ಹಲವು ವರ್ಷಗಳ ಸುಧಾರಣೆಯ ಫಲ ಈ “ಅಸಾಮಾನ್ಯ ಕಂಚಿನ ಪದಕ’
Team Udayavani, Aug 6, 2021, 6:00 AM IST
ಭಾರತೀಯ ಪುರು ಷರ ತಂಡ ಹಾಕಿ ಯಲ್ಲಿ ಕಂಚಿನ ಪದಕ ಗೆದ್ದಿರುವುದು ಅಕ್ಷ ರಶಃ ಐತಿಹಾಸಿಕ ಸಾಧನೆ. 1980ರಲ್ಲಿ ಚಿನ್ನ ಗೆದ್ದ ಅನಂತರ ಭಾರತ ಮುಂದಿನ
9 ಒಲಿಂಪಿಕ್ಸ್‌ಗಳಲ್ಲಿ ಪದಕವನ್ನೇ ಗೆದ್ದಿರಲಿಲ್ಲ. 2008ರ ಬೀಜಿಂಗ್ ಒಲಿಂ ಪಿಕ್ಸ್‌ಗೆ ಭಾರತೀಯರು ಅರ್ಹತೆಯನ್ನೇ ಪಡೆದಿ ರಲಿಲ್ಲ. ಈ ಬಾರಿ ಭಾರತಕ್ಕೆ ಕಂಚು ಗೆಲ್ಲಲು ಸಾಧ್ಯ ವಾಗಿದೆ. ಅದೂ ಜರ್ಮನಿಯಂತಹ ವಿಶ್ವದ ಬಲಿಷ್ಠ ತಂಡದೆದುರು. ಇದು ಭಾರತೀಯ ಹಾಕಿ ಪುನ ರುತ್ಥಾನಗೊಂಡಿರುವುದನ್ನು ಸೂಚಿಸುತ್ತದೆ. ಇಂತಹ ದೊಡ್ಡ ಬದಲಾವಣೆಯ ಹಿಂದೆ ಕೇಂದ್ರ ಸರಕಾರ, ಕೇಂದ್ರ ಕ್ರೀಡಾ ಸಚಿವಾಲಯ, ಹಾಕಿ ಇಂಡಿಯಾ ಗಳಿದ್ದು ಅಭಿನಂದನೆ ಸಲ್ಲಿಸಬೇಕು.
ಗುರುವಾರ ಭಾರತ ಹಾಕಿ ತಂಡ ಆಡಿದ ರೀತಿ ಯನ್ನು ಯಾರೇ ನೋಡಿದರೂ ಅವರು ಆಟವನ್ನು ಪ್ರೀತಿಸಲು ಶುರು ಮಾಡುವುದು ಖಂಡಿತ. ಅಂತಹ ಮಟ್ಟದಲ್ಲಿ ಭಾರತೀಯರು ಹೋರಾಡಿದರು. ಬಲಿಷ್ಠ ಜರ್ಮನಿಯ ಎದುರು ಆಡಿದ ರೀತಿ; ಯುವಕರು ಈ ಆಟವನ್ನು ಗಂಭೀರವಾಗಿ ಸ್ವೀಕರಿ ಸಲು ಪ್ರೇರಣೆಯಾಗುತ್ತದೆ. ಜರ್ಮನಿ ಹಲವು ವರ್ಷಗಳಿಂದ ಪ್ರಮುಖ ಕೂಟಗಳಲ್ಲಿ ಪದಕ ಕಳೆದುಕೊಂಡ ಉದಾಹರಣೆಗಳೇ ಇಲ್ಲ ಎನ್ನುವುದನ್ನು ಗಮನಿಸಿದರೆ, ಈ ಸಾಧನೆಯ ಮಹತ್ವ ನಮಗೆ ಅರಿವಾಗುತ್ತದೆ.
ಕುಸಿತವಾಗಿದ್ದೇಕೆ?, ಸುಧಾರಿಸಿದ್ದೇಕೆ?: ಒಂದು ಕಾಲದಲ್ಲಿ 8 ಚಿನ್ನದ ಪದಕವನ್ನು ಒಲಿಂಪಿಕ್ಸ್‌ನಲ್ಲಿ ಗೆದ್ದಿದ್ದ ಭಾರತೀಯರು ದಿಢೀರ್ ಕುಸಿತ ಕಂಡರು. ಅದಕ್ಕೂ ಕಾರಣಗಳಿವೆ. ನಾವು ಆಡುತ್ತಿದ್ದಾಗ ಭಾರತ ತಂಡ ಪರಿಶ್ರಮಕ್ಕೆ ಆದ್ಯತೆ ಕೊಡುತ್ತಿತ್ತು. ಆದರೆ ವೈಜ್ಞಾನಿಕ ತಂತ್ರಗಾರಿಕೆಗಳು ಕಡಿಮೆ ಯಿದ್ದವು. ಹಾಗಾಗಿ ಪಂದ್ಯ ನಡೆಯುವಾಗ ಏನೋ ಸಣ್ಣಪುಟ್ಟ ವ್ಯತ್ಯಾಸಗಳು ಸಂಭವಿಸುತ್ತಿದ್ದವು. ಈಗ ಅಂತಹ ಸಮಸ್ಯೆಗಳು ಸುಧಾರಣೆಗೊಂಡಿವೆ. ಈಗ ಗಾಯಗಳು ಕಡಿಮೆಯಾಗಿವೆ, ದೈಹಿಕ ಸಾಮರ್ಥ್ಯ ಚೆನ್ನಾಗಿದೆ. ತಂತ್ರಗಾರಿಕೆಗಳನ್ನು ಸುಧಾರಿಸಿಕೊಂಡಿದ್ದಾರೆ. ಇವೆಲ್ಲ ನಮ್ಮ ಕಾಲದಲ್ಲಿ ಇರಲಿಲ್ಲ.
2008ರ ಬೀಜಿಂಗ್ ಒಲಿಂ ಪಿಕ್ಸ್‌ನಲ್ಲಿ ಭಾರತಕ್ಕೆ ಅರ್ಹತೆ ಯನ್ನೇ ಗಳಿಸಲು ಸಾಧ್ಯವಾಗ ಲಿಲ್ಲ. ಅದು ಭಾರತೀಯ ಹಾಕಿಯ ದುಃಸ್ಥಿತಿಯ ಪರಮಾ ವಧಿಯಾಗಿತ್ತು. ಆಗ ಪರಿಸ್ಥಿತಿ ಯನ್ನು ಗಂಭೀರವಾಗಿ ಪರಿಗಣಿ ಸಲಾಯಿತು. ಹಾಕಿಯ ಗತವೈಭ ವವನ್ನು ಮರಳಿ ಗಳಿಸಲು ವ್ಯವಸ್ಥೆಯಲ್ಲಿ ಆಮೂಲಾಗ್ರ ಬದಲಾವಣೆ ಮಾಡಲಾಯಿತು. ಅಲ್ಲಿಯವರೆಗೆ ಭಾರತ ಹಾಕಿ ಒಕ್ಕೂಟದಡಿ ಎಲ್ಲವೂ ನಡೆಯುತ್ತಿತ್ತು. ಅದನ್ನು ವಿಸರ್ಜನೆ ಮಾಡಿ 2010ರ ಅನಂತರ ಹಾಕಿ ಇಂಡಿಯಾ ರಚನೆಯಾಯಿತು. ನರೇಂದ್ರ ಬಾತ್ರಾ ಅಧ್ಯಕ್ಷರಾಗಿ ಹೊಣೆ ಹೊತ್ತುಕೊಂಡರು. ವಿಶ್ವ ದರ್ಜೆಯ ತರಬೇತಿ, ಆಹಾರ ಪದ್ಧತಿ, ದೈಹಿಕ ದೃಢತೆಯನ್ನು ಕಾಪಾಡಿಕೊಳ್ಳುವುದು ಸೇರಿದಂತೆ ಎಲ್ಲವಕ್ಕೂ ವೈಜ್ಞಾನಿಕ ಮಾದರಿಯನ್ನು ಅನುಸರಿಸ ಲಾಯಿತು. ಅಲ್ಲಿಂದ ಪ್ರದರ್ಶನದಲ್ಲಿ ಸುಧಾರಣೆ ಗೊಳ್ಳಲು ಆರಂಭವಾಯಿತು. ಅದರ ಪರಿಣಾಮ ಈಗ ಕಾಣುತ್ತಿದೆ.
ಕೆಲವು ವರ್ಷಗಳಿಂದ ನಮ್ಮ ಶ್ರೇಯಾಂಕದಲ್ಲೂ ಸುಧಾರಣೆ ಕಾಣಲು ಆರಂಭವಾಯಿತು. ವಿಶ್ವ ಮಟ್ಟದಲ್ಲಿ 6ನೇ, 5ನೇ ಸ್ಥಾನವನ್ನು ಕಂಡು, ಈಗ ನಾವು ವಿಶ್ವ ನಂ.4ನೇ ಶ್ರೇಯಾಂಕಿತ ತಂಡ ವಾಗಿದ್ದೇವೆ. ಇಂತಹ ಹೊತ್ತಿನಲ್ಲಿ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವೂ ಬಂದಿದೆ. ಇದು ಭವಿಷ್ಯದ ಬಗ್ಗೆ ಭರವಸೆ ಮೂಡಿಸಿದೆ. ಮತ್ತೂಮ್ಮೆ ಸುವರ್ಣ ಯುಗದ ಕನಸುಗಳು ಹುಟ್ಟಿವೆ.
ಡಾ| ಎ.ಬಿ.ಸುಬ್ಬಯ್ಯ
(ಲೇಖಕರು: ಮಾಜಿ ಅಂತಾರಾಷ್ಟ್ರೀಯ ಹಾಕಿ ಆಟಗಾರ, ಅರ್ಜುನ ಪುರಸ್ಕೃತ. 1992, 1996ರ ಒಲಿಂಪಿಕ್ಸ್‌ಗಳಲ್ಲಿ ಆಡಿದ ಹಾಕಿ ತಂಡದ ಸದಸ್ಯ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್‌ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.