ಆಗಸ್ಟ್ 18ಕ್ಕೆ ಹೋಂಡಾ ಅಮೇಜ್ ಫೇಸ್‌ಲಿಫ್ಟ್
ಕಂಪನಿಯನ್ನು ಹೆಚ್ಚು ಸುಸ್ಥಿರ ಮತ್ತು ಮಾಲಿನ್ಯಮುಕ್ತಗೊಳಿಸುವ ಉದ್ದೇಶದಿಂದ ಈ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ.
Team Udayavani, Aug 6, 2021, 2:29 PM IST
ನವದೆಹಲಿ: ಜನಪ್ರಿಯ ಕಾರು ಕಂಪನಿಯಾದ ಹೋಂಡಾ, ತನ್ನ ಭಾರೀ ನಿರೀಕ್ಷೆಯ ಹೋಂಡಾ ಅಮೇಜ್ ಮಾದರಿಯ ಫೇಸ್‌ಲಿಫ್ಟ್ ಆವೃತ್ತಿಯನ್ನು ಆ. 18ರಂದು ಮಾರುಕಟ್ಟೆಗೆ ತರಲಿರುವುದಾಗಿ ಪ್ರಕಟಿಸಿದೆ. ರಾಜಸ್ಥಾನದಲ್ಲಿರುವ ಟಪುಕಾರಾದಲ್ಲಿರುವ ಕಂಪನಿಯ ಕಾರು ತಯಾರಿಕಾ ಘಟಕದಲ್ಲಿ ಈ ಕಾರುಗಳನ್ನು ಉತ್ಪಾದಿಸಲಾಗುತ್ತಿದೆ.
ಇದನ್ನೂ ಓದಿ:3ನೇ ಅಲೆ ನಿಯಂತ್ರಣಕ್ಕೆ “ವಾತ್ಸಲ್ಯ’ ಯೋಜನೆಯಡಿ ಮುಂಜಾಗ್ರತೆ! ಶೇ.90 ಮಕ್ಕಳ ಆರೋಗ್ಯ ತಪಾಸಣೆ
ಹೋಂಡಾ ಅಧಿಕೃತ ಷೋರೂಂಗಳಲ್ಲಿ 21,000 ರೂ. ನೀಡಿ ಅಥವಾ ಹೋಂಡಾ ಅಧಿಕೃತ ವೆಬ್‌ಸೈಟ್‌ನಲ್ಲಿ 5,000 ರೂ. ಪಾವತಿಸಿ ಕಾರು ಬುಕ್ಕಿಂಗ್ ಮಾಡಬಹುದು.1.2 ಲೀ ಪೆಟ್ರೋಲ್ ಹಾಗೂ 1.5 ಲೀ. ಡೀಸೆಲ್ ಇಂಜಿನ್‌ಗಳಲ್ಲಿ ಅಮೇಜ್ ಫೇಸ್‌ಲಿಫ್ಟ್ ಲಭ್ಯವಿರುತ್ತದೆ.
*1.2ಲೀ.ಪೆಟ್ರೋಲ್, 1.5ಲೀ. 9 ಡೀಸೆಲ್‌ಇಂಜಿನ್‌ನಲ್ಲಿ ಲಭ್ಯ
*ಹೋಂಡಾ ಷೋರೂಂ, ಅಧಿಕೃತ ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್ ಆರಂಭ
ವಿದ್ಯುತ್ ಚಾಲಿತ ವಾಹನ: ಒಪ್ಪಂದ
ಆಹಾರ ಪೂರೈಕಾ ಸಂಸ್ಥೆ ಸ್ವಿಗ್ಗಿ ತನ್ನ ವಿದ್ಯುತ್‌ಚಾಲಿತ ಡೆಲಿವರಿ ವಾಹನ ಗಳ ಸಂಖ್ಯೆಯನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ರಿಲಯನ್ಸ್ ಬಿಪಿ ಮೊಬಿಲಿಟಿ ಲಿಮಿಟೆಡ್ (ಆರ್‌ಬಿಎಂಎಲ್) ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಕಂಪನಿಯನ್ನು ಹೆಚ್ಚು ಸುಸ್ಥಿರ ಮತ್ತು ಮಾಲಿನ್ಯಮುಕ್ತಗೊಳಿಸುವ ಉದ್ದೇಶದಿಂದ ಈ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ.
ಅದರಂತೆ, ಆರ್‌ಬಿಎಂಎಲ್ ಕಂಪನಿಯು ಸ್ವಿಗ್ಗಿಯ ಡೆಲಿವರಿ ಪಾಲುದಾರರಿಗೆ ವಿದ್ಯುತ್‌ಚಾಲಿತ ವಾಹನ ಬಳಕೆಗೆ ಅವಕಾಶ ಕಲ್ಪಿಸಲಿದೆ. ಈಗಾಗಲೇ ಈ ಕುರಿತ ಪ್ರಾಯೋಗಿಕ ಯೋಜನೆ ಆರಂಭವಾಗಿದ್ದು, ಮುಂದಿನ 4 ವರ್ಷ ಗಳಲ್ಲಿ ಪ್ರತಿ ದಿನ 8 ಲಕ್ಷ ಕಿ.ಮೀ.ಗಳ ಡೆಲಿವರಿಯನ್ನು ವಿದ್ಯುತ್‌ಚಾಲಿತ ವಾಹನಗಳ ಮೂಲಕವೇ ನಡೆಸುವ ಗುರಿಯನ್ನು ಸ್ವಿಗ್ಗಿ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru Tech Summit: ರೋಗಿ ಕಣ್ಣು ಮಿಟುಕಿಸಿದರೆ ಮೊಬೈಲ್‌ಗೆ ಮೆಸೇಜ್!
Bengaluru Tech Summit: ನಾಯಿ, ಬೆಕ್ಕುಗಳಿಗೂ ಬಂತು ಕೃತಕ ಬುದ್ಧಿಮತ್ತೆ ಚಾಟ್‌ಬಾಟ್
Dubai ಬಾನೆತ್ತರದಲ್ಲಿ ಹಾರಾಟಕ್ಕೆ ಸಿದ್ದವಾಗುತ್ತಿದೆ…Drone ಏರ್‌ಟ್ಯಾಕ್ಸಿ-ಏನಿದರ ವಿಶೇಷ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
New Maruti Dzire:ದಿ ಡ್ಯಾಜ್ಲಿಂಗ್-ನ್ಯೂ ಸ್ವಿಫ್ಟ್ ಡಿಸೈರ್ ಕಾರು ಮಾರುಕಟ್ಟೆಗೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.