ವಸತಿ ಯೋಜನೆಗೆ ಹಿಡಿದ ಗ್ರಹಣ
Team Udayavani, Aug 6, 2021, 3:30 AM IST
ಪುತ್ತೂರು: 3 ವರ್ಷಗಳಿಂದ ಸರ ಕಾರದ ಆಶ್ರಯ ಯೋಜನೆಗಳಲ್ಲಿ ಮನೆ ಮಂಜೂರುಗೊಳ್ಳದ ಕಾರಣ ಗ್ರಾ.ಪಂ.ಗಳಲ್ಲಿ ಅರ್ಜಿಗಳು ಧೂಳು ಹಿಡಿದಿವೆ.
ಬಡವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಸರಕಾರವು ಬಸವ ವಸತಿ ಯೋಜನೆ ಸೇರಿದಂತೆ ವಿವಿಧ ಯೋಜ ನೆಗಳನ್ನು ರೂಪಿಸಿದೆ. ಆದರೆ ಇದನ್ನು ನಂಬಿ ಮನೆಕಟ್ಟಲು ಹೊರಟವರಿಗೆ ದಿಕ್ಕಿಲ್ಲದ ಪರಿಸ್ಥಿತಿ ಉಂಟಾಗಿದೆ. ದ.ಕ.ಜಿಲ್ಲೆಯಲ್ಲಿ 46,983 ವಸತಿ ಮತ್ತು ನಿವೇಶನ ರಹಿತರಿದ್ದು ಸೂರಿಗಾಗಿ ಕಾಯುತ್ತಿದ್ದಾರೆ.
ಅರ್ಜಿ ಸ್ವೀಕಾರ ಮಾತ್ರ:
ಸ್ವಂತ ಮನೆ ಕಟ್ಟಿಕೊಳ್ಳುವ ಪ್ರಯತ್ನ ದಲ್ಲಿದ್ದ ಸಾವಿ ರಾರು ಫಲಾನುಭವಿಗಳು ಗ್ರಾ.ಪಂ.ಮೂಲಕ ವಸತಿ ಸಹಾಯಧನಕ್ಕೆ ಅರ್ಜಿ ಸಲ್ಲಿಸಿ ದ್ದಾರೆ. ವಸತಿ ನಿರ್ಮಾಣಕ್ಕೆ ಎಸ್‌ಸಿ-ಎಸ್‌ಟಿ ಫಲಾನುಭವಿಗೆ ತಲಾ 1.50 ಲ. ರೂ. ಮತ್ತು ಇತರರಿಗೆ ತಲಾ 1.20 ಲಕ್ಷ ರೂ. ಸಹಾಯಧನ ಪಾವತಿ ಸಲಾಗುತ್ತದೆ. ಗ್ರಾ.ಪಂ. ಸಭೆಗಳಲ್ಲಿ ಅರ್ಜಿ ಸಲ್ಲಿಸಿದ ಫಲಾನುಭವಿಗಳು ಗ್ರಾ.ಪಂ.ಗೆ ಅಲೆದಾಡುತ್ತಿದ್ದರೂ ಬಸವ ವಸತಿ ಯೋಜನೆ ಸೇರಿ ಯಾವುದೇ ಯೋಜನೆಗಳಲ್ಲಿ ಮನೆ ಮಂಜೂರಾಗದ ಪರಿಣಾಮ ಸಹಾಯಧನ ಒದಗಿಸಲಾಗದ ಸ್ಥಿತಿ ಗ್ರಾ.ಪಂ.ಗಳಾದ್ದಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ)ಯಡಿ 2020-21ನೇ ಸಾಲಿನಲ್ಲಿ ರಾಜ್ಯದ ಪ್ರತೀ ಗ್ರಾ.ಪಂ.ಗೆ 20 ಮನೆ ನಿರ್ಮಾಣ ಗುರಿ ನಿಗದಿಪಡಿಸಿ ವರ್ಷ ಸಂದರೂ ಮನೆ ನಿರ್ಮಾಣದ ಬಗ್ಗೆ ಗ್ರಾ.ಪಂ.ಗಳಿಗೆ ಸೂಚನೆ ತಲುಪಿಲ್ಲ. ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿರುವ 20 ಮನೆ ಗಳಲ್ಲಿ ಶೇ. 60 ಪ.ಜಾತಿ- ಪಂಗಡಕ್ಕೆ, ಶೇ. 25 ಸಾಮಾನ್ಯ ವರ್ಗಕ್ಕೆ, ಶೇ. 15 ಅಲ್ಪಸಂಖ್ಯಾ ಕರಿಗೆ ಒದಗಿಸಲು ಸೂಚಿಸ ಲಾಗಿತ್ತು.
ಶಾಸಕರಿಗೆ ಆಯ್ಕೆಯ ಹೊಣೆ:
ಫಲಾನುಭವಿಗಳ ಗುರುತಿಸುವಿಕೆ ಪಿಡಿಒ, ತಾ.ಪಂ. ಇಒ ಮೂಲಕ ನಡೆದು ಶಾಸಕರ ಅಧ್ಯಕ್ಷತೆಯಲ್ಲಿ ಪಟ್ಟಿ ಅಂತಿಮ ಗೊಳಿಸಲು ನಿರ್ಧರಿಸಿ ಆ ಪಟ್ಟಿಯನ್ನು ಜಿ.ಪಂ. ಮೂಲಕ ಸರಕಾರಕ್ಕೆ ಸಲ್ಲಿಸ ಲಾಗಿತ್ತು. ಸಿದ್ಧಪಡಿಸಿದ ವಸತಿ ರಹಿತರ ಪಟ್ಟಿಯ ಫಲಾನುಭವಿಗಳ ಜತೆಗೆ ಅರ್ಹರು ಬಿಟ್ಟು ಹೋಗಿದ್ದಲ್ಲಿ ಅವರನ್ನು ಸೇರಿಸಿ ಪಟ್ಟಿ ತಯಾರಿಸಿ ಆಯಾ ತಾ.ಪಂ. ವಸತಿ ನೋಡಲ್ ಅ ಧಿಕಾರಿಗಳು ಪಿಡಿಒಗಳ ಮೂಲಕ ಪಟ್ಟಿ ತಯಾರಿಸಿ ಸಲ್ಲಿಕೆಯಾದರೂ ಮನೆ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ದೊರೆತಿಲ್ಲ.
ವಸತಿ ಮತ್ತು ನಿವೇಶನ
ರಹಿತ ಕುಟುಂಬಗಳ ವಿವರ
ಮಂಗಳೂರು 11,141
ಬಂಟ್ವಾಳ 14,387
ಬೆಳ್ತಂಗಡಿ 9,990
ಪುತ್ತೂರು 2,606
ಸುಳ್ಯ 2,861
ಮೂಡುಬಿದಿರೆ 2,052
ಕಡಬ 3,946
ಒಟ್ಟು 46,983
ಆಶ್ರಯ ಯೋಜನೆಗೆ ಮರು ಚಾಲನೆ ನೀಡಲಾಗಿದ್ದು ರಾಜ್ಯದಲ್ಲಿ ಐದು ಲಕ್ಷ ಮನೆಗಳು ನಿರ್ಮಾಣಗೊಳ್ಳಲಿದೆ. ಪುತ್ತೂರಿಗೆ 1,260 ಮನೆ ಮಂಜೂರಾಗಿದ್ದು ಪ್ರತೀ ಗ್ರಾ.ಪಂ.ನಲ್ಲಿ 35 ಮನೆ ನಿರ್ಮಾಣಗೊಳ್ಳಲಿದೆ. –ಸಂಜೀವ ಮಠಂದೂರು, ಶಾಸಕರು, ಪುತ್ತೂರು
-ಕಿರಣ್ ಪ್ರಸಾದ್ ಕುಂಡಡ್ಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Viral Pics: ಡೇಟಿಂಗ್ ರೂಮರ್ಸ್ ನಡುವೆ ವಿಜಯ್ – ರಶ್ಮಿಕಾ ಸೀಕ್ರೆಟ್ ಲಂಚ್ ಡೇಟ್
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.