‘ಕಾಂತಾರ’ ದ ದಂತಕಥೆ ಹೇಳಲು ಹೊರಟಿದ್ದಾರೆ ರಿಷಭ್ ಶೆಟ್ಟಿ
Team Udayavani, Aug 6, 2021, 12:32 PM IST
ದಟ್ಟ ಕಾನನ, ಅಗ್ನಿ ಜ್ವಾಲೆ, ಕಂಬಳದ ಕೋಣಗಳನ್ನು ಓಡಿಸುತ್ತಿರುವ ರಿಷಭ್ ಶೆಟ್ಟಿ, ಇವೆಲ್ಲವನ್ನೂ ಆವರಿಸಿ ನಿಂತಿರುವ ದೈವದ ಕಾಲುಗಳು, ಹರಡಿರುವ ದಾಖಲೆ ಪತ್ರಗಳು, ಬೆಂಕಿ ಕೆನ್ನಾಲಿಗೆ ಮಧ್ಯೆ ಓಡುತ್ತಿರುವ ಹಂದಿಗಳು… ಇವಿಷ್ಟು ರಿಷಭ್ ಶೆಟ್ಟಿ ನಟಿಸಿ, ನಿರ್ದೇಶಿಸಲಿರುವ ಹೊಸ ಸಿನಿಮಾ ‘ಕಾಂತಾರ’ ದ ಮೊದಲ ಪೋಸ್ಟರ್ ನಲ್ಲಿ ಕಾಣಸಿಗುವ ಅಂಶಗಳು.
ನಿನ್ನೆ ಹೇಳಿದಂತೆ ಹೊಂಬಾಳೆ ಫಿಲಂಸ್ ಇಂದು ತಮ್ಮ 11ನೇ ಚಿತ್ರದ ಟೈಟಲ್ ಮತ್ತು ಪೋಸ್ಟರ್ ಬಿಡುಗಡೆ ಮಾಡಿದೆ. ‘ಕಾಂತಾರ’ ಚಿತ್ರಕ್ಕೆ ‘ಒಂದು ದಂತಕಥೆ’ ಎಂದು ಅಡಿಬರಹ ನೀಡಲಾಗಿದೆ.
ರಿಷಭ್ ಶೆಟ್ಟಿ ಚಿತ್ರದಲ್ಲಿ ಬರೆದು ನಿರ್ದೇಶನ ಮಾಡಲಿದ್ದು, ಅದರೊಂದಿಗೆ ಮುಖ್ಯಭೂಮಿಕೆಯಲ್ಲಿ ನಟಿಸಿಲಿದ್ದಾರೆ. ಹೊಂಬಾಳೆ ಫಿಲಂ ಬ್ಯಾನರ್ ನಡಿ ವಿಜಯ್ ಕಿರಗಂದೂರ್ ನಿರ್ಮಾಣ ಮಾಡಲಿದ್ದಾರೆ. ಆಗಸ್ಟ್ 27ರಿಂದ ಚಿತ್ರದ ಶೂಟಿಂಗ್ ಆರಂಭವಾಗಲಿದ್ದಾರೆ.
ಇದನ್ನೂ ಓದಿ:ಸಲಗನ ಕಲರ್ ಫುಲ್ ಹಾಡು: ಹಿಟ್ ಲಿಸ್ಟ್ ಗೆ ಪ್ರಮೋಶನಲ್ ಸಾಂಗ್
“ಬಹಳ ಸಮಯದ ನಂತರ ಹೊಸ ಕಿಚ್ಚಿನೊಂದಿಗೆ ಮತ್ತೆ ನಿರ್ದೇಶಕನಾಗಿ ಕಥೆ ಹೇಳಲು ಬರುತ್ತಿದ್ದೇನೆ. ಈ ಕಿಚ್ಚು ನಮ್ಮ ಸುತ್ತಲೂ ಸದ್ಯ ಕವಿದಿರುವ ಕರಾಳತೆಯನ್ನು ದಹಿಸುತ್ತದೆ ಎಂಬ ನಂಬಿಕೆಯೊಂದಿಗೆ” ಎಂದು ರಿಷಭ್ ಶೆಟ್ಟಿ ಬರೆದುಕೊಂಡಿದ್ದಾರೆ.
ರಿಷಬ್ ಶೆಟ್ಟಿ ನಿರ್ದೇಶನ, ನಟನೆಯಲ್ಲಿ ‘ಕಾಂತಾರ’ – ಒಂದು ದಂತಕಥೆ.
Presenting you #KANTARA directed by @shetty_rishab with him in the lead role! We are sure the poster will keep you waiting for the movie.#Hombale11@VKiragandur @hombalefilms @HombaleGroup @KantaraFilm pic.twitter.com/2khZb5P91D
— Hombale Films (@hombalefilms) August 6, 2021
ಕಾಂತಾರ ಎಂದರೆ ಕಾನನ ಎಂದರ್ಥ. ಪೋಸ್ಟರ್ ನಲ್ಲಿ ಕರಾವಳಿಯ ಜಾನಪದ ಮತ್ತು ಧಾರ್ಮಿಕ ಸಂಪ್ರದಾಯಗಳ ಕುರಿತು ಹೇಳಲಾಗಿದೆ. ವಿಭಿನ್ನ ಚಿತ್ರಗಳ ಮೂಲಕ ಇದುವರೆಗೆ ಗಮನ ಸೆಳೆದಿರುವ ರಿಷಭ್ ಶೆಟ್ಟಿ ಹೊಸ ಚಿತ್ರದ ಮೂಲಕ ಯಾವ ರೀತಿಯ ಕಮಾಲ್ ಮಾಡುತ್ತಾರೆ ಎನ್ನವುದನ್ನು ಕಾದುನೋಡಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sathish Ninasam: ಅಶೋಕನಿಗೆ ನೀನಾಸಂ ಸತೀಶ್ ಸಾಥ್
Sandalwood: ಉಪ್ಪಿ ʼಯುಐʼ ಓಟಿಟಿ ರಿಲೀಸ್ ಯಾವಾಗ?; ಚಿತ್ರತಂಡದಿಂದ ಸಿಕ್ತು ಸ್ಪಷ್ಟನೆ
Sandalwood: ಸ್ಪಾನ್ಸರ್ಸ್ ಇದಿದ್ರೆ ನಾನ್ಯಾಕೆ 12 ವರ್ಷ ಕಷ್ಟಪಡಬೇಕಿತ್ತು: ರಚಿತಾ ರಾಮ್
ಒಳ್ಳೆಯ ಸ್ಕ್ರಿಪ್ಟ್ ಗಾಗಿ ಎದುರು ನೋಡುತ್ತಿದ್ದೇನೆ – ಕಂಬ್ಯಾಕ್ ಬಗ್ಗೆ ರಮ್ಯಾ ಮಾತು
Toxic Movie: ಫ್ಯಾನ್ಸ್ ನಶೆಯೇರಿಸಿದ ಯಶ್; ಹಾಲಿವುಡ್ ರೇಂಜ್‌ನಲ್ಲಿ ಮಿಂಚಿದ ರಾಕಿಭಾಯ್.!
MUST WATCH
ಹೊಸ ಸೇರ್ಪಡೆ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.