ಮನುಕುಲಕ್ಕೆ ವೀರಶೈವ ಧರ್ಮ ಮಾರ್ಗದರ್ಶನ
4 ಕೋ. ರೂ. ವೆಚ್ಚದಲ್ಲಿ ವಿದ್ಯಾರ್ಥಿನಿಯರಿಗೆ ಉಚಿತ ಪ್ರಸಾದ ವಸತಿ ನಿಲಯ ನಿರ್ಮಿಸಲಾಗುತ್ತಿದೆ.
Team Udayavani, Aug 6, 2021, 6:20 PM IST
ಯಾದಗಿರಿ: ಸಮಸ್ತ ಮಾನವ ಕುಲಕ್ಕೆ ಮಾರ್ಗದರ್ಶನ ನೀಡಿದ್ದು ವೀರಶೈವ ಧರ್ಮವಾಗಿದ್ದು, ಎಲ್ಲರಿಗೂ ಲೇಸನ್ನೆ ಬಯಸುವುದಾಗಿದೆ. ಇಂತಹ ಪರಂಪರೆ ಮುಂದುವರಿಸಿಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಮಹಾ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ನಗರದಲ್ಲಿ ಅಖೀಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವೀರಶೈವ ಮಹಾಸಭಾ ಈಗಾಗಲೇ ಹಲವಾರು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಲಬುರಗಿಯಲ್ಲಿ 4 ಕೋ. ರೂ. ವೆಚ್ಚದಲ್ಲಿ ವಿದ್ಯಾರ್ಥಿನಿಯರಿಗೆ ಉಚಿತ ಪ್ರಸಾದ ವಸತಿ ನಿಲಯ ನಿರ್ಮಿಸಲಾಗುತ್ತಿದೆ. ಇನ್ನಾರು ತಿಂಗಳಲ್ಲಿ ಸಮಾಜಕ್ಕೆ ಅರ್ಪಣೆ ಮಾಡಲಾಗುತ್ತದೆ ಎಂದು ಪ್ರಕಟಿಸಿದರು.
ವೀರಶೈವ ಮಹಾಸಭಾ ಕಲಬುರಗಿ ಜಿಲ್ಲಾಧ್ಯಕ್ಷ ಶರಣು ಮೋದಿ ಮಾತನಾಡಿ, ಮಹಾಸಭಾ ನೆರವಿನಿಂದ ಅನೇಕ ಕಾರ್ಯಕ್ರಮಗಳು ಕಲ್ಬುರ್ಗಿಯಲ್ಲಿ ಹಮ್ಮಿಕೊಳ್ಳಲಾಗುತ್ತಿದೆ. ಯಾದಗಿರಿ ಜಿಲ್ಲೆಯಲ್ಲಿಯೂ ಇಂತಹ ಕಾರ್ಯಕ್ರಮ ಹಮ್ಮಿಕೊಂಡಲ್ಲಿ ಸಮುದಾಯದ ನೆರವು ದೊರೆಯಲಿದೆ ಎಂದು ಪ್ರಕಟಿಸಿದರು.
ಅಧ್ಯಕ್ಷತೆ ವಹಿಸಿದ್ದ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಸೋಮಶೇಖರ ಮಣ್ಣೂರು ಮಾತನಾಡಿದರು. ಗುರುಮಠಕಲ್ ಖಾಸಾಮಠದ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವೀರಶೈವ ಸಮಾಜದ ಮುಖಂಡ ಚನ್ನಾರೆಡ್ಡಿ ತುನ್ನೂರು, ಡಾ| ಎಸ್.ಬಿ. ಕಾಮರೆಡ್ಡಿ, ಚೆನ್ನಪ್ಪಗೌಡ ಮೋಸಂಬಿ, ಶಿವರಾಜ ದೇಶಮುಖ ಶಹಾಪುರ, ಅವಿನಾಶ ಸಿನ್ನೂರು, ಮಹೇಶ ಆನೆಗುಂದಿ, ಮಲ್ಹಾರ ಶರಣಪ್ಪಗೌಡ, ತಾಲೂಕು ಅಧ್ಯಕ್ಷ ಆರ್. ಮಹಾದೇವಪ್ಪ ಅಬ್ಬೆತುಮಕೂರು, ಯುವ ಘಟಕದ ಜಿಲ್ಲಾಧ್ಯಕ್ಷ ಅವಿನಾಶ ಜಗನ್ನಾಥ, ಶಂಬಣ್ಣ ಗೋಗಿ, ಪ್ರಕಾಶ ಅಂಗಡಿ ಕನ್ನೆಳ್ಳಿ, ಮಂಜುನಾಥ ಜಾಲಹಳ್ಳಿ, ಶಿವರಾಜ ಕಲಕೇರಿ, ವಿಶಾಲ ಮುತ್ತಿಗಿ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.