ಆಗಸ್ಟ್ 10 : ವಿಶ್ವ ಸಿಂಹಗಳ ದಿನ : ಕಾಡಿನ ರಾಜನ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ ಓದಿ
Team Udayavani, Aug 10, 2021, 9:18 AM IST
ಆಗಸ್ಟ್ 10ನ್ನು ವಿಶ್ವ ಸಿಂಹಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಕಾಡಿನ ರಾಜ ರಕ್ಷಣೆ ಬಗ್ಗೆ ಅರಿವು ಮೂಡಿಸುವ ಮತ್ತು ಸಿಂಹ ಸಂತತಿಯನ್ನು ಕಾಪಾಡಿಕೊಂಡು ಹೋಗುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಸಿಂಹದ ಬಗ್ಗೆ ಒಂದಷ್ಟು ಮಾಹಿತಿ ತಿಳಿಯೋಣ ಬನ್ನಿ.
- ಈ ದಿನವನ್ನು ಡೆರೆಕ್ ಮತ್ತು ಬೆವರ್ಲಿ ಜೌಬರ್ಟ್ 2013 ರಲ್ಲಿ ಆರಂಭಿಸಿದರು.
- ಸಿಂಹಗಳು ಹೆಚ್ಚಾಗಿ ಗುಂಪಿನಲ್ಲಿ ಬದುಕಲು ಇಷ್ಟ ಪಡುತ್ತವೆ. ಅಲ್ಲದೆ ತೋಳಗಳ ಜೀವನ ಮಾದರಿಯಲ್ಲಿ ಬದುಕುತ್ತವೆ
- ಕಾಡಿನ ರಾಜನು ಹುಲ್ಲುಗಾವಲು-ಬಯಲು ಪ್ರದೇಶದಲ್ಲಿ ಮಾತ್ರ ವಾಸಿಸುತ್ತಾನೆ
- ಗಂಡು ಸಿಂಹಗಳು 226 ಕೆಜಿಯವರೆಗೆ ತೂಗುತ್ತವೆ ಮತ್ತು ಎಂಟು ಅಡಿ ಉದ್ದದವರೆಗೆ ಬೆಳೆಯುತ್ತವೆ
- ಗಂಡು ಸಿಂಹಗಳು ತಲೆ, ಕುತ್ತಿಗೆ ಮತ್ತು ಭುಜದ ಸುತ್ತಲೂ ಉದ್ದವಾದ ದಪ್ಪ ಕೂದಲುಗಳನ್ನು ಹೊಂದಿರುತ್ತವೆ. ಅಲ್ಲದೆ ನೋಡುತ್ತಲೆ ಭಯತರಿಸುವಂತೆ ಕಾಣುತ್ತವೆ.
- ಹೆಣ್ಣು ಸಿಂಹಗಳು ಚಿಕ್ಕದಾಗಿರುತ್ತವೆ ಮತ್ತು ವೇಗವಾಗಿ ಭೇಟೆಯಾಡುತ್ತವೆ. ಅಲ್ಲದೆ ಜೊತೆಗಾತಿಯರ ಜೊತೆಯಲ್ಲೇ ಹೆಚ್ಚು ಕಾಲ ಕಳೆಯುತ್ತವೆ.
- ಸಿಂಹಗಳು ಸಾಮಾನ್ಯವಾಗಿ ಕಾಡಿನಲ್ಲಿ ಗರಿಷ್ಠ 16 ವರ್ಷ ಮತ್ತು ಝೂನಲ್ಲಿ 25 ವರ್ಷ ಬದುಕುತ್ತದೆ.
- ಈ ಪ್ರಾಣಿಗಳು ಹೆಚ್ಚಾಗಿ ರಾತ್ರಿ ವೇಳೆ ಬೇಟೆಯಾಡುತ್ತವೆ. ಕತ್ತಲೆಯಲ್ಲಿ ಈ ಪ್ರಾಣಿಗಳ ಕಣ್ಣುಗಳು ಭಾರೀ ಚುರುಕಿನಿಂದ ಕೆಲಸ ಮಾಡುತ್ತವೆ.
- ವರದಿಗಳ ಪ್ರಕಾರ, ಒಂದು ಶತಮಾನದ ಹಿಂದೆ ಆಫ್ರಿಕಾದಲ್ಲಿ 2,00,000 ಕ್ಕೂ ಹೆಚ್ಚು ಕಾಡು ಸಿಂಹಗಳು ವಾಸಿಸುತ್ತಿದ್ದವು. ಇತ್ತೀಚಿನ ಸಮೀಕ್ಷೆಗಳು ಕಳೆದ ಎರಡು ದಶಕಗಳಲ್ಲಿ ಸಿಂಹಗಳ ಸಂಖ್ಯೆ ಅಂದಾಜು 30,000 ದಿಂದ ಸುಮಾರು 20,000 ಕ್ಕೆ ಇಳಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.