ಆ್ಯಂಬುಲೆನ್ಸ್ ಇಲ್ಲದೆ ದಟ್ಟಡವಿಯ ಮಧ್ಯೆ ತಡರಾತ್ರಿ 8ಕಿಮೀ ಜೋಕಾಲಿಯಲ್ಲಿ ಶವ ಹೊತ್ತೊಯ್ದರು..!
ಬಸ್‍ನಿಂದ ಬಿದ್ದು ಮಹಿಳೆ ಸಾವು, ಆ್ಯಂಬುಲೆನ್ಸ್ ಸೇವೆ ದೊರಕದೆ ತಡರಾತ್ರಿ 8 ಕಿ.ಮೀ ಜೋಕಾಲಿಯಲ್ಲಿ ಶವ ಹೊತ್ತೊಯ್ದ ಸಂಬಂಧಿಕರು
Team Udayavani, Aug 6, 2021, 11:53 AM IST
ಹನೂರು : ವಾಂತಿ ಮಾಡಲು ಬಸ್ಸಿನ ಬಾಗಿಲ ಬಳಿ ನಿಂತಿದ್ದ ಮಹಿಳೆಯೋರ್ವರು ಆಯತಪ್ಪಿ ಬಿದ್ದು ಮೃತಪಟ್ಟಿರುವ ಘಟನೆ ಮಲೆ ಮಹದೇಶ್ವರಬೆಟ್ಟ ರಸ್ತೆಯ ಮಾರ್ಗಮಧ್ಯದಲ್ಲಿ ಜರುಗಿದೆ.
ತಾಲೂಕಿನ ಮಲೆ ಮಹದೇಶ್ವರಬೆಟ್ಟ ಸಮೀಪದ ಹಳೆಯೂರು ಗ್ರಾಮದ ಕುಳ್ಳಮಾದಿ(50) ಎಂಬಾಕೆ ಮೃತ ದುರ್ದೈವಿಯಾಗಿದ್ದು, ಈಕೆ ಗುರುವಾರ(ಆಗಸ್ಟ್ 5) ಸಂಜೆ ಮಲೆ ಮಹದೇಶ್ವರಬೆಟ್ಟದಿಂದ ವಡಕೆಹಳ್ಳ ಗ್ರಾಮದ ಸಂಬಂಧಿಕರ ಮನೆಯತ್ತ ಹೊರಡಲು ಕರಾರಸಾಸಂ ಬಸ್ಸು ಹತ್ತಿದ್ದರು. ಈ ವೇಳೆ ಕುಳ್ಳಮಾದಿಯವರಿಗೆ ವಾಂತಿ ಬಂದಿದ್ದು ಸ್ವಲ್ಪ ಬಸ್ಸು ನಿಲ್ಲಿಸುವಂತೆ ಚಾಲಕನನ್ನು ಕೇಳಿಕೊಂಡಿದ್ದಾಳೆ. ಈ ವೇಳೆ ಚಾಲಕ ಬಾಗಿಲ ಸಮೀಪ ನಿಂತು ಮಾಡುವಂತೆ ಸೂಚಿಸಿ ಬಸ್ಸನ್ನು ಚಲಾಯಿಸುತ್ತಿದ್ದನು. ಈ ವೇಳೆ ಬದ್ದು ಶನೇಶ್ವರ ದೇವಾಲಯದ ತಿರುವಿನ ಸಮೀಪ ಬರುತ್ತಿದ್ದಂತೆ ಕುಳ್ಳಮಾದಿ ಆಯತಪ್ಪಿ ಬಸ್ಸಿನಿಂದ ಕೆಳಗೆ ಬಿದ್ದಿದ್ದಾಳೆ.ಪರಿಣಾಮ ಕುಳ್ಳಮಾದಿ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : ಕೆಲಸ ಮಾಡುತ್ತಿದ್ದ ಅಂಗಡಿಯಿಂದಲೇ ಚಿನ್ನ ಕದ್ದು ಅಡವಿಟ್ಟ ಖದೀಮ ಈಗ ಪೊಲೀಸರ ಅತಿಥಿ
ಆನಂತರ ಮೃತದೇಹವನ್ನು ಅದೇ ವಾಹನದಲ್ಲಿ ಕೊಂಡೊಯ್ದು ಮಲೆ ಮಹದೇಶ್ವರ ಬೆಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ. ಬಳಿಕ ಆಕೆಯ ಜೊತೆಯಲ್ಲಿದ್ದ ಸಂಬಂಧಿ ಕೆಂಪಮಾದಮ್ಮ ನೀಡಿದ ದೂರಿನನ್ವಯ ಮ.ಬೆಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ದಟ್ಟಡವಿಯ ಮಧ್ಯೆ 8 ಕಿ.ಮೀ ಜೋಕಾಲಿ ಕಟ್ಟಿ ಹೆಣ ಹೊತ್ತರು:
ಆಯತಪ್ಪಿ ಬಸ್ ನಿಂದ ಬಿದ್ದು ಮೃತಪಟ್ಟ ಮಹಿಳೆಯ ಶವವನ್ನು ನಿನ್ನೆ(ಗುರುವಾರ, ಆಗಸ್ಟ್ 5) ತಡರಾತ್ರಯೇ ಮರಣೋತ್ತರ ಪರೀಕ್ಷೆ ನಡೆಸಿ ಮಹಿಳೆಯ ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಆದರೆ ಮೃತ ದೇಹವನ್ನು ಕೊಂಡೊಯ್ಯಲು 108 ಆ್ಯಂಬುಲೆನ್ಸ್ ಸೇವೆಗೆ ಕರೆ ಮಾಡಿದರೂ ಸೇವೆ ಲಭ್ಯವಾಗಿಲ್ಲ. ಇನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ಇದ್ದ ಆ್ಯಂಬುಲೆನ್ಸ್ ಬಳಸಿಕೊಳ್ಳಲು ಚಾಲಕನಿರಲಿಲ್ಲ. ಆದ್ದರಿಂದ ಮೃತ ದೇಹವನ್ನು ತಡರಾತ್ರಿಯಲ್ಲಿ 8 ಕಿ.ಮೀ ದೂರ ಜೋಕಾಲಿ ಕಟ್ಟಿ ಹೊತ್ತೊಯ್ಯಲಾಯಿತು. ಶವವನ್ನು ಜೋಕಾಲಿಯಲ್ಲಿ ಹೊತ್ತೊಯ್ಯುತ್ತಿದ್ದ ದೃಶ್ಯ ಸಮಾಜ ನಾಚುವಂತಿತ್ತು.
ಇದನ್ನು ಓದಿ : ಚುನಾವಣಾ ರಾಜಕೀಯಕ್ಕೆ ವಿದಾಯ ಘೋಷಿಸಿದ ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
VAO ಹುದ್ದೆ: ಅಂತಿಮ ಕೀ ಉತ್ತರ ಪ್ರಕಟ
ವಾಲ್ಮೀಕಿ ನಿಗಮ ಅಕ್ರಮ ತನಿಖಾ ವರದಿ ಸಲ್ಲಿಸಲು ಸಿಬಿಐಗೆ ಹೈಕೋರ್ಟ್ ಸೂಚನೆ
Violation of the Code of Conduct; ಕೋಟ, ಗುರ್ಮೆ ವಿರುದ್ಧದ ಪ್ರಕರಣ ರದ್ದು
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.