೆಗೆ ಹೆಚ್ಚು: 1 ರಿಂದ 10 ನೇ ತರಗತಿಯ ಪ್ರವೇಶಾತಿಗಳಲ್ಲಿ ಸರಕಾರಿ ಶಾಲೆಗಳು ಗಮನಾರ್ಹ ಬೆಳವಣಿಗೆಯಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸರಕಾರಿ ಶಾಲೆಗೆ-1,42,048 ವಿದ್ಯಾರ್ಥಿಗಳು, ಅನುದಾನಿತ-51,135, ಅನುದಾರಹಿತ-1,18,112 ಹಾಗೂ ಇತರೆ 8352 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಈ ಹಿಂದೆ ಸರಕಾರಿ ಶಾಲೆಗಳಿಂದ ಖಾಸಗಿ ಶಾಲೆಗಳಿಗೆ ದಾಖಲಾತಿ ಪಡೆಯುತ್ತಿದ್ದರು. ಆದರೆ ಈ ಬಾರಿ ಪರಿಸ್ಥಿತಿ ಬದಲಾಗಿದ್ದು, ಖಾಸಗಿ ಶಾಲೆಗಳಿಂದ ಸರಕಾರಿ ಶಾಲೆಗಳತ್ತ ಮುಖ ಮಾಡಿರುವುದು ಗಮನಾರ್ಹ ಸಂಗತಿಯಾಗಿದೆ.

ಧಾರವಾಡ ನಗರ ಹಾಗೂ ಮಹಾನಗರ ಪಾಲಿಕೆ (ಹುಬ್ಬಳ್ಳಿ ನಗರ) ಎರಡು ಬ್ಲಾಕ್‌ಗಳಲ್ಲಿ ಖಾಸಗಿ ಶಾಲೆಗಳು ಕೊಂಚ ಪಾರಮ್ಯ ಮೆರೆದಿವೆ. ಆದರೆ ಅನುದಾನಿತ ಶಾಲೆಗಳಲ್ಲಿ ಎಲ್ಲಾ ತರಗತಿಗಳ ದಾಖಲಾತಿಯಲ್ಲಿ ಇಳಿಮುಖ ಕಂಡಿದೆ. ಪ್ರಸಕ್ತ ಸಾಲಿನಲ್ಲಿ ಒಂದನೇ ತರಗತಿಗೆ ಪ್ರವೇಶ ಪಡೆಯಬೇಕಿದ್ದ ಗುರಿಯಲ್ಲಿ ಸಾಕಷ್ಟು ಕಡಿಮೆಯಾದರೂ ಹೆಚ್ಚಿನ ಪ್ರಮಾಣದಲ್ಲಿ ದಾಖಲಾತಿ ಪಡೆದಿರುವುದು ಸರಕಾರಿ ಶಾಲೆಯಲ್ಲಿ. ಎಲ್ಲಾ ತರಗತಿಯ ವಿದ್ಯಾರ್ಥಿಗಳು ಸರಕಾರಿ ಶಾಲೆಗಳ ಕಡೆಗೆ ಮುಖ ಮಾಡಿದ್ದಾರೆ.

ಇನ್ನು ಒಂದನೇ ತರಗತಿಯ ದಾಖಲಾತಿಯಲ್ಲಿ ಸರಕಾರಿ ಶಾಲೆಗಳಿಗೆ ನೀಡಿದ ಗುರಿ ಬಹುತೇಕ ತಲುಪಿದೆ. ಆದರೆ ಅನುದಾನ ರಹಿತ ಶಾಲೆಗಿದ್ದ ಗುರಿಯ ಅರ್ಧದಷ್ಟು ವಿದ್ಯಾರ್ಥಿಗಳು ಪ್ರವೇಶ ಪಡೆದಿಲ್ಲ. ಸರಕಾರಿ ಶಾಲೆಗಳು-15,474 (ಗುರಿ-16,517), ಅನುದಾನಿತ-1770 (2524), ಅನುದಾನ ರಹಿತ-7761 (14,022), ಇತರೆ-271 (453). ಆದರೆ ಈ ಬಾರಿ ಒಂದನೇ ತರಗತಿಗೆ 25,276 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದು, 33,516 ಗುರಿಯಿತ್ತು.

ದುಬಾರಿ ಶಿಕ್ಷಣ: ಶಾಲೆಗಳು ಆರಂಭವಾಗದೆ ಮನೆಯಲ್ಲಿ ಕಲಿಯುವ ಮಕ್ಕಳಿಗೆ ದುಬಾರಿ ಶುಲ್ಕ ಪಾವತಿಸುವುದ್ಯಾಕೆ ಎನ್ನುವ ಮನಸ್ಥಿತಿ ಪಾಲಕರಲ್ಲಿ ಮೂಡಿದೆ. ಇದರೊಂದಿಗೆ ಶುಲ್ಕದ ಜತೆಗೆ ಸ್ಮಾಟ್‌ ìಫೋನ್‌, ಟ್ಯಾಬ್‌, ಲ್ಯಾಪ್‌ಟಾಪ್‌ನಂತಹ ಉಪಕರಣಗಳು, ಇದಕ್ಕೆ ಬೇಕಾದ ಇಂಟರ್‌ ನೆಟ್‌ ಸೌಲಭ್ಯ ಪಡೆಯಲಾಗದ ಪರಿಸ್ಥಿತಿಯಲ್ಲಿ ಪಾಲಕರಿದ್ದಾರೆ. ಇವೆಲ್ಲವನ್ನೂ ಹೇಗಾದರೂ ಮಾಡಿ ಒದಗಿಸೋಣ ಎನ್ನುವವರಿಗೆ ಗ್ರಾಮೀಣ ಪ್ರದೇಶದಲ್ಲಿ ಅಗತ್ಯ ಇಂಟರ್‌ನೆಟ್‌ ಸೌಲಭ್ಯವಿಲ್ಲ.

ಇನ್ನು ಮನೆಯಲ್ಲಿ ಮೂರ್‍ನಾಲ್ಕು ಮಕ್ಕಳಿದ್ದರೆ ಎಲ್ಲರಿಗೂ ಏಕಕಾಲಕ್ಕೆ ತರಗತಿಗಳಿದ್ದರೆ ಪ್ರತಿಯೊಬ್ಬರಿಗೊಂದು ಸ್ಮಾರ್ಟ್‌ಫೋನ್‌ ಖರೀದಿಸಬೇಕಾಗುತ್ತದೆ. ಶಾಲೆಗಳೇ ನಡೆಯದಿರುವಾಗ ಇಷ್ಟೆಲ್ಲಾ ಖರ್ಚು ಮಾಡುವುದ್ಯಾಕೆ. ಶಾಲೆಗಳು ಆರಂಭವಾದ ನಂತರ ನೋಡಿದರಾಯ್ತು ಎನ್ನುವ ಮನಸ್ಥಿತಿ ಪಾಲಕರಲ್ಲಿ ಇರಬಹುದು. ಆದರೆ ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಇಂತಹ ಹೊರೆಯಾಗುವ ಪರಿಸ್ಥಿತಿ ಇಲ್ಲ. ಕಲಿಯುವ ಪ್ರತಿಯೊಬ್ಬ ವಿದ್ಯಾರ್ಥಿಯ ಪಾಲಕರ ಆರ್ಥಿಕ ಪರಿಸ್ಥಿತಿ ಅವಲೋಕಿಸಿ ಅವರಿಗೆ ಅಗತ್ಯವಾದ ಮಾರ್ಗದಲ್ಲಿ ಪಾಠ-ಪ್ರವಚನ ಕೈಗೊಳ್ಳಲಾಗುತ್ತಿದೆ. ಇದರೊಂದಿಗೆ ಸರಕಾರದಿಂದ ಬರುವ ಬಿಸಿಯೂಟ ಸೇರಿದಂತೆ ಇನ್ನಿತರೆ ಸೌಲಭ್ಯ ದೊರೆಯುತ್ತಿವೆ. ಇಂತಹ ಹಲವು ಸಕಾರಾತ್ಮಕ ಅಂಶಗಳು ಪಾಲಕರು ಮನಸ್ಸು ಸರಕಾರಿ ಶಾಲೆಗಳತ್ತ ನೆಟ್ಟಿದೆ.

ಟಾಪ್ ನ್ಯೂಸ್

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Consumer-Court

Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ

16-digital-arrest

Digital Arrest: ಡಿಜಿಟಲ್‌ ಅರೆಸ್ಟ್‌ ಮುನ್ನೆಚ್ಚರಿಕೆಯೂ ಪರಿಹಾರವಾಗಬಲ್ಲದು

20-belagavi-2

Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Consumer-Court

Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ

20-belagavi-2

Belagavi: ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಈಡೇರಿಕೆಗೆ ಕ್ರಮ: ಸಚಿವೆ ಲಕ್ಷ್ಮೀ

Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!

Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!

19-thirthahalli

Thirthahalli: ನದಿಗೆ ಹಾರಿ ಕಾಲೇಜು ವಿದ್ಯಾರ್ಥಿ ಮೃತ್ಯು

18-aranthodu

Aranthodu: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ಪ್ರಯಾಣಿಕರಿಗೆ ಗಾಯ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?

15

Bollywood: ಬಾಲಿವುಡ್‌ ನಟ ಶಾಹಿದ್‌ ಕಪೂರ್‌ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?  

15-uv-fusion

Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು

Consumer-Court

Order: ಗ್ಯಾಸ್ ಸೋರಿಕೆ ಅವಘಡ: ಪೋಷಕರ ಕಳೆದುಕೊಂಡ ಪುತ್ರಿಗೆ 28 ಲಕ್ಷ ರೂ.ಪರಿಹಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.