ಟ್ರಕ್ ಚಾಲಕರಿಗೆ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಚಾನು ವಿಶೇಷ ಉಡುಗೊರೆ | ಯಾಕೆ ಗೊತ್ತಾ ?

Team Udayavani, Aug 8, 2021, 2:53 PM IST

trtre

ಗುವಾಹಟಿ: ತಮ್ಮ ಕಷ್ಟಕಾಲದಲ್ಲಿ ನೆರವಾದ ಟ್ರಕ್ ಡ್ರೈವರ್ ಗಳಿಗೆ ಒಲಿಂಪಿಕ್ ಬೆಳ್ಳಿ ಪದಕದ ವಿಜಯಶಾಲಿ ಮೀರಾಬಾಯಿ ಚಾನು ಅವರು ವಿಶೇಷವಾಗಿ ಕೃತಜ್ಞತೆ ಸಲ್ಲಿಸಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ವೇಟ್ ಲಿಫ್ಟರ್ ಮೀರಾಬಾಯಿ ಚಾನು ತಾನು ಅಭ್ಯಾಸ ನಡೆಸಲು ನೆರವು ನೀಡಿದ ಟ್ರಕ್ ಡ್ರೈವರ್‌ಗಳಿಗೆ ಮನೆಗೆ ಕರೆದು ಅವಿಗೆ ವಿಶೇಷವಾದ ಉಡುಗೊರೆಗಳನ್ನು ನೀಡಿ ಗೌರವಿಸಿದ್ದಾರೆ.

ಜಪಾನ್‌ನ ಟೋಕಿಯೋದಲ್ಲಿ ನಡೆಯುತ್ತಿರುವ 32ನೇ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಚಾನು ಬೆಳ್ಳಿ ಪದಕ ಜಯಿಸಿದ್ದರು. ತನ್ನ ಈ ಸಾಧನೆಗೆ ನೆರವಾದ ಎಲ್ಲರಿಗೂ ಧನ್ಯವಾದ ಹೇಳಿರುವ ಅವರು, ತಾವು ನಿತ್ಯ ಪ್ರ್ಯಾಕ್ಟಿಸ್ ಗೆ ತೆರಳುತ್ತಿದ್ದ ವೇಳೆ ಉಚಿತವಾಗಿ ಡ್ರಾಪ್ ನೀಡುತ್ತಿದ್ದ ಟ್ರಕ್ ಡ್ರೈವರ್ ಗಳಿಗೆ ಗಿಫ್ಟ್ ನೀಡಿದ್ದಾರೆ.

ಮಣಿಪುರದ ರಾಜಧಾನಿ ಇಂಪಾಲ್‌ನ ಪೂರ್ವ ಭಾಗದ ನಾನ್‌ಪೋಕ್ ಕಾಕ್ಚಿಂಗ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿದ ಮೀರಾಬಾಯಿ ಅಭ್ಯಾಸಕ್ಕೆ ಹೋಗಬೇಕಿದ್ದರೆ ಕ್ರೀಡಾಕೇಂದ್ರ ಹತ್ತಿರದಲ್ಲಿರಲಿಲ್ಲ. ಇಂಪಾಲದಲ್ಲಿನ ಕ್ರೀಡಾಕೇಂದ್ರಕ್ಕೆ ಹೋಗಬೇಕಾದರೆ ಚಾನು 25 ಕಿಮೀ ಕ್ರಮಿಸಬೇಕಿತ್ತು, ಸಾರ್ವಜನಿಕ ವಾಹನ ಬಳಸಬೇಕಿತ್ತು. ಮಧ್ಯಮ ಆರ್ಥಿಕ ಕುಟುಂಬದಲ್ಲಿ ಹುಟ್ಟಿದ ಚಾನುಗೆ ಖಾಸಗಿ ವಾಹನದಲ್ಲಿ ದಿನಾಲು ಕ್ರೀಡಾಕೇಂದ್ರಕ್ಕೆ ಹೋಗಿಬರಲು ಆಗುತ್ತಿರಲಿಲ್ಲ. ಆ ಆಯ್ಕೆಯೇ ಚಾನುಗೆ ಇರಲಿಲ್ಲ. ಹೀಗಾಗಿ ಇಂಪಾಲಕ್ಕೆ ಮರಳು ಸಾಗಿಸುತ್ತಿದ್ದ ಟ್ರಕ್, ಲಾರಿಗಳಲ್ಲಿ ಚಾನು ಅಭ್ಯಾಸಕ್ಕೆ ಹೋಗಿಬರುತ್ತಿದ್ದರು. ಟ್ರಕ್ ಡ್ರೈವರ್‌ಗಳೂ ಕೂಡ ಚಾನು ಅಭ್ಯಾಸಕ್ಕೆ ಹೋಗಿ ಬರಲು ಉಚಿತ ಲಿಫ್ಟ್ ನೀಡುತ್ತಿದ್ದರು. ಹೀಗಾಗಿ ಚಾನು ಅವರ ಸಹಾಯ ಮರೆತಿಲ್ಲ.

ತಾನು ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆಲ್ಲಲು ಸಹಾಯ ನೀಡಿದ ಸುಮಾರು 150 ಟ್ರಕ್ ಡ್ರೈವರ್‌ಗಳನ್ನು ಕರೆಸಿ ಚಾನು ಉಪಚರಿಸಿದ್ದಾರೆ, ಗೌರವಿಸಿದ್ದಾರೆ. ಆ ಎಲ್ಲಾ ಟ್ರಕ್ ಚಾಲಕರಿಗೂ ಒಂದು ಅಂಗಿ, ಒಂದು ಮಣಿಪುರದ ಸ್ಕಾರ್ಫ್ ಮತ್ತು ಒಂದು ಹೊತ್ತಿನ ಭೂರಿಭೋಜನ ನೀಡಿದ್ದಾರೆ. ತನ್ನ ಸಾಧನೆಗೆ ನೆರವಾದ ಟ್ರೈವರ್‌ಗಳಿಗೆ ಚಾನು ಭಾವುಕರಾಗಿ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಟಾಪ್ ನ್ಯೂಸ್

Stock Market: ಮುಂದುವರಿದ ಷೇರುಪೇಟೆ ನಾಗಾಲೋಟ-80,000 ಅಂಕ ದಾಟಿದ ಸೆನ್ಸೆಕ್ಸ್

Stock Market: BSE@80,130.53- ಮುಂದುವರಿದ ಷೇರುಪೇಟೆ ನಾಗಾಲೋಟ…

thief

Sorry… ತಿಂಗಳೊಳಗೆ ಕದ್ದ ವಸ್ತು ಹಿಂತಿರುಗಿಸುವೆ, ಪತ್ರ ಬರೆದು ಮನೆಗೆ ಕನ್ನ ಹಾಕಿದ ಕಳ್ಳ

10-honanvar

ಗುಡ್ಡ ಕುಸಿತ: ಹೊನ್ನಾವರದಿಂದ ಗೇರುಸೊಪ್ಪ, ಸಾಗರ, ಶಿವಮೊಗ್ಗ ಮಾರ್ಗದ ಸಂಚಾರ ಸ್ಥಗಿತ

9-Bantwala

Bantwala: ರಾಮಲಕಟ್ಟೆ: ಡಿವೈಡರ್ ಗೆ ಢಿಕ್ಕಿಯಾದ ಖಾಸಗಿ ಬಸ್

Sandalwood: Sandalwood: ʼಭೈರವನ ಕೊನೆ ಪಾಠʼ ಕೇಳೋಕೆ ರೆಡಿಯಾಗಿ ಎಂದ ಹೇಮಂತ್‌ – ಶಿವಣ್ಣ

Sandalwood: ʼಭೈರವನ ಕೊನೆ ಪಾಠʼ ಕೇಳೋಕೆ ರೆಡಿಯಾಗಿ ಎಂದ ಹೇಮಂತ್‌ – ಶಿವಣ್ಣ

Team India; ತಾಯ್ನಾಡಿಗೆ ಕಾಲಿಟ್ಟ ಖುಷಿಯಲ್ಲಿ ಕುಣಿದಾಡಿದ ನಾಯಕ ರೋಹಿತ್ ಶರ್ಮಾ

Team India; ತಾಯ್ನಾಡಿಗೆ ಕಾಲಿಟ್ಟ ಖುಷಿಯಲ್ಲಿ ಕುಣಿದಾಡಿದ ನಾಯಕ ರೋಹಿತ್ ಶರ್ಮಾ

8-udupi

Udupi ಜಿಲ್ಲೆಯಲ್ಲಿ ಗಾಳಿ-ಮಳೆ ಹಾನಿ:ಮಾಹಿತಿ ಪಡೆದು,ಕ್ರಮಕ್ಕೆ ಸೂಚಿಸಿದ ಸಚಿವೆ ಹೆಬ್ಬಾಳ್ಕರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

thief

Sorry… ತಿಂಗಳೊಳಗೆ ಕದ್ದ ವಸ್ತು ಹಿಂತಿರುಗಿಸುವೆ, ಪತ್ರ ಬರೆದು ಮನೆಗೆ ಕನ್ನ ಹಾಕಿದ ಕಳ್ಳ

Ayodhya Ram Mandir: ಅಯೋಧ್ಯೆ ಅರ್ಚಕರಿಗೆ ವಸ್ತ್ರ ಸಂಹಿತೆ, ಮೊಬೈಲ್‌ ಬಳಕೆಗೂ ನಿಷೇಧ

Ayodhya Ram Mandir: ಅಯೋಧ್ಯೆ ಅರ್ಚಕರಿಗೆ ವಸ್ತ್ರ ಸಂಹಿತೆ, ಮೊಬೈಲ್‌ ಬಳಕೆಗೂ ನಿಷೇಧ

Mass Wedding: ರಿಲಯನ್ಸ್‌ನಿಂದ 50 ಜೋಡಿಗೆ ವಿವಾಹಭಾಗ್ಯ: ತಲಾ 1ಲಕ್ಷ ಸ್ತ್ರೀ ಧನ

Mass Wedding: ರಿಲಯನ್ಸ್‌ನಿಂದ 50 ಜೋಡಿಗೆ ವಿವಾಹಭಾಗ್ಯ: ತಲಾ 1ಲಕ್ಷ ಸ್ತ್ರೀ ಧನ

Rahul ನಾಯಕತ್ವದಲ್ಲಿ 10 ವರ್ಷ ಬಳಿಕ ಸಂಸತ್ತಿಗೆ ಜೀವಕಳೆ: ಉದ್ಧವ್‌ ಪಕ್ಷ

Rahul ನಾಯಕತ್ವದಲ್ಲಿ 10 ವರ್ಷ ಬಳಿಕ ಸಂಸತ್ತಿಗೆ ಜೀವಕಳೆ: ಉದ್ಧವ್‌ ಪಕ್ಷ

yogi

Hathras Stampede:  ಹಾಥರಸ್‌ ಕಾಲ್ತುಳಿತ ನ್ಯಾಯಾಂಗ ತನಿಖೆಗೆ: ಯೋಗಿ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Crime: ಕುಡಿದಿದ್ದಕ್ಕೆ ಕಾಲೇಜಿಗೆ ಬಿಡಲ್ಲ ಎಂದ ಸೆಕ್ಯುರಿಟಿಯನ್ನು ಕೊಂದ ವಿದ್ಯಾರ್ಥಿ!

Crime: ಕುಡಿದಿದ್ದಕ್ಕೆ ಕಾಲೇಜಿಗೆ ಬಿಡಲ್ಲ ಎಂದ ಸೆಕ್ಯುರಿಟಿಯನ್ನು ಕೊಂದ ವಿದ್ಯಾರ್ಥಿ!

Love Matter: ಕೈಗೆ ಹಗ್ಗ ಕಟ್ಟಿಕೊಂಡು ಕೆರೆಗೆ ಹಾರಿ ಪ್ರೇಮಿಗಳಿಬ್ಬರ ಆತ್ಮಹತ್ಯೆ

Love Matter: ಕೈಗೆ ಹಗ್ಗ ಕಟ್ಟಿಕೊಂಡು ಕೆರೆಗೆ ಹಾರಿ ಪ್ರೇಮಿಗಳಿಬ್ಬರ ಆತ್ಮಹತ್ಯೆ

Crime: ಪ್ರೀತಿಗೆ ಮನೆಯವರ ವಿರೋಧ: ಯುವತಿ ಆತ್ಮ ಹತ್ಯೆ?

Crime: ಪ್ರೀತಿಗೆ ಮನೆಯವರ ವಿರೋಧ: ಯುವತಿ ಆತ್ಮ ಹತ್ಯೆ?

Drugs seized: 18 ಲಕ್ಷ ರೂ. ಮೌಲ್ಯದ ಡ್ರಗ್ಸ್‌ ಜಪ್ತಿ, ನಾಲ್ವರ ಬಂಧನ

Drugs seized: 18 ಲಕ್ಷ ರೂ. ಮೌಲ್ಯದ ಡ್ರಗ್ಸ್‌ ಜಪ್ತಿ, ನಾಲ್ವರ ಬಂಧನ

Stock Market: ಮುಂದುವರಿದ ಷೇರುಪೇಟೆ ನಾಗಾಲೋಟ-80,000 ಅಂಕ ದಾಟಿದ ಸೆನ್ಸೆಕ್ಸ್

Stock Market: BSE@80,130.53- ಮುಂದುವರಿದ ಷೇರುಪೇಟೆ ನಾಗಾಲೋಟ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.