ಮಾದರಿಯಾಗಲಿದೆ ಮೆಗಾ ಮಾರುಕಟ್ಟೆ: 40 ಕೋಟಿ ವೆಚ್ಚದಲ್ಲಿ ನಿರ್ಮಾಣ
ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವ ಭಾರೀ ಗಾತ್ರದ ಸೌಂಡ್‌ಲೆಸ್ ಜನರೇಟರ್ ವ್ಯವಸ್ಥೆ ಕೂಡಾ ಕಲ್ಪಿಸಲಾಗುತ್ತಿದೆ.
Team Udayavani, Aug 5, 2021, 5:47 PM IST
ಬಸವನಬಾಗೇವಾಡಿ: ಪಟ್ಟಣದ ಹೃದಯ ಭಾಗದ 3.07 ಎಕರೆ ಪ್ರದೇಶದಲ್ಲಿ 40 ಕೋಟಿ ರೂ. ವೆಚ್ಚದಲ್ಲಿ ಮೂರು ಅಂತಸ್ತಿನ ಮೆಗಾ ಮಾರುಕಟ್ಟೆ ಹಲವು ವಿಶೇಷತೆ ಹೊಂದಿದ್ದು, ಲೋಕಾರ್ಪಣೆಗೂ ಮುನ್ನವೇ ವ್ಯಾಪಾರಸ್ಥರನ್ನು ಕೈಬೀಸಿ ಕರೆಯುತ್ತಿದೆ.
ಇಷ್ಟೊತ್ತಿಗಾಗಲೇ ಮಾರುಕಟ್ಟೆ ಲೋಕಾರ್ಪಣೆಯಾಗಿ ಸಾರ್ವಜನಿಕರು ಇಲ್ಲಿ ವ್ಯಾಪಾರ-ವಹಿವಾಟು ನಡೆಸಬೇಕಿತ್ತು. ಆದರೆ ಕೊರೊನಾ ವಕ್ಕರಿಸಿದ್ದರಿಂದ ಸರ್ಕಾರದ ಅನೇಕ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗಿದೆ. ಇದೀಗ ಅಟ್ಟಹಾಸ ಕಡಿಮೆಯಾಗುತ್ತಿದ್ದು, ಅನೇಕ ಜನಪರ ಯೋಜನೆಗಳು ಆಮೆಗತಿಯಲ್ಲಿ ಕಾರ್ಯರೂಪಕ್ಕೆ ಬರುತ್ತಿವೆ.
ಹೀಗಾಗಿ 2021ಕ್ಕೆ ಸಾರ್ವಜನಿಕರಿಗೆ ಈ ಮಾರುಕಟ್ಟೆ ಲೋಕಾರ್ಪಣೆಯಾಗಬೇಕಿತ್ತು. ಕೊರೊನಾದಿಂದ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ಬಂದ ಹಿನ್ನೆಲ್ಲೆಯಲ್ಲಿ ಮಾರುಕಟ್ಟೆಗೆ ಹೆಚ್ಚುವರಿ 7 ಕೋಟಿ ಅನುದಾನದ ಕೊರತೆ ಮತ್ತು ಕೊರೊನಾದಲ್ಲಿ ಮಾರುಕಟ್ಟೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿರುವುದರಿಂದ 2022 ಅಥವಾ 2023ಕ್ಕೆ ಲೋಕಾರ್ಪಣೆ ಆಗುವ ಲಕ್ಷಣಗಳಿವೆ. ಮಹಡಿಯಲ್ಲಿ ಸುಮಾರು 200ಕ್ಕೂ ಹೆಚ್ಚು ವಾಣಿಜ್ಯ ಮಳಿಗೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಒಂದೊಂದು ಮಳಿಗೆ 9×12 ಚ. ಮೀ, 9×9 ಚ.ಮೀ, 6×9 ಚ.ಮೀ, 5×6 ಚ.ಮೀ ವಿಸ್ತೀರ್ಣ ಹೊಂದಿವೆ. ಕೆಳ ಮಹಡಿ ಹಾಗೂ ವಾಣಿಜ್ಯ ಮಳಿಗೆಯಲ್ಲಿ ವಾಹನ ನಿಲುಗಡೆ ಮತ್ತು ಹಣ್ಣು-ಹಂಪಲ, ತರಕಾರಿ ಮಳಿಗೆಗಳು. ಒಂದನೇ ಹಂತದ ವಾಣಿಜ್ಯ ಮಳಿಗೆಯಲ್ಲಿ ವಿವಿಧ ಬ್ಯಾಂಕ್ ಹಾಗೂ ಕಿರಾಣಿ, ಜನರಲ್ ಸ್ಟೋರ್ಸ್ ಸೇರಿದಂತೆ ಅನೇಕ ವ್ಯಾಪಾರ-ವಹಿವಾಟು ನಡೆಯಲಿವೆ. ಇನ್ನೂ ಎರಡನೇ ಹಂತದ ವಾಣಿಜ್ಯ ಮಳಿಗೆಯಲ್ಲಿ ಹೋಟೆಲ್ ಹಾಗೂ ಇತರ ವ್ಯಾಪಾರ-ವಹಿವಾಟು ನಡೆಯಲಿವೆ.
