ನೀರಜ್ ಛೋಪ್ರಾಗೆ ಜಾವೆಲಿನ್‌ನಲ್ಲಿ ಚಿನ್ನ: ಅಭಯಚಂದ್ರ ಶ್ಲಾಘನೆ
Team Udayavani, Aug 7, 2021, 9:38 PM IST
ಮೂಡುಬಿದಿರೆ: ಟೋಕಿಯೋ ಒಲಿಂಪಿಕ್ಸ್ ನಲ್ಲಿ ಜಾವೆಲಿನ್ ತ್ರೋದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಶತಮಾನದ ಬಳಿಕ ಭಾರತಕ್ಕೆ ಒಲಿಂಪಿಕ್ಸ್ ಅಥ್ಲೆಟಿಕ್ಸ್ ನಲ್ಲಿ ಚಿನ್ನ ಗೆದ್ದು ಕೊಟ್ಟಿರುವ ನೀರಜ್ ಛೋಪ್ರಾ ಅವರ ಸಾಧನೆಗೆ ಕರ್ನಾಟಕದ ಮಾಜಿ ಕ್ರೀಡಾಸಚಿವ ಕೆ. ಅಭಯಚಂದ್ರ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ತಾನು ಕ್ರೀಡಾಸಚಿವನಾಗಿದ್ದಾಗ ಮೂಡುಬಿದಿರೆ ಕ್ರೀಡಾಂಗಣದಲ್ಲಿ ಒಲಿಂಪಿಕ್ಸ್‌ಗಾಗಿ ಜಾವೆಲಿನ್ ಅಭ್ಯಾಸ ಮಾಡುತ್ತಿದ್ದ ಓರ್ವ ಕ್ರೀಡಾಳುವಿಗೆ ವಿದೇಶದಿಂದ ಪಾಲಿಮರ್ ಜಾವೆಲಿನ್ ತರಿಸಿಕೊಟ್ಟಿದ್ದು ಬಳಿಕ ಮೂವರಿಗೆ ಅಂಥದ್ದೇ ಜಾವೆಲಿನ್ ಒದಗಿಸಿಕೊಟ್ಟಿದ್ದೆ. ಆಗ ನಿರೀಕ್ಷಿತ ಫಲಿತಾಂಶ ಸಿಗದಿದ್ದರೂ ಇದೀಗ ಭಾರತ ಇದೇ ವಿಭಾಗದಲ್ಲಿ ಚಿನ್ನ ಗೆದ್ದಿರುವುದು ತನಗೆ ಹರ್ಷ ತಂದಿದೆ.
ಇದನ್ನೂ ಓದಿ:ನೀರಜ್ ಚೋಪ್ರಾ ‘ಚಿನ್ನ’ದ ಸಾಧನೆಗೆ ಅಪ್ಪಟ ಕನ್ನಡಿಗನ ಕೊಡುಗೆ ಕೂಡ ಇದೆ
ಇಂಥ ಸಾಧನೆಯ ಹಿಂದೆ ಮೂಡುಬಿದಿರೆಯಂಥ ಪುಟ್ಟ ಊರಲ್ಲೂ ನಡೆದ, ನಡೆಯುತ್ತಿರುವ ಪ್ರಯತ್ನ ಉಲ್ಲೇಖನೀಯ. ಈ ಬಗೆಯ ಪ್ರಯತ್ನಗಳಿಂದಾಗಿ ಮುಂದೆಯೂ ಭಾರತ ಹೆಚ್ಚಿನ ಸಂಖ್ಯೆಯಲ್ಲಿ ಪದಕಗಳನ್ನು ಗೆಲ್ಲಲಿದೆ ಎಂಬ ಆಶಾವಾದ ತನಗಿದೆ’ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
EV: ಇವಿ ಬಳಕೆಗೆ ಉತ್ತೇಜನ: ದೇಶದಲ್ಲೇ ನಂಬರ್ 1 ಸ್ಥಾನ ಪಡೆದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.