‘ಯುದ್ಧ’ ಘೋಷಿಸಿದ ನಿರ್ದೇಶಕ ಪ್ರೇಮ್
Team Udayavani, Aug 9, 2021, 4:17 PM IST
ಬೆಂಗಳೂರು: ನಿರ್ದೇಶಕ ಜೋಗಿ ಪ್ರೇಮ್ ಅವರ ‘ಏಕ್ ಲವ್ ಯಾ’ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಇದರ ನಡುವೆ ಮತ್ತೊಂದು ಚಿತ್ರ ಕೈಗೆತ್ತಿಕೊಂಡಿದ್ದಾರೆ ಪ್ರೇಮ್.
ಪ್ರೇಮ್ ಅವರು ತಮ್ಮ 9 ಚಿತ್ರದ ಸ್ಕ್ರಿಪ್ಟ್ ಕೆಲಸ ಸದ್ದಿಲ್ಲದೆ ಮಾಡಿ ಮುಗಿಸಿದ್ದಾರೆ. ಈ ಬಗ್ಗೆ ಇಂದು ಅವರು ಮಾಹಿತಿ ನೀಡಿದ್ದಾರೆ. ಈ ಚಿತ್ರದ ಹೀರೋ ಯಾರು? ನಾಯಕಿ ನಟಿ ಸೇರಿದಂತೆ ತಾರಾಬಳಗದ ಸಂಪೂರ್ಣ ವಿವರವನ್ನು ಇದೇ ತಿಂಗಳು ರಿವೀಲ್ ಮಾಡುವುದಾಗಿ ಹೇಳಿದ್ದಾರೆ ಪ್ರೇಮ್.
ಯುದ್ಧ ಶುರು ಮಾಡಿದ ಪ್ರೇಮ್ :
If one achieves martyrdom in a war, the heavens welcome him. If one triumphs in a war, the throne awaits him. So, a war is always good. And the war begins now.
The script work of my 9th film is now complete, details revealing in August 2021 #Prems9thventure pic.twitter.com/EFvm8pS1Na— PREM❣️S (@directorprems) August 9, 2021
ಪ್ರೇಮ್ ಅವರು ತಮ್ಮ ಮುಂದಿನ ಸಿನಿಮಾದ ಕುರಿತು ಯಾವುದೇ ವಿವರವನ್ನು ಬಿಟ್ಟು ಕೊಟ್ಟಿಲ್ಲವಾದರೂ ಒಂದು ಸಣ್ಣ ಸುಳಿವು ನೀಡಿದ್ದಾರೆ. “ಯುದ್ಧದಲ್ಲಿ ಒಬ್ಬ ಹುತಾತ್ಮನಾದರೆ ಅವನನ್ನು ಸ್ವರ್ಗ ಲೋಕ ಸ್ವಾಗತಿಸುತ್ತದೆ. ಒಂದು ವೇಳೆ ಯುದ್ಧದಲ್ಲಿ ಒಬ್ಬ ವಿಜಯಶಾಲಿಯಾದರೆ ಸಿಂಹಾಸನ ಅವನಿಗಾಗಿ ಕಾಯುತ್ತಿರುತ್ತದೆ. ಒಟ್ಟಿಯಲ್ಲಿ ಯುದ್ಧ ಎನ್ನುವುದು ಯಾವಾಗಲೂ ಒಳ್ಳೆಯದೇ ಆಗಿರುತ್ತದೆ”. ಹೀಗೆ ಹೇಳಿರುವ ಪ್ರೇಮ್ ಇದೀಗ ಯುದ್ಧ ಶುರುವಾಗಿದೆ ಎಂದು ಬರೆದುಕೊಂಡಿದ್ದಾರೆ.
ತಮ್ಮ ಮುಂದಿನ ಚಿತ್ರದ ಸ್ಕ್ರಿಪ್ಟ್ ಪೂಜೆಯ ವಿಡಿಯೋ ಹಂಚಿಕೊಂಡಿದ್ದಾರೆ ಪ್ರೇಮ್. ಈ ವಿಡಿಯೋದ ಕೊನೆಯಲ್ಲಿ ಸುದರ್ಶನ ಚಕ್ರ ಹಿಡಿದು ನಿಂತಿರುವ ಶ್ರೀಕೃಷ್ಣ ಪರಮಾತ್ಮನ ಚಿತ್ರವಿರುವುದು ಗಮನ ಸೆಳೆಯುತ್ತಿದೆ.
ಇನ್ನು ಪ್ರೇಮ್ ಅವರು ದಿ ವಿಲನ್ ಸಿನಿಮಾ ಬಳಿಕ ಏಕ್ ಲವ್ ಯಾ ಸಿನಿಮಾ ಕೈಗೆತ್ತಿಕೊಂಡರು. ಈ ಚಿತ್ರದ ಮೂಲಕ ತಮ್ಮ ಬಾಮೈದನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿಸುತ್ತಿದ್ದಾರೆ. ಈ ಚಿತ್ರಕ್ಕೆ ಪ್ರೇಮ್ ಅವರ ಪತ್ನಿ ರಕ್ಷಿತಾ ಅವರು ಬಂಡವಾಳ ಹೂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
Kinnal raj; ʼಸಿಂಹರೂಪಿಣಿʼಗೆ 25ರ ಸಂಭ್ರಮ
Daali Dhananjay: ಸರಳವಾಗಿ ನೆರವೇರಿತು ಡಾಲಿ – ಧನ್ಯತಾ ನಿಶ್ಚಿತಾರ್ಥ
MUST WATCH
ಹೊಸ ಸೇರ್ಪಡೆ
Emergency: ಹತ್ತಾರು ವಿಳಂಬದ ಬಳಿಕ ಕೊನೆಗೂ ಕಂಗನಾ ʼಎಮರ್ಜೆನ್ಸಿʼ ರಿಲೀಸ್ ಗೆ ಡೇಟ್ ಫಿಕ್ಸ್
IPL Mega Auction: ಮೆಗಾ ಹರಾಜಿನಲ್ಲಿ 13ರ ಬಾಲಕ: ಯಾರಿದು ವೈಭವ್ ಸೂರ್ಯವಂಶಿ
Mangaluru: ಹೆದ್ದಾರಿ ಬದಿ ನಿಲ್ಲುವ ವಾಹನ; ಅಪಾಯಕ್ಕೆ ಆಹ್ವಾನ
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Puttur: ಕಲ್ಪವೃಕ್ಷಕ್ಕೆ ಮರುಜೀವವಿತ್ತ ಎಂಜಿನಿಯರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.