ಲಸಿಕೆ ಪಡೆಯದಿದ್ದರೆ ವೇತನರಹಿತ ರಜೆ!
Team Udayavani, Aug 9, 2021, 8:20 AM IST
ಮಂಗಳೂರು: ಪಿಯು ಕಾಲೇಜು ಉಪ ನ್ಯಾಸಕರು ಮತ್ತು ಸಿಬಂದಿ ಕೊರೊನಾ ಲಸಿಕೆ ಪಡೆಯ ದಿದ್ದರೆ ಅವರಿಗೆ ಸಂಬಳವಿಲ್ಲದೆ ಕಡ್ಡಾಯ ರಜೆ.
… ಇಂತಹ ಸೂಚನೆಯನ್ನು ರಾಜ್ಯದ ಎಲ್ಲ ಸರ ಕಾರಿ ಮತ್ತು ಅನುದಾನಿತ ಪಿಯು ಕಾಲೇಜುಗಳಿಗೆ ಪದವಿ ಪೂರ್ವ ಶಿಕ್ಷಣ ಇಲಾಖೆ ನೀಡಿದೆ. ಲಸಿಕೆ ಪಡೆಯದವರಿಗೆ ಕಾಲೇಜು ಪ್ರವೇಶ ಇಲ್ಲ ಎಂದು ಪರೋಕ್ಷವಾಗಿ ತಿಳಿಸಿದೆ.
ಆ. 23ರಿಂದ ಪಿಯುಸಿ ತರಗತಿ ತೆರೆಯಲು ಸರಕಾರ ಉದ್ದೇಶಿ ಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ಮಾಹಿತಿ ನೀಡಿ ದ್ದಾರೆ. ಭೌತಿಕ ತರಗತಿ ಆರಂಭವಾಗುವುದಕ್ಕೆ ಮುನ್ನ ಎಲ್ಲ ಪಿಯು ಕಾಲೇಜುಗಳ ವಿದ್ಯಾರ್ಥಿಗಳಿಗೆ ಲಸಿಕೆ ಹಾಕುವುದನ್ನು ಕಡ್ಡಾಯ ಮಾಡಲಾಗಿದೆ. ಇದಕ್ಕಾಗಿ ಪ್ರತ್ಯೇಕ ಶಿಬಿರಗಳನ್ನು ಮಾಡಲಾಗಿದೆ.
ಇದರ ಜತೆಗೆ ಉಪನ್ಯಾಸಕರು, ಬೋಧಕೇತರ ಸಿಬಂದಿ, ಆಡಳಿತಾತ್ಮಕ ಸಿಬಂದಿಗಳಿಗೂ ಲಸಿಕೆ ಕಡ್ಡಾಯ ಮಾಡಲಾಗಿದೆ. ಲಸಿಕೆ ಪಡೆಯದಿದ್ದರೆ ಅಂಥವರಿಗೆ ಸಂಬಳ ರಹಿತ ಕಡ್ಡಾಯ ರಜೆ ನೀಡಲಾಗುತ್ತದೆ ಎಂದು ಇಲಾಖೆಯು ಎಲ್ಲ ಜಿಲ್ಲೆಗಳ ಪಿಯು ಉಪನಿರ್ದೇಶಕರಿಗೆ ಸೂಚನೆ ನೀಡಿದೆ.
ಕನಿಷ್ಠ 1 ಡೋಸ್ ಅಗತ್ಯ :
ಕಾಲೇಜಿಗೆ ಹಾಜರಾಗುವ ಉಪನ್ಯಾಸಕರು, ಸಿಬಂದಿ 2 ಡೋಸ್ ಲಸಿಕೆ ಪಡೆದಿರಬೇಕು. ಕನಿಷ್ಠ 1 ಡೋಸ್ ಲಸಿಕೆಯನ್ನಾದರೂ ಪಡೆದಿರಲೇಬೇಕು. ಇದು ಖಾಸಗಿ ಅನುದಾನ ರಹಿತ ಪಿಯು ಕಾಲೇಜಿನವರಿಗೂ ಅನ್ವಯ. ಸಂಬಳ ಕಡಿತ ನಿಯಮ ಮಾತ್ರ ಇವರಿಗೆ ಅನ್ವಯಿಸುವುದಿಲ್ಲ.
ದ.ಕ.ಮತ್ತು ಉಡುಪಿ ಜಿಲ್ಲೆಯಲ್ಲಿ ಶೇ. 90ರಷ್ಟು ಉಪನ್ಯಾಸಕರು-ಸಿಬಂದಿಗೆ ಲಸಿಕೆ ನೀಡಲಾಗಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಇನ್ನೂ ಇದೆ ಅವಕಾಶ! :
ಸರಕಾರಿ, ಅನುದಾನಿತ ಕಾಲೇಜಿನ ಉಪನ್ಯಾಸಕರು, ಸಿಬಂದಿ ಲಸಿಕೆ ಪಡೆಯದಿದ್ದರೆ ಆಯಾ ಜಿಲ್ಲಾಧಿ ಕಾರಿಗಳ ಗಮನಕ್ಕೆ ತಂದು ವಿಶೇಷ ಲಸಿಕೆ ಶಿಬಿರ ಆಯೋಜಿಸಲು ಕ್ರಮ ಕೈಗೊಳ್ಳುವಂತೆ ಇಲಾಖೆಯು ಎಲ್ಲ ಕಾಲೇಜುಗಳಿಗೆ ಸೂಚನೆ ನೀಡಿದೆ. ಈ ಬಗ್ಗೆ ಸಮಗ್ರ ಮಾಹಿತಿಯನ್ನು ಇಲಾಖೆಗೆ ನೀಡುವಂತೆ ಸೂಚಿಸಲಾಗಿದೆ.
ಪಿಯು ಕಾಲೇಜುಗಳ ಸಂಖ್ಯೆ :
ದಕ್ಷಿಣ ಕನ್ನಡ ಉಡುಪಿ
ಒಟ್ಟು ಕಾಲೇಜು 210 105
ಸರಕಾರಿ 53 42
ಅನುದಾನಿತ 42 18
ಉಪನ್ಯಾಸಕರು, ಸಿಬಂದಿ ಸುಮಾರು 1,000 ಸುಮಾರು 600
ಪಿಯು ಕಾಲೇಜು ಭೌತಿಕ ತರಗತಿ ಆರಂಭವಾಗುವಾಗ ಎಲ್ಲ ಉಪ ನ್ಯಾಸಕರು, ಸಿಬಂದಿ ಲಸಿಕೆ ಪಡೆದುಕೊಳ್ಳುವುದು ಕಡ್ಡಾಯ. ಲಸಿಕೆ ಪಡೆಯದ ಸರಕಾರಿ, ಅನುದಾನಿತ ಕಾಲೇಜಿನ ಉಪನ್ಯಾಸಕರು, ಸಿಬಂದಿಗೆ ಕಡ್ಡಾಯ ರಜೆ ನೀಡಲಾಗುವುದು ಮತ್ತು ಆ ಅವಧಿಯ ವೇತನ ಕಡಿತ ಮಾಡಲಾಗುವುದು. –ಸ್ನೇಹಲ್ ಆರ್., ನಿರ್ದೇಶಕರು,ಪದವಿಪೂರ್ವ ಶಿಕ್ಷಣ ಇಲಾಖೆ, ಬೆಂಗಳೂರು.
-ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Mangaluru: ಟ್ರಾಯ್ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
MUST WATCH
ಹೊಸ ಸೇರ್ಪಡೆ
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Mangaluru Airport; ಕೆ 9 ಹೀರೋ ಜಾಕ್ ಇನ್ನಿಲ್ಲ: ಭಾವನಾತ್ಮಕ ವಿದಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.