ಕೆಆರ್‌ಎಸ್, ರಂಗನತಿಟ್ಟು, ಬಲ-ಎಡಮುರಿಗೆ ಪ್ರವಾಸಿಗರ ನಿಷೇಧ
Team Udayavani, Aug 8, 2021, 5:31 PM IST
ಶ್ರೀರಂಗಪಟ್ಟಣ: ಕೋವಿಡ್-19ರ 3ನೇ ಅಲೆ ತಡೆಗಟ್ಟಲು ವಿಶ್ವವಿಖ್ಯಾತ ಕೆಆರ್‌ಎಸ್ ಬೃಂದಾವನ ಸೇರಿ ಇತರೆ ಪ್ರವಾಸಿ ತಾಣಗಳಿಗೆ ಶನಿವಾರ
ಹಾಗೂ ಭಾನುವಾರ ಸೇರಿ ಇತರೆ ರಜಾದಿನಗಳಲ್ಲಿ ಪ್ರವೇಶ ನಿಷೇಧ ಮಾಡಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಶ್ವೇತಾ ತಿಳಿಸಿದ್ದಾರೆ.
ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ಕೆಆರ್‌ಎಸ್ ಬೃಂದಾವನ,ಬಲಮುರಿ ಎಡಮುರಿ, ಹಾಗೂ ರಂಗನತಿಟ್ಟು ಪಕ್ಷಿಧಾಮಕ್ಕೆ ಈ ನಿಯಮ
ಜಾರಿ ಮಾಡಲಾಗಿದೆ.
ಮುಂಜಾಗ್ರತೆ: ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ನೈಟ್ ಕರ್ಫ್ಯೂ ಜಾರಿಯಲ್ಲಿರುವುದರಿಂದಮೈಸೂರಿಗೆಹತ್ತಿರವಾದ
ಮಂಡ್ಯ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಾರೆ. ಹೀಗಾಗಿ ಮುಂಜಾಗ್ರತೆಯಾಗಿ ಈ ನಿಯಮ ಜಾರಿ ಮಾಡಿ
ಜಾಗ್ರತೆ ವಹಿಸಲಾಗಿದೆ.
ಇದನ್ನೂ ಓದಿ:ಮತ್ತೆ ದೇಶದಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ : ಸುಖಪ್ರಿತ ಕೌರ್
ದೇಗುಲಗಳಿಗೂ ಪ್ರವೇಶ ನಿಷೇಧ: ಕಳೆದ ವಾರ ಶ್ರೀರಂಗಪಟ್ಟಣದ ಶ್ರೀ ನಿಮಿಷಾಂಬ, ಶ್ರೀರಂಗನಾಥ ಹಾಗೂ ಆರತಿ ಉಕ್ಕಡ ದೇವಾಲಯಗಳಿಗೂ ಈ ನಿಯಮ ಅನ್ವಯ ಮಾಡಿ ಜಾರಿ ಮಾಡಲಾಗಿತ್ತು. ಅದರಂತೆ ಪ್ರವಾಸಿ ತಾಣಗಳಿಗೂ ನಿಯಮ ಜಾರಿ ಮಾಡಿರುವುದಾಗಿ ತಿಳಿಸಿದ್ದಾರೆ.
ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳೂ ಎಲ್ಲಾ ಪ್ರವಾಸಿ ತಾಣಗಳ ಬಳಿ ಮುನ್ನೆಚ್ಚರಿಕೆಯಾಗಿ ಈ ಮುಂಚೆ ನೋಟೀಸ್‌ಗಳನ್ನು ಪ್ರವೇಶ ದ್ವಾರದಲ್ಲಿ ಅಂಟಿಸಿ ಇತರ ಎಲ್ಲಾ ಕಚೇರಿಗಳಿಗೂ ನಿಷೇಧದ ಪ್ರತಿ ಮಾಡಿರುವುದಾಗಿ ಕಾವೇರಿ ನೀರಾವರಿ ನಿಗಮದ ಮಂಡ್ಯ ಜಿಲ್ಲೆಯ ಅಧೀಕ್ಷಕ
ಅಭಿಯಂತರ ವಿಜಯಕುಮಾರ್ ತಿಳಿಸಿದ್ದಾರೆ.
ಬಿಕೋ ಎನ್ನುತ್ತಿವೆ: ಪ್ರವೇಶ ನಿಷೇಧ ಮಾಡಿದ್ದ ರಿಂದ ಪ್ರವಾಸಿ ತಾಣಗಳಾದ ಕೆಆರ್‌ಎಸ್ ಬೃಂದಾವನ, ರಂಗನತಿಟ್ಟು ಪಕ್ಷಿಧಾಮ, ಬಲಮುರಿ, ಎಡಮುರಿ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ
By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ
Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!
Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.