ದ್ವಿತೀಯ ಹಂತದಲ್ಲಿ ಹೈಕಮಾಂಡ್ ಸಚಿವ ಸ್ಥಾನ ನೀಡುವ ವಿಶ್ವಾಸ – ಸವದಿ
Team Udayavani, Aug 5, 2021, 9:50 PM IST
ಬನಹಟ್ಟಿ: ರಾಜ್ಯದ ನೇಕಾರ ಸಮುದಾಯದ ಅಭ್ಯುದಯಕ್ಕೆ ಹಾಗು ಪುನಶ್ಚೇತನಕ್ಕೆ ನೇಕಾರ ಕ್ಷೇತ್ರದ ಶಾಸಕರೋರ್ವರಿಗಾದರೂ ಸಚಿವ ಸ್ಥಾನ ನೀಡಬೇಕು. ಮೊದಲ ಹಂತದಲ್ಲಿಯೇ ನನಗೆ ಸ್ಥಾನ ದೊರಕುವ ನಿರೀಕ್ಷೆಯಿತ್ತು. ಹಲವಾರು ಕಾರಣಗಳಿಂದ ಉಳಿಯುವಂತಾಗಿದ್ದು, ದ್ವಿತೀಯ ಹಂತದಲ್ಲಿ ನಿಶ್ಚಿತವಾಗಿಯೂ ಸಚಿವ ಸ್ಥಾನ ನೀಡುವಲ್ಲಿ ಹೈಕಮಾಂಡ್ ಅನುಮತಿ ನೀಡಲಿದೆ ಎಂಬ ವಿಶ್ವಾಸವಿದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಹೇಳಿದರು.
ಅವರು ಗುರುವಾರ ರಬಕವಿ-ಬನಹಟ್ಟಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಕ್ಷದಲ್ಲಿನ ನಾಯಕರ ಒತ್ತಡದಿಂದ ರಾಜಕೀಯ ಮುಳ್ಳಿನ ಹಾಸಿಗೆಯಾಗಿದೆ. ನೇಕಾರರ ಕಷ್ಟ-ಸುಖಗಳನ್ನು ಅರಿತಿದ್ದು, ರಾಜ್ಯದ ನೇಕಾರರ ಅನುಭವ ಗೊತ್ತಿದೆ. ನೇಕಾರ ಹಾಗೂ ನೇಕಾರಿಕೆಗೆ ನ್ಯಾಯ ಕೊಡಬೇಕಾದರೆ ನೇಕಾರ ಕ್ಷೇತ್ರದ ನನಗೆ ಸಚಿವ ಸ್ಥಾನ ಕೊಡಬೇಕು.
ರಾಜಕೀಯದಲ್ಲಿ ಲಾಭಿ ಸಹಜ. ನಿಷ್ಠಾವಂತರಿಗೆ, ಹಿರಿಯರನ್ನು ಬದಿಗಿಟ್ಟು ಹೊಸಬರಿಗೆ ನೀಡಿದ್ದಾರೆ. ಈ ಸಿದ್ಧಾಂತ ಬಿಜೆಪಿಯಲ್ಲಿ ಎಂದಿಗೂ ಇಲ್ಲ. ಯಾವ ಒತ್ತಡಕ್ಕೆ ಮಣಿದು ಮನೆ ಹಾಕಿದ್ದಾರೋ ತಿಳಿದಿಲ್ಲ. ಅಥವಾ ನಮ್ಮಲ್ಲಿಯೇನು ದೋಷವಿದೆ ಎಂಬುದು ಅರಿವಿಲ್ಲ. ಮುಂದೆ ಒಳ್ಳೆಯ ಕಾಲ ಬರುತ್ತದೆ ಕಾದು ನೋಡಿ ಎಂದು ಸಚಿವ ಸ್ಥಾನದ ವಿಶ್ವಾಸದಲ್ಲಿ ನಕ್ಕು ನಮಸ್ಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.