ಆಗಸ್ಟ್ ಅಂತ್ಯಕ್ಕೆ 11 ದೂರದರ್ಶನ ಮರುಪ್ರಸಾರ ಕೇಂದ್ರ ಬಂದ್
Team Udayavani, Aug 10, 2021, 6:20 AM IST
ಮಂಗಳೂರು: ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಮೂಡಿ ಗೆರೆ ಮತ್ತು ಕೊಪ್ಪದಲ್ಲಿರುವ ದೂರ ದರ್ಶನ ಮರುಪ್ರಸಾರ ಕೇಂದ್ರಗಳ ಸಹಿತ ಒಟ್ಟು 11 ಕೇಂದ್ರಗಳು ಆಗಸ್ಟ್ 31ರಿಂದ ಪ್ರಸಾರವನ್ನು ಸ್ಥಗಿತಗೊಳಿಸಲಿವೆ.
ಡಿಜಿಟಲೀಕರಣದ ಭಾಗವಾಗಿ ದೇಶಾದ್ಯಂತ 272 ದೂರದರ್ಶನ ಮರುಪ್ರಸಾರ ಕೇಂದ್ರ (ಲೋ ಪವರ್ ಟ್ರಾನ್ಸ್‌ಮಿಟರ್- ಎಲ್‌ಪಿಟಿ) ಗಳನ್ನು ಮುಚ್ಚುವ ಪ್ರಕ್ರಿಯೆ ಕಳೆದ ನಾಲ್ಕೈದು ವರ್ಷಗಳಿಂದ ನಡೆ ಯುತ್ತಿದೆ. ಕರ್ನಾಟಕದಲ್ಲಿ 28 ಮರುಪ್ರಸಾರ ಕೇಂದ್ರ ಗಳಿದ್ದು, ಅವುಗಳ ಪೈಕಿ 11 ಕೇಂದ್ರಗಳ ಕಾರ್ಯನಿರ್ವ ಹಣೆ ಈ ತಿಂಗಳೇ ಕೊನೆ.
ಒಂದೊಂದು ಕೇಂದ್ರ ದಲ್ಲಿ ತಲಾ 3-4 ಮಂದಿ ಸಿಬಂದಿ ಇದ್ದು, ಅವರನ್ನು ಹೈಪವರ್ ಟ್ರಾನ್ಸ್ ಮಿಟರ್ (ಎಚ್‌ಪಿಟಿ)ಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಥವಾ ಆಕಾಶವಾಣಿಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನಿಯೋಜನೆ ಮಾಡಲಾ ಗುತ್ತಿದೆ.
ಕಾರಣವೇನು?:
ಡಿಜಿಟಲೀಕರಣದ ಈ ಯುಗದಲ್ಲಿ ದೂರದರ್ಶನವು ಡಿಟಿಎಚ್ ಸೇವೆ ಯನ್ನು ಆರಂಭಿಸಿರುವ ಕಾರಣ ಹಾಗೂ ಹೈಪವರ್ ಟ್ರಾನ್ಸ್‌ಮಿಟರ್‌ಗಳು ಬಲು ದೂರದ ತನಕ ಪ್ರಸಾರ ಮಾಡುವ ಸಾಮರ್ಥ್ಯ ಹೊಂದಿರುವ ಹಿನ್ನೆಲೆಯಲ್ಲಿ ಮತ್ತು ಕೇಬಲ್ ನೆಟ್‌ವರ್ಕ್ ಕೂಡ ಇರುವುದರಿಂದ
ಮರು ಪ್ರಸಾರ ಕೇಂದ್ರಗಳು ಪ್ರಸ್ತು ತತೆ ಯನ್ನು ಕಳೆದುಕೊಂಡಿವೆ. (ರಾಜ್ಯ ದಲ್ಲಿ ಮಂಗಳೂರು, ಬೆಂಗಳೂರು ಸಹಿತ 8 ಹೈಪವರ್ ಟ್ರಾನ್ಸ್‌ಮಿಟರ್‌ಗಳಿವೆ). ಆ್ಯಂಟೆನಾ ಹಾಕಿ ಟಿ.ವಿ. ನೋಡು ವವರು ಈಗ ಕಡಿಮೆ. ಹಾಗಾಗಿ ತನ್ನ ಸಾಂಪ್ರದಾಯಿಕ ಅನಲಾಗ್ ಮರುಪ್ರಸಾರ ಕೇಂದ್ರ ಗಳನ್ನು ಹಂತ ಹಂತವಾಗಿ ಮುಚ್ಚಲು ಪ್ರಸಾರ ಭಾರತಿ ನಿರ್ಧರಿಸಿದೆ.
ಈ ಕೇಂದ್ರಗಳಲ್ಲಿರುವ ಸಿಬಂದಿಯ ಪೈಕಿ 45 ವರ್ಷ ವಯಸ್ಸು ದಾಟಿ ದವರೇ ಅಧಿಕ. ಇದೀಗ ಉದ್ಯೋಗ ದಲ್ಲಿ ಮುಂದುವರಿಯ ಬೇಕಾದರೆ ಎಚ್‌ಪಿಟಿ ಅಥವಾ ಆಕಾಶವಾಣಿ ನಿಲಯಗಳಿಗೆ ವರ್ಗಾವಣೆ ಆಗು ವವಾಗ ಡಿಜಿಟಲ್ ತಂತ್ರಜ್ಞಾನಕ್ಕೆ ಒಗ್ಗಿ ಕೊಳ್ಳಬೇಕಾದ ಅನಿವಾರ್ಯತೆ ಹಾಗೂ ಸವಾಲು ಅವರ ಮುಂದಿದೆ.
ಈಗಾಗಲೇ 30 ವರ್ಷಗಳ ಸೇವಾವಧಿಯನ್ನು ಪೂರ್ತಿಗೊಳಿಸಿದ ಹಾಗೂ 50 ವರ್ಷ ವಯಸ್ಸು ದಾಟಿದವರ ಪಟ್ಟಿಯನ್ನು ಪ್ರಸಾರ ಭಾರತಿ ತಯಾರಿಸುತ್ತಿದೆ. ಯಾವ ಉದ್ದೇಶದಿಂದ ಈ ಮಾಹಿತಿ ಕಲೆ ಹಾಕಲಾಗುತ್ತಿದೆ ಎನ್ನುವುದು ತಿಳಿದಿಲ್ಲ.
ಸ್ಥಗಿತಗೊಳ್ಳಲಿರುವ ಕೇಂದ್ರಗಳು :
ಕೊಪ್ಪ, ಮೂಡಿಗೆರೆ, ಪಾವಗಡ, ಹತ್ತಿಹಾಳ, ಹುನಗುಂದ, ಸಂಡೂರು, ಬಸವ ಕಲ್ಯಾಣ, ಹರಪನ ಹಳ್ಳಿ, ಹಿರಿಯೂರು, ತಾಳಿಕೋಟೆ, ಮುಧೋಳ.
ದೂರದರ್ಶನ ಮಹಾ ನಿರ್ದೇಶಕರ ನಿರ್ಧಾರದಂತೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಚಾನೆಲ್ 5 (+)ರ 175.2604 ಮೆಗಾಹರ್ಟ್ಸ್ ಮತ್ತು ಕೊಪ್ಪದಲ್ಲಿ ಚಾನೆಲ್ 6ರ 182.25 ಮೆಗಾ ಹರ್ಟ್ಸ್ ಕಂಪನಾಂಕದಲ್ಲಿ ಪ್ರಾದೇಶಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿದ್ದ ದೂರದರ್ಶನ ಮರುಪ್ರಸಾರ ಕೇಂದ್ರಗಳು ಆ. 31ರಿಂದ ತಮ್ಮ ಪ್ರಸಾರವನ್ನು ಸ್ಥಗಿತಗೊಳಿಸಲಿವೆ.– ಎಂ. ರಾಮಣ್ಣ ನಾಯ್ಕ, ಅಸಿಸ್ಟೆಂಟ್ ಎಂಜಿನಿಯರ್, ದೂರದರ್ಶನ ಕೇಂದ್ರ (ಎಚ್‌ಪಿಟಿ), ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.