ಮೆಗಾ ಮಾರುಕಟ್ಟೆ ಆವರಣದಲ್ಲಿ ಉದ್ಯಾನ, ಕಾರಂಜಿ, ಮಳೆ ನೀರು ಕೊಯ್ಲ, ಸುಲಭ ಶೌಚಾಲಯ, ಒಳಚಂಡಿ, ಒಂದು ಲಕ್ಷ ಲೀ. ನೀರು ಸಂಗ್ರಹಿಸುವ ಬೃಹತ್ ಟ್ಯಾಂಕರ್ ಹಾಗೂ ಹೆಚ್ಚು ಮಳೆಯಾದ ಸಂದರ್ಭದಲ್ಲಿ ಮೆಗಾ ಮಾರುಕಟ್ಟೆಯಲ್ಲಿ ಯಾವುದೇ ತೊಂದರೆಯಾಗದಂತೆ ಮಳೆ ನೀರು ಮಾರ್ಗ ನಿರ್ಮಿಸಲಾಗಿದೆ.
ಮೆಗಾ ಮಾರುಕಟ್ಟೆಗೆ 5 ದ್ವಾರ ಬಾಗಿಲು ನಿರ್ಮಿಸಲಾಗುತ್ತಿದ್ದು, ತರಕಾರಿ, ಹಣ್ಣು-ಹಂಪಲು ಹಾಗೂ ಕಿರಾಣಿ ಸೇರಿದಂತೆ ಇತರ ವಸ್ತುಗಳನ್ನು ಸರಬರಾಜು ಮಾಡುವ ಭಾರೀ ಗಾತ್ರದ ವಾಹನಗಳು ಸರಳವಾಗಿ ಮಾರುಕಟ್ಟೆಯಲ್ಲಿ ಬಂದು-ಹೋಗಲು ವ್ಯವಸ್ಥೆ ಮಾಡಲಾಗುತ್ತಿದೆ. ವ್ಯಾಪಾರಸ್ಥರಿಗೆ ಮಾರುಕಟ್ಟೆ ಎಲ್ಲ ಮಳಿಗೆಗಳಿಗೆ ಹೋಗಿ-ಬರಲು ಮಾರ್ಗಗಳು ಮತ್ತು ಅಂಗವಿಕಲರಿಗೆ ಪ್ರತ್ಯೇಕ ರ್ಯಾಪಿಂಗ್ ವ್ಯವಸ್ಥೆ ವಾಹನಗಳಿಗೆ ಪಾರ್ಕಿಂಗ್, ವಿದ್ಯುತ್ ವ್ಯತ್ಯಯ ವೇಳೆ 6 ಗಂಟೆಗಳ ಕಾಲ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸುವ ಭಾರೀ ಗಾತ್ರದ ಸೌಂಡ್‌ಲೆಸ್ ಜನರೇಟರ್ ವ್ಯವಸ್ಥೆ ಕೂಡಾ ಕಲ್ಪಿಸಲಾಗುತ್ತಿದೆ.
ಕನಸು ನನಸು: ಕಳೆದ 10 ವರ್ಷದ ಹಿಂದೆ ಬಸವನಬಾಗೇವಾಡಿ ಮತಕ್ಷೇತ್ರದ ಶಾಸಕ ಶಿವಾನಂದ ಪಾಟೀಲ ಬಸವನಬಾಗೇವಾಡಿ ಪಟ್ಟಣದಲ್ಲಿ ಸುಸಜ್ಜಿತ ಮತ್ತು ಬೃಹತ್ ಮೆಗಾ ಮಾರುಕಟ್ಟೆ ನಿರ್ಮಿಸಬೇಕೆಂಬ ಮಹದಾಸೆಯೊಂದಿಗೆ ಯೋಜನೆ ರೂಪಿಸಿದ್ದರು. ಆದರೆ ಅನೇಕ ಕಾರಣಗಳಿಂದ ಈ ಯೋಜನೆ ಮುಂದೂಡುತ್ತ ಬರಲಾಯಿತು. ಆದರೆ ಹಟ ಬಿಡದ ಶಾಸಕರು ಕೊಟ್ಟ ಮಾತಿನಂತೆ ಬಸವನಬಾಗೇವಾಡಿ ತಾಲೂಕಿನ ವ್ಯಾಪಾರಸ್ಥರಿಗೆ ದೊಡ್ಡ ಮೆಗಾ ಮಾರುಕಟ್ಟೆ ನಿರ್ಮಾಣಕ್ಕೆ ಮುನ್ನುಡಿ ಬರೆದಿದ್ದಾರೆ.
ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳು ಭೇಟಿ ನೀಡಿ ಮಾರುಕಟ್ಟೆ ವೀಕ್ಷಿಸಿ ಜನತೆ ಮತ್ತು ವ್ಯಾಪಾರಸ್ಥರಿಗೆ ಅನುಕೂಲ ಮಾಡಿಕೊಡುವ ರೀತಿಯಲ್ಲಿ ಇಂತಹ ಕಾರ್ಯ ಮಾಡುತ್ತಿರುವುದನ್ನು ಮೆಚ್ಚಿ ಶಾಸಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಹಾ ನಗರಗಳಲ್ಲಿ ನೋಡುತ್ತಿದ್ದ ಇಂತಹ ಮಾರುಕಟ್ಟೆ ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ಸಂಗತಿ. ಆದರೆ ಕೊರೊನಾ ಮಹಾಮಾರಿ ಅನೇಕ ಜನಪರ ಯೋಜನೆಗಳಿಗೆ ಅಡ್ಡಗಾಲು ಹಾಕುತ್ತಿದ್ದು, ಯೋಜನೆಗಳು ಕಾರ್ಯರೂಪಕ್ಕೆ ಬರಲು ಹಿನ್ನಡೆಯಾಗುತ್ತಿದೆ.
ಶಿವಪ್ರಕಾಶ ಶಿವಾಚಾರ್ಯ ಶ್ರೀ, ಹಿರೇಮಠ
ಮೆಗಾ ಮಾರುಕಟ್ಟೆ ಎರಡನೇ ಅಂತಸ್ತಿನ ನಿರ್ಮಾಣ ಕಾಮಗಾರಿ ಭರದಿಂದ ಸಾಗಿದೆ. ಮಾರುಕಟ್ಟೆಗೆ ಹೈಟೆಕ್ ಸ್ಪರ್ಶ ನೀಡಲಾಗಿದೆ. ಲಾಕ್‌ಡೌನ್‌ನಿಂದ ಕಟ್ಟಡ ನಿರ್ಮಾಣದ ವಸ್ತುಗಳು ಹಾಗೂ ಕಾರ್ಮಿಕರ ಕೊರತೆಯಿಂದ ಲೋಕಾರ್ಪಣೆಗೆ ತಡೆಯಾಗಿದೆ.
ಬಿ.ಎ. ಸೌದಾಗರ, ಪುರಸಭೆ ಮುಖ್ಯಾಧಿಕಾರಿ
ಪಟ್ಟಣದಲ್ಲಿ ನಿಮಾರ್ಣವಾಗುತ್ತಿರುವ ಮೆಗಾ ಮಾರುಕಟ್ಟೆಯಲ್ಲಿ ಎಲ್ಲ ತರಹದ ವ್ಯವಸ್ಥೆ ಇರುವುದರಿಂದ ವ್ಯಾಪಾರಸ್ಥರು ಮತ್ತು ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗುವುದಿಲ್ಲ. ಶಾಸಕ ಶಿವಾನಂದ ಪಾಟೀಲರ ಕಾರ್ಯ ಶ್ಲಾಘನೀಯ.
ಮುತ್ತು ಕಿಣಗಿ, ವ್ಯಾಪಾರಸ್ಥ
ಪ್ರಕಾಶ ಬೆಣ್ಣೂರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.