ಚಾಮರಾಜನಗರ ಜಿಲ್ಲೆಗೂ ಸಿಗದ ಸಚಿವ ಸ್ಥಾನ
Team Udayavani, Aug 5, 2021, 4:42 PM IST
ಸಾಂದರ್ಭಿಕ ಚಿತ್ರ..
ಚಾಮರಾಜನಗರ: ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಈ ಎರಡು ವರ್ಷಗಳ ಅವಧಿಯಲ್ಲಿ ಜಿಲ್ಲೆಗೆ ಸಚಿವ ಸ್ಥಾನ ದೊರೆತಿಲ್ಲ. ಬೊಮ್ಮಾಯಿ ಸಚಿವ ಸಂಪುಟದಲ್ಲಾದರೂ ಜಿಲ್ಲೆಯ ಏಕೈಕ ಶಾಸಕ ಸಿ.ಎಸ್. ನಿರಂಜನ ಕುಮಾರ್ ಅವರಿಗೆ ಸಚಿವ ಸ್ಥಾನ ದೊರಕಬಹುದೆಂಬ ನಿರೀಕ್ಷೆಗಳಿದ್ದವು.ಆನಿರೀಕ್ಷೆ ಸಹ ಹುಸಿಯಾಗಿದೆ.
ಮುಖ್ಯಮಂತ್ರಿಯವರು ತಮ್ಮ ಸಚಿವ ಸಂಪುಟದಲ್ಲಿ ಎಲ್ಲ ಪ್ರದೇಶಗಳಿಗೂ ಪ್ರಾತಿನಿಧ್ಯತೆ ನೀಡುವುದಾಗಿ ತಿಳಿಸಿದ್ದರು. ಯುವಕರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಹೇಳಲಾ ಗುತ್ತಿತ್ತು. ಆದರೆ ಸಚಿವ ಸಂಪುಟ ಪುನಾರಚನೆ ಸಂದರ್ಭದಲ್ಲಿ ಚಾಮರಾಜನಗರ ಹಾಗೂ ನೆರೆಯ ಮೈಸೂರು ಜಿಲ್ಲೆಯನ್ನೂ ಕಡೆಗಣಿಸಲಾಗಿದೆ.
ಈ ಹಿಂದಿನಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಿಲ್ಲೆಯವರೇ ಆದ, ಎಚ್.ಎಸ್. ಮಹದೇವ ಪ್ರಸಾದ್, ಗೀತಾ ಮಹದೇವಪ್ರಸಾದ್ ಅವರಿಗೆ ಮಂತ್ರಿ ಸ್ಥಾನ ದೊರೆತಿತ್ತು. ತದ ನಂತರ ಎಚ್.ಡಿ. ಕುಮಾರಸ್ವಾಮಿಯವರ ಮೈತ್ರಿ ಸರ್ಕಾರದಲ್ಲೂ ಕಾಂಗ್ರೆಸ್‌ನ ಪುಟ್ಟರಂಗಶೆಟ್ಟಿ ಹಾಗೂ ಬಿಎಸ್‌ಪಿಯಿಂದ ಗೆದ್ದಿದ್ದ ಎನ್. ಮಹೇಶ್ ಅವರಿಗೆ ಸಚಿವ ಸ್ಥಾನ ದೊರೆತಿತ್ತು. ಶೆಟ್ಟರು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು. ಆದರೆ, ನಂತರ ಬಂದ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಗೆ ಸಚಿವ ಸ್ಥಾನ ದೊರೆಯಲಿಲ್ಲ. ಜಿಲ್ಲೆಯ 4 ವಿಧಾನಸಭಾ ಕ್ಷೇತ್ರಗಳ ಪೈಕಿ ಎರಡರಲ್ಲಿ ಕಾಂಗ್ರೆಸ್ ಶಾಸಕರು ಗೆದ್ದಿದ್ದಾರೆ. ಕೊಳ್ಳೇಗಾಲ ಕ್ಷೇತ್ರದಲ್ಲಿ ಬಿಎಸ್‌ಪಿಯಿಂದ ಎನ್. ಮಹೇಶ್ ಗೆದ್ದು,ಪಕ್ಷದಿಂದ ಉಚ್ಚಾಟಿತರಾಗಿದ್ದಾರೆ.ಈಗಬಿಜೆಪಿಸೇರುವ ತವಕದಲ್ಲಿದ್ದಾರೆ. ಇನ್ನು ಬಿಜೆಪಿಯ ಕಮಲದಿಂದ ಗೆದ್ದಿರುವ ಏಕೈಕ ಶಾಸಕ ಗುಂಡ್ಲುಪೇಟೆಯ ಸಿ.ಎಸ್. ನಿರಂಜನಕುಮಾರ್. ಎಚ್.ಎಸ್. ಮಹದೇವಪ್ರಸಾದ್ ಅವರ ಕುಟುಂಬದ ಪ್ರಬಲ ವರ್ಚಸ್ಸಿನ ನಡುವೆಯೂ ಕ್ಷೇತ್ರದಲ್ಲಿ ಕಮಲ ಅರಳಿಸಿದ ಕೀರ್ತಿ ನಿರಂಜನ್ ಅವರದು.
ಇದನ್ನೂ ಓದಿ:ಪಾಕಿಸ್ತಾನ: ಉದ್ರಿಕ್ತ ಮುಸ್ಲಿಂ ಗುಂಪಿನಿಂದ ಗಣೇಶ ದೇವಾಲಯ ಧ್ವಂಸ, ಮೂರ್ತಿಗಳು ಭಗ್ನ
ಈ ಹಿನ್ನೆಲೆಯಲ್ಲಿ ಮೊದಲ ಬಾರಿ ಗೆದ್ದರೂ ಅವರಿಗೆ ಬಿಎಸ್ ವೈ ಸಂಪುಟದಲ್ಲೇ ಸಚಿವ ಸ್ಥಾನ ದೊರಕಬಹುದೆಂಬ ನಿರೀಕ್ಷೆ ಗಳಿದ್ದವು. ಆದರೆ ತಮ್ಮ ಆಪ್ತವಲಯದಲ್ಲಿದ್ದರೂ, ಹಿರಿಯರಿಗೆ ಆದ್ಯತೆ ನೀಡಬೇಕಾದ ಕಾರಣ ಬಿಎಸ್‌ವೈ ನಿರಂಜನ್ ಅವರಿಗೆ ಸಚಿವ ಸ್ಥಾನ ನೀಡಲಾಗಿರಲಿಲ್ಲ. ಆದರೆ ಈ ಬಾರಿ ಯುವಕರಿಗೆ ಆದ್ಯತೆ ದೊರೆತು ಸಿ.ಎಸ್. ನಿರಂಜ ನಕುಮಾರ್ ಅವರಿಗೆ ಸಚಿವ ಸ್ಥಾನ ದೊರೆತರೂ ದೊರಕಬಹುದೆಂಬ ದೂರದ ನಿರೀಕ್ಷೆಗಳಿದ್ದವು. ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಅವರ ಬೆಂಬಲಿಗರು ಸುದ್ದಿಗೋಷ್ಠಿ ನಡೆಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸಚಿವ ಸ್ಥಾನ ನೀಡುವಂತೆ ಪೋಸ್ಟ್‌ಗಳನ್ನು ಹಾಕಿ ಒತ್ತಾಯ ಮಾಡಲಾಗಿತ್ತು.
ಆದರೆ,ಆನಿರೀಕ್ಷೆಗಳೆಲ್ಲ ಹುಸಿಯಾಗಿವೆ. ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದು, ಎರಡು ಮೂರು ಬಾರಿ ಗೆದ್ದವರಿಗೇ ಸಚಿವ ಸ್ಥಾನ ದೊರೆತಿಲ್ಲ. ಹಾಗಾಗಿ ಈ ರೇಸ್‌ನಲ್ಲಿ ನಿರಂಜನ್‌ಕುಮಾರ್‌ಅವರನ್ನು ಪರಿಗಣಿಸಲಾಗಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಇದು ಅವರ ಅಭಿಮಾನಿಗಳಲ್ಲಿಕೊಂಚ ನಿರಾಸೆಯನ್ನೂ ಉಂಟು ಮಾಡಿದೆ. ಜಿಲ್ಲೆಯಲ್ಲಿ ಏಕೈಕ ಬಿಜೆಪಿ ಶಾಸಕರಾಗಿ ಗೆದ್ದಿರುವ ನಿರಂಜನಕುಮಾರ್ ಅವರಿಗೆ ಸಚಿವ ಸ್ಥಾನ ದೊರಕಬೇಕಿತ್ತು. ದೊರಕಿದ್ದರೆ ಜಿಲ್ಲೆಗೂ ಪ್ರಾತಿನಿಧ್ಯ ಸಿಗುತ್ತಿತ್ತು. ಅಭಿವೃದ್ಧಿ ಕಾರ್ಯಗಳಿಗೂ ಪೂರಕವಾಗುತ್ತಿತ್ತು ಎನ್ನುತ್ತಾರೆ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಎಚ್.ಎಂ. ಪ್ರಣಯ್.
ನಿರಂಜನಕುಮಾರ್ ಸದ್ಯ ಕರ್ನಾಟಕ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದಾರೆ. ನೂತನ ಸರ್ಕಾರದಲ್ಲಿ ಅದೇ ಸ್ಥಾನದಲ್ಲಿ ಮುಂದುವರಿಯಬಹುದು ಅಥವಾ ಅದಕ್ಕಿಂತಲೂ ಹೆಚ್ಚಿನ ಪ್ರಾಮುಖ್ಯತೆ ಉಳ್ಳ ನಿಗಮಕ್ಕೆ ನೇಮಕ ಮಾಡುವ ಸಾಧ್ಯತೆಗಳೂ ಇಲ್ಲದಿಲ್ಲ.
ನನಗೆ ಸಚಿವ ಸ್ಥಾನ ದೊರಕದಿರುವುದು ನಿರೀಕ್ಷಿತ. ತುಂಬಾ ಹಿರಿಯರು ಇರುವುದರಿಂದ, ಮೊದಲ ಸಲ ಗೆದ್ದ ನಾನು ಸಚಿವ ಸ್ಥಾನ ದೊರಕುತ್ತದೆಂದು ನಿರೀಕ್ಷಿಸುವಂತಿಲ್ಲ. ಈಗ ಮೂರು ನಾಲ್ಕು ಬಾರಿ ಗೆದ್ದವರಿಗೂ ಅವಕಾಶ ದೊರೆತಿಲ್ಲ. ಆ ಬಗ್ಗೆ ನಿರಾಶೆಯೇನೂ ಇಲ್ಲ. ಇನ್ನೂ ಹೆಚ್ಚುಕಾರ್ಯಶೀಲನಾಗಿ ಕೆಲಸ ಮಾಡುತ್ತೇವೆ. ನೂತನ ಮುಖ್ಯಮಂತ್ರಿಗಳಿಂದಕ್ಷೇತ್ರಕ್ಕೆ ಇನ್ನೂ ಹೆಚ್ಚಿನ ಅಭಿವೃದ್ಧಿಕಾರ್ಯಗಳನ್ನು ತರುತ್ತೇನೆ.
-ಸಿ.ಎಸ್.ನಿರಂಜನಕುಮಾರ್, ಶಾಸಕ
-ಕೆ.ಎಸ್. ಬನಶಂಕರ ಆರಾಧ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gundlupete: ವಿದ್ಯುತ್ ಕಂಬಕ್ಕೆ ಗುದ್ದಿದ್ದ ಕಾರು: ಸ್ಥಳದಲ್ಲೇ ಇಬ್ಬರು ಸಾವು
Bandipur: ಸಫಾರಿ ವೇಳೆ ನಾಲ್ಕು ಮರಿ ಜೊತೆ ತಾಯಿ ಹುಲಿ ದರ್ಶನ
Cabinet Meeting: ಮೊದಲ ಬಾರಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ
Kollegala: ದ್ವಿಚಕ್ರ ವಾಹನದಲ್ಲಿ ಗಾಂಜಾ ಸಾಗಾಟ… ಸೊತ್ತು ಸಮೇತ ಆರೋಪಿ ಬಂಧನ
New Year: ಡಿ.31, ಜ. 1ರಂದು ಬಂಡೀಪುರದಲ್ಲಿ ಪ್ರವಾಸಿಗರ ವಾಸ್ತವ್ಯ ನಿರ್ಬಂಧ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.