![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Aug 6, 2021, 6:10 PM IST
ಶಿಗ್ಗಾವಿ: ಶಿಥಿಲಾವಸ್ಥೆಯಲ್ಲಿದ್ದ ಮನೆ ಗೋಡೆ ಮೈಮೇಲೆ ಬಿದ್ದರೂ ವೃದ್ಧೆಯೊಬ್ಬರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮುಗಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ 86 ವರ್ಷದ ನಾಗಮ್ಮ ಹಳ್ಯಾಳ ಬುಧವಾರ ರಾತ್ರಿ ಅಡುಗೆ ಮನೆಯಲ್ಲಿ ಮಲಗಿದ್ದರು. ಈ ವೇಳೆ ಜೋರಾದ ಗಾಳಿ, ಮಳೆಗೆ ಗೋಡೆ ಕುಸಿದು ಮೈಮೇಲೆ ಬಿದ್ದಿದೆ. ಪರಿಣಾಮವಾಗಿ ಮುಖ ಹಾಗೂ ಕೈಕಾಲುಗಳಿಗೆ ಗಾಯಗಳಾಗಿದೆ. ಆಶಾ ಕಾರ್ಯಕರ್ತೆಯಾಗಿರುವ ಮಗಳು ಕೂಡಲೇ ವೃದ್ಧೆಗೆ ಪ್ರಥಮ ಚಿಕಿತ್ಸೆ ನೀಡಿ ಉಪಚರಿಸಿದ್ದಾರೆ.
ಐವತ್ತು ವರ್ಷಕ್ಕಿಂತ ಹಳೆಯ ಮನೆ ಇತ್ತೀಚೆಗೆ ಸುರಿದ ಸತತ ಮಳೆಗೆ ಕುಸಿಯತೊಡಗಿದೆ. ಯಾವುದೇ ಸಂದರ್ಭದಲ್ಲಿ ನೆಲಕಚ್ಚುವ ಮನೆಯಲ್ಲಿ ಉಸಿರು ಬಿಗಿ ಹಿಡಿದು ವಾಸಿಸುತ್ತಿದ್ದೇನೆ. ಒಬ್ಬ ಮಗ ಬೇರೆ ಊರಿನಲ್ಲಿದ್ದಾನೆ. ನಾಲ್ವರು ಹೆಣ್ಣು ಮಕ್ಕಳ ಪೈಕಿ ಕೊನೆಯವಳು ನನ್ನ ಆಸರೆಗಿದ್ದಾಳೆ. ಆದರೆ ಇದೇ ಮನೆಯಲ್ಲಿ ನನ್ನ ಕೊನೆಯುಸಿರು ಇದ್ದರೆ ಅದು ನನ್ನ ಹಣೆಬರಹ ಎಂದು ವೃದ್ಧೆ ನಾಗಮ್ಮ ತನ್ನ ಅಸಹಾಯಕತೆ ವ್ಯಕ್ತಪಡಿಸಿದಳು. ವಿಷಯ ತಿಳಿದ ಗ್ರಾಪಂ ಸದಸ್ಯರು ವೃದ್ಧೆಯ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ್ದಾರೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.