ಕರ್ನಾಟಕ ವಿರುದ್ಧ ಪಿಣರಾಯಿ ವಿಜಯನ್ ಗರಂ
Team Udayavani, Aug 6, 2021, 7:10 AM IST
ತಿರುವನಂತಪುರ: ಕೊರೊನಾ ಸೋಂಕು ನಿಯಂತ್ರಣ ನಿಟ್ಟಿನಲ್ಲಿ ಕೇರಳದಿಂದ ಆಗಮಿಸುವವರಿಗೆ ಪ್ರಯಾಣ ನಿರ್ಬಂಧ ಹೇರಿರುವ ಕರ್ನಾಟಕ ಸರಕಾರದ ನಿರ್ಧಾರಕ್ಕೆ ಕೇರಳ ಕ್ಯಾತೆ ತೆಗೆದಿದೆ. ಈ ರೀತಿ ನಿರ್ಬಂಧ ಹೇರುವುದು ಕೇಂದ್ರ ಸರಕಾರದ ಮಾರ್ಗಸೂಚಿಗೆ ವಿರುದ್ಧವಾದದ್ದು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇರಳದಲ್ಲಿ ಸೋಂಕು ಗಣನೀಯವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದು ರಾಜ್ಯಕ್ಕೂ ವ್ಯಾಪಿಸದಿರಲಿ ಎಂಬ ನಿಟ್ಟಿನಲ್ಲಿ ಕರ್ನಾಟಕ ಸರಕಾರವು ಗಡಿ ಜಿಲ್ಲೆಗಳಲ್ಲಿ ಹಲವು ನಿರ್ಬಂಧಗಳನ್ನು ಹೇರಿದೆ. ಕೇರಳದಿಂದ ಕರ್ನಾಟಕಕ್ಕೆ ಯಾರೇ ಬರುವುದಿದ್ದರೂ ಆರ್‌ಟಿ ಪಿಸಿಆರ್ ನೆಗೆಟಿವ್ (72 ಗಂಟೆಗಳೊಳಗೆ ನಡೆಸಲಾದ ಪರೀಕ್ಷೆ) ವರದಿ ತರುವುದನ್ನು ಕಡ್ಡಾಯಗೊಳಿಸಿದೆ.ಈ ಕುರಿತು ಕೇರಳ ವಿಧಾನಸಭೆಯಲ್ಲಿ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಪ್ರಶ್ನೆಗೆ ಉತ್ತರಿಸಿದ ಸಿಎಂ ಪಿಣರಾಯಿ, “ಯಾವುದೇ ರಾಜ್ಯವೂ ತಮ್ಮ ಗಡಿಗಳನ್ನು ಬಂದ್ ಮಾಡಿ, ಪ್ರಯಾಣ ನಿರ್ಬಂಧ ಹೇರುವಂತಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯವೇ ನಿರ್ದೇಶನ ನೀಡಿದೆ. ಆದರೆ, ಕರ್ನಾಟಕ ಸರಕಾರ ನಿರ್ಬಂಧದ ಮೂಲಕ ಈ ಮಾರ್ಗಸೂಚಿಯನ್ನು ಉಲ್ಲಂ ಸುತ್ತಿದೆ. ರಾಜ್ಯ ಡಿಜಿಪಿ ಅನಿಲ್ ಕಾಂತ್ ಅವರು ಕರ್ನಾಟಕದ ಡಿಜಿಪಿ ಜತೆಗೆ ಮಾತುಕತೆ ನಡೆಸಿದ್ದು, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಅವರು ಭರವಸೆ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ. ಕರ್ನಾಟಕದ ಆಸ್ಪತ್ರೆಗಳಿಗೆ ತೆರಳುವವರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳ ಲಾಗುತ್ತಿದೆ. ಪ್ರತೀ ದಿನ ಮಂಗಳೂರಿಗೆ ಹೋಗಿ ಬರುವಂಥವರಿಗೆ ಅನುಕೂಲವಾಗಲೆಂದು ಗಡಿಯಲ್ಲೇ ಆರ್‌ಟಿ ಪಿಸಿಆರ್ ಪರೀಕ್ಷೆ ನಡೆಸಲು ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ ಎಂದೂ ವಿಜಯನ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
Daily Horoscope: ವಧೂವರಾನ್ವೇಷಿಗಳಿಗೆ ಯಶಸ್ಸಿನ ಭರವಸೆ, ಸ್ವರ್ಣೋದ್ಯಮಿಗಳಿಗೆ ಹೇರಳ ಲಾಭ
Child Care: ಶಿಶು ಮರಣ ತಗ್ಗಿಸಲು ಮನೆಮಟ್ಟದ ಎಳೆ ಮಕ್ಕಳ ಆರೈಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.