ವರ್ಕ್‌ ಫ್ರಮ್ ಹೋಮ್‌ ಒತ್ತಡ ನಿವಾರಿಸುವ ತನುಮನಕ್ಕೆ ಮಾರಕವಾಗದಿರಲಿ

ಇಲ್ಲಿ ಮುಂದೆ ಬಾಗುವಂತ/ ಪಕ್ಕಕ್ಕೆ ತಿರುಗುವಂತ ಸರಳ ಆಸನಗಳೂ ಸಾಧ್ಯ

Team Udayavani, Aug 6, 2021, 4:18 PM IST

ವರ್ಕ್‌ ಫ್ರಮ್ ಹೋಮ್‌ ಒತ್ತಡ ನಿವಾರಿಸುವ ತನುಮನಕ್ಕೆ ಮಾರಕವಾಗದಿರಲಿ

ವಿಶ್ವವನ್ನು ತನ್ನ ಕಪಿಮುಷ್ಟಿಯಲ್ಲಿ ಇನ್ನಷ್ಟು ಬಿಗಿಗೊಳಿಸುತ್ತಾ ಬಂದ ಮಾನವನಿಗೆ ಮುಷ್ಟಿ ಸಡಿಲಿಸಲು ಗುದ್ದು ನೀಡಿದ್ದೇ ಕೊರೊನಾ. ಪರಿಣಾಮ ನೋಡಿ, ಚಂದ್ರನಂಗಳಕ್ಕೆ ಜಿಗಿದು ನೆಗೆದಿದ್ದ ಮನುಷ್ಯ ಇಂದು ಅವನ ಮನೆಯಂಗಳಕ್ಕೆ ಇಳಿಯಲು ಮೂರು ಮೂರು ಬಾರಿ ಯೋಚಿಸುವಂತಾಗಿದೆ. ಒಂದು ಬಾರಿ ಎಲ್ಲವೂ ಅಯೋಮ ಯವಾದರೂ ಕತ್ತಲಿನ ಹಿಂದೆ ಬೆಳಕಿರುವಂತೆ ಅದೆಷ್ಟೋ ಹೊಸ ಹೊಸ ಸಾಧ್ಯತೆಗಳು ಮರುಹುಟ್ಟು ಪಡೆಯಲೂ ಈ ಕೊರೊನಾವೇ ಕಾರಣ.

ಅವುಗಳಲ್ಲೊಂದು ಮನೆಯಿಂದಲೇ ಕೆಲಸ ಅರ್ಥಾತ್‌ ವರ್ಕ್‌ ಫ್ರಂ ಹೋಂ. ಮನೆಯಿಂದ ಆಫೀಸ್‌ ಕೆಲಸ ಮಾಡುವುದೇನೋ ಸರಿ. ಆದರೆ ಮಧ್ಯಾಹ್ನದ ಹನ್ನೆರಡಕ್ಕೂ ರಾತ್ರಿಯ ಹನ್ನೆರಡಕ್ಕೂ ವ್ಯತ್ಯಾಸವೇ ತಿಳಿಯ ದಂತಾಗಿದೆ. ಜತೆಗೆ ಉಂಡದ್ದೇ ಊಟ, ಮಲಗಿದ್ದೇ ನಿದ್ದೆ ಎನ್ನುವಂತಾಗಿದೆ. ಹೀಗಾ ಗಿ ದೈಹಿಕ ಚಟುವಟಿಕೆ ಅಂತೂ ಸಂಪೂರ್ಣ ಶೂನ್ಯ. ಪರಿಣಾಮ ದೇಹದ ಸಕ್ಕರೆಯ ಅಂಶ, ರಕ್ತದೊತ್ತಡದ ಸಂಪೂರ್ಣ ಏರುಪೇರು, ಶರೀರದಲ್ಲಿ ಕೊಲೆಸ್ಟ್ರಾಲ್‌
ಶೇಖರಣೆ. ಇನ್ನು ನಿದ್ರೆಯ ಸಮಯದ ಬದಲಾವಣೆಯೂ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಶರೀರದ ಜೈವಿಕ ಗಡಿಯಾರದಲ್ಲಾಗುವ ವ್ಯತ್ಯಾಸ ರೋಗನಿರೋಧಕ ಶಕ್ತಿಯು ಕಡಿಮೆಯಾಗಲೂ ಮೂಲ ಕಾರಣ ವಾಗಬಹುದು.

ಆರೋಗ್ಯವರ್ಧಕ ಅಭ್ಯಾಸ ಹೀಗಿರಲಿ
ಬೆಳಗಿನ ವಾಕಿಂಗ್‌: ಮನೆಯೊಳಗೇ ಅತ್ತಿಂದಿತ್ತ ನಡೆದಾಡುತ್ತಾ ವಾಕಿಂಗ್‌ ಮಾಡುವುದು ಶರೀರವನ್ನು ಜಾಗೃತ ಗೊಳಿಸುವುದಕ್ಕೆ ಸಹಾಯಕಾರಿ. ಬೆಳಗಿನ ಸಮಯ ಹಲ್ಲುಜ್ಜುತ್ತಾ ನಡೆದಾಡು ವುದರಿಂದ ಸಮಯದ ಸದುಪ ಯೋಗವೂ ಆಗುತ್ತದೆ.

ಸೂರ್ಯನಮಸ್ಕಾರ: ಇದಂತೂ ಪೂರ್ತಿ ಶರೀರಕ್ಕೊಂದು ಸಂಪೂರ್ಣ ವ್ಯಾಯಾಮವೆಂದೇ ಹೇಳಬಹುದು. ಹಿಂದೆ ಬಾಗುವುದು, ಮುಂದೆ ಬಾಗುವುದರ ಜತೆಗೆ ಕಾಲುಗಳನ್ನೂ ಸ್ಟ್ರೆಚ್‌ ಮಾಡುವುದರಿಂದ ಸೊಂಟ, ಕಾಲುಗಳಲ್ಲಿ ರಕ್ತದ ಚಲನೆ ಸರಾಗವಾಗುವುದು. ಇದರಿಂದ ಸೊಂಟ ನೋವು, ಕುತ್ತಿಗೆಯ ಬಿಗಿತ, ಭುಜದ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು. ಸೂರ್ಯ ನಮಸ್ಕಾರವು ಶರೀರದಲ್ಲಿ ಶೇಖರಣೆ ಗೊಂಡಿರುವ ಕೊಲೆಸ್ಟ್ರಾಲ್‌, ಸಕ್ಕರೆಯ
ಅಂಶ ಕರಗಿಸಲೂ ಸಹಾಯಕಾರಿ.

ಕುರ್ಚಿಯಲ್ಲಿ ಅಭ್ಯಾಸ: ಹಲವಾರು ಸರಳ ವ್ಯಾಯಾಮಗಳನ್ನು ಕುರ್ಚಿಯಲ್ಲಿ ಕುಳಿತುಕೊಂಡು ಕೆಲಸದ ನಡು ನಡುವೆ ಮಾಡಬಹುದು. ಉದಾ: ಕುತ್ತಿಗೆಯ ಚಲನೆ, ಕೈ ಬೆರಳುಗಳಲ್ಲಿ ಮುಷ್ಟಿ ಬಿಗಿಹಿಡಿದು ಸಡಿಲಗೊಳಿಸುವುದು, ಮಣಿಕಟ್ಟು- ಮೊಣಕೈಯ ಚಲನೆ ಇತ್ಯಾದಿ. ಇದರಿಂದ ಒಂದೇ ಸಮನೆ ಕೀಲಿಮಣೆ ಒತ್ತೋ ಕೈ- ಬೆರಳುಗಳಿಗೆ ಒಂದು ವಿಶ್ರಾಂತಿಯೂ ಸಿಕ್ಕಂತಾಗುತ್ತದೆ. ಇಲ್ಲಿ ಮುಂದೆ ಬಾಗುವಂತ/ ಪಕ್ಕಕ್ಕೆ ತಿರುಗುವಂತ ಸರಳ ಆಸನಗಳೂ ಸಾಧ್ಯ.

ಅಷ್ಟೇಕೆ ಕುರ್ಚಿಯಲ್ಲಿ ಕುಳಿತುಕೊಂಡು ಸೂರ್ಯನಮಸ್ಕಾರ ಮಾಡಲೂ ಸಾಧ್ಯವಿದೆ. ಪುರುಸೊತ್ತಿದ್ದಾಗ ಯೂಟ್ಯೂಬ್‌ನಲ್ಲೊಮ್ಮೆ ಜಾಲಾಡಿ.

ಪ್ರಾಣಾಯಾಮ: ಕೆಲವೊಂದು ಸರಳ ಪ್ರಾಣಾಯಾಮದ ಅಭ್ಯಾಸ ಮನಸ್ಸನ್ನು ಸಮಸ್ಥಿತಿಯಲ್ಲಿಡುವುದರ ಜತೆಗೆ ಶ್ವಾಸಕೋಶದ ಕಾರ್ಯಕ್ಷಮತೆ ಹೆಚ್ಚಿಸಲೂ ಅಷ್ಟೇ ಅವಶ್ಯ. ಕುಳಿತಲ್ಲೇ ಕುಳಿತು ಕೆಲಸ ಮಾಡುವುದರಿಂದ ಅಜೀರ್ಣ ಹಾಗೂ ವಾಯುವಿನ ಸಮಸ್ಯೆ ಬಲು ಬೇಗನೆ ಕಾಣಿಸಿಕೊಳ್ಳುತ್ತದೆ. ಇದಕ್ಕೆ ನಾಲಗೆಯ ಮೂಲಕ ಉಸಿರಾಡೋ ಶೀತಲೀ ಪ್ರಾಣಾಯಾಮ ಅತ್ಯಂತ ಸೂಕ್ತ.

ಜತೆಗೆ ಮಾನಸಿಕ ಒತ್ತಡ ನಿರ್ವಹಣೆಗೆ ಮೂಗಿನ ಹೊಳ್ಳೆಗಳಲ್ಲಿ ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ಉಸಿರಾಡುವ ನಾಡೀಶುದ್ಧಿ ಉತ್ತಮ. ಏನೋ ಒಂದು ಜಟಿಲ ಸಮಸ್ಯೆ, ಕೋಡಿಂಗ್‌ ಏನೋ ಹೊಳೆಯುತ್ತಿಲ್ಲ ಎಂದಾದಲ್ಲಿ ತತ್‌ಕ್ಷಣವೇ ಐದು ನಿಮಿಷ ಈ ಅಭ್ಯಾಸ ಮಾಡಿ. ಮನಸ್ಸು ಚುರುಕಾಗುವು ದು. ಜತೆಗೆ ಮನಸ್ಸನ್ನು ಆಲೋಚನಾರಹಿತ ಸ್ಥಿತಿಗೆ ಕೊಂಡೊ ಯ್ಯುವ ಭ್ರಾಮರೀ ಪ್ರಾಣಾಯಾಮ ಮನಸ್ಸಿನ ಸಮಸ್ಥಿತಿ ಕಾಪಾಡಿಕೊಳ್ಳಲು ಅತ್ಯಂತ ಪರಿಣಾಮಕಾರಿ.

ನಡೆಯುತ್ತ ಮಾತನಾಡುವುದು: ಕೆಲವೊಂದು ಮೀಟಿಂಗ್‌ಗಳನ್ನು ಕುಳಿತಲ್ಲೇ ಕೇಳುವ ಬದಲು ಆಚೀಚೆ ನಡೆದಾಡುತ್ತಾ ಇರಬಹುದು.

ಟಾಪ್ ನ್ಯೂಸ್

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-health

ಆರೋಗ್ಯದಲ್ಲಿ ಕ್ರಾಂತಿ; ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರದಲ್ಲಿ ಲ್ಯಾಪರೊಸ್ಕೋಪಿಯ ಮಹತ್ವ

4-

Fasting: ಉಪವಾಸ: ಹೃದಯ ಸಂಬಂಧಿ ಕಾಯಿಲೆ ಮತ್ತು ಮಧುಮೇಹ ಆರೈಕೆ

2-heath

Health: ವಯೋವೃದ್ಧರ ಆರೈಕೆ : ಮುಪ್ಪಿನಲ್ಲಿ ಜೀವನಾಧಾರ

17-tooth-infection

Tooth Infection: ಹಲ್ಲಿನ ಸೋಂಕು-ಸಂಧಿ ನೋವಿಗೆ ಕಾರಣವಾದೀತೇ?

16-

Methylmalonic acidemia: ಮಿಥೈಲ್‌ಮೆಲೋನಿಕ್‌ ಆ್ಯಸಿಡೆಮಿಯಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